ಪೂಜಾ ಹೆಗ್ಡೆಗೆ 'ನಗುವಂತ ತಾರೆಯೇ' ಎಂದು ಬಣ್ಣಿಸಿದ ಡಾರ್ಲಿಂಗ್ ಪ್ರಭಾಸ್

ನಿನ್ನೆ(ಡಿಸೆಂಬರ್ 1) ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ನಟನೆಯ 'ರಾಧೆ ಶ್ಯಾಮ್‌' ಸಿನಿಮಾದಿಂದ 'ಆಶಿಕಿ ಆ ಗಯಿ' ಎನ್ನುವ ರೊಮ್ಯಾಂಟಿಕ್ ಸಾಂಗ್ ರಿಲೀಸ್ ಆಗಿತ್ತು. ರಾಧೆ ಶ್ಯಾಮ್ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದರೂ, ಈ ರೊಮ್ಯಾಂಟಿಕ್ ಸಾಂಗ್ ತೆಲುಗಿನ ಮೊದಲು ಬಿಡುಗಡೆಯಾಗುತ್ತೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಪೂಜಾ ಹಾಗೂ ಪ್ರಭಾಸ್ ಜೋಡಿಯ ಈ ಹಾಡು ಮೊದಲ ಬಾಲಿವುಡ್‌ನಲ್ಲಿ ರಿಲೀಸ್ ಆಗಿತ್ತು.

ವಿಶೇಷ ಅಂದ್ರೆ, 'ರಾಧೆ ಶ್ಯಾಮ್' ಕನ್ನಡದಲ್ಲೂ ರಿಲೀಸ್ ಆಗುತ್ತಿದ್ದು, ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಜೋಡಿಯನ್ನು ತೆರೆಮೇಲೆ ನೋಡಲು ಕನ್ನಡಿಗರೂ ಕಾಯುತ್ತಿದ್ದಾರೆ. ಆದರೆ, ಹಿಂದಿ ಜೊತೆ ಕನ್ನಡ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿರಲಿಲ್ಲ. ಆದ್ರೀಗ ಪ್ರಭಾಸ್ ಹಾಗೂ ಪೂಜಾ ಪ್ರೇಮಕಥೆಯನ್ನು ಕಥೆ ಹೇಳುವ 'ರಾಧೆ ಶ್ಯಾಮ್' ಚಿತ್ರದ ಹಾಡು ಕನ್ನಡದಲ್ಲೂ ಬಿಡುಗಡೆಯಾಗಿದೆ.

'ನಗುವಂತ ತಾರೆಯೇ' ಎನ್ನುತ ಫ್ಲರ್ಟ್ ಮಾಡಿದ ಪ್ರಭಾಸ್

'ನಗುವಂತ ತಾರೆಯೇ' ಎನ್ನುತ ಫ್ಲರ್ಟ್ ಮಾಡಿದ ಪ್ರಭಾಸ್

ಸೂಪರ್ ಸ್ಟಾರ್ ಪ್ರಭಾಸ್ ನಟಿಸಿದ ಪ್ಯಾನ್ ಇಂಡಿಯಾ ಸಿನಿಮಾ 'ರಾಧೆ ಶ್ಯಾಮ್' ವಿಶ್ವದಾದ್ಯಂತ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಪ್ಯಾನ್ ಇಂಡಿಯಾ ಸಿನಿಮಾ ಬಿಡುಗಡೆಗೆ ಇನ್ನು ಒಂದೂವರೆ ತಿಂಗಳು ಬಾಕಿ ಉಳಿದಿದೆ ಅಷ್ಟೇ. ಕಳೆದ ಹಲವು ದಿನಗಳಿಂದ ರಿಲೀಸ್‌ಗೆ ತಯಾರಿ ನಡೆಸುತ್ತಿದ್ದ 'ರಾಧೆ ಶ್ಯಾಮ್' ಸಿನಿಮಾ ಒಂದೊಂದು ಇಂಟ್ರೆಸ್ಟಿಂಗ್ ವಿಚಾರಗಳನ್ನು ಹೊರಹಾಕುತ್ತಿದೆ. ಈಗ ರೊಮ್ಯಾಂಟಿಕ್ ಸಾಂಗ್ ಅನ್ನು ಕನ್ನಡದಲ್ಲಿ ರಿಲೀಸ್ ಮಾಡಿದ್ದು, 'ನಗುವಂತ ತಾರೆಯೇ' ಹಾಡು ಕನ್ನಡಿಗರಿ ಕಿಕ್ ಕೊಡಲು ಆರಂಭಿಸಿದೆ.

