'ಮೆಲ್ಲಗೆ' ಕಿಕ್ ಕೊಡ್ತಿದೆ 'ಸ್ವಾತಿ ಮುತ್ತಿನ ಮಳೆ ಹನಿಯೇ': ಮಹಿಳೆ ದೃಷ್ಟಿಕೋನದ ವಿಶಿಷ್ಟ ಹಾಡು

ವರ್ಲ್ಡ್ ಕಪ್ ಮುಗಿಯುತ್ತಿದ್ದಂತೆ ಕನ್ನಡದಲ್ಲಿ ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಜ್ಜಾಗುತ್ತಿವೆ. ಅದರಲ್ಲೊಂದು ಮೋಹಕತಾರೆ ರಮ್ಯಾ ನಿರ್ಮಾಣದ 'ಸ್ವಾತಿ ಮುತ್ತಿನ ಮಳೆ ಹನಿಯೇ'. ರಾಜ್ ಬಿ ಶೆಟ್ಟಿ ಹಾಗೂ ಸಿರಿ ರವಿಕುಮಾರ್ ಜೋಡಿಯಾಗಿ ನಟಿಸಿರುವ ಈ ಸಿನಿಮಾ ನಿಧಾನವಾಗಿ ಕಿಕ್ ಕೊಡಲು ಆರಂಭಿಸಿದೆ.

ಈ ಸಿನಿಮಾ ಇದೇ ನವೆಂಬರ್ 24ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಹೀಗಾಗಿ ರಮ್ಯಾ ಸಿನಿಮಾದ ಪ್ರಚಾರವನ್ನು ನಿಧಾನವಾಗಿ ಆರಂಭಿಸಿದ್ದಾರೆ. 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾದ ವಿಶಿಷ್ಟವಾದ ಹಾಡೊಂದನ್ನು ರಿಲೀಸ್ ಮಾಡಲಾಗಿದೆ. ಅದು 'ಮೆಲ್ಲಗೆ' ಅಂತ ಆರಂಭವಾಗಿ ನಿಧಾನಕ್ಕೆ ಕಿಕ್ ಕೊಡುವುದಕ್ಕೆ ಶುರುವಾಗಿದೆ.

swathi-muttina-male-haniye-ramya-raj-b-shetty

'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾಗೆ ರಾಜ್ ಬಿ ಶೆಟ್ಟಿ ಕಥೆ, ಚಿತ್ರಕಥೆ ಬರೆದು ನಿರ್ದೇಶನವನ್ನೂ ಮಾಡಿದ್ದಾರೆ. ಮೊದಲು ಈ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಜೊತೆ ಮೋಹಕತಾರೆ ರಮ್ಯಾ ನಟಿಸಬೇಕಿತ್ತು. ಈ ಸಿನಿಮಾ ಮೂಲಕವೇ ನಟನೆಗೆ ಕಮ್‌ಬ್ಯಾಕ್ ಮಾಡಬೇಕಿತ್ತು. ಆದರೆ, ಕೊನೆಯ ಕ್ಷಣದಲ್ಲಿ ರಮ್ಯಾ ನಟನೆಯಿಂದ ಹಿಂದೆ ಸರಿದಿದ್ದರು. ಹೀಗಾಗಿ ಆ ಜಾಗಕ್ಕೆ ಸಿರಿ ರವಿಕುಮಾರ್ ಎಂಟ್ರಿ ಕೊಟ್ಟಿದ್ದರು.

'ಮೆಲ್ಲಗೆ..' ಅಂತ ಆರಂಭ ಆಗುವ ಹಾಡಿನ ಮೂಲಕ ವಿಶಿಷ್ಟ ಪ್ರಯೋಗ ಮಾಡಲಾಗಿದೆ. ಮಿಥುನ್ ಮುಕುಂದನ್ ಸಂಗೀತ ಸಂಯೋಜಿಸಿದ್ದು, ಮಂಗಳೂರಿನಲ್ಲಿ ಓದುತ್ತಿರುವ ವಿದ್ಯಾರ್ಥಿ ಪೃಥ್ವಿ ಈ ಹಾಡನ್ನು ಬರೆದಿದ್ದಾರೆ. "ಇದು ಪ್ರೀತಿಯ ಕುರಿತ ಒಂದು ಮಹಿಳೆಯ ದೃಷ್ಟಿಕೋನದ ಹಾಡು. ಈ ಪ್ರೀತಿಯನ್ನು ಮಹಿಳೆಯರು ಹೇಗೆ ಅನುಭವಿಸುತ್ತಾರೆ ಎನ್ನುವುದು ಬೇಕಾಗಿತ್ತು. ಹಾಗಾಗಿ, ಪೃಥ್ವಿ ಅವರಿಂದಲೇ ಬರೆಸಿದೆ" ಎನ್ನುತ್ತಾರೆ ರಾಜ್‍ ಬಿ ಶೆಟ್ಟಿ.

