ಮಲೆನಾಡ ಮನೆಹಾಳನ ಪ್ರೀತಿಯ ಹಾಡಿಗೆ ಮನಸೋತ ರಿಯಲ್‌ಸ್ಟಾರ್; ಕೆರೆಬೇಟೆ ಹಾಡಿಗೆ ಉಪ್ಪಿ ಫಿದಾ!

ಕನ್ನಡ ಚಿತ್ರರಂಗದಲ್ಲೂ ಈಗ ಹೊಸ ರೀತಿಯ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಕರ್ನಾಟಕದ ಬೇರೆ ಬೇರೆ ಭಾಗದ ಅಪ್ಪಟ ಲೋಕಲ್ ಕಂಟೆಂಟ್ ಅನ್ನು ತೆರೆಮೇಲೆ ತರುವ ಪ್ರಯತ್ನ ಆಗುತ್ತಿದೆ. 'ಕಾಂತಾರ' ಸಿನಿಮಾ ಬಳಿಕ ಕನ್ನಡ ಫಿಲ್ಮ್ ಮೇಕರ್ಸ್‌ ಇಂತಹ ಪ್ರಯತ್ನಕ್ಕೆ ಕೈ ಹಾಕುತ್ತಿದ್ದಾರೆ. ಅಂತಹದ್ದೇ ಇನ್ನೊಂದು ಪ್ರಯತ್ನ 'ಕೆರೆಬೇಟೆ'.

ಈಗಾಗಲೇ ರಿಲೀಸ್ ಆಗಿರೋ ಫಸ್ಟ್ ಲುಕ್, ಟೀಸರ್ ಇದೊಂದು ಅಪ್ಪಟ ಮಲೆನಾಡಿನ ಸಿನಿಮಾ ಅನ್ನೋದನ್ನು ಸಾರಿ ಹೇಳಿದೆ. ಇತ್ತೀಚೆಗೆ ಹಾಡೊಂದನ್ನು ಸಿನಿಮಾದ ಮೊದಲ ರೊಮ್ಯಾಂಟಿಕ್ ಹಾಡನ್ನು ಬಿಡುಗಡೆ ಮಾಡುವ ಮೂಲಕ ಮಲೆನಾಡಿನ ಸುಂದರ ಪರಿಸರದ ಅನಾವರಣ ಮಾಡಲಾಗಿದೆ. ಈ ಮೊದಲ ಹಾಡನ್ನು ಇತ್ತೀಚೆಗೆ ರಿಯಲ್‌ಸ್ಟಾರ್ ಉಪೇಂದ್ರ ರಿಲೀಸ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.

Kannada Movie kerebete gowri shankar upendra

'ಕೆರೆಬೇಟೆ' ಸಿನಿಮಾದ "ಮಲೆನಾಡ ಗೊಂಬೆಗೆ ಮನಸೋತ ಮನೆಹಾಳ.." ರೊಮ್ಯಾಂಟಿಕ್ ಸಾಂಗ್ ಆಗಿದ್ದರೂ, ಮಲೆನಾಡಿನ ಸುಂದರತಾಣಗಳ ಅನಾವರಣ ಆಗಿದೆ. ಶಿವಮೊಗ್ಗ ಸುತ್ತಮುತ್ತವೇ ಈ ಹಾಡಿನ ಹೆಚ್ಚು ಭಾಗದ ಚಿತ್ರೀಕರಣ ಮಾಡಲಾಗಿದೆ. ಕಣ್ಣಿಗೆ ತಂಪೆನಿಸುವ ಛಾಯಾಗ್ರಹಣ, ಸ್ಲೋ ಮ್ಯೂಸಿಕ್, ಅದಕ್ಕೆ ತಕ್ಕಂತಹ ಮಳೆ, ಹಸಿರು, ಇವೆಲ್ಲವನ್ನೂ ದೊಡ್ಡ ಪರದೆ ಮೇಲೆ ನೋಡುವುದೇ ಚಂದ.

ಈ ಹಿಂದೆ 'ಜೋಕಾಲಿ' ಹಾಗೂ 'ರಾಜಹಂಸ' ಅನ್ನುವ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದ ಗೌರಿಶಂಕರ್ ಮೂರನೇ ಸಿನಿಮಾವಿದು. ಇನ್ನು ಅಪ್ಪಟ ಮಲೆನಾಡಿನ ಸಿನಿಮಾಗೆ ಬೆಂಗಳೂರಿನ ಹುಡುಗಿ ಬಿಂಧು ಶಿವರಾಮ್ ನಾಯಕಿಯಾಗಿ ನಟಿಸಿದ್ದಾರೆ. "ಮಲೆನಾಡ ಗೊಂಬೆಗೆ ಮನಸೋತ ಮನೆಹಾಳ.." ಹಾಡಿನಲ್ಲಿ ಥೇಟ್ ಮಲೆನಾಡ ಹುಡುಗಿಯಂತೆಯೇ ಕಾಣಿಸಿಕೊಂಡಿದ್ದಾರೆ.

ಅಂದಹಾಗೆ 'ಕೆರೆಬೇಟೆ' ಸಿನಿಮಾದ ಈ ಸುಂದರ ಹಾಡಿಗೆ 'ಕಾಂತಾರ'ದ ಸೂಪರ್‌ಹಿಟ್ ಸಾಂಗ್ 'ಸಿಂಗಾರ ಸಿರಿಯೇ...' ಟ್ಯೂನ್‌ಗೆ ಸಾಹಿತ್ಯ ರಚಿಸಿದ್ದ ಪ್ರಮೋದ್ ಮರುವಂತೆಯೇ ಪದಗಳನ್ನು ಪೋಣಿಸಿದ್ದಾರೆ. ಯುವ ಪ್ರತಿಭೆ ಗಗನ್ ಬದೇರಿಯಾ ಟ್ಯೂನ್ ಹಾಕಿದ್ದಾರೆ. ಸಾಯಿ ವಿಘ್ನೇಶ್ ಮತ್ತು ಐಶ್ವರ್ಯ ರಂಗರಾಜನ್ ರೊಮ್ಯಾಂಟಿಕ್ ಸಾಂಗ್‌ಗೆ ಧ್ವನಿ ನೀಡಿದ್ದಾರೆ.

Kannada Movie kerebete gowri shankar upendra

" ಈ ಹಾಡನ್ನು ಚಿತ್ರೀಕರಿಸುವಾಗ ತುಂಬಾನೇ ಕಷ್ಟಪಟ್ಟಿದ್ದೇವೆ. ಸಿಕ್ಕಾಪಟ್ಟೆ ಮಳೆ ಬರುತ್ತಿದ್ದರಿಂದ ಹಲವು ಬಾರಿ ಶೂಟಿಂಗ್ ಅನ್ನೇ ನಿಲ್ಲಿಸಿದ್ದೇವೆ. ಯಾರೂ ಓಡಾಡದ ಜಾಗದಲ್ಲಿ ಹಾಡಿನ ಚಿತ್ರೀಕರಣ ಮಾಡಿದ್ದು, ಕಾಡು ಪ್ರಾಣಿಗಳ ಭಯದಲ್ಲಿಯೇ ಮಲೆನಾಡಿನ ಜನನಿಭೀಡ ಜಾಗಗಳಲ್ಲಿ ಹೆಚ್ಚಿನ ಭಾಗದ ಶೂಟಿಂಗ್ ಮಾಡಿದ್ದೇವೆ." ಎಂದು ಕೆರೆಬೇಟೆ ಚಿತ್ರತಂಡ ಹೇಳಿಕೊಂಡಿದೆ.

ಟೀಸರ್, ಪೋಸ್ಟರ್ ಮೂಲಕ ಕುತೂಹಲ ಕೆರಳಿಸಿದ್ದ 'ಕೆರೆಬೇಟೆ' ಚಿತ್ರತಂಡ ಮಾರ್ಚ್ 15ಕ್ಕೆ ಸಿನಿಮಾ ರಿಲೀಸ್ ಮಾಡುವುದಕ್ಕೆ ಮುಂದಾಗಿದೆ. ಅಪ್ಪಟ ಮಲೆನಾಡಿನ ಭಾಗದ ಈ ಸಿನಿಮಾ ಶಿವಮೊಗ್ಗದ ಸೊರಬ ಭಾಗದ ಮೀನು ಬೇಟೆಯನ್ನು ಆಧರಿಸಿದೆ. ಇದನ್ನು ಸಿನಿಮಾದಲ್ಲಿ ಹೇಗೆ ತಂದಿದ್ದಾರೆ ಅನ್ನೋದೇ ಸದ್ಯಕ್ಕೆ ಕುತೂಹಲ ಕೆರಳಿಸಿದೆ.

More from Filmibeat

English summary
Real star Upendra liked the song of Gowri Shankar starrer Kerebete movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X