ಹಾಡಿನ ಜೀವಾಳ ಸುಂದರತಾಣಗಳು

ಹಾಡಿನ ಜೀವಾಳ ಸುಂದರತಾಣಗಳು

ರಾಧೆ ಶ್ಯಾಮ್ ಸಿನಿಮಾದ 'ನಗುವಂತ ತಾರೆಯೇ' ಹಾಡು ನೋಡುಗರ ಕಣ್ಣುಗಳಿಗೆ ತಂಪು ನೀಡಿದೆ. ವಿದೇಶದ ವಿವಿಧ ಪ್ರೇಕ್ಷಣೀಯ ಸ್ಥಳಗಳನ್ನು ಈ ಹಾಡಿನಲ್ಲಿ ಸೆರೆ ಹಿಡಿಯಲಾಗಿದೆ. ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಸುಂದರ ಸ್ಥಳಗಳಲ್ಲಿ ಬೈಕ್ ರೈಡಿಂಗ್ ಸಿನಿಪ್ರಿಯರ ಕಣ್ಣಿಗಳಿಗೆ ಮಜಾ ಕೊಡುತ್ತಿದೆ. ಇದೇ ಮೊದಲ ಬಾರಿಗೆ ಜೊತೆಯಾಗಿ ನಟಿಸಿರುವ ಈ ಜೋಡಿಯ ಸ್ಕ್ರೀನ್ ಕೆಮಿಸ್ಟ್ರಿ ಗಮನ ಸೆಳೆದಿದೆ. ಪೂಜಾ ಹೆಗ್ಡೆ ಮತ್ತು ಪ್ರಭಾಸ್ ಕಾಸ್ಟ್ಯೂಮ್ ಸಿನಿಪ್ರೇಮಿಗಳಿಗೆ ಖಂಡಿತಾ ಇಷ್ಟ ಆಗುತ್ತೆ. ಎಲ್ಲಕ್ಕಿಂತ ಹೆಚ್ಚಾಗಿ ಈ ರೊಮ್ಯಾಂಟಿಕ್ ಜೋಡಿ ಇದೊಂದೇ ಹಾಡಿನಲ್ಲಿ ಮ್ಯಾಜಿಕ್ ಮಾಡುತ್ತಿದೆ.

 ಜಸ್ಟಿನ್ ಪ್ರಭಾಕರನ್ ಸಂಗೀತ

ಜಸ್ಟಿನ್ ಪ್ರಭಾಕರನ್ ಸಂಗೀತ

'ರಾಧೆ ಶ್ಯಾಮ್' ಟೀಮ್ ಈ ಹಾಡಿನ್ನು ಬಿಡುಗಡೆ ಮಾಡುವುದಕ್ಕೂ ಮುನ್ನ ಹಾಡಿನ ಪೋಸ್ಟರ್ ಮತ್ತು ಪ್ರೋಮೋ ರಿಲೀಸ್ ಮಾಡಿತ್ತು. ಆ ಟೀಸರ್ ನೋಡಿಯೇ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದರು. ಈಗ ಜಸ್ಟಿನ್ ಪ್ರಭಾಕರನ್ ಹಾಕಿರುವ ಟ್ಯೂನ್‌ಗೆ ಸೂರಜ್ ಸಂತೋಷ್ ಹಾಡಿರುವ ಹಾಡಿಗೆ ಸಂಗೀತ ಪ್ರಿಯರು ತಲೆದೂಗುತ್ತಿದ್ದಾರೆ. ಧನಂಜಯ್ ಈ ಹಾಡಿಗೆ ಸಾಹಿತ್ಯ ರಚಿಸಿದ್ದಾರೆ.

