"ಈ ಜಗತ್ತಿನಲ್ಲಿ ನಿಮ್ಮ ಸ್ಟೈಲ್‌ಗೆ ಸಮಾನರು ಯಾರೂ ಇಲ್ಲ ಬಿಡಿ"; ಕೂಲಿ ಹಾಡು ನೋಡಿ ರಜನಿಗೆ ಬಹುಪರಾಕ್
ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾ 'ಕೂಲಿ' ಬಿಡುಗಡೆಗೂ ಮುನ್ನವೇ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಾಕಿದೆ. ಅದರಲ್ಲೂ ರಜನಿಗೆ ಲೋಕೇಶ್ ಕನಗರಾಜ್ ಆಕ್ಷನ್ ಕಟ್ ಹೇಳಿದ್ದಾರೆ ಅಂದ್ಮೇಲೆ ಈ ಸಿನಿಮಾ ಬೇರೆ ಲೆವೆಲ್‌ನಲ್ಲೇ ಇರುತ್ತೆ ಅನ್ನೋದು ಅಭಿಮಾನಿಗಳ ನಂಬಿಕೆ. ಅದರಲ್ಲೂ 'ಜೈಲರ್' ಬಳಿಕ ರಜನಿಯನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳುವುದಕ್ಕೆ ಅವರ ಡೈ ಹಾರ್ಡ್ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ. ಇಲ್ಲಿವರೆಗೂ ಕೇವಲ ಫಸ್ಟ್ ಲುಕ್‌ನಲ್ಲಿ ಸದ್ದು ಮಾಡುತ್ತಿದ್ದ ಲೋಕೇಶ್ ಕನಗರಾಜ್ ತಮ್ಮ ಸಿನಿಮಾ ಮೊದಲ ಹಾಡನ್ನು ರಿಲೀಸ್ ಮಾಡಿದ್ದಾರೆ.
ನಿನ್ನೆಯೇ (ಜೂನ್ 24) ರಜನಿಕಾಂತ್ 'ಕೂಲಿ' ಸಿನಿಮಾದ ಮೊದಲ ಹಾಡಿನ ಝಲಕ್ ಅನ್ನು ಬಿಟ್ಟು ಕುತೂಹಲ ಕೆರಳಿಸಿದ್ದರು. ಇಂದು (ಜೂನ್ 25) ಸಾಂಗ್ ರಿಲೀಸ್ ಆಗುತ್ತೆ ಎಂದು ಹೇಳಿದ್ದರು. ಘೋಷಣೆ ಮಾಡಿದಂತೆ ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾದ 'ಕೂಲಿ' ಸಾಂಗ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ಹಾಡು ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಲಕ್ಷಗಳ ಲೆಕ್ಕದಲ್ಲಿ ವೀವ್ಸ್ ಅನ್ನು ಪಡೆದುಕೊಳ್ಳುತ್ತಿದೆ.

ಸೂಪರ್‌ಸ್ಟಾರ್ ರಜನಿಕಾಂತ್, ಲೋಕೇಶ್ ಕನಗರಾಜ್ ಜೊತೆಗೆ ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ್ ಈ ಸಿನಿಮಾ ಹೈಲೈಟ್. ಈ ಹೈ ವೋಲ್ಟೇಜ್ ಸಿನಿಮಾಗೆ ಅನಿರುದ್ಧ್ ಟ್ಯೂನ್ ಹಾಕಿದ್ದಾರೆ. ಇಂದು ರಿಲೀಸ್ ಆಗಿರುವ ಫಸ್ಟ್ ಸಾಂಗ್‌ಗೆ ಈಗಾಗಲೇ ಜನರು ಹೆಜ್ಜೆ ಹಾಕುವುದಕ್ಕೆ ಶುರು ಮಾಡಿದ್ದಾರೆ. ಅಲ್ಲದೆ, ಸ್ವತ: ಅನಿರುದ್ಧ್ ಕೂಡ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಿದ್ದರೆ, 'ಕೂಲಿ' ಸಿನಿಮಾ, ಫಸ್ಟ್ ಸಾಂಗ್ ಬಗ್ಗೆ ಏನಿದೆ ಪ್ರತಿಕ್ರಿಯೆ? ತಿಳಿಯುವುದಕ್ಕೆ ಮುಂದೆ ಓದಿ.
ಲೋಕೇಶ್ ಕನಗರಾಜ್ ಸಿನಿಮಾಗಳಿಗೆ ತಮಿಳು ಚಿತ್ರರಂಗದಲ್ಲಿ ಕ್ರೇಜ್ ಇದೆ. ದಳಪತಿ ವಿಜಯ್ ನಟಿಸಿದ 'ಲಿಯೋ' ಸೋತಿದ್ದು ಬಿಟ್ಟರೆ, ಇವರ ವೃತ್ತಿ ಬದುಕಿನಲ್ಲಿ ನಿರ್ದೇಶಿಸಿದ ಸಿನಿಮಾಗಳೆಲ್ಲವೂ ಸೂಪರ್ ಹಿಟ್. ಇತ್ತ ರಜನಿಕಾಂತ್ ಕ್ರೇಜ್ ಬಗ್ಗೆ ಹೇಳಬೇಕಿಲ್ಲ. ಕಮಲ್ ಹಾಸನ್‌ಗೆ 'ವಿಕ್ರಮ್' ಅಂತಹ ಸೂಪರ್ ಹಿಟ್ ಸಿನಿಮಾವನ್ನು ನಿರ್ದೇಶಿಸಿದ ಬಳಿಕ ರಜನಿಕಾಂತ್‌ಗೂ ಒಂದು ಸಿನಿಮಾ ನಿರ್ದೇಶನ ಮಾಡಬೇಕು ಎಂಬುದು ಅಭಿಮಾನಿಗಳ ಆಸೆಯಾಗಿತ್ತು. ಅವರ ಆಸೆಯಂತೆ 'ಕೂಲಿ' ಸೆಟ್ಟೇರಿತ್ತು. ಈಗ ಬಿಡುಗಡೆಗೆ ಸಜ್ಜಾಗಿದೆ.
ಇಲ್ಲಿವರೆಗೂ ಫಸ್ಟ್ ಲುಕ್‌ನಿಂದಲೇ ಕಿಕ್ ಕೊಟ್ಟಿದ್ದ ಲೋಕೇಶ್ ಕನಗರಾಜ್ ಮೊದಲ ಹಾಡು ರಿಲೀಸ್ ಮಾಡಿದ್ದಾರೆ. 'ಕೂಲಿ' ಸಿನಿಮಾದ "ಚಿಕಿತು.." ಸಾಂಗ್ ವೈರಲ್ ಆಗುತ್ತಿದೆ. ಈ ಹಾಡಿನ ಸ್ಟೆಪ್‌ಗಳಿಗೆ ರಜನಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ವಿಶೇಷವಾಗಿ ಈ ಹಾಡಿನಲ್ಲಿ ತಮಿಳಿನ ಮತ್ತೊಬ್ಬ ಜನಪ್ರಿಯರ ನಟಿ ಟಿ.ರಾಜೇಂದರ್ ಕಾಣಿಸಿಕೊಂಡಿದ್ದಾರೆ. ರಜನಿಯ "ಚಿಕಿತು.." ಸಾಂಗ್ ಇವರಿಂದಲೇ ಆರಂಭ ಆಗುತ್ತೆ. ಬಳಿಕ ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ್ ತಮ್ಮದೇ ಟ್ಯೂನ್‌ಗೆ ಹೆಜ್ಜೆ ಹಾಕಿದ್ದು ಸಿನಿಪ್ರಿಯರಿಗೆ ಸಖತ್ ಕಿಕ್ ಕೊಟ್ಟಿದೆ. ಬಳಿಕ ಸೂಪರ್‌ಸ್ಟಾರ್ ರಜನಿಕಾಂತ್ ಎಂಟ್ರಿ ಕೊಟ್ಟಿದ್ದಾರೆ.

