'ಸ್ಪೂಕಿ ಕಾಲೇಜ್‌'ನಲ್ಲಿ ಮೆಲ್ಲುಸಿರೆ ಸವಿಗಾನ ಅಂತ ಹೆಜ್ಜೆ ಹಾಕಿದ 'ಏಕ್ ಲವ್‌ ಯಾ' ಬೆಡಗಿ!

ಸ್ಯಾಂಡಲ್‌ವುಡ್‌ನಲ್ಲಿ 'ಸ್ಪೂಕಿ ಕಾಲೇಜ್' ಅನ್ನೋ ಹೊಸ ಸಿನಿಮಾ ಸೆಟ್ಟೇರಿದೆ. ಈ ಸಿನಿಮಾದಲ್ಲಿ 'ಏಕ್‌ ಲವ್ ಯಾ' ಖ್ಯಾತಿಯ ನಟಿ ರೀಷ್ಮಾ ನಾಣಯ್ಯ ಕನ್ನಡದ ಹಳೆಯ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ.

ಸಂಗೀತ ಪ್ರಿಯರು ಸದಾ ಗುನುಗುವ ವೀರ ಕೇಸರಿ ಸಿನಿಮಾದ "ಮೆಲ್ಲುಸಿರೆ ಸವಿಗಾನ..." ಹಾಡಿಗೆ ಹೆಜ್ಜೆ ರೀಷ್ಮಾ ನಾಣಯ್ಯ ಹೆಜ್ಜೆ ಹಾಕಿದ್ದಾರೆ. ನಿರ್ದೇಶಕ ಭರತ್ ಜಿ ನಿರ್ದೇಶಿಸುತ್ತಿರುವ 'ಸ್ಪೂಕಿ ಕಾಲೇಜ್' ಸಿನಿಮಾ ಶೂಟಿಂಗ್ ನಡೆಯುತ್ತಿದ್ದು, ಈಗಾಗಲೇ ಪೋಸ್ಟರ್, ಫಸ್ಟ್ ಲುಕ್ ಮೂಲಕ ಸಿನಿಪ್ರೇಮಿಗಳ ಜನಮನ ಗೆದ್ದಿದೆ. 'ಸ್ಪೂಕಿ ಕಾಲೇಜ್' ಚಿತ್ರದಲ್ಲಿ 'ಏಕ್ ಲವ್ ಯಾ' ಬೆಡಗಿ ರೀಷ್ಮಾ ನಾಣಯ್ಯ ಹೆಜ್ಜೆ ಹಾಕಿದ್ದಾರೆ.

ಡಾ.ರಾಜಕುಮಾರ್ ಅಭಿನಯದ 'ವೀರಕೇಸರಿ' ಚಿತ್ರದ ಫೇಮಸ್ ಸಾಂಗ್ 'ಮೆಲ್ಲುಸಿರೆ ಸವಿಗಾನ'. ಈ ಹಾಡನ್ನು 'ಸ್ಪೂಕಿ ಕಾಲೇಜ್‌'ನಲ್ಲಿ ಬಳಸಿಕೊಳ್ಳಲಾಗಿದೆ. ಮಾಡರ್ನ್ ಸ್ಟೈಲ್‌ನಲ್ಲಿ ಈ ಹಾಡು ಮೂಡಿ ಬಂದಿದ್ದು, ರೀಷ್ಮಾ ನಾಣಯ್ಯ ಅದ್ಭುತವಾಗಿ ಹೆಜ್ಜೆ ಹಾಕಿದ್ದಾರೆ. ಭೂಷಣ್ ಈ ಹಾಡಿಗೆ ಕೊರಿಯೋಗ್ರಫಿ ಮಾಡಿದ್ದಾರೆ.

Reeshma Nanaiah Song For Mellusire Savigana In Spooky College

'ಮೆಲ್ಲುಸಿರೆ ಸವಿಗಾನ..' ಹಾಡನ್ನು ಚಿತ್ರತಂಡ ಬಲವಂತಾಗಿ ತುರುಕಿಲ್ಲ ಎಂದು ಹೇಳಿಕೊಂಡಿದೆ. ಚಿತ್ರದ ಕಥೆಗೆ ಈ ಹಾಡು ಬೇಕಿತ್ತು. ಆ ಕಾರಣಕ್ಕಾಗಿ 'ಮೆಲ್ಲುಸಿರೆ ಸವಿಗಾನ' ಹಾಡನ್ನು ಕೇಳಿದಾಗ, ಈ ಹಾಡು ಅದ್ಭುತ ಹಾಗೂ ಸೂಕ್ತ ಎನಿಸಿತು. ಹಾಗಾಗಿ ಈ ಹಾಡನ್ನು ಆಯ್ಕೆ ಮಾಡಿಕೊಂಡಿದ್ದೇವೆ." ಎಂದು ನಿರ್ದೇಶಕರು ಹೇಳಿದ್ದಾರೆ.

