ಹಿಂದೂ ಭಾವನೆಗಳಿಗೆ ಧಕ್ಕೆ: ಸನ್ನಿ ಲಿಯೋನ್ ಹೊಸ 'ಮಧುಬನ್' ಬಾಯ್‌ಕಾಟ್ ಮಾಡುವಂತೆ ನೆಟ್ಟಿಗರ ಒತ್ತಾಯ

ಸನ್ನಿ ಲಿಯೋನ್ ಹಾಗೂ ಗಾಯಕಿ ಕನಿಕಾ ಕಪೂರ್ ಇಬ್ಬರ ಕಾಂಬಿನೇಷನ್‌ನಲ್ಲಿ ಒಂದು ಅಲ್ಬಮ್ ಸಾಂಗ್ ಸೂಪರ್‌ ಹಿಟ್ ಆಗಿವೆ. ಹೀಗಾಗಿ ಈ ಜೋಡಿಯನ್ನು ಮತ್ತೆ ಒಟ್ಟಿಗೆ ಸೇರಿಸಿ, ಇತ್ತೀಚೆಗೆ 'ಮಧುಬನ್' ಅನ್ನುವ ಅಲ್ಬಮ್ ಹಾಡನ್ನು ಬಿಡುಗಡೆ ಮಾಡಲಾಗಿತ್ತು. ಎರಡು ದಿನಗಳ ಹಿಂದೆ ರಿಲೀಸ್ ಮಾಡಿದ್ದ ಈ ಹಾಡು ಸಂಗೀತ ಪ್ರಿಯರು ಮೆಚ್ಚುಗೆ ಗಳಿಸುತ್ತೆ ಎನ್ನುವ ನಿರೀಕ್ಷೆಯಿತ್ತು. ಆದ್ರೀಗ ಈ ಹಾಡು ವಿವಾದಕ್ಕೆ ಸುಳಿಗೆ ಸಿಲುಕಿದೆ.

ಸನ್ನಿಲಿಯೋನ್ 'ಮಧುಬನ್' ಹಾಡಿಗೆ ಶರೀಬ್ ಮತ್ತು ತೋಶಿ ಸಂಗೀತ ನೀಡಿದ್ದಾರೆ. ಬಾಲಿವುಡ್​ನ ಸುಪ್ರಸಿದ್ಧ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಈ ಹಾಡಿಗೆ ಕೊರಿಯೋಗ್ರಫಿ ಮಾಡಿದ್ದಾರೆ. ಈ ಹಾಡು ಸಂಗೀತ ವಲಯದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸುತ್ತೆ ಎಂಬ ನೀರಿಕ್ಷೆಯಿತ್ತು. ಆದ್ರೀಗ ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದೆ ಎಂಬ ಆರೋಪವನ್ನು ಎದುರಿಸುತ್ತಿದೆ. ಈ ಹಾಡನ್ನು ಬಾಯ್‌ಕಾಟ್ ಮಾಡುವಂತೆ ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ಆರಂಭ ಆಗಿದೆ.

ಸನ್ನಿ-ಕನಿಕಾ ಹಾಡಿಗೆ ವಿರೋಧ

ಸನ್ನಿ-ಕನಿಕಾ ಹಾಡಿಗೆ ವಿರೋಧ

ಸನ್ನಿ ಲಿಯೋನ್ ಹಾಗೂ ಕನಿಕಾ ಕಪೂರ್ ಹೊಸ ಹಾಡಿನ ಸಾಹಿತ್ಯ ಬಗ್ಗೆ ನೆಟ್ಟಿಗರು ತಕರಾರು ತೆಗೆದಿದ್ದಾರೆ. 'ಮಧುಬನ್‌ ಮೇ ರಾಧಿಕಾ ನಾಚೇ' ಎಂದು ಆರಂಭವಾಗುವ ಸಾಹಿತ್ಯ ಹಿಂದೂ ಭಾವನೆಗಳಿಗೆ ಧಕ್ಕೆ ತರುತ್ತಿದೆ ಎನ್ನುತ್ತಿದ್ದಾರೆ. ಟ್ವಿಟರ್‌ನಲ್ಲಿ ಈ ಹಾಡಿನ ಬಗ್ಗೆ ವಿರೋಧ ವ್ಯಕ್ತವಾಗಿದ್ದು, "ರಾಧಾ ನರ್ತಕಿಯಲ್ಲ, ಆಕೆ ಒಬ್ಬ ಭಕ್ತೆ. ಮಧುಬನ ಎನ್ನುವುದು ಪವಿತ್ರವಾದ ಸ್ಥಳ. ಇಂತಹ ಸ್ಥಳದಲ್ಲಿ ಸನ್ನಿ ಲಿಯೋನ್ ಮಾಡಿದಂತಹ ನೃತ್ಯವನ್ನು 'ಮಧುಬನ್‌'ನಲ್ಲಿ ಮಾಡುವುದಿಲ್ಲ. ಇದು ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಯತ್ನ'' ಎಂದು ನೆಟ್ಟಿಗರು ವಿರೋಧ ವ್ಯಕ್ತ ಪಡಿಸಿದ್ದಾರೆ.

