ಕ್ಲೂ ಕೊಟ್ಟಂತೆ 'ವೆಡ್ಡಿಂಗ್ ಗಿಫ್ಟ್' ಕಡೆಯಿಂದ ಸಿಕ್ಕಿತು 'ರೊಮ್ಯಾಂಟಿಕ್' ಸಾಂಗ್ ಗಿಫ್ಟ್

ಮೊನ್ನೆ ಮೊನ್ನೆಯಷ್ಟೇ 'ವೆಡ್ಡಿಂಗ್ ಗಿಫ್ಟ್' ಚಿತ್ರತಂಡ ರೊಮ್ಯಾಂಟಿಕ್ ಹಾಡಿನ ಬಗ್ಗೆ ಕ್ಲೂ ಕೊಟ್ಟಿತ್ತು. ಚಂದ ಹಾಡೊಂದನ್ನು ಬಿಟ್ಟು, ಮತ್ತಷ್ಟು ಹುಮ್ಮಸ್ಸು ನೀಡುವ ಭರವಸೆಯನ್ನು ನೀಡಿತ್ತು. ಅದರಂತೆ ಹೇಳಿದ ಸಮಯಕ್ಕೆ, ಹೇಳಿದ ದಿನಕ್ಕೆ ಸರಿಯಾಗಿ ಸಿನಿಮಾದ ಡ್ಯುಯೆಟ್ ಸಾಂಗ್ 'ರೋಮಾಂಚಕ' ಅನ್ನೋ ಹಾಡೊಂದನ್ನು ರಿಲೀಸ್ ಮಾಡಿದೆ. ಮೊದಲ ಸಾಲೇ ಹೇಳುವಂತೆ ಈ ಹಾಡು ಪ್ರೇಮಿಗಳ ಫೆವರೀಟ್ ಸಾಂಗ್ ಆಗುವುದರಲ್ಲಿ ಅನುಮಾನವಿಲ್ಲ.

ಹೇಳಿ ಕೇಳಿ ಜಯಂತ್ ಕಾಯ್ಕಿಣಿ ಸಾಹಿತ್ಯ ಈ 'ರೋಮಾಂಚಕ' ಡ್ಯುಯೆಟ್ ಸಾಂಗಿನೊಳಗಿದೆ. ಅವರ ಸಾಹಿತ್ಯ ಎಂದರೆ ಕೇಳುಗರ ಕಿವಿ ವಾಲುತ್ತದೆ, ಬೇಸರದ ಮನಸ್ಸು ಖುಷಿಯಾಗುತ್ತದೆ. ಅಂತ ಸಾಹಿತ್ಯವನ್ನು ರಚಿಸುವುದರಲ್ಲಿ ನಮ್ಮ ಕಾಯ್ಕಿಣಿ ನಿಸ್ಸೀಮರು. ಈಗ ನೀಡಿರುವ ಸಾಹಿತ್ಯವೂ ಅಂತದ್ದೆ. ನೊಂದ ಮನಸ್ಸುಗಳಿಗೆ ಹಿತ, ಪ್ರೀತಿಸುತ್ತಿರುವ ಮನಸ್ಸುಗಳಿಗೆ ಕಾತುರತೆ ನೀಡುತ್ತಿದೆ. ಡ್ಯುಯೆಟ್ ಸಾಂಗಿಗೆ ಸಂಗೀತ ಪ್ರಿಯರು, ಪ್ರೇಮಿಗಳು ತಲೆದೂಗಿದ್ದಾರೆ. ವೆಡ್ಡಿಂಗ್ ಗಿಫ್ಟ್‌ನ 'ರೋಮಾಂಚಕ' ಸಾಂಗ್ ಸಿಕ್ಕಾಪಟ್ಟೆ ರೀಚ್ ಆಗ್ತಿದೆ.

