ಹಿಟ್ ಹಾಡು ಮಸಕಲಿಯ 2.0 ವರ್ಷನ್ ಕೇಳಿ ನಮ್ಮ ಭವಿಷ್ಯದಷ್ಟೇ ಕೆಟ್ಟದಾಗಿದೆ ಎಂದು ರೊಚ್ಚಿಗೆದ್ದ ಫ್ಯಾನ್ಸ್
ಅಭಿಷೇಕ್ ಬಚ್ಚನ್, ಸೋನಮ್ ಕಪೂರ್ ಅಭಿನಯಿಸಿದ ಡೆಲ್ಲಿ -6 ಚಿತ್ರದ 'ಮಸಕಲಿ ಮಸಕಲಿ' ಹಾಡು ಈಗಲೂ ಜನರ ಬಾಯಲಲ್ಲಿ ನಲಿದಾಡುತ್ತಿದೆ. 2009ರಲ್ಲಿ ಬಿಡುಗಡೆಯಾಗಿದ್ದ ಹಾಡು ಭರ್ಜರಿ ಹಿಟ್ ಆಗಿತ್ತು. ಎ.ಆರ್.ರೆಹಮಾನ್ ಸಂಗೀತ ನಿರ್ದೇಶನದಲ್ಲಿ ಪ್ರಸೂನ್ ಜೋಷಿ ಬರೆದ ಹಾಡು ಮೋಹಿತ್ ಚೌಹಾಣ್ ಕಂಠಸಿರಿಯಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.
ಪಾರಿವಾಳಗಳ ಜತೆಗೆ ಆಡುವ ಸನ್ನಿವೇಶದ ಈ ಹಾಡು ಮೂಲ ಚಿತ್ರದಲ್ಲಿ ಇರಲಿಲ್ಲ. ಕೊನೆಗೆ ಹೇಗೋ ಹಾಡನ್ನು ಸೇರಿಸಲಾಯಿತು ಎಂದು ನಿರ್ದೇಶಕರು ಹೇಳಿದ್ದರು. ಈ ಸಿನಿಮಾ ಜನರನ್ನು ಇನ್ನಷ್ಟು ತಲುಪಲು ಮಸಕಲಿ ಹಾಡು ನೆರವಾಗಿತ್ತು. ಆ ವರ್ಷ ಅನೇಕ ಪ್ರಶಸ್ತಿಗಳನ್ನೂ ಗೆದ್ದುಕೊಂಡಿತ್ತು. ಈಗ ಅದೇ ಹಾಡಿನ ಸಾಹಿತ್ಯವನ್ನು ಕೊಂಚ ಬದಲಿಸಿ ವಿಡಿಯೋ ಹಾಡನ್ನು ಬಿಡುಗಡೆ ಮಾಡಲಾಗಿದೆ. ಮುಂದೆ ಓದಿ.

ತನಿಶ್ ಬಗ್ಚಿ ಸಂಗೀತ
ಡೆಲ್ಲಿ 6 ಚಿತ್ರದ ಮಸಕಲಿ ಹಾಡು 'ಮಸಕಲಿ 2.0' ಹೆಸರಲ್ಲಿ ಮರುಸೃಷ್ಟಿಯಾಗಿದೆ. ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ತಾರಾ ಸುತಾರಿಯಾ ರೊಮ್ಯಾಂಟಿಕ್ ಜೋಡಿಯಾಗಿ ಈ ಹಾಡಲ್ಲಿ ಕಾಣಿಸಿಕೊಂಡಿದ್ದಾರೆ. ತನಿಶ್ ಬಗ್ಚಿ ಸಂಗೀತ ನಿರ್ದೇಶನದಲ್ಲಿ ತುಳಸಿ ಕುಮಾರ್ ಮತ್ತು ಸುಚೇತ್ ಟಂಡನ್ ಹಾಡಿದ್ದಾರೆ.