ಬಾಯ್‌ಕಾಟ್ 'ಮಧುಬನ್' ಸಾಂಗ್

ಬಾಯ್‌ಕಾಟ್ 'ಮಧುಬನ್' ಸಾಂಗ್

ಸನ್ನಿ ಲಿಯೋನ್ 'ಮಧುಬನ್' ಹಾಡನ್ನು ನೋಡಿ ಕೆಂಡಾಮಂಡಲವಾಗಿರುವ ನೆಟ್ಟಿಗರು ಈ ಹಾಡಿನ್ನು ನಿಷೇಧಿಸುವಂತೆ ಆಗ್ರಹಿಸುತ್ತಿದ್ದಾರೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ 'ಬಾಯ್‌ಕಾಟ್ ಮಧುಬನ್' ಎಂಬ ಅಭಿಯಾನ ಆರಂಭ ಆಗಿದ್ದು, ಸನ್ನಿ ಲಿಯೋನ್ ಹಾಗೂ ಕನಿಕಾ ಕಪೂರ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸುತ್ತಿದ್ದಾರೆ. "ಎಲ್ಲರೂ ಈ ಹಾಡಿನ ಬಗ್ಗೆ ರಿಪೋರ್ಟ್ ಮಾಡಿ, ನನ್ನ ದೇವರನ್ನು ಅವಮಾನ ಮಾಡುವುದು ನಿಮ್ಮ ಹಕ್ಕಲ್ಲ. ನೀವು ಅದ್ಧೂರಿ ಜೀವನ ನಡೆಸುವುದು ಜನರ ಹಣದಿಂದ. ಈ ಹಾಡನ್ನು ಕೂಡಲೇ ತೆಗೆದು ಹಾಕಿ, ಸಾಹಿತ್ಯವನ್ನು ಬದಲಿಸಿ" ಎಂದು ಕಿಡಿಕಾರುತ್ತಿದ್ದಾರೆ.

2 ದಿನಗಳಲ್ಲಿ 69 ಲಕ್ಷ ಮಂದಿಯಿಂದ ವೀಕ್ಷಣೆ

2 ದಿನಗಳಲ್ಲಿ 69 ಲಕ್ಷ ಮಂದಿಯಿಂದ ವೀಕ್ಷಣೆ

ಸನ್ನಿ ಲಿಯೋನ್ ಹಾಗೂ ಗಾಯಕಿ ಕನಿಕಾ ಕಪೂರ್ ಜೋಡಿಯ 'ಮಧುಬನ್' ಹಾಡಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೂ ಕೇವಲ ಎರಡು ದಿನದ ಹಿಂದೆ ಬಿಡುಗಡೆಯಾಗಿದ್ದ ಈ ಹಾಡನ್ನು ಈಗಾಗಲೇ 69 ಲಕ್ಷದ 36 ಸಾವಿರಕ್ಕೂ ಅಧಿಕ ವೀವ್ಸ್ ಈ ಹಾಡಿಗೆ ಸಿಕ್ಕಿದೆ. ಇದು ಸನ್ನಿ ಹಾಗೂ ಕನಿಕಾ ಜೋಡಿಗೆ ಸಿಕ್ಕಿರುವ ಮಿಶ್ರ ಪ್ರತಿಕ್ರಿಯೆಯ ಎಫೆಕ್ಟ್ ಎಂದು ಭಾವಿಸಲಾಗುತ್ತಿದೆ. ಹಾಡಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದರೆ, ಈ ಹಾಡಿನ ವೀವ್ಸ್ ಇನ್ನೂ ಹೆಚ್ಚಾಗಬೇಕಿತ್ತು.

ಸೂಪರ್ ಹಿಟ್ ಹಾಡುಗಳ ಜೋಡಿ

ಸೂಪರ್ ಹಿಟ್ ಹಾಡುಗಳ ಜೋಡಿ

2021ರ ವಿದಾಯದ ವೇಳೆ ಬಿಡುಗಡೆಯಾಗಿರುವ ಪಾರ್ಟಿ ಸಾಂಗ್ ಸಂಗೀತ ಪ್ರಿಯರ ಮನಗೆಲ್ಲುವಲ್ಲಿ ಸೋತಿದೆ. ಬೇಬಿ ಡಾಲ್, ದೇಸಿ ಲುಕ್ ಅಂತಹ ಸೂಪರ್‌ ಹಿಟ್‌ ಹಾಡುಗಳನ್ನು ನೀಡಿದ ಸನ್ನಿ ಹಾಗೂ ಕನಿಕಾ ಜೋಡಿ ವಿವಾದಕ್ಕೆ ಸಿಲುಕಿದೆ. 'ಮಧುಬನ್' ಎಂಬ ಹಾಡು ಜನರ ಮನಗೆಲ್ಲುವಲ್ಲೂ ಸೋತಿದ್ದು, ಇತ್ತ ವಿವಾದಕ್ಕೂ ಸಿಲುಕಿಕೊಂಡಿದೆ. ಶರೀಬ್ ಮತ್ತು ತೋಶಿ ಸಂಯೋಜಿಸಿದ ಹಾಡು 2021ರ ಹಿಟ್ ಲಿಸ್ಟ್ ಸೇರುವಲ್ಲಿ ವಿಫಲವಾಗಿದೆ.

More from Filmibeat

English summary
Sunny Leone and Kanika Kapoor latest song Madhuban gets slammed by netizens for hurting Hindu sentiments. Netizens took to Twitter and slammed the makers and campaigning for boycott madhuban.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X