ರಚಿತಾ ಎಣ್ಣೆ ಹಾಡಿಗೆ 108 ಮಿಲಿಯನ್ ವೀವ್ಸ್: ಇಷ್ಟೊಂದು ಮಂದಿ ಈ ಹಾಡು ನೋಡಿದ್ದು ಎಲ್ಲಿ?

ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ರಾಣಾ ಕಾಂಬಿನೇಷನ್‌ನಲ್ಲಿ ಬಂದಿದ್ದ 'ಏಕ್ ಲವ್ ಯಾ' ಚಿತ್ರದ ಎಣ್ಣೆಗೂ ಹೆಣ್ಣಿಗೂ ಹಾಡು ಹೊಸ ಟ್ರೆಂಡ್ ಸೃಷ್ಟಿಸಿದೆ. ಅರ್ಜುನ್ ಜನ್ಯ ಟ್ಯೂನ್ ಹಾಕಿ, ಯುವತಿಯರಿಗೆಂದೇ ಜೋಗಿ ಪ್ರೇಮ್ ಬರೆದ ಈ ಬ್ರೇಕಪ್ ಸಾಂಗ್ ಬಿಡುಗಡೆಯಾದಲ್ಲಿಂದ ಸದ್ದು ಮಾಡುತ್ತಲೇ ಇದೆ. ದಿನದಿಂದ ದಿನಕ್ಕೆ ಈ ಹಾಡನ್ನು ಹೇಳುಗರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

'ಎಣ್ಣೆಗೂ, ಹೆಣ್ಣಿಗೂ' ಹಾಡಿನಲ್ಲಿ ನಟ ರಾಣಾ ಹಾಗೂ ರಚಿತಾ ರಾಮ್ ಕೆಮಿಸ್ಟ್ರಿ ಅದ್ಭುತವಾಗಿ ವರ್ಕ್ ಆಗಿದೆ. ರಚಿತಾ ರಾಮ್ ಬೋಲ್ಡ್ ಅವತಾರ ಹೆಂಗಳೆಯರ ಮನ ಗೆದ್ದಿದೆ. ಬೃಹತ್​ ಸೆಟ್​ ಮತ್ತು ಅದ್ಧೂರಿ ಮೇಕಿಂಗ್‌ನಿಂದಾಗಿ ಈ ಹಾಡು ಸಿನಿರಸಿಕರ ಮನ ಸೆಳೆದಿದೆ. ರಚಿತಾ ಎಣ್ಣೆ ಬಾಟಲ್ ಹಿಡಿದು ತೂರಾಡುತ್ತಾ ಹಾಕಿದ ಬ್ಯೂಟಿಫುಲ್ ಹೆಜ್ಜೆಗಳಿಗೆ ಮಹಿಳೆಯರು ಮೆಚ್ಚಿಕೊಂಡಾಡಿದ್ದಾರೆ. ಇದೇ ಹಾಡು ಇನ್‌ಸ್ಟಾಗ್ರಾಂ ರೀಲ್‌ನಲ್ಲಿ ದಾಖಲೆ ಸಂಖ್ಯೆಯಲ್ಲಿ ವೀಕ್ಷಣೆ ಪಡೆದಿದೆ.

ಎಣ್ಣೆ ಹಾಡಿಗೆ 108 ಮಿಲಿಯನ್ ವೀವ್ಸ್

ಎಣ್ಣೆ ಹಾಡಿಗೆ 108 ಮಿಲಿಯನ್ ವೀವ್ಸ್

'ಏಕ್ ಲವ್ ಯಾ' ಸಿನಿಮಾದ ಮೂರನೇ ಹಾಡು ಇದು. ತೆಲುಗು ಗಾಯಕಿ ಮಂಗ್ಲಿ ಹಾಡಿದ 'ಎಣ್ಣೆ ಹೆಣ್ಣಿಗೂ ಎಲ್ಲಿಂದ ಲಿಂಕ್ ಇಟ್ಟೆ ಹೇಳೋ ಭಗವಂತ' ಅನ್ನುವ ಹಾಡು ನವೆಂಬರ್ 12 ರಂದು ಬಿಡುಗಡೆ ಮಾಡಲಾಗಿತ್ತು. ಸುಮಾರು ಒಂದು ತಿಂಗಳಲ್ಲಿ ಈ ಹಾಡು ಹೊಸ ಟ್ರೆಂಡ್ ಅನ್ನೇ ಸೃಷ್ಟಿಸಿದೆ. ಅದರಲ್ಲೂ ಇನ್‌ಸ್ಟಾಗ್ರಾಂ ರೀಲ್ಸ್‌ನಲ್ಲಿ ಮಂಗ್ಲಿ ಹಾಗೂ ಕೈಲಾಶ್ ಖೇರ್ ಹಾಡಿದ ಹಾಡಿಗೆ 108 ಮಿಲಿಯನ್ ವೀವ್ಸ್ ಸಿಕ್ಕಿದೆ. ಅಂದರೆ, 10 ಕೋಟಿಗೂ ಅಧಿಕ ಮಂದಿ ಈ ಹಾಡನ್ನು ಕೇವಲ ಇನ್‌ಸ್ಟಾಗ್ರಾಂ ರೀಲ್ಸ್‌ನಲ್ಲಿ ವೀಕ್ಷಿಸಿದ್ದಾರೆ. ಕನ್ನಡದ ಮಟ್ಟಿಗೆ ಇದೊಂದು ಅದ್ಭುತ ದಾಖಲೆ.

