ಹೊಸ ವರ್ಷಕ್ಕೆ ಪಾರ್ಟಿ ಸಾಂಗ್ ಕೊಟ್ಟ ಚಂದನ್ ಶೆಟ್ಟಿ: "ಬ್ರೇಕಪ್‌ನಿಂದ ಹೊರಬರೋದು ಇದೇ ಶೆಟ್ರೆ" ಎಂದ ಫ್ಯಾನ್ಸ್!

ಹೊಸ ವರ್ಷಕ್ಕೆ ಕನ್ನಡ ರ್‍ಯಾಪರ್ ಚಂದನ್ ಶೆಟ್ಟಿ ಒಂದು ಹೊಸ ಸಾಂಗ್ ಅನ್ನು ಕೊಡ್ತಿದ್ರು. ಆದರೆ, ಕೆಲವು ವರ್ಷಗಳಿಂದ ಇವರ ಪಾರ್ಟಿ ಸಾಂಗ್ ಅನ್ನು ಸಂಗೀತ ಪ್ರಿಯರು ಮಿಸ್ ಮಾಡಿಕೊಳ್ತಿದ್ದರು. ಆದ್ರೀಗ ಚಂದನ್ ಶೆಟ್ಟಿ "ಕಾಟನ್ ಕ್ಯಾಂಡಿ" ಅಂತ ಕಮ್‌ ಬ್ಯಾಕ್‌ ಮಾಡಿದ್ದಾರೆ. ಹೊಸ ವರ್ಷಕ್ಕೆ ಹೊಸ ಸಾಂಗ್, ಹೊಸ ಲೈಫ್ ಬೇಕು ಅನ್ನೋರಿಗೊಂದು ಸಾಂಗ್ ಸಿಕ್ಕೇ ಬಿಟ್ಟಿದೆ.

ಚಂದನ್ ಶೆಟ್ಟಿ ಈ ಹಿಂದೆ ಕಂಪೋಸ್ ಮಾಡಿ ಹಾಡಿರುವ ಹಾಡುಗಳು ಯೂಟ್ಯೂಬ್‌ನಲ್ಲಿ ಚಿಂದಿ ಉಡಾಯಿಸಿತ್ತು. '3 ಪೆಗ್', 'ಟಕಿಲಾ', 'ಪಕ್ಕಾ ಚಾಕೋಲೆಟ್ ಗರ್ಲ್' ಅಂತ ಹಾಡುಗಳನ್ನು ಇಂದಿಗೂ ಪಾರ್ಟಿ ಪ್ರಿಯರು ಮರೆತಿಲ್ಲ. ನ್ಯೂ ಇಯರ್ ಪಾರ್ಟಿ ದಿನ ಈ ಹಾಡುಗಳು ಪಬ್‌ಗಳಲ್ಲಿ, ರೆಸಾರ್ಟ್‌ಗಳಲ್ಲಿ ಪ್ಲೇ ಆಗೇ ಆಗುತ್ತವೆ. ಒಂದಿಷ್ಟು ದಿನ ಚಂದನ್ ಶೆಟ್ಟಿಯಿಂದ ಹೊಸ ಹಾಡುಗಳನ್ನು ಮಿಸ್ ಮಾಡಿಕೊಂಡಿದ್ದವರಿಗೆ ಮತ್ತೊಂದು ಸಾಂಗ್ ಸಿಕ್ಕಿದೆ.

