ಕಲರ್‌ಫುಲ್ ಲೈಟು.. ಡಿಂಪಲ್ ಸ್ಮೈಲು.. 'ಸಂಜು ವೆಡ್ಸ್ ಗೀತಾ 2' ಒಂದು ಹಾಡಿನ ಸೆಟ್ಟಿಗೆ ಬರೋಬ್ಬರಿ ₹50 ಲಕ್ಷ!

ಕಾಡುವ ಪ್ರೇಮಕಥೆಯನ್ನು ಹೊತ್ತು ಬಂದಿದ್ದ ಸಿನಿಮಾ 'ಸಂಜು ವೆಡ್ಸ್ ಗೀತಾ'. 2011ರಲ್ಲಿ ತೆರೆಕಂಡಿದ್ದ ಈ ಸಿನಿಮಾ ಪ್ರೇಮಿಗಳ ಹೃದಯ ಮುಟ್ಟಿತ್ತು. ಮೋಹಕತಾರೆ ರಮ್ಯಾ, ಶ್ರೀನಗರ ಕಿಟ್ಟಿ ಜೋಡಿ ಸಂಜು ಮತ್ತು ಗೀತಾರಾಗಿ ತೆರೆಮೇಲೆ ಬಂದಿದ್ದರು. ಇವರ ಮೋಡಿಗೆ ಸಿನಿ ಮಂದಿ ಮರುಳಾಗಿದ್ದರು. ಮತ್ತೆ ಸಂಜು ಮತ್ತು ಗೀತಾರನ್ನು ತೆರೆಮೇಲೆ ನೋಡಬೇಕು ಅಂತ ಆಸೆ ಪಟ್ಟಿದ್ದರು.

ಸಿನಿ ಪ್ರಿಯರ ಆ ಆಸೆಯನ್ನು ನಿರ್ದೇಶಕ ನಾಗಶೇಖರ್ ಈಡೇರಿಸುವುದಕ್ಕೆ ಮುಂದಾಗಿದ್ದಾರೆ. ಮತ್ತೆ 'ಸಂಜು ವೆಡ್ಸ್ ಗೀತಾ' ಥಿಯೇಟರ್‌ಗೆ ಲಗ್ಗೆ ಇಡುವುದಕ್ಕೆ ಸಜ್ಜಾಗುತ್ತಿದ್ದಾರೆ. ಸಂಜು ಪಾತ್ರದಲ್ಲಿ ಶ್ರೀನಗರ ಕಿಟ್ಟಿ, ಗೀತಾ ಪಾತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಕಾಣಿಸುತ್ತಿದ್ದಾರೆ. ಇದೊಂದು ರೊಮ್ಯಾಂಟಿಕ್ ಲವ್ ಸ್ಟೋರಿ ಆಗಿದ್ದು, ಅದ್ಧೂರಿಯಾಗಿ ಸಿನಿಮಾದ ಶೂಟಿಂಗ್ ಮಾಡುತ್ತಿದ್ದಾರೆ.

Rs 50 lakh spent on Rachita Ram and Srinagara Kitty starrer Sanju Weds Geetha 2 song

'ಸಂಜು ವೆಡ್ಸ್ ಗೀತಾ 2' ಗಾಗಿ ನಾಗಶೇಖರ್ ಅದ್ಧೂರಿಯಾದ ರೊಮ್ಯಾಂಟಿಕ್ ಸಾಂಗ್‌ ಅನ್ನು ಪ್ಲಾನ್ ಮಾಡಿದ್ದರು. ಅದರಂತೆ ನಿರ್ಮಾಪಕ ಛಲವಾದಿ ಕುಮಾರ್ ಸುಮಾರು 50 ಲಕ್ಷ ರೂಪಾಯಿ ಬಜೆಟ್‌ನಲ್ಲಿ ಸೆಟ್ ಹಾಕಿದ್ದರು. ಆ ಅದ್ಧೂರಿ ಸೆಟ್ಟಿನಲ್ಲಿ ರಚಿತಾ ರಾಮ್ ಹಾಗೂ ಶ್ರೀನಗರ ಕಿಟ್ಟಿ ಕಾಂಬಿನೇಷನ್ ಸಾಂಗ್ ಅನ್ನು ಶೂಟ್ ಮಾಡಲಾಗಿದೆ.

ಪ್ರೀತಿ, ಪ್ರೇಮ, ತ್ಯಾಗದ ಕಥೆಯನ್ನು ಹೆಣೆಯುವಲ್ಲಿ ನಿರ್ದೇಶಕ ನಾಗಶೇಖರ್ ಎತ್ತಿದ ಕೈ. ಈಗಾಗಲೇ ಬಂದಿರೋ ಸಿನಿಮಾಗಳೇ ಸಾಕ್ಷಿ. 2011ರಲ್ಲಿ ತೆರೆಗೆ ಬಂದಿರೋ 'ಸಂಜು ವೆಡ್ಸ್ ಗೀತಾ' ಇದಕ್ಕೆ ಉತ್ತರ ಉದಾಹರಣೆ. ಈಗ ಮತ್ತೊಮ್ಮೆ ಇದೇ ಸಂಜು ಮತ್ತು ಗೀತಾರನ್ನು ಇಟ್ಟುಕೊಂಡು ಅವರ ನವಿರಾದ ಪ್ರೇಮಕಥೆಯನ್ನು ತೆರೆಮೇಲೆ ತರುವುದಕ್ಕೆ ಹೊರಟಿದ್ದಾರೆ. ಚಿಕ್ಕದೊಂದು ಬದಲಾವಣೆ ಅಂದರೆ, ಇಲ್ಲಿ ರಮ್ಯಾ ಬದಲು ಗೀತಾ ಪಾತ್ರದಲ್ಲಿ ರಚಿತಾ ರಾಮ್ ಕಾಣಿಸಿಕೊಳ್ಳುತ್ತಾರೆ.