ರಾಧೆ ಶ್ಯಾಮ್ 70ರ ದಶಕದಲ್ಲಿ ನಡೆಯುವ ಸುಂದರ ಪ್ರೇಮ ಕಥೆ ಅಂತ ಈಗಾಗಲೇ ಪ್ರಭಾಸ್ ಹೇಳಿದ್ದಾರೆ. ಪ್ರಭಾಸ್ ಈ ಚಿತ್ರದಲ್ಲಿ ವಿಕ್ರಮಾದಿತ್ಯನಾಗಿ ಕಾಣಿಸಿಕೊಳ್ಳಲಿದ್ದಾರೆ. ಎಲ್ಲರ ಭವಿಷ್ಯವನ್ನು ಹೇಳುವ ವಿಶೇಷ ಪ್ರತಿಭೆ ಹೊಂದಿರುವ ವ್ಯಕ್ತಿಯ ಪಾತ್ರದಲ್ಲಿ ಪ್ರಭಾಸ್ ತೆರೆಮೇಲೆ ಎದುರಾಗುತ್ತಾರೆ. ಈಗಾಗಲೇ ಟೀಸರ್‌ನಲ್ಲಿ ತನ್ನ ಪಾತ್ರದ ಬಗ್ಗೆ ಸುಳಿವು ಬಿಟ್ಟು ಕೊಟ್ಟಿರುವ ಪ್ರಭಾಸ್, ಈ ಹಾಡಿನ ಕೊನೆಯಲ್ಲಿ ಕಾಣುವ ಕೆಲವು ತುಣುಕುಗಳು ಚಿತ್ರದ ಬಗ್ಗೆ ಚಿಕ್ಕದೊಂದು ಸುಳಿವು ಬಿಟ್ಟಿದೆ. ರಾಧಾ ಕೃಷ್ಣ ಕುಮಾರ್ ಕಥೆ ಬರೆದು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಸಂಕ್ರಾಂತಿ ಹಬ್ಬಕ್ಕೆ 'ರಾಧೆ ಶ್ಯಾಮ್' ರಿಲೀಸ್

ಸಂಕ್ರಾಂತಿ ಹಬ್ಬಕ್ಕೆ 'ರಾಧೆ ಶ್ಯಾಮ್' ರಿಲೀಸ್

'ರಾಧೆ ಶ್ಯಾಮ್ ' ಸುತ್ತಮುತ್ತ ದೊಡ್ಡ ದೊಡ್ಡ ಸಿನಿಮಾಗಳೇ ರಿಲೀಸ್ ಆಗುತ್ತಿವೆ. ಜನವರಿ 14, 2022 ರಂದು ಈ ಸಿನಿಮಾ ವಿಶ್ವದಾದ್ಯಂತ ತೆರೆಕಾಣಲಿದೆ. ರಾಧೆ ಶ್ಯಾಮ್ ತೆಲುಗು, ತಮಿಳು, ಕನ್ನಡ, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಪ್ರಭಾಸ್ ಅನ್ನು ಆಕ್ಷನ್ ಸಿನಿಮಾಗಳಲ್ಲೇ ನೋಡಿದ್ದ ಸಿನಿಪ್ರಿಯರಿಗೆ ಈ ರೊಮ್ಯಾಂಟಿಕ್ ಸಿನಿಮಾ ಪ್ರೀತಿಯ ಕಿಕ್ ಕೊಡುವ ಸಾಧ್ಯತೆಯಿದೆ.

More from Filmibeat

English summary
Multilingual movie Radhe Shyam team released Kannada song titled naguvantha thareye. Prabhas and Pooja Hegde starrer movie will be releasing on jan 14th in Kannada also.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X