New Year 2025 party song Cotton Candy by Kannada Rapper Chandan Shetty here the reaction

'ಕಾಟನ್ ಕ್ಯಾಂಡಿ' ಹೊಸ ವರ್ಷದ ಮೂಡ್ನಲ್ಲಿ ಇರೋರಿಗೆ ಅಂತಾನೇ ಕಂಪೋಸ್ ಮಾಡಿದಂತೆ ಇದೆ. ಇನ್ನೊಂದು ಕಡೆ ಬ್ರೇಕಪ್, ಡಿವೋರ್ಸ್‌ನಿಂದ ಹೊರ ಬಂದಿರೋ ಚಂದನ್‌ಗೂ ಇದು ಕಮ್‌ ಬ್ಯಾಕ್ ಸಾಂಗ್. ಹೀಗಾಗಿ ಅವರ ಫ್ಯಾನ್ಸ್ ಈ ಹಾಡನ್ನು ಕೇಳುವುದಕ್ಕೆ ಕಾತುರದಿಂದ ಕಾದು ಕೂತಿದ್ದರು. ಕೊನೆಗೂ 'ಕಾಟನ್ ಕ್ಯಾಂಡಿ' ಸಾಂಗ್ ರಿಲೀಸ್ ಆಗಿದೆ. ಈ ಹಾಡನ್ನು ಕೇಳಿ ನೆಟ್ಟಿಗರು ಸಾಲು ಸಾಲು ಕಾಮೆಂಟ್‌ಗಳನ್ನು ಮಾಡುತ್ತಲೇ ಇದ್ದಾರೆ.

'ಕಾಟನ್ ಕ್ಯಾಂಡಿ' ಸಾಂಗ್ ನೋಡುವುದಕ್ಕಂತೂ ಹಬ್ಬವೇ ಸರಿ. ದುಬೈನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿದೆ. ದುಬೈ ಹೊರವಲಯದ ರಸ್ತೆಗಳು, ಬೆಟ್ಟ ಗುಡ್ಡಗಳು, ಮನೆಗಳು, ರೆಸ್ಟೋರೆಂಟ್‌ಗಳಲ್ಲಿ ಶೂಟ್ ಮಾಡಲಾಗಿದೆ. ಈ ಬಾರಿ ಸಾಂಗ್‌ನಲ್ಲಿ ಹೆಜ್ಜೆ ಹಾಕುವುದಕ್ಕೆ ಹೊಸ ಪ್ರತಿಭೆಗೆ ಅವಕಾಶ ನೀಡಲಾಗಿದೆ. ಸುಶ್ಮಿತಾ ಗೋಪಿನಾಥ್ ಕನ್ನಡ ರ್‍ಯಾಪರ್ ಚಂದನ್ ಶೆಟ್ಟಿ ಜೊತೆ ಕಾಂಟನ್ ಕ್ಯಾಂಡಿಯಾಗಿ ಕಾಣಿಸಿಕೊಂಡಿದ್ದಾರೆ.

New Year 2025 party song Cotton Candy by Kannada Rapper Chandan Shetty here the reaction

ಇನ್ನು ಹಾಡನ್ನು ಕೇಳಿ ನೆಟ್ಟಿಗರು ಸಾಲು ಸಾಲಾಗಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಕೆಲವರಿಗೆ ಚಂದನ್ ಶೆಟ್ಟಿ ಕಮ್ ಬ್ಯಾಕ್ ಮಾಡಿದ್ದು ಕೊಟ್ಟಿದೆ. ಹಾಡನ್ನೂ ಇಷ್ಟ ಪಟ್ಟಿದ್ದಾರೆ. ಅದೇ ಮತ್ತೆ ಕೆಲವರಿಗೆ ಅಷ್ಟಾಗಿ ಇಷ್ಟ ಆಗಿಲ್ಲ. ಇನ್ನು ಕೆಲವರು ಬ್ರೇಕಪ್ ಸಾಂಗ್ ಅನ್ನು ಬೇಕು ಅಂತ ಡಿಮ್ಯಾಂಡ್ ಮಾಡಿದ್ದಾರೆ. ಹಾಗೇ ಲಿರಿಕ್ಸ್ ಬಗ್ಗೆನೂ ಮಾತಾಡಿದ್ದಾರೆ. ಹಾಡು ಕೇಳಿ ನೆಟ್ಟಿಗರು ಮಾಡಿದ ಕಾಮೆಂಟ್‌ಗಳು ಹೀಗಿವೆ.