ದಾಂಡೇಲಿಯ ಅರಣ್ಯ ಪ್ರದೇಶದಲ್ಲಿ ಈ ಹಾಡಿಗಾಗಿ ಅದ್ಭುತ ಸೆಟ್‌ ಅನ್ನು ನಿರ್ಮಿಸಲಾಗಿತ್ತು. 'ಮೆಲ್ಲುಸಿರೆ ಸವಿಗಾನ' ಹಾಡಿನ ಚಿತ್ರೀಕರಣದಲ್ಲಿ ಸುಮಾರು 250 ಕ್ಕೂ ಅಧಿಕ ಮಂದಿ ತಂತ್ರಜ್ಞರ ಭಾಗವಹಿಸಿದ್ದರು. ಹೀಗಾಗಿ ಈ ಹಾಡು ಅದ್ದೂರಿಯಾಗಿ ಬಂದಿದೆ ಎಂದು ನಿರ್ದೇಶಕ ಭರತ್ ಮಾಹಿತಿ ಹಂಚಿಕೊಂಡಿದ್ದಾರೆ.

'ಮೆಲ್ಲುಸಿರೆ ಸವಿಗಾನ ಎವರ್‌ಗ್ರೀನ್‌ ಸಾಂಗ್‌ನಲ್ಲಿ ನಟಿಸುವುದಕ್ಕೆ ರೀಷ್ಮಾ ನಾಣಯ್ಯ ಸಾಕಷ್ಟು ತಯಾರಿ ಮಾಡಿಕೊಂಡಿದ್ದರು‌. ಅಣ್ಣಾವ್ರು ಅಭಿನಯಿಸಿದ್ದ ಜನಪ್ರಿಯ ಹಾಡಿಗೆ ಹೆಜ್ಜೆ ಹಾಕಿರುವುದಕ್ಕೆ ಖುಷಿಯಾಗಿದೆ ಎನ್ನುತ್ತಾರೆ ರೀಷ್ಮಾ ನಾಣಯ್ಯ.

Reeshma Nanaiah Song For Mellusire Savigana In Spooky College

'ಸ್ಪೂಕಿ ಕಾಲೇಜ್'ನ ಬಹುತೇಕ ಚಿತ್ರೀಕರಣ ಧಾರವಾಡದ ನೂರಕ್ಕೂ ಅಧಿಕ ವರ್ಷಗಳ ಇತಿಹಾಸವಿರುವ ಕಾಲೇಜ್‌ನಲ್ಲಿ ನಡೆದಿದೆ. ಅರಣ್ಯ ಭಾಗದ ಚಿತ್ರೀಕರಣವನ್ನು ದಾಂಡೇಲಿಯಲ್ಲಿ ಚಿತ್ರಿಸಲಾಗಿದೆ. ಸದ್ಯಕ್ಕೀಗ ಸಿನಿಮಾದ ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ.

'ರಂಗಿತರಂಗ' , 'ಅವನೇ ಶ್ರೀಮನ್ನಾರಾಯಣ' ಅಂತಹ ಸಿನಿಮಾಗಳನ್ನು ನಿರ್ಮಿಸಿರೋ ಹೆಚ್.ಕೆ.ಪ್ರಕಾಶ್ ಸ್ಪೂಕಿ ಕಾಲೇಜ್ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ನಿರ್ದೇಶಕ ಭರತ್ ಅವರೆ ಬರೆದಿದ್ದು, ಮನೋಹರ್ ಜೋಶಿ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನವಿದೆ. ಕೆಜಿಎಫ್ ಖ್ಯಾತಿಯ ಶ್ರೀಕಾಂತ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

'ಪ್ರೀಮಿಯರ್ ಪದ್ಮಿನಿ' ನಟಿಸಿದ್ದ ವಿವೇಕ್ ಸಿಂಹ 'ಸ್ಪೂಕಿ ಕಾಲೇಜ್' ಹೀರೊ. 'ದಿಯಾ' ಮೂಲಕ ಜನಪ್ರಿಯರಾಗಿರುವ ಖುಷಿ ರವಿ ನಾಯಕಿ. ಅಜಯ್ ಪೃಥ್ವಿ, ಹನುಮಂತೇ ಗೌಡ, ಕೆ.ಎಸ್.ಶ್ರೀಧರ್, ವಿಜಯ್ ಚೆಂಡೂರ್, ಶರಣ್ಯ ಶೆಟ್ಟಿ, ರಘು ರಮಣಕೊಪ್ಪ ಹಾಗೂ 'ಕಾಮಿಡಿ ಕಿಲಾಡಿಗಳು' ಶೋನ‌ ಜನಪ್ರಿಯ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

More from Filmibeat

English summary
Reeshma Nanaiah Song For Mellusire Savigana In Spooky College. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X