ಶೆಟ್ರು ಜೊತೆ ರೊಮ್ಯಾಂಟಿಕ್ ಮೂಡ್‌ಗೆ ಜಾರಿದ ರಶ್ಮಿಕಾ ಮಂದಣ್ಣ; 'ದಿ ಗರ್ಲ್‌ ಫ್ರೆಂಡ್‌'ಗೆ ಕೊನೆಯಲ್ಲಿ ಬೇಸರವೇಕೆ?

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಈಗ ಸಿನಿಮಾಗಳಲ್ಲಿ ಸಿಕ್ಕಾಪಟ್ಟಿ ಬ್ಯುಸಿಯಾಗಿದ್ದಾರೆ. ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಧನುಷ್ ಜೊತೆ ನಟಿಸಿದ್ದ 'ಕುಬೇರ' ಸಿನಿಮಾದಲ್ಲಿ ಡಿಗ್ಲಾಮರ್ ರೋಲ್‌ನಲ್ಲಿ ಮಿಂಚಿದ್ದರು. 'ಪುಷ್ಪ 2' ಅಂತಹ ಮೆಗಾ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ನಟಿಸಿದ 'ಎನಿಮಲ್', 'ಪುಷ್ಪ 2' ಸೇರಿದಂತೆ ಸಾಲು ಸಾಲು ಸಿನಿಮಾಗಳು ಸೂಪರ್ ಸಕ್ಸಸ್ ಕಂಡಿವೆ. ಆದರೆ, ಸಲ್ಮಾನ್ ಖಾನ್ ಜೊತೆ ನಟಿಸಿದ 'ಸಿಕಂದರ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೋತು ಸುಣ್ಣವಾಗಿತ್ತು. ಹಾಗೇ ಧನುಷ್ ಜೊತೆ ನಟಿಸಿದ 'ಕುಬೇರ' ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಯಶಸ್ಸು ಕಂಡಿದ್ದರೂ ಮೆಗಾ ಬಾಕ್ಸಾಫೀಸ್‌ ಲಿಸ್ಟ್ ಸೇರಲಿಲ್ಲ. ಆದರೂ ರಶ್ಮಿಕಾ ಮಂದಣ್ಣಗೇನು ಡಿಮ್ಯಾಂಡ್ ಕಮ್ಮಿ ಆಗಿದೆ ಎಂದುಕೊಳ್ಳಬೇಡಿ. ಸಿನಿಮಾಗಳೇ ಇವರಿಗಾಗಿ ಕ್ಯೂ ನಿಂತಿವೆ.

Rashmika Mandanna Dheekshith Shetty starrer The Girlfriend movie first song creating buzz

ಈ ಮಧ್ಯೆ ಮತ್ತೊಂದು ಸಿನಿಮಾ ಬಿಡುಗಡೆ ಸಜ್ಜಾಗಿದೆ. ಅದ್ಯಾವುದು ಅಂದರೆ, 'ದಿ ಗರ್ಲ್‌ಫ್ರೆಂಡ್'. ರಶ್ಮಿಕಾ ಮಂದಣ್ಣ ಜೊತೆ ಮತ್ತೊಬ್ಬ ಕನ್ನಡದ ನಟ ದೀಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸಿದ್ದಾರೆ. ಈ ಸಿನಿಮಾವನ್ನು ಗೀತಾ ಆರ್ಟ್ಸ್ ಮತ್ತು ಧೀರಜ್ ಮೊಗಿಲಿನೇನಿ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ಗಳು ಜಂಟಿಯಾಗಿ ನಿರ್ಮಿಸಿವೆ. ಅಲ್ಲು ಅರ್ಜುನ್ ತಂದೆ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಈ ಸಿನಿಮಾವನ್ನು ಅರ್ಪಿಸುತ್ತಿದ್ದಾರೆ. ಹೀಗಾಗಿ ಈ ಸಿನಿಮಾವೀಗ ಐದು ಭಾಷೆಗಳಲ್ಲಿ ಸಂಚಲನ ಸೃಷ್ಟಿಸುವುದಕ್ಕೆ ಶುರು ಮಾಡಿವೆ.

ರಶ್ಮಿಕಾ ಮಂದಣ್ಣ ಹಾಗೂ ದೀಕ್ಷಿತ್ ಶೆಟ್ಟಿ ನಟಿಸಿರುವ ಈ ಸಿನಿಮಾದ ವಿಭಿನ್ನವಾದ ರೊಮ್ಯಾಂಟಿಕ್ ಹಾಡನ್ನು ರಿಲೀಸ್ ಮಾಡಲಾಗಿದೆ. ಕನ್ನಡದಲ್ಲಿ "ಸ್ವರ" ಎಂದು ಆರಂಭ ಆಗುವ ಮೊದಲ ಹಾಡು ಸಿನಿಪ್ರಿಯರನ್ನು ಸೆಳೆಯುತ್ತಿವೆ. ದಕ್ಷಿಣ ಭಾರತದ ರೊಮ್ಯಾಂಟಿಕ್ ಹಾಡುಗಳ ಸರದಾರ, ಮಲಯಾಳಂ ಸಿನಿಮಾರಂಗದ ಹೇಶಮ್ ಅಬ್ದುಲ್ ವಹಾಬ್ ಟ್ಯೂನ್ ಹಾಕಿ ಹಾಡಿರುವುದು ವಿಶೇಷ. ಈ ಹಾಡು ಈಗ ಯೂಟ್ಯೂಬ್ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುವುದಕ್ಕೆ ಶುರುವಾಗಿದೆ.