"ನ್ಯೂ ಇಯರ್ ಪಾರ್ಟಿಗೆ ಈ ಸಾಂಗ್ ಫಿಕ್ಸ್ ಆಗೋಯ್ತು" ಅಂತ ನೆಟ್ಟಿಗರೊಬ್ಬರು ಕಾಟನ್ ಕ್ಯಾಂಡಿ ಸಾಂಗ್‌ಗೆ ಕಾಮೆಂಟ್ ಮಾಡಿದ್ದರೆ, ಇನ್ನೊಬ್ಬರು "ಬ್ರೇಕಪ್‌ನಿಂದ ಹೊರಗೆ ಬರೋದು ಅಂದರೆ ಇದು.. ಶೆಟ್ರೆ ಖತರ್ನಾಕ್‌ ಸಾಂಗ್ ಇದು" ಎಂದು ಹೇಳಿದ್ದಾರೆ. "ಗುರುವೇ ಇಷ್ಷೇ ಅಲ್ಲ, ಇನ್ನು ಜಾಸ್ತಿ ಬೇಕು. ನಿಮ್ಮ ಲೆವೆಲ್‌ಗೆ ಈ ಲಿರಿಕ್ಸ್ ಸಾಕಾಗಲ್ಲ. ಬೇರೆ ಹಾಡಿಗೆಲ್ಲ ಸಿಂಕ್ ಆಗುವ ಹಾಗೆ ಆಯ್ತು. ಆದರೂ ಆದರೂ ಚಂದನ್ ಶೆಟ್ಟಿ ಯಾವಾಗಲೂ ರ್‍ಯಾಪರ್ ಕಿಂಗ್" ಎಂದು ಹೇಳಿದ್ದಾರೆ.

ಇನ್ನು ಕೆಲವರಿಗೆ ಇದು '3 ಪೆಗ್' ಹಾಗೂ ' ಟಕಿಲಾ' ಸಾಂಗ್‌ ಮಿಕ್ಸ್ ಮಾಡಿ ಮಾಡಿದ್ದಾರೆ ಅಂತ ಅನಿಸಿದೆ. "ಮುಂಚೆ ಇದ್ದಿದ್ ಮಸ್ತ್ ಧಮ್ ನಿನ್ ಸಾಂಗ್ಸ್ ಅಲ್ಲಿ ಈವಾಗ ಇಲ್ಲ ಮಗ. ಪಕ್ಕ ಚಾಕಲೇಟ್ ಗರ್ಲ್, 3 ಪೆಗ್ ಸಾಂಗ್ಸ್ ಇವೆಲ್ಲ ಯಾವತರ ಇದ್ವು. ಹಳೇ ಚಂದನ್ ಶೆಟ್ಟಿ ಮಿಸ್ಸಿಂಗ್" ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ಇನ್ನೊಬ್ಬರು "ಎಲ್ಲಾ ಸಾಂಗ್ ಒಂದೇ ತರ ಇದೆ.. ಟಕಿಲಾ, 3 ಪೆಗ್ ಮಿಕ್ಸ್ " ಎಂದಿದ್ದಾರೆ. ಇದರ ಜೊತೆಗೆ ಬ್ರೇಕಪ್ ಸಾಂಗ್ ಬೇಕು ಅಂತನೂ ಡಿಮ್ಯಾಂಡ್ ಮಾಡಿದ್ದಾರೆ. "ನಿವೇದಿತಾ ಬಿಟ್ಟು ಹೋದಮೇಲೆ ಒಂದು ಬ್ರೇಕ್ ಅಪ್ ಸಾಂಗ್ ಬರಲಿ ಅಣ್ಣ" ಎಂದು ಚಂದನ್‌ ಶೆಟ್ಟಿಗೆ ಒತ್ತಡ ಹಾಕಿದ್ದಾರೆ.

More from Filmibeat

English summary
New Year Party 2025 party song Cotton Candy by Kannada Rapper Chandan Shetty here the reaction;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X