ಈ ಮಧುರ ಮೆಲೋಡಿ ಹಾಡಿಗೆ ಮಾಧುರಿ ಶೇಷಾದ್ರಿ ಧ್ವನಿ ನೀಡಿದ್ದಾರೆ. ಅಂದ್ಹಾಗೆ, ಈ ಹಾಡಿನಲ್ಲ ಶಾಸ್ತ್ರೀಯ ಸಂಗೀತದ ಸ್ಪರ್ಶ ನೀಡಲಾಗಿದೆಯಂತೆ. ಸಂಗೀತ ನಿರ್ದೇಶಕ ಮಿಥುನ್‍ ಮುಕುಂದನ್‍ ತಮ್ಮ ಸಂಯೋಜನೆಯಿಂದ ಮೋಡಿ ಮಾಡಿದ್ದಾರೆ ಅನ್ನೋದು ಚಿತ್ರತಂಡದ ಅಭಿಪ್ರಯಾ.

swathi-muttina-male-haniye-ramya-raj-b-shetty

ಇನ್ನು 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾದಲ್ಲಿ ರಾಜ್‍ ಬಿ ಶೆಟ್ಟಿ ಜೊತೆಗೆ ಸಿರಿ ರವಿಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇವರೊಂದಿಗೆ ಬಾಲಾಜಿ ಮನೋಹರ್‍, ಸೂರ್ಯ ವಸಿಷ್ಠ, ರೇಖಾ ಕೂಡ್ಲಿಗಿ, ಜೆ.ಪಿ. ತುಮ್ಮಿನಾಡು, ಸ್ನೇಹ ಶರ್ಮಾ ಸೇರಿದಂತೆ ಹಲವರು ನಟಿಸಿರೋದು ವಿಶೇಷ. ಪ್ರವೀಣ್‍ ಶ್ರೀಯಾನ್‍ ಈ ಸಿನಿಮಾದಲ್ಲಿ ಛಾಯಾಗ್ರಹಣ ಅಷ್ಟೇ ಅಲ್ಲ ಜೊತೆಗೆ ರಾಜ್‍ ಬಿ ಶೆಟ್ಟಿ ಜೊತೆಗೆ ಸೇರಿ ಸಿನಿಮಾಗೆ ಕತ್ತರಿನೂ ಹಾಕಿದ್ದಾರೆ.

ಅಂದ್ಹಾಗೆ, 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾವನ್ನು 'ಸ್ಯಾಂಡಲ್‌ವುಡ್‌ ಕ್ವೀನ್' ರಮ್ಯಾ ತಮ್ಮ ಆಪಲ್‍ ಬಾಕ್ಸ್ ಸ್ಟುಡಿಯೋಸ್‍ ಮೂಲಕ ನಿರ್ಮಾಣ ಮಾಡಿದ್ದಾರೆ. ಲೈಟರ್‍ ಬುದ್ಧ ಫಿಲಂಸ್‍ ಸಹ ಕೈ ಜೋಡಿಸಿದ್ದು, ನವೆಂಬರ್‍ 24ರಂದು ಕೆಆರ್‌ಜಿ ಸ್ಟುಡಿಯೋಸ್‍ ಸಂಸ್ಥೆಯು ರಾಜ್ಯಾದ್ಯಂತ ರಿಲೀಸ್ ಮಾಡುತ್ತಿದೆ.

More from Filmibeat

English summary
Swathi Mutthina Male Haniye Movie Song Mellage out:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X