ಇತ್ತೀಚೆಗೆ 50 ಲಕ್ಷ ರೂಪಾಯಿ ಬಜೆಟ್‌ನಲ್ಲಿ 'ಸಂಜು ವೆಡ್ಸ್ ಗೀತಾ 2' ಸಿನಿಮಾದ ಹಾಡನ್ನು ಕುಣಿಗಲ್‌ನ ಯುಬಿ ಕುದುರೆ ಫಾರಂನಲ್ಲಿ ಐದು ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಅದ್ಧೂರಿಯಾಗಿ ಕಲರ್‌ಫುಲ್ ಸೆಟ್ ಹಾಕಿ, ರೊಮ್ಯಾಂಟಿಕ್ ಹಾಡನ್ನು ಶೂಟ್ ಮಾಡಲಾಗಿದೆ. ಸದ್ಯ ಈ ಹಾಡಿನ ಮೇಕಿಂಗ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇನ್ನು ಉಳಿದ ಹಾಡುಗಳನ್ನು ಇಷ್ಟೇ ಅದ್ಧೂರಿಯಾಗಿ ಚಿತ್ರೀಕರಣ ಮಾಡಲು ನಿರ್ಮಾಪಕ ಛಲವಾದಿ ಕುಮಾರ್ ಪ್ಲಾನ್ ಮಾಡಿದ್ದಾರೆ.

Rs 50 lakh spent on Rachita Ram and Srinagara Kitty starrer Sanju Weds Geetha 2 song

'ಸಂಜು ವೆಡ್ಸ್ ಗೀತಾ 2' ಸಿನಿಮಾದ ಬಹುತೇಕ ಶೂಟಿಂಗ್ ಮುಗಿದಿದ್ದು, ಹಾಡುಗಳ ಚಿತ್ರೀಕರಣ ನಡೆಯುತ್ತಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಕೂಡ ಅಷ್ಟೇ ವೇಗವಾಗಿ ನಡೆಯುತ್ತಿದೆ. ಸ್ವಿಟ್ಜರ್ಲೆಂಡ್‌ನಲ್ಲಿ ಈಗಾಗಲೇ 15 ದಿನಗಳ ಕಾಲ ಸುಮಾರು ಹನ್ನೊಂದು ಲೋಕೇಶನ್‌ಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಸದ್ಯ 50 ಲಕ್ಷ ರೂಪಾಯಿಯ ವೆಚ್ಚದಲ್ಲಿ ನಾಲ್ಕನೇ ಹಂತದ ಶೂಟಿಂಗ್ ಅನ್ನು ಮುಗಿಸಲಾಗಿದೆ.

ಈ ಸಿನಿಮಾವನ್ನು ನಾಗಶೇಖರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನವನ್ನೂ ಮಾಡಿದ್ದಾರೆ. ಹಾಗೇ ಶ್ರೀಧರ ವಿ. ಸಂಭ್ರಮ್ ಮೆಲೋಡಿ ಟ್ಯೂನ್ ಹಾಕಿದ್ದಾರೆ. ಸೋನು ನಿಗಂ, ಶ್ರೇಯಾ ಘೋಷಾಲ್ ಹಾಗೂ ಮಂಗ್ಲಿ ಹಾಡಿದ್ದು, ಶ್ರೀನಗರ ಕಿಟ್ಟಿ, ರಚಿತಾ ರಾಮ್ ಜೊತೆಗೆ ರಾಗಿಣಿ ದ್ವಿವೇದಿ, ಚೇತನ್ ಚಂದ್ರ, ರಂಗಾಯಣ ರಘು, ಸಾಧು ಕೋಕಿಲ , ತಬಲಾನಾಣಿ, ಗಿಚ್ಚಿಗಿಲಿಗಿಲಿ ವಿನೋದ್ ಹಾಗೂ ಬಹುಭಾಷಾ ಖಳನಟ ಸಂಪತ್ ಕುಮಾರ್ ನಟಿಸಿದ್ದಾರೆ. ಶೀಘ್ರದಲ್ಲಿಯೇ ಈ ಸಿನಿಮಾ ಬಿಡುಗಡೆಯಾಗಲಿದೆ.

More from Filmibeat

English summary
Rachita Ram and Srinagara Kitty starrer Sanju Weds Geetha 2 song shoot in Kunigal:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X