'ಡಿ' ಅಂದ್ರೆ ಡಿಬಾಸ್ ಫ್ಯಾನ್ಸ್ ಪಾಲಿಗೆ ಕೇವಲ ಪದವಲ್ಲ, ಅದೊಂದು ಎಮೋಷನ್!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ರಾಬರ್ಟ್'ನ ಮೊದಲ ಹಾಡು ಇಂದು ಬಿಡುಗಡೆಯಾಗುತ್ತಿದೆ. ಇದು 'ಡಿ ಬಾಸ್' ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಸಂಜೆ ಐದು ಗಂಟೆಯಾಗುವುದಕ್ಕೆ ದರ್ಶನ್ ಅಭಿಮಾನಿಗಳು ಕಾತರದಿಂದ ಚಡಪಡಿಸುತ್ತಾ ಕಾಯುವಂತಾಗಿದೆ.
'ರಾಬರ್ಟ್'ನ ಹಾಡಿಗೆ ಅಭಿಮಾನಿಗಳೂ 'ಬಾ ಬಾ ಬಾ ನಾ ರೆಡಿ' ಎಂದು ಹಾಡನ್ನು ಕೇಳಿ ಎಂಜಾಯ್ ಮಾಡಲು ಸಿದ್ಧರಾಗಿದ್ದಾರೆ. ಚಿತ್ರದ ಪೋಸ್ಟರ್‌ಗಳು, ದರ್ಶನ್ ಲುಕ್ ಮೂಲಕ ಈಗಾಗಲೇ ಅಭಿಮಾನಿಗಳಲ್ಲಿ ಕಚಗುಳಿ ಇರಿಸಿರುವ ಚಿತ್ರತಂಡ, ಮತ್ತೊಂದು ಆರ್ಭಟಕ್ಕೆ ಸಜ್ಜಾಗಿದೆ.
'ಬಾ ಬಾ ಬಾ ನಾ ರೆಡಿ' ಹಾಡಿನ ಮೊದಲ ಸಾಲಿನಲ್ಲಿಯೇ ಅಭಿಮಾನಿಗಳು ಹುಚ್ಚೆದ್ದು ಕುಣಿಯುವ ಕಿಕ್ ಇದೆ ಎಂಬ ಸುಳಿವು ಸಿಕ್ಕಿದೆ. ಹೀಗಾಗಿ ರಾಬರ್ಟ್ ಚಿತ್ರ ಬಿಡುಗಡೆ ಮಾಡುತ್ತಿರುವ ಮೊದಲ ಹಾಡು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಹುಟ್ಟಿಸುವ ನಿರೀಕ್ಷೆ ಮೂಡಿಸಿದೆ.

ಅಭಿಮಾನಿಗಳ ಮಾಸ್ ಆಂಥೆಮ್
ಮಾರ್ಚ್ 3ರ ಸಂಜೆ 5.01ಕ್ಕೆ ರಾಬರ್ಟ್ ಚಿತ್ರದ ಮೊದಲ ಸಿಂಗಲ್ ಲಿರಿಕಲ್ ವಿಡಿಯೋ ಹಾಡು ಬಿಡುಗಡೆಯಾಗಿದೆ ಎಂಬ ಮಾಹಿತಿಯನ್ನು ಚಿತ್ರತಂಡ ನೀಡಿದೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಈ ಹಾಡು ಹೇಗಿರಲಿದೆ? ಸಂಜೆ ಐದು ಗಂಟೆಯವರೆಗೆ ಕಾದು ನೋಡಬೇಕು. ಇದು ಮಾಸ್ ಆಂಥೆಮ್ ಆಗಲಿದೆ ಎನ್ನುವುದು ಅಭಿಮಾನಿಗಳ ಅಭಿಪ್ರಾಯ.

ಚಿತ್ರದ ಪ್ರಮುಖ ಹೈಲೈಟ್
'ರಾಬರ್ಟ್' ಚಿತ್ರ ತಂಡದಿಂದ ಅಭಿಮಾನಿಗಳಿಗೆ ಸಿಗುತ್ತಿರುವ ಮೊದಲ ಹಾಡಿನ ಹಬ್ಬ ಇದು. ಅಂದಹಾಗೆ 'ಬಾ ಬಾ ಬಾ ನಾ ರೆಡಿ' ಹಾಡು 'ರಾಬರ್ಟ್' ಚಿತ್ರದ ಅತ್ಯಂತ ಪ್ರಮುಖ ಹೈಲೈಟ್ ಅಂತೆ. ಹಾಡು ಕೇಳಿದ ಬಳಿಕ ಅದು ಅರಿವಾಗುತ್ತದೆ. ಹಾಗಾಗಿ ಹಾಡು ಕೇಳಿ ಎಂಜಾಯ್ ಮಾಡಿ ಎಂದಿದೆ ಚಿತ್ರತಂಡ.

'ಡಿ' ಎಂದರೆ ಅದೊಂದು ಎಮೋಷನ್
'ಡಿ' ಎಂಬುದು ವರ್ಣಮಾಲೆಯ ಕೇವಲ ಒಂದು ಅಕ್ಷರವಲ್ಲ. ಅದು 'ಡಿ ಬಾಸ್' ಅಭಿಮಾನಿಗಳ ಪಾಲಿಗೆ ಒಂದು ಎಮೋಷನ್ ಎಂದಿದ್ದಾರೆ ಚಿತ್ರದ ನಿರ್ದೇಶಕರು. ಚಾಲೆಂಜಿಂಗ್ ಸ್ಟಾರ್ ಖ್ಯಾತಿಯ, ಅಭಿಮಾನಿಗಳ ಪಾಲಿನ ನೆಚ್ಚಿನ 'ಡಿ ಬಾಸ್' ಅವರ ಲುಕ್‌ಗಳು ಹೇಗಿರಲಿವೆ ಎಂಬ ಕುತೂಹಲ ಜೋರಾಗಿದೆ.

ನಾಗೇಂದ್ರ ಪ್ರಸಾದ್ ರಚನೆ
ಮೆಲೋಡಿ ಹಾಡುಗಳಂತೆಯೇ ಪಡ್ಡೆ ಹುಡುಗರಿಗೆ ಹುಚ್ಚೆಬ್ಬಿಸಿ ಕುಣಿಯುವಂತೆ ಮಾಡುವ ಹಾಡುಗಳನ್ನು ರಚಿಸುವುದರಲ್ಲಿಯೂ ಚಿತ್ರ ಸಾಹಿತಿ ವಿ. ನಾಗೇಂದ್ರ ಪ್ರಸಾದ್ ಹೆಸರುವಾಸಿ. ಅವರ ಸಾಹಿತ್ಯದಲ್ಲಿ ಮೂಡಿರುವ 'ರಾಬರ್ಟ್' ಹಾಡು ಹೊಸ ಸೆನ್ಸೇಷನ್ ಸೃಷ್ಟಿಸುವ ಸಾಧ್ಯತೆ ಇದೆ.


Click it and Unblock the Notifications