New Kannada Movie Wedding Gift Romantic Song Released

ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ತಲೆದೂಗಿದವರ ಸಂಖ್ಯೆ ಸಿಕ್ಕಾಪಟ್ಟೆ ಇದೆ. ಮ್ಯೂಸಿಕ್‌ಗೆ ಅರ್ಧ ಜನ ಮನಸೋತಿದ್ದರೆ, ನಿರ್ದೇಶಕ ವಿಕ್ರಂ ಪ್ರಭುಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಕಮೆಂಟ್ ಬಾಕ್ಸ್ ನಲ್ಲಿ ಹಾಡಿಗಂತೂ ಫುಲ್ ಮಾರ್ಕ್ಸ್ ಸಿಕ್ಕಿದೆ. ಈ ರೊಮ್ಯಾಂಟಿಕ್ ಸಾಂಗ್ ಅನ್ನು ಬಾಲಚಂದ್ರ ಪ್ರಭು ಹಾಡಿದ್ದಾರೆ. ಈ ಸಿನಿಮಾದ ಸಂಪೂರ್ಣ ಸಂಗೀತ ಸಂಯೋಜನೆಯ ಜವಾಬ್ದಾರಿಯನ್ನು ಬಾಲಚಂದ್ರ ಅವರೇ ನಿಭಾಯಿಸಿದ್ದಾರೆ.

New Kannada Movie Wedding Gift Romantic Song Released

ಹೆಣ್ಣು ಮಕ್ಕಳಿಗಾಗಿ, ಹೆಣ್ಣು ಮಕ್ಕಳ ರಕ್ಷಣೆಗಾಗಿ ಕೆಲವೊಂದು ಕಾನೂನುಗಳು ಬಂದಿವೆ. ಆ ಕಾನೂನಿನ ಉಪಯೋಗದಿಂದ ಅದೆಷ್ಟೋ ಹೆಣ್ಣು ಮಕ್ಕಳು ತಮ್ಮ ಜೀವನ ಸರಿ ಮಾಡಿಕೊಂಡಿದ್ದಾರೆ. ಆದರೆ ಅದೇ ಕಾನೂನನ್ನು ಕೆಲವು ಹೆಣ್ಣು ಮಕ್ಕಳು ದುರುಪಯೋಗವನ್ನು ಮಾಡಿಕೊಂಡಿದ್ದಾರೆ. ಉಪಯೋಗ-ದುರುಪಯೋಗದ ನಡುವಿನ ಚಿತ್ರಣವನ್ನು ತೆರೆ ಮೇಲೆ ತೆರೆದಿಡಲು ವಿಕ್ರಮ್ ಪ್ರಭು ಹೊರಟಿದ್ದಾರೆ. ನಿರ್ದೇಶನದ ಜೊತೆಗೆ ತಮ್ಮದೇ ವಿಕ್ರಂ ಪ್ರಭು ಫಿಲಂಸ್ ಎಂಬ ಪ್ರೊಡಕ್ಷನ್ ಹೌಸ್ ನಡಿ ಸಿನಿಮಾ ನಿರ್ಮಿಸಿದ್ದಾರೆ.

New Kannada Movie Wedding Gift Romantic Song Released

ಉಳಿದಂತೆ ನಿಶಾನ್ ನಾಣಯ್ಯ ನಟನಾಗಿದ್ದು, ಸೋನುಗೌಡ ಜೋಡಿಯಾಗಿದ್ದಾರೆ. ಪ್ರೇಮಾ, ಅಚ್ಯುತ್ ಕುಮಾರ್, ಪವಿತ್ರಾ ಲೋಕೇಶ್ ಸೇರಿದಂತೆ ದೊಡ್ಡ ತಾರಾ ಬಳಗ ಈ ಸಿನಿಮಾದಲ್ಲಿದೆ. ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಸದ್ಯದಲ್ಲೇ ರಿಲೀಸ್ ಡೇಟ್ ಅನೌನ್ಸ್ ಮಾಡಲಿದೆ.

More from Filmibeat

English summary
New Kannada Movie Wedding Gift Romantic Song Released, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X