ಜನರಿಗೆ ನೀಡಿದ ಉಡುಗೊರೆ
ಮಳೆಯಲ್ಲಿ ನೆನೆದು ಬರುವ ಜೋಡಿ ಹೋಟೆಲ್ ಒಂದರಲ್ಲಿ ರೊಮ್ಯಾಂಟಿಕ್ ಆಗಿ ಈ ಹಾಡಿಗೆ ನರ್ತಿಸುತ್ತದೆ. ಈ ಹಾಡು ಲಾಕ್‌ಡೌನ್‌ನ ಅವಧಿಯಲ್ಲಿ ಜನರಿಗೆ ನೀಡುವ ಉಡುಗೊರೆ. ಮನೆಯಲ್ಲಿ ಕುಳಿತು ಆನಂದಿಸಬಹುದು ಎಂದು ಟಿ ಸೀರೀಸ್ ಹೇಳಿಕೊಂಡಿತ್ತು. ಆದರೆ ಹಾಡು ನೋಡಿದ ಸಿನಿಮಾ ಅಭಿಮಾನಿಗಳ ಪ್ರತಿಕ್ರಿಯೆ ಬೇರೆಯದೇ ಇದೆ. 'ಈ ಹಾಡು ನಮ್ಮ ಭವಿಷ್ಯದಷ್ಟೇ ಕೆಟ್ಟದಾಗಿ ಇದೆ. ಅಲ್ಲವೇ?' ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.
ಒಳ್ಳೆಯ ಹಾಡಿನ ಮರುಸೃಷ್ಟಿ ಇದು
ಸುಂದರವಾಗಿರುವ ಮೂಲ ಹಾಡನ್ನು ಟಿ. ಸೀರೀಸ್ ಮರುಸೃಷ್ಟಿ ಮಾಡಿದಾಗ ಎಷ್ಟು ಕೆಟ್ಟದಾಗಿ ಇರುತ್ತದೆ ಎಂಬುದನ್ನು ರುದ್ರೋ ಎಂಬುವವರು ಎರಡು ಫೋಟೊಗಳ ಮೂಲಕ ಹೋಲಿಸಿ ಟೀಕಿಸಿದ್ದಾರೆ.
ಒಂದು ಹಾಡಿನ ಸಾವು
ಬ್ರೇಕಿಂಗ್: ಬಾಲಿವುಡ್‌ನಲ್ಲಿ ಒಂದು ಹಾಡಿನ ಹೊಸ ಸಾವು ಸಂಭವಿಸಿರುವುದು ವರದಿಯಾಗಿದೆ ಎಂದು ನೀಚೆ ಸೆ ಟಾಪರ್ ಎಂಬ ಟ್ವಿಟ್ಟರ್ ಖಾತೆಯಿಂದ ವ್ಯಂಗ್ಯವಾಡಲಾಗಿದೆ.
ನೆನಪು ಹಾಳು ಮಾಡಬೇಡಿ
ಬಾಲಿವುಡ್ ದಯವಿಟ್ಟು ಹಾಡುಗಳನ್ನು ರೀಮೇಕ್ ಮಾಡುವ ಮೂಲಕ ಅವುಗಳೊಂದಿಗೆ ಅಂಟಿಕೊಂಡಿರುವ ನಮ್ಮ ನೆನಪುಗಳನ್ನು ಹಾಳುಮಾಡುವುದನ್ನು ನಿಲ್ಲಿಸುತ್ತೀರಾ? ಎಂದು ಸನಾ ಶೇಕ್ ಕಿಡಿಕಾರಿದ್ದಾರೆ.
ದಯವಿಟ್ಟು ಕೇಳಬೇಡಿ
ದಯವಿಟ್ಟು ಮಸಕಲಿ 2 ಹಾಡು ಕೇಳಬೇಡಿ. ಅದು ನಿಮಗೆ ನೀವು ಮಾಡಿಕೊಳ್ಳಬಹುದಾದ ಅತ್ಯಂತ ಕೆಟ್ಟ ಕೆಲಸವಾಗುತ್ತದೆ ಎಂದು ಸಿಲ್ವಿಯನ್ ಪ್ಯಾಟ್ರಿಕ್ ಸಲಹೆ ನೀಡಿದ್ದಾರೆ.


Click it and Unblock the Notifications











