20 ಗಂಟೆಯೊಳಗೆ ಅಲ್ಲು ಅರ್ಜುನ್ 'ಪುಷ್ಪ' ದಾಖಲೆ ಉಡೀಸ್ ಮಾಡಿದ ಮಹೇಶ್ ಬಾಬು

ಪ್ರೇಮಿಗಳ ದಿನಕ್ಕೆ ಮಹೇಶ್ ಬಾಬು ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಸಿಕ್ಕಿದೆ. ಕೇವಲ 20 ಗಂಟೆಯೊಳಗೆ ಸೂಪರ್ ಸ್ಟಾರ್ ಮಹೇಶ್ ಬಾಬು ಅಲ್ಲು ಅರ್ಜುನ್ ಬಳಿ ಇದ್ದ ದಾಖಲೆಗಳನ್ನು ಅಳಿಸಿ ಹಾಕಿದ್ದಾರೆ. ವ್ಯಾಲೆಂಟೈನ್ಸ್ ಡೇ ವಿಶೇಷವಾಗಿ ತಮ್ಮ ಅಭಿಮಾನಿಗಳಿಗೆ ಪ್ರಿನ್ಸ್ ಅಭಿನಯದ 'ಸರ್ಕಾರು ವಾರಿ ಪಾಟ' ಚಿತ್ರದ ಕಲಾವತಿ ಹಾಡನ್ನು ಬಿಡುಗಡೆ ಮಾಡಲಾಗಿತ್ತು. ಈ ಹಾಡು ಹಳೆಯ ಎಲ್ಲಾ ದಾಖಲೆಗಳನ್ನೂ ಚಿಂದಿ ಉಡಾಯಿಸಿದೆ.

ಮಹೇಶ್ ಬಾಬು ಹಾಗೂ ಸಂಗೀತ ನಿರ್ದೇಶಕ ಎಸ್ ತಮನ್ ಕಾಂಬಿನೇಷನ್ ಸೂಪರ್ ಹಿಟ್ ಆಗಿದೆ. ಪ್ರೇಮಿಗಳ ದಿನದಂದೇ ಮ್ಯೂಸಿಕ್ ಡೈರೆಕ್ಟರ್ ಎಸ್ ತಮನ್ 'ಸರ್ಕಾರು ವಾರಿ ಪಾಟ' