'ಜೇಮ್ಸ್' 'ಟ್ರೇಡ್‌ಮಾರ್ಕ್‌'ನಲ್ಲಿ ರಚಿತಾ, ಆಶಿಕಾ, ಶ್ರೀಲೀಲಾ ಭರ್ಜರಿ ಸ್ಪೆಪ್ಸ್

ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್' ರಿಲೀಸ್‌ಗೆ ಇಡೀ ಚಿತ್ರತಂಡ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಅಪ್ಪು ಅಗಲಿದ ನೋವಿನಲ್ಲಿರುವ ಅಭಿಮಾನಿಗಳಿಗೆ 'ಜೇಮ್ಸ್' ಸಂಜೀವಿನಿಯಂತೆ ಬಂದಿದೆ. ಮಹಾಶಿವರಾತ್ರಿಯ ಈ ಸುದಿನದಂದು 'ಜೇಮ್ಸ್' ಸಿನಿಮಾ ಚಿತ್ರತಂಡ ಟ್ರೇಡ್‌ಮಾರ್ಕ್ ಅನ್ನೋ ಹಾಡನ್ನು ರಿಲೀಸ್ ಮಾಡಿದೆ. ಕಳೆದೆರಡು ದಿನಗಳಿಂದ ಈ ಹಾಡನ್ನೇ ಅಪ್ಪು ಅಭಿಮಾನಿಗಳು ಎದುರು ನೋಡುತ್ತಿದ್ದರು.

ಚೇತನ್ ಕುಮಾರ್ ನಿರ್ದೇಶಿಸಿದ ಈ ಸಿನಿಮಾ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ಬಿಡುಗಡೆಯಾಗುತ್ತಿದೆ. ಅದಕ್ಕಾಗಿ ಅಪ್ಪು ಅಭಿಮಾನಿಗಳು ಮಾರ್ಚ್ 17ಕ್ಕೆ ಹಬ್ಬ ಮಾಡಲು ಸಜ್ಜಾಗಿ ನಿಂತಿದ್ದಾರೆ. 'ಜೇಮ್ಸ್' ತೆರೆಕಾಣುವ ಪ್ರತಿಯೊಂದು ಥಿಯೇಟರ್ ಮುಂದೆನೂ ಪುನೀತ್ ಫ್ಯಾನ್ಸ್ ಸಂಭ್ರಮಿಸಲಿದ್ದಾರೆ. ಇತ್ತ ಚಿತ್ರತಂಡ ಕೂಡ ಅಭಿಮಾನಿಗಳಿಗೆ ಒಂದೊಂದೇ ಸರ್ಪ್ರೈಸ್ ನೀಡುತ್ತಿದೆ. ಸದ್ಯ ಶಿವರಾತ್ರಿಗೆ ಹಾಡೊಂದರನ್ನು ಬಿಡುಗಡೆ ಮಾಡಿದ್ದು, ಯೂಟ್ಯೂನ್ ಈ ಸಾಂಗ್ ಸದ್ದು ಮಾಡುತ್ತಿದೆ. ಚರಣ್ ರಾಜ್ ಕಪೋಸ್ ಮಾಡಿರುವ ಈ ಹಾಡಿನಲ್ಲಿ ರಚಿತಾ ರಾಮ್, ಆಶಿಕಾ ರಂಗನಾಥ್, ಶ್ರೀಲೀಲಾ, ಚಂದನ್ ಶೆಟ್ಟಿ, ಚರಣ್ ರಾಜ್ ಅಪ್ಪು ಗುಣಗಾನ ಮಾಡಿದ್ದಾರೆ.

ಅಪ್ಪುನೇ ಟ್ರೇಡ್ ಮಾರ್ಕ್

ಅಪ್ಪುನೇ ಟ್ರೇಡ್ ಮಾರ್ಕ್

'ಜೇಮ್ಸ್' ಸಿನಿಮಾದ ಮೊದಲ ಲಿರಿಕಲ್ ಸಾಂಗ್ ರಿಲೀಸ್ ಆಗಿದೆ. ಪಿಆರ್‌ಕೆ ಆಡಿಯೋದಲ್ಲಿ ಈ ಹಾಡು ಬಿಡುಗಡೆಯಾಗಿದ್ದು, ಮೊದಲಿಗೆ ಸಾಹಿತ್ಯ ಗಮನ ಸೆಳೆಯುತ್ತಿದೆ. ನಿರ್ದೇಶಕ ಚೇತನ್ ಕುಮಾರ್ ಈ ಹಾಡಿಗೆ ಸಾಹಿತ್ಯ ರಚಿಸಿದ್ದಾರೆ. ಇದು ಪುನೀತ್ ರಾಜ್‌ಕುಮಾರ್‌ಗಾಗಿಯೇ ರಚಿಸಿದ ಹಾಡು ಎನ್ನುವುದನ್ನು ಸುಲಭವಾಗಿ ಹೇಳಬಹುದು. 'ಧಿಮಾಕು ಎಲ್ಲಾ ಬಿಟ್ಟಾಕು, ಬಂದಾಯ್ತು ಪವರ್‌ಫುಲ್ ಮಾಲೀಕು. ಬೇಡಾ ಕಮಕ್ಕು,ಗಿಮಿಕ್ಕು..', 'ಕಂಪೇರ್ ಎಲ್ಲಾ ಮಾಡಬೇಡ, ಬೇರೆ ಲೆವೆಲ್ ಕಣೋ.' 'ಬಜಾರಿಗೂ ಬ್ಯುಸಿನೆಸ್‌ಗೂ' ಟ್ರೇಡ್ ಮಾರ್ಕ್ ಇಂತಹದ್ದೇ ಒಂದಿಷ್ಟು ಸಾಲುಗಳು ಪುನೀತ್ ಫ್ಯಾನ್ಸ್‌ಗೆ ಕಿಕ್ ಕೊಡುತ್ತಿದೆ.

ರಚಿತಾ, ಶ್ರೀಲೀಲಾ ಆಶಿಕಾ ಎಂಟ್ರಿ

ರಚಿತಾ, ಶ್ರೀಲೀಲಾ ಆಶಿಕಾ ಎಂಟ್ರಿ

'ಜೇಮ್ಸ್' ಸಾಂಗಿನಲ್ಲಿ ಮತ್ತೊಂದು ಹೈಲೈಟ್ ಇದೆ. ಈ ಹಾಡಲ್ಲಿ ಕನ್ನಡ ಮೂವರು ನಾಯಕಿಯರು ಸ್ಪೆಷಲ್ ಎಂಟ್ರಿಕೊಟ್ಟಿದ್ದಾರೆ. ಚರಣ್ ರಾಜ್ ಕಂಪೋಸ್ ಮಾಡಿದ ಈ ಟ್ಯೂನ್‌ಗೆ ಸೆಟ್ ಹಾಕಿ ಶೂಟ್ ಮಾಡಲಾಗಿದೆ. ಡಿಂಪಲ್ ಕ್ವೀನ್ ರಚಿತಾ ರಾಮ್, ಶ್ರೀಲೀಲಾ ಹಾಗೂ ಆಶಿಕಾ ರಂಗನಾಥ್ ಸ್ಪೆಷಲ್ ಎಂಟ್ರಿ ಕೊಟ್ಟಿದ್ದಾರೆ. ಪುನೀತ್ ರಾಜ್‌ಕುಮಾರ್ ಮೇಲಿನ ಅಭಿಮಾನಕ್ಕೆ ಹೆಜ್ಜೆ ಹಾಕಿರುವ ಈ ನಾಯಕಿಯರು ಈ ಟ್ಯೂನ್‌ನಲ್ಲಿ ಸಿಕ್ಕಾಪಟ್ಟೆ ಮಾಡರ್ನ್ ಲುಕ್ ಕೊಟ್ಟಿದ್ದಾರೆ.

ಯುವರಾಜ್‌ಕುಮಾರ್ ಧ್ವನಿ

ಯುವರಾಜ್‌ಕುಮಾರ್ ಧ್ವನಿ

ಈ ಹಾಡಿನಲ್ಲಿ ಇನ್ನೂ ಹಲವು ವಿಶೇಷತೆಗಳಿವೆ. ಯುವರಾಜ್‌ ಕುಮಾರ್ 'ಜೇಮ್ಸ್' ಟ್ರೇಡ್‌ಮಾರ್ಕ್‌ಗೆ ಧ್ವನಿ ನೀಡಿದ್ದಾರೆ. ಇದು ಅಪ್ಪು ಅಭಿಮಾನಿಗಳಿಗೆ ಮತ್ತಷ್ಟು ಖುಷಿ ಕೊಟ್ಟಿದೆ. ಇನ್ನು ಈ ಹಾಡಿನಲ್ಲಿ ಚಂದನ್ ಶೆಟ್ಟಿ, ಚರಣ್ ರಾಜ್ ಕೂಡ ಕಾಣಿಸಿಕೊಂಡಿದ್ದಾರೆ. ಟ್ರೇಡ್ ಮಾರ್ಕ್ ಒಂದೇ ಹಾಡನ್ನು 6 ಮಂದಿ ಗಾಯಕರು ಹಾಡಿದ್ದಾರೆ. ಎಂ ಸಿ ವಿಕ್ಕಿ, ಅದಿತಿ ಸಾಗರ್, ಚಂದನ್ ಶೆಟ್ಟಿ, ಶರ್ಮಿಳಾ, ಯುವರಾಜ್‌ಕುಮಾರ್ ಹಾಗೂ ಚರಣ್ ರಾಜ್ ಹಾಡಿದ್ದಾರೆ.

ಸ್ಟೆಪ್ಸ್, ಸ್ಮೈಲ್ ಈ ಹಾಡಿನ 'ಟ್ರೇಡ್‌ಮಾರ್ಕ್'

'ಜೇಮ್ಸ್' ಚಿತ್ರದ ಟ್ರೇಡ್ ಮಾರ್ಕ್‌ ಹಾಡಿನ ಪ್ರಮುಖ ಆಕರ್ಷಣೆ ಪುನೀತ್ ರಾಜ್‌ಕುಮಾರ್. ಈ ಲಿರಿಕಲ್ ಸಾಂಗ್‌ನಲ್ಲಿ ಅಪ್ಪು ಹಾಕಿದ ಹೆಜ್ಜೆಗಳ ತುಣುಕುಗಳನ್ನೇ ತೋರಿಸಲಾಗಿದೆ. ಎಂದಿನಂತೆ ಬೆಲೆ ಕಟ್ಟಲಾಗದ ಪುನೀತ್ ರಾಜ್‌ಕುಮಾರ್ ನಗುವನ್ನೂ ಕಾಣಬಹುದು. ಈ ಹಾಡು ಸಿನಿಮಾದೊಳಗಿದೆಯೋ, ಇಲ್ಲ ಪ್ರಮೋಷನಲ್ ಸಾಂಗ್ ಅಷ್ಟೇನಾ ಅನ್ನುವ ಮಾಹಿತಿ ಬಿಟ್ಟುಕೊಟ್ಟಿಲ್ಲ. ಆದರೆ, ಮಹಾಶಿವರಾತ್ರಿಯಂದು ಅಪ್ಪು ಅಭಿಮಾನಿಗಳು ಜಾಗರಣೆ ಮಾಡುವುದಕ್ಕೆ ಇದೊಂದು ಹಾಡು ಸಾಕು. 'ಜೇಮ್ಸ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸುವುದರಲ್ಲಿ ಅನುಮಾನವೇ ಇಲ್ಲ. ಇಲ್ಲಾ ದಾಖಲೆಗಳನ್ನೂ ಈ ಸಿನಿಮಾ ಧೂಳಿ ಪಟ ಮಾಡುತ್ತೆ ಅಂತ ಈಗಾಗಲೇ ಸ್ಯಾಂಡಲ್‌ವುಡ್ ಭವಿಷ್ಯ ನುಡಿದಿದೆ.

ಚೇತನ್ ಕುಮಾರ್ ಆಕ್ಷನ್ ಕಟ್ ಹೇಳಿರುವ 'ಜೇಮ್ಸ್​​'ಗೆ ಕಿಶೋರ್ ಪತ್ತಿಕೊಂಡ ಬಂಡವಾಳ ಹೂಡಿದ್ದಾರೆ. ಪ್ರಿಯಾ ಆನಂದ್ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಶರತ್ ಕುಮಾರ್, ರಂಗಾಯಣ ರಘು, ಸಾಧು ಕೋಕಿಲ, ಚಿಕ್ಕಣ್ಣ, ಸುಚೇಂದ್ರ ಪ್ರಸಾದ್ ಮೊದಲಾದವರು ಬಣ್ಣಹಚ್ಚಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಜೇಮ್ಸ್ ರಿಲೀಸ್ ಆಗಲಿದೆ. ಪುನೀತ್ ಜನ್ಮದಿನವಾದ ಮಾರ್ಚ್ 17ರಂದು ಜೇಮ್ಸ್ ತೆರೆಗೆ ಬರಲಿದೆ.

More from Filmibeat

English summary
Puneeth Rajkumar Starrer James movie lyrical song Trademark released. Charan Raj is the music director. Chethan Kumar Director.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X