ರಜನಿಕಾಂತ್ ಸ್ಟೆಪ್ಸ್ ಅನ್ನು ಈ ಹಾಡಿನಲ್ಲಿ ರಿವೀಲ್ ಮಾಡದೇ ಹೋದರೂ, ಅಲ್ಲಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಸೂಪರ್‌ಸ್ಟಾರ್ ಅಭಿಮಾನಿಗಳಿಗೆ ಥ್ರಿಲ್ ಕೊಟ್ಟಿದೆ. 'ಕೂಲಿ'ಯ ಮೊದಲ ಹಾಡು ಬಿಡುಗಡೆಯಾದ ಕೇವಲ ಎರಡು ಗಂಟೆಗಳಲ್ಲಿ 14 ಲಕ್ಷಕ್ಕೂ ಅಧಿಕ ಮಂದಿ ಈ ಹಾಡನ್ನು ವೀಕ್ಷಿಸಿದ್ದಾರೆ. "ಚಿಕಿತು" ಟ್ರೆಂಡ್ ಆಗುತ್ತಿರುವುದನ್ನು ನೋಡಿದರೆ, ಈ ಹಾಡು ದಾಖಲೆ ಮಾಡುವುದರಲ್ಲಿ ಎರಡು ಮಾತಿಲ್ಲ.
ಇನ್ನು ಸೂಪರ್ ಸ್ಟಾರ್ ರಜನಿಕಾಂತ್ 'ಕೂಲಿ' ಎಲ್ಲಾ ರಾಜ್ಯಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ಈಗಾಗಲೇ ಸಿನಿಮಾ ಓವರ್‌ಸೀಸ್ ಹಕ್ಕುಗಳು 84 ಕೋಟಿ ರೂಪಾಯಿಗೆ ಸೇಲ್ ಆಗಿ ಸಿನಿಮಾ ಮಂದಿಯ ಹುಬ್ಬೇರಿಸಿದ್ದವು. ಅದರಂತೆ ಈಗ ತೆಲುಗು ಡಬ್ಬಿಂಗ್ ಹಕ್ಕುಗಳು ಕೂಡ ದೊಡ್ಡ ಮಟ್ಟಕ್ಕೆ ಸೇಲ್ ಆಗಿವೆ ಎಂದು ಇಂಡಿಯಾ ಗ್ಲಿಟ್ಸ್ ವರದಿ ಮಾಡಿದ್ದೆ. ಧನುಷ್ ಸಿನಿಮಾ 'ಕುಬೇರ' ನಿರ್ಮಿಸಿದ ಫಿಲ್ಮ್ ಮೇಕರ್ಸ್ 'ಕೂಲಿ'ಯನ್ನು 46 ಕೋಟಿ ರೂಪಾಯಿಗೆ ಖರೀದಿ ಮಾಡಿದ್ದಾರೆ ಎನ್ನಲಾಗಿದೆ.


Click it and Unblock the Notifications











