ಯೂಟ್ಯೂಬ್‌ನಲ್ಲಿ 24 ಗಂಟೆಯಲ್ಲೇ ದಾಖಲೆ ಬರೆದ 'ಜೈ ಶ್ರೀರಾಮ್' ಸಾಂಗ್: ಕನ್ನಡದಲ್ಲಿ ಹೇಗಿದೆ ರೆಸ್ಪಾನ್ಸ್?

ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಶ್ರೀರಾಮ ಅವತಾರ ತಾಳಿರೋದು ಗೊತ್ತೇ ಇದೆ. 'ಆದಿಪುರುಷ್' ಟ್ರೈಲರ್ ನೋಡಿ ಸಿನಿಪ್ರಿಯರು ಥ್ರಿಲ್ ಆಗಿದ್ದೂ ಗೊತ್ತಿದೆ. ನಿನ್ನೆಯಷ್ಟೇ ಜೈ ಶ್ರೀರಾಮ್ ಅನ್ನೋ ಹಾಡನ್ನು ರಿಲೀಸ್ ಮಾಡಲಾಗಿದೆ. ಈ ಹಾಡಿಗೂ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ.

ಯಂಗ್ ರೆಬೆಲ್‌ಸ್ಟಾರ್ ಪ್ರಭಾಸ್ ಮೊದಲ ಪೌರಾಣಿಕ ಸಿನಿಮಾ. ಹೀಗಾಗಿ ಈ ಪ್ಯಾನ್ ಇಂಡಿಯಾ ಸಿನಿಮಾ ಭಾರತಾದ್ಯಂತ ಸಂಚಲನ ಸೃಷ್ಟಿಸಬಹುದು ಎಂಬ ನಿರೀಕ್ಷೆಯಿದೆ. ಈ ಪೌರಾಣಿಕ ಕಥೆ ಬಹುತೇಕ ಮಂದಿಗೆ ಗೊತ್ತಿದ್ದರೂ, ಇಂದಿನ ಪೀಳಿಗೆ ಆಧುನಿಕ ತಂತ್ರಜ್ಞಾನದ ಮೂಲಕ ಸೃಷ್ಟಿಸಿದ ಸಿನಿಮಾಗೆ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಅನ್ನೋ ಕುತೂಹಲವಂತೂ ಇದೆ.

Prabhas Starrer Adipurush Jai Sriram Song Record breaking Views in 24 Hours

ಯೂಟ್ಯೂಬ್‌ನಲ್ಲಿ 'ಜೈ ಶ್ರೀ ರಾಮ್' ದಾಖಲೆ

'ಆದಿಪುರುಷ್' ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ ಅಷ್ಟೇ. ಹೀಗಾಗಿ ಆದಿಪುರುಷ್ ತಂಡ ಭರ್ಜರಿ ಪ್ರಚಾರದಲ್ಲಿ ಬ್ಯುಸಿಯಾಗಿದೆ. ಟೀಸರ್, ಟ್ರೈಲರ್ ಬಳಿಕ ಜೈ ಶ್ರೀರಾಮ್ ಅನ್ನೋ ಮೊದಲ ಹಾಡನ್ನು ರಿಲೀಸ್ ಮಾಡಲಾಗಿದೆ. ಬಿಡುಗಡೆಯಾದ 24 ಗಂಟೆಗಳೊಳಗೆ ಈ ಹಾಡಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ದಾಖಲೆ ಮಟ್ಟದಲ್ಲಿ ವೀವ್ಸ್ ಗಳಿಸಿದೆ.

'ಜೈ ಶ್ರೀರಾಮ್' ಸಾಂಗ್ ಬಿಡುಗಡೆಯಾದ 24 ಗಂಟೆಗಳಲ್ಲಿ ಅತೀ ಹೆಚ್ಚು ವೀವ್ಸ್ ಪಡೆದ ಮೊದಲ ಹಾಡಾಗಿದೆ. ಈ ಹಾಡಿ ಬಿಡುಗಡೆ ಕೇವಲ 20 ಗಂಟೆಗಳಲ್ಲಿ 30.50 ಮಿಲಿಯನ್ ವೀವ್ಸ್ ಗಳಿಸಿತ್ತು. ಅದೇ 24 ಗಂಟೆಗಳಲ್ಲಿ 31 ಮಿಲಿಯನ್ ಮಂದಿ ವೀಕ್ಷಣೆ ಮಾಡಿದ್ದಾರೆ. ಈ ಹಿಂದೆ ರಣ್‌ವೀರ್ ಸಿಂಗ್ ಅಭಿನಯದ 'ತೂ ಜೂಟಿ ಮೇ ಮಕ್ಕರ್' ಸಿನಿಮಾದ "ಪ್ಯಾರ್ ಹೋತಾ ಕಯಿ ಬಾರ್ ಹೈ" ಸಾಂಗ್ 31.70 ಮಿಲಿಯನ್ ವೀವ್ಸ್ ಪಡೆದುಕೊಂಡಿತ್ತು.