'ದಿ ಗರ್ಲ್‌ಫ್ರೆಂಡ್' ಸಿನಿಮಾವನ್ನು ರಾಹುಲ್ ರವೀಂದ್ರನ್ ನಿರ್ದೇಶನದ ಸುಂದರ ಪ್ರೇಮಕಥೆ. ಹೀಗಾಗಿ ವಿಭಿನ್ನವಾದ ರೊಮ್ಯಾಂಟಿಕ್ ಹಾಡನ್ನು ರಿಲೀಸ್ ಮಾಡಲಾಗಿದೆ. ಒಂದೇ ಸೆಟ್ಟಿನಲ್ಲಿ ವಿಭಿನ್ನ ಬ್ಯಾಕ್‌ಗ್ರೌಂಡ್‌ ಅನ್ನು ಸೃಷ್ಟಿ ಮಾಡಿ ಚಿತ್ರೀಕರಣ ಮಾಡಲಾಗಿದೆ. ರಶ್ಮಿಕಾ ಮಂದಣ್ಣ ಹಾಗೂ ದೀಕ್ಷಿತ್ ಶೆಟ್ಟಿಯ ಕಾಂಬಿನೇಷನ್ ಅನ್ನು ಬಳಸಿಕೊಳ್ಳಲಾಗಿದೆ. ಸಿಂಪಲ್ ಪ್ಲೇನ್ ಬ್ಯಾಕ್‌ಗ್ರೌಂಡ್ ಇಟ್ಟು ಶೂಟಿಂಗ್ ಮಾಡಲಾಗಿದೆ.
,
ಕೊನೆಗೂ 'ದಿ ಗರ್ಲ್‌ ಫ್ರೆಂಡ್‌' ಸಿನಿಮಾದ "ಸ್ವರವೇ.." ಸಾಂಗ್‌ ರಿಲೀಸ್ ಮಾಡಲಾಗಿದೆ. ಈ ಸಿನಿಮಾದ ಮೊದಲ ಹಾಡನ್ನು ಕನ್ನಡ, ತೆಲುಗು, ತಮಿಳು, ಹಿಂದಿ, ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಹೇಶಮ್ ಅಬ್ದುಲ್ ವಹಾಬ್ ಹಾಡಿಗೆ ಅದ್ಭುತ ಟ್ಯೂನ್ ಹಾಕಿದ್ದು, ಜೊತೆಗೆ ಹಾಡನ್ನೂ ಹಾಡಿದ್ದಾರೆ. ಇನ್ನು ಈ ರೊಮ್ಯಾಂಟಿಕ್ ಟ್ಯೂನ್‌ಗೆ ನಾಗಾರ್ಜುನ್‌ ಶರ್ಮಾ ಸಾಹಿತ್ಯ ರಚಿಸಿದ್ದಾರೆ. ರಶ್ಮಿಕಾ ಮಂದಣ್ಣ ಮತ್ತು ದೀಕ್ಷಿತ್ ಶೆಟ್ಟಿ ನಡುವಿನ ಆನ್ ಸ್ಕ್ರೀನ್ ಕೆಮಿಸ್ಟ್ರಿ ಹಾಡಿನ ಮೋಡಿಗೆ ಅವರ ಫ್ಯಾನ್ಸ್ ಸಿಕ್ಕಾಪಟ್ಟೆ ಆಗುವುದಕ್ಕೆ ಶುರುವಾಗಿದೆ. ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ 'ದಿ ಗರ್ಲ್‌ಫ್ರೆಂಡ್' ಶೀಘ್ರದಲ್ಲೇ ಅದ್ದೂರಿಯಾಗಿ ಬಿಡುಗಡೆ ಕೂಡ ಆಗುತ್ತಿದೆ.

ರಾಹುಲ್ ರವೀಂದ್ರನ್ ನಿರ್ದೇಶನದ 'ದಿ ಗರ್ಲ್‌ಫ್ರೆಂಡ್' ಸಿನಿಮಾ ಇದೊಂದು ಲವ್ ಸ್ಟೋರಿ ಆಗಿದ್ದರೂ, ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ದಿ ಗರ್ಲ್‌ಫ್ರೆಂಡ್' ಸಿನಿಮಾ ತೆರೆಗೆ ಬರಲಿದೆ. ಆದರೆ ಇನ್ನೂ ರಿಲೀಸ್‌ ಡೇಟ್ ಅನೌನ್ಸ್ ಆಗಿಲ್ಲ.

More from Filmibeat

English summary
Rashmika Mandanna Dheekshith Shetty starrer The Girlfriend movie first song creating buzz.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X