ಯೂಟ್ಯೂಬ್‌ನಲ್ಲೂ 1 ಕೋಟಿ ಮಂದಿ ವೀಕ್ಷಣೆ

ಯೂಟ್ಯೂಬ್‌ನಲ್ಲೂ 1 ಕೋಟಿ ಮಂದಿ ವೀಕ್ಷಣೆ

ಡಿಂಪಲ್ ಕ್ವೀನ್ ರಚಿತಾ ರಾಮ್ ಕೈ ಯಲ್ಲಿ ಎಣ್ಣೆ ಬಾಟಲಿ ಹಿಡಿದು ತೂರಾಡುತ್ತಿರುವ ಹಾಡು ಹೆಂಗಳೆಯ ಮನ ಗೆದ್ದಿದೆ. ಅರ್ಜುನ್ ಜನ್ಯ ಟ್ಯೂನ್‌ಗೂ, ಪ್ರೇಮ್ ಸಾಹಿತ್ಯಕ್ಕೂ, ಮಂಗ್ಲಿ ಧ್ವನಿಗೂ ಸಂಗೀತ ಪ್ರಿಯರು ಫಿದಾ ಆಗಿದ್ದಾರೆ. ಹೀಗಾಗಿ ಯೂಟ್ಯೂನ್‌ನಲ್ಲಿಯೂ 'ಏಕ್ ಲವ್ ಯಾ' ಸಿನಿಮಾದ ಹಾಡು ಮೆಚ್ಚುಗೆ ಗಳಿಸಿದೆ. ಈ ಹಾಡನ್ನು ಸುಮಾರು 1 ಕೋಟಿಗೂ ಅಧಿಕ ಮಂದಿ ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾರೆ.

ಅನಿತಾ ಹಾಡಿಗೂ 1.9 ಮಿಲಿಯನ್ ವೀವ್ಸ್

ಅನಿತಾ ಹಾಡಿಗೂ 1.9 ಮಿಲಿಯನ್ ವೀವ್ಸ್

ನಾಲ್ಕು ದಿನದ ಹಿಂದಷ್ಟೇ 'ಏಕ್ ಲವ್ ಯಾ' ಸಿನಿಮಾದ ಮತ್ತೊಂದು ಬ್ರೇಕಪ್ ಸಾಂಗ್ ರಿಲೀಸ್ ಆಗಿತ್ತು. ಈ ಬಾರಿ ಹುಡುಗರಿಗಾಗಿಯೇ ಬ್ರೇಕಪ್ ಸಾಂಗ್ ಅನ್ನು ಬಿಡುಗಡೆ ಮಾಡಲಾಗಿತ್ತು. ಖೈದಿಗಳ ಮಧ್ಯೆ ನಾಯಕ ರಾಣಾ ನೋವಿನಿಂದ ಹಾಡುವ ಹಾಡಿದು. ಈ ಹಾಡು ಕೂಡ ಯೂಟ್ಯೂಬ್‌ನಲ್ಲಿ ಮೋಡಿ ಮಾಡುತ್ತಿದೆ. ಕೇವಲ ನಾಲ್ಕು ದಿನಗಳಲ್ಲಿ 19 ಲಕ್ಷಕ್ಕೂ ಅಧಿಕ ಮಂದಿ ಈ ಹಾಡನ್ನು ವೀಕ್ಷಿಸಿದ್ದಾರೆ. ಶಂಕರ್ ಮಹಾದೇವನ್ ಹುಡುಗರ ಬ್ರೇಕಪ್ ಸಾಂಗಿಗೆ ಧ್ವನಿ ನೀಡಿದ್ದಾರೆ.

ಜನವರಿ 21, 2022 ರಂದು ರಿಲೀಸ್

ಜನವರಿ 21, 2022 ರಂದು ರಿಲೀಸ್

ಜೋಗಿ ಪ್ರೇಮ್ 'ಏಕ್ ಲವ್ ಯಾ' ಸಿನಿಮಾವನ್ನು ಪ್ರೇಮಿಗಳ ದಿನದಂದು ಬಿಡುಗಡೆ ಮಾಡಬಹುದೆಂಬ ನಿರೀಕ್ಷೆಯಿತ್ತು. ಆದರೆ, ಪ್ರೇಮಿಗಳ ದಿನಕ್ಕೂ ಮುನ್ನವೇ ಸಿನಿಮಾ ಬಿಡುಗಡೆ ಮಾಡುತ್ತಿದ್ದಾರೆ. ಜನವರಿ 21, 2022ರಂದು ಈ ಸಿನಿಮಾ ಥಿಯೇಟರ್‌ಗೆ ಲಗ್ಗೆ ಇಡುತ್ತಿದೆ. ರಕ್ಷಿತಾ ಪ್ರೇಮ್ ತನ್ನ ಸಹೋದರ ರಾಣಾಗಾಗಿ ನಿರ್ಮಿಸಿರುವ ಈ ಸಿನಿಮಾ ಬಗ್ಗೆ ನಿರೀಕ್ಷೆಗಳು ಹುಟ್ಟಿಕೊಂಡಿವೆ. 'ಎಕ್ಸ್‌ಕ್ಯೂಸ್‌ ಮೀ' ಬಳಿಕ ಪಕ್ಕಾ ಲವ್ ಸ್ಟೋರಿಯೊಂದನ್ನು ನಿರ್ದೇಶಿಸಿರುವ ಪ್ರೇಮ್ ಭಾಮೈದನಿಗೆ ನೆಲೆಯಾಗುತ್ತಾರಾ? ಅನ್ನುವುದನ್ನು ಇನ್ನೊಂದು ತಿಂಗಳಲ್ಲಿ ಗೊತ್ತಾಗಲಿದೆ.

More from Filmibeat

English summary
Rachita ram Rana acted Ek love ya ennegu song crossed 108 million views in instagram reel. 10 Million views crossed in Youtube.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X