'ಪ್ರೇಮಂ ಪೂಜ್ಯಂ' ನಟಿ ಬೃಂದಾ ಆಚಾರ್ಯ ಈಗ 'ಜ್ಯೂಲಿಯಟ್': ಹೊಚ್ಚ ಹೊಸ ಹಾಡೊಂದು ರಿಲೀಸ್
ನೆನಪಿರಲಿ ಪ್ರೇಮ್ ಅಭಿನಯದ 25ನೇ ಸಿನಿಮಾ 'ಪ್ರೇಮಂ ಪೂಜ್ಯಂ'. ಈ ಸಿನಿಮಾ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಬೃಂದ ಆಚಾರ್ಯ ಎಂಟ್ರಿ ಕೊಟ್ಟಿದ್ದರು. ಅದೇ ನಟಿಯ ಎರಡನೇ ಸಿನಿಮಾ ಸದ್ದು ಮಾಡುತ್ತಿದೆ. ಅದುವೇ 'ಜ್ಯೂಲಿಯಟ್ 2'.
'ಜ್ಯೂಲಿಯಟ್ 2' ವಿಭಿನ್ನ ಕಥಾಹಂದರ ಹೊಂದಿರುವ ಸಿನಿಮಾ. ಈಗಾಗಲೇ ಈ ಸಿನಿಮಾ ಒಂದು ಹಾಡನ್ನು ಬಿಡುಗಡೆ ಮಾಡಲಾಗಿದೆ. ಈ ಹಾಡು ತಂದೆ ಮಗಳ ಬಾಂಧವ್ಯದ ಕಥೆಯನ್ನು ಹೇಳುತ್ತೆ. ಸುಕೀರ್ತ್ ಶೆಟ್ಟಿ ತಂದೆ - ಮಗಳ ಬಾಂಧವ್ಯ ಸಾರುವ "ಕರುಳ ಬಳ್ಳಿಯ ನೋವಿನಲಿ ತಾಯಿಯ ಮಮತೆ ಲಾಲಿ ಹಾಡುತ್ತೆ. ಬೆವರ ಹನಿಯ ಒಡಲಿನಲಿ ತಂದೆಯ ಸಹನೆ ಲಾಲಿ ಹಾಡುತ್ತೆ" ಎಂದು ಸಾಹಿತ್ಯ ರಚಿಸಿದ್ದಾರೆ.

'ಜ್ಯೂಲಿಯಟ್ 2' ಸಿನಿಮಾದ ಈ ಹಾಡು ಈಗಾಗಲೇ ರಿಲೀಸ್ ಆಗಿದೆ. ಈಗಾಗಲೇ ಈ ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಅಂದ್ಹಾಗೆ ಸಂದೀಪ್ ಆರ್ ಬಲ್ಲಾಳ್ ಈ ಹಾಡಿಗೆ ಟ್ಯೂನ್ ಹಾಕಿದ್ದಾರೆ. ಮಲ್ಲಿಕಾ ಮಟ್ಟಿ ಈ ಹಾಡನ್ನು ಇಂಪಾಗಿ ಹಾಡಿದ್ದಾರೆ.
ಇನ್ನು ಮಗಳ ಪಾತ್ರದಲ್ಲಿ ರಕ್ಷಿತಾ ಬೋಳಾರ್ ಹಾಗೂ ತಂದೆಯ ಪಾತ್ರದಲ್ಲಿ ಲಕ್ಷ್ಮೀಶ್ ಭಟ್ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಅಶ್ವಿನಿ ಪುನೀತ್ ರಾಜಕುಮಾರ್ ಈ ಸಿನಿಮಾ ಟೀಸರ್ ರಿಲೀಸ್ ಮಾಡಿದ್ದರು. ಟೀಸರ್ ಕೂಡ ಸಿನಿಪ್ರಿಯರಿಗೆ ಇಷ್ಟ ಆಗಿದೆ. ಅಂದ್ಹಾಗೆ 'ಜ್ಯೂಲಿಯಟ್ 2' ಸಿನಿಮಾ ಟ್ರೈಲರ್ ಇದೇ ಫೆಬ್ರವರಿ 14 ರಂದು ಬಿಡುಗಡೆಯಾಗಲಿದೆ. ಇನ್ನು ಸಿನಿಮಾ ಫೆಬ್ರವರಿ 24 ರಂದು ರಿಲೀಸ್ ಆಗಲಿದೆ.

ಲಿಖಿತ್ ಆರ್ ಕೋಟ್ಯಾನ್ 'ಜ್ಯೂಲಿಯೆಟ್ 2' ಸಿನಿಮಾವನ್ನು ನಿರ್ಮಿಸಿದ್ದರೆ, ವಿರಾಟ್ ಬಿ ಗೌಡ ಆಕ್ಷನ್ ಕಟ್ ಹೇಳಿದ್ದಾರೆ. 'ಪ್ರೇಮಂ ಪೂಜ್ಯಂ' ಖ್ಯಾತಿಯ ಬೃಂದಾ ಆಚಾರ್ಯ ಲೀಡ್ ರೋಲ್‌ನಲ್ಲಿ ನಟಿಸಿದ್ರೆ, ಇವರೊಂದಿಗೆ ಅನೂಪ್ ಸಾಗರ್, ಖುಷ್ ಆಚಾರ್ಯ, ರವಿ, ರಾಧೇಶ್ ಶೆಣೈ, ಶ್ರೀಕಾಂತ್, ರಾಯ್, ರಕ್ಷಿತಾ ಬೋಳಾರ್, ಲಕ್ಷ್ಮೀಶ್ ಭಟ್ ನಟಿಸಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಈ ಸಿನಿಮಾವನ್ನು ರಿಲಯನ್ಸ್ ಎಂಟರ್ಟೈನ್ಮೆಂಟ್ ಬಿಡುಗಡೆ ಮಾಡುತ್ತಿದೆ.


Click it and Unblock the Notifications











