Prabhu Deva: ಆಸ್ಕರ್ ಗೆದ್ದ "ನಾಟು ನಾಟು.." ಹಾಡಿಗೆ ಪ್ರಭುದೇವ ಗೌರವ.. ವಿಡಿಯೋ ವೈರಲ್
ಭಾರತದ ಮೈಕಲ್‌ಜಾಕ್ಸನ್ ಪ್ರಭುದೇವ ಹೆಜ್ಜೆಗಳಿಗೆ ಅದೆಷ್ಟೋ ಮಂದಿ ಫಿದಾ ಆಗಿದ್ದಾರೆ. ಆದ್ರೀಗ ಸ್ವತ: ಪ್ರಭುದೇವ RRR ಸಿನಿಮಾದ "ನಾಟು ನಾಟು.." ಹಾಡಿಗೆ ಮರುಳಾಗಿದ್ದಾರೆ. ಇತ್ತೀಚೆಗೆ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಗೆದ್ದ ಈ ಹಾಡಿಗೆ ಪ್ರಭುದೇವ ಕಳೆದು ಹೋಗಿದ್ದಾರೆ.
ವಿಶ್ವದ ಅದೆಷ್ಟೋ ಮಂದಿ RRR ಸಿನಿಮಾದ "ನಾಟು ನಾಟು.." ಹಾಡಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಅದರಲ್ಲಿ ಪ್ರಭುದೇವ ಕೂಡ ಒಬ್ಬರು. ಬೆಸ್ಟ್ ಒರಿಜಿನಲ್ ಸಾಂಗ್ ಕ್ಯಾಟಗರಿಯಲ್ಲಿ "ನಾಟು ನಾಟು.." ಹಾಡು ಆಸ್ಕರ್ ಗೆಲ್ಲುತ್ತಿದ್ದಂತೆ ಪ್ರಭುದೇವ ಟ್ವಿಟರ್‌ನಲ್ಲಿ ವಿಶೇಷವಾಗಿ ಗೌರವ ಸೂಚಿಸಿದ್ದಾರೆ.
ಆಸ್ಕರ್ ಗೆದ್ದುಕೊಂಡು ಬಂದ RRR ತಂಡಕ್ಕೆ ಹಾಗೂ ಈ ಹಾಡಿನ ನೃತ್ಯ ನಿರ್ದೇಶಕ ಪ್ರೇಮ್ ರಕ್ಷಿತ್ ಅವರಿಗೆ ತಮ್ಮದೇ ಸ್ಟೈಲ್‌ನಲ್ಲಿ ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಪ್ರಭುದೇವ ತಮ್ಮ ಡ್ಯಾನ್ಸರ್‌ಗಳ ಜೊತೆ ನಾಟು ನಾಟು ಹಾಡಿಗೆ ಹೆಜ್ಜೆ ಹಾಕಿ, ಆ ವಿಡಿಯೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿ ಗೌರವ ಸೂಚಿಸಿದ್ದಾರೆ.

ಪ್ರಭುದೇವ ತಮ್ಮ ಡ್ಯಾನ್ಸರ್‌ಗಳ ಜೊತೆ ಹೆಜ್ಜೆ ಹಾಕಿದ 27 ಸೆಕೆಂಡುಗಳ "ನಾಟು ನಾಟು.." ಸಾಂಗ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹೆಚ್ಚು ಕಡಿಮೆ 100 ಮಂದಿ ಡ್ಯಾನ್ಸರ್‌ಗಳ ಜೊತೆ ಪ್ರಭುದೇವ ಸಖತ್ ಆಗಿಯೇ ಹೆಜ್ಜೆ ಹಾಕಿದ್ದಾರೆ.
ಪ್ರಭುದೇವ ಹಾಗೂ ಅವರ ತಂಡ ಹೆಜ್ಜೆ ಹಾಕಿದ ವಿಡಿಯೋಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಬೆನ್ನಲ್ಲೇ ನೆಟ್ಟಿಗರು ಹಾಗೂ ಸೆಲೆಬ್ರೆಟಿಗಳು ಪ್ರಭುದೇವ ಹಾಗೂ ತಂಡಕ್ಕೆ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ. ಪ್ರಭುದೇವ ಅವರ ಎನೆರ್ಜೆಟಿಕ್ ಸ್ಟೆಪ್ಸ್‌ಗೆ ಥ್ರಿಲ್ ಆಗಿದ್ದಾರೆ.
ಪ್ರಭುದೇವ "ನಾಟು ನಾಟು.." ಹಾಡಿಗೆ ಹೆಜ್ಜೆ ಹಾಕುತ್ತಿದ್ದಂತೆ ರಾಮ್ ಚರಣ್ ಹಾಗೂ ಜೂ.ಎನ್‌ಟಿಆರ್ ಅಭಿಮಾನಿಗಳು ಖುಷಿಯಾಗಿದ್ದಾರೆ. ತಮ್ಮ ನೆಚ್ಚಿನ ನಟನ ಹಾಡಿಗೆ ಹೆಜ್ಜೆ ಹಾಕಿದ್ದಕ್ಕೆ ಥ್ರಿಲ್ ಆಗಿದ್ದಾರೆ. ವಿಶೇಷ ಅಂದ್ರೆ, ರಾಮ್ ಚರಣ್ ಅಭಿನಯದ 'RC15' ಸಿನಿಮಾಗೆ ಪ್ರಭುದೇವ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ. ಶಂಕರ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಪ್ರಭುದೇವ ವಿಡಿಯೋ ಪೋಸ್ಟ್ ಮಾಡುತ್ತಿದ್ದಂತೆ ಕಮೆಂಟ್‌ಗಳ ಸುರಿಮಳೆಯನ್ನೇ ಹರಿದುಬಂದಿದೆ. ಇದೇ ವೇಳೆ ಕೆಲ ರಾಮ್ ಚರಣ್ ಅಭಿಮಾನಿಗಳು ಆರ್‌ಸಿ15 ಸಿನಿಮಾ ಬಗ್ಗೆ ಕುತೂಹಲವನ್ನು ವ್ಯಕ್ತಪಡಿಸಿದ್ದಾರೆ. ತಮ್ಮ ನೆಚ್ಚಿನ ನಟನಿಗಾಗಿ ಟ್ರೆಂಡಿ ಸ್ಟೆಪ್ಸ್ ಅನ್ನು ಕಂಪೋಸ್ ಮಾಡುವುಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಪ್ರಭುದೇವ ಸದ್ಯ ನೃತ್ಯ ನಿರ್ದೇಶನದ ಜೊತೆ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಬಹಳ ದಿನಗಳಿಂದ ರಿಲೀಸ್‌ಗಾಗಿ ಕಾಯುತ್ತಿದ್ದ ಸಿನಿಮಾ 'ಬಘೀರ' ಕೊನೆಗೂ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಪ್ರಭುದೇವ ವಿಶೇಷವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಕನ್ನಡ ಸಿನಿಮಾದಲ್ಲೂ ಪ್ರಭುದೇವ ನಟಿಸುತ್ತಿದ್ದಾರೆ. ಯೋಗರಾಜ್ ಭಟ್ ನಿರ್ದೇಶಿಸುತ್ತಿರುವ ಈ ಸಿನಿಮಾದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಜೊತೆ ಪ್ರಭುದೇವ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. 'ಕರಟಕ ದಮನಕ' ಟೈಟಲ್ ಇಟ್ಟು ಭಟ್ಟು ಆಕ್ಷನ್ ಕಟ್ ಹೇಳುತ್ತಿದ್ದಾರೆ.


Click it and Unblock the Notifications