30 ತಂಡಗಳಿಂದ ಒಟ್ಟಿಗೆ ಗಾಯನ

'ಆದಿಪುರುಷ್' ಸಿನಿಮಾದ ಈ ಹಾಡನ್ನು ಸಂಗೀತ ನಿರ್ದೇಶಕ ಅಟುಲ್-ಅಜಯ್ ಕಂಪೋಸ್ ಮಾಡಿದ್ದಾರೆ. ಬಾಲಿವುಡ್ ಹಾಗೂ ಮರಾಠಿ ಚಿತ್ರರಂಗದಲ್ಲಿ ಜನಪ್ರಿಯ ಸಂಗೀತ ನಿರ್ದೇಶಕರಿವರು. ಅಂದ್ಹಾಗೆ ಈ ಸಿನಿಮಾಗಾಗಿ ಟ್ಯೂನ್ ಹಾಡಿದ ಮೊದಲ ಹಾಡು ಇದು. ಹೀಗಾಗಿ ಇಡೀ ತಂಡಕ್ಕೆ ಈ ಹಾಡು ವಿಶೇಷ.

Prabhas Starrer Adipurush Jai Sriram Song Record breaking Views in 24 Hours

ಜೈ ಶ್ರೀರಾಮ್ ಹಾಡಿನ ಬಗ್ಗೆ ಸಂಗೀತ ನಿರ್ದೇಶಕ ಅಜಯ್ ಹೀಗೆ ಹೇಳಿದ್ದಾರೆ. " ಈ ಹಾಡಿಗೆ ಸಿಗುತ್ತಿರುವ ಪ್ರೀತಿ ಮತ್ತು ಬೆಂಬಲ ಕಂಡು ತುಂಬಾ ಖುಷಿಯಾಗಿದೆ. ಸಿನಿ ಸಾಹಿತಿ ಮನೋಜ್ ಮುಂತಾಶಿರ್ ಈ ಹಾಡನ್ನು ಅದ್ಭುತವಾಗಿ ಬರೆದಿದ್ದಾರೆ. 30 ತಂಡಗಳು ಒಟ್ಟಿಗೆ ಈ ಈ ಹಾಡನ್ನು ಹಾಡಿದ್ದಾರೆ." ಎಂದು ಹೇಳಿದ್ದಾರೆ.

ಕನ್ನಡದಲ್ಲಿ ಹೇಗಿದೆ ರೆಸ್ಪಾನ್ಸ್

'ಆದಿಪುರುಷ್' ಸಿನಿಮಾದ ಜೈ ಶ್ರೀರಾಮ್ ಹಾಡು ಕನ್ನಡದಲ್ಲೂ ಬಿಡುಗಡೆಯಾಗಿದೆ. ಈ ಹಾಡಿಗೆ ಡಾ.ನಾಗೇಂದ್ರ ಪ್ರಸಾದ್ ಟ್ಯೂನ್ ಹಾಕಿದ್ದಾರೆ. ರಿಲೀಸ್ ಅದಲ್ಲಿಂದ ಇಲ್ಲಿವರೆಗೂ ಈ ಹಾಡನ್ನು ಸುಮಾರು 18 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಹೀಗಾಗಿ 'ಆದಿಪುರುಷ್' ಸಿನಿಮಾ ದೇಶಾದ್ಯಂತ ಸಂಚಲನ ಸೃಷ್ಟಿಸುತ್ತಿದೆ.

ಇಲ್ಲಿ ಪ್ರಭಾಸ್ ಶ್ರೀರಾಮನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸೀತೆಯಾಗಿ ಕೃತಿ ಸೆನನ್ ನಟಿಸಿದ್ದು, ಲಕ್ಷ್ಮಣನಾಗಿ ಸನ್ನಿ ಸಿಂಗ್, ಹನುಮಂತನಾಗಿ ದೇವದತ್ ನಾಗೆ ಹಾಗೇ ರಾವಣಾಸುರನಾಗಿ ಸೈಫ್ ಅಲಿ ಖಾನ್ ಕಾಣಿಸಿಕೊಂಡಿದ್ದಾರೆ. ಓಂ ರಾವತ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಟಿ ಸೀರಿಸ್ ಸಂಸ್ಥೆ ಈ ಸಿನಿಮಾವನ್ನು ನಿರ್ಮಾಣ ಮಾಡಿದೆ. ಇದೇ ಜೂನ್ 16ರಂದು ಅದ್ಧೂರಿಯಾಗಿ ಸಿನಿಮಾ ಬಿಡುಗಡೆಯಾಗುತ್ತಿದೆ.

More from Filmibeat

English summary
Prabhas Starrer Adipurush Jai Sriram Song Record breaking Views in 24 Hours, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X