ಮಳೆಗಾಲದಲ್ಲಿ ಚಿಗುರೊಡೆಯಿತು "ಕಿತ್ತಾಳೆ" ತೋಟ; ಇದು ಚೈತ್ರಾ ಆಚಾರ್ 'ರೂಪಾಂತರ'

ಇತ್ತೀಚೆಗಷ್ಟೇ ರಾಜ್ ಬಿ ಶೆಟ್ಟಿ ತಮ್ಮ ಸಿನಿಮಾದ ಬಗ್ಗೆ ಮಾಹಿತಿಯೊಂದನ್ನು ಹಂಚಿಕೊಂಡಿದ್ದರು. 'ರೂಪಾಂತರ' ಅನ್ನುವ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ಹೇಳಿಕೊಂಡಿದ್ದರು. ಆದ್ರೀಗ ಆ ಸಿನಿಮಾ ಮುಗಿದು ರಿಲೀಸ್‌ಗೂ ರೆಡಿಯಾಗಿದೆ ಅನ್ನೋದು ಸಿನಿಮಾ ಮಂದಿಯಲ್ಲೇ ಅಚ್ಚರಿ ಮೂಡಿಸಿದೆ.

ರಾಜ್‌ ಬಿ ಶೆಟ್ಟಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಈ ಸಿನಿಮಾ 'ರೂಪಾಂತರ'ಗೊಂಡಿರುವ ಮತ್ತೊಬ್ಬ ನಟಿ ಚೈತ್ರಾ ಆಚಾರ್. ಈಗಾಗಲೇ 'ಟೋಬಿ', 'ಸಪ್ತ ಸಾಗರದಾಚೆ ಎಲ್ಲೋ' ಸೈಡ್ ಬಿ ಅಂತಹ ಸಿನಿಮಾಗಳಲ್ಲಿ ನಟಿಸಿ ಸಿನಿಪ್ರಿಯರ ಮೆಚ್ಚುಗೆ ಗಳಿಸಿಕೊಂಡಿರುವ ಚೈತ್ರಾ ಆಚಾರ್ 'ರೂಪಾಂತರ'ದಲ್ಲೂ ಕಾಣಿಸಿಕೊಂಡಿದ್ದಾರೆ.

Raj B Shetty Chaitra J Achar starrer Roopanthara movie song is trending

ಈ 'ರೂಪಾಂತರ' ಸಿನಿಮಾದ ಹಾಡು ಈಗ ರಿಲೀಸ್ ಆಗಿದ್ದು, ಸುರಿಯುತ್ತಿರುವ ಮಳೆಯಲ್ಲಿ ಅದ್ಭುತ ಫೀಲ್ ಕೊಟ್ಟಿದೆ. 'ಒಂದು ಮೊಟ್ಟೆಯ ಕಥೆ' ಹೇಳಿ ಚಿತ್ರರಂಗದಲ್ಲಿ ಹೊಸ ಭರವಸೆ ಮೂಡಿಸಿದ್ದ ಅದೇ ಚಿತ್ರತಂಡ ಈಗ 'ರೂಪಾಂತರ' ಎನ್ನುವ ಕತೆಯನ್ನು ಬೆಳ್ಳಿ ತೆರೆಮೇಲೆ ಹೇಳುವುದಕ್ಕೆ ಹೊರಟಿದೆ. ಸದ್ದಿಲ್ಲದೆ ಸಿನಿಮಾ ಮುಗಿಸಿರುವ ತಂಡ ಈಗಾಗಲೇ "ಕಿತ್ತಾಳೆ" ಎನ್ನುವ ಹಾಡನ್ನು ರಿಲೀಸ್ ಮಾಡಿದೆ. ಈ ಮೂಲಕ ಸಿನಿ ರಸಿಕರು ಹಾಗೂ ಸಂಗೀತ ಪ್ರೇಮಿಗಳ ಕಿವಿಗಳಿಗೆ ಇಂಪು ನೀಡಿದೆ.

ರಾಜ್ ಬಿ ಶೆಟ್ಟಿ 'ಒಂದು ಮೊಟ್ಟೆಯ ಕಥೆ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಇದೇ ಸಿನಿಮಾ ಮೂಲಕ ಸಂಗೀತ ನಿರ್ದೇಶಕ ಮಿಧುನ್ ಮುಕುಂದನ್ ಕೂಡ ಎಂಟ್ರಿ ಕೊಟ್ಟಿದ್ದರು. ಅಲ್ಲಿಂದ ಒಟ್ಟಿಗೆ ಕೆಲಸ ಮಾಡಿಕೊಂಡು ಬಂದಿರೋ ಈ ಜೋಡಿ ಮತ್ತೆ 'ರೂಪಾಂತರ' ಸಿನಿಮಾ ಮೂಲಕವೂ ಒಂದಾಗಿದೆ.

ಈ ಹಿಂದೆ ಅನೇಕ ಚಿತ್ರಗಳಿಗೆ ರಾಜ್ ಸಾಹಿತ್ಯ ಬರೆದು ಮಿಧುನ್ ಸಂಗೀತ ನೀಡಿದ್ದರೂ ಈ ಹಾಡು ಇಬ್ಬರಿಗೂ ಚಿತ್ರರಂಗದಲ್ಲಿ ಹೊಸ ಗುರುತನ್ನು ನೀಡಲಿದೆ. ಮಿಧುನ್ ಸಂಗೀತಕ್ಕೆ ರಾಜ್ ಸಾಹಿತ್ಯ ರಚಿಸಿದ್ದು "ಕಿತ್ತಾಳೆ" ಹಾಡು ಸಂಗೀತ ಪ್ರಿಯರನ್ನು ಸೆಳೆಯುತ್ತಿದೆ. ನಟಿ ಚೈತ್ರಾ ಆಚಾರ್ ಅವರೇ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದು, ಅವರೇ ಹಾಡಿರುವುದು ವಿಶೇಷ.

Raj B Shetty Chaitra J Achar starrer Roopanthara movie song is trending

ಅಂದ್ಹಾಗೆ 'ರೂಪಾಂತರ' ಸಿನಿಮಾವನ್ನು ಮಿಥಿಲೇಶ್ ಎಡಲತ್ ನಿರ್ದೇಶಿಸಿದ್ದಾರೆ. ಇದು ಅವರ ಚೊಚ್ಚಲ ಸಿನಿಮಾ ಕೂಡ ಹೌದು. ಈ ಸಿನಿಮಾದಲ್ಲಿ ಪ್ರತಿಭಾವಂತ ನಟರೇ ಇರುವುದರಿಂದ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿ ಲಕ್ಷಣಗಳು ಕಾಣುತ್ತಿವೆ. ರಾಜ್ ಬಿ ಶೆಟ್ಟಿ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಈ ಸಿನಿಮಾವನ್ನು ಲೈಟರ್ ಬುದ್ಧ ಫಿಲ್ಮ್ಸ್‌ ಮೂಲಕ ರಿಲೀಸ್ ಆಗುತ್ತಿದೆ. 'ಒಂದು ಮೊಟ್ಟೆಯ ಕಥೆ' ನಿರ್ಮಾಪಕ ಸುಹಾನ್ ಪ್ರಸಾದ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಪ್ರವೀಣ್ ಶ್ರೀಯಾನ್ ಛಾಯಾಗ್ರಹಣ, ಮಿಧುನ್ ಮುಕುಂದನ್ ಸಂಗೀತ ನೀಡುವ ಮೂಲಕ ಸಿನಿ ಪ್ರಿಯರನ್ನು ರಂಜಿಸಲಿದೆ. ರಾಜ್‌ ಬಿ ಶೆಟ್ಟಿ ಜೊತೆ ಸೋಮಶೇಖರ್ ಬೋಲೇಗಾಂವ್, ಲೇಖಾ ನಾಯ್ಡು, ಹನುಮ್ಮಕ್ಕ, ಭರತ್ ಜಿ.ಬಿ, ಅಂಜನ್ ಭಾರದ್ವಾಜ್ ಮತ್ತಿರರು ನಟಿಸಿದ್ದಾರೆ.

More from Filmibeat

English summary
Raj B. Shetty, Chaitra J. Achar starrer Roopanthara movie song is trending
Read more about: raj b shetty music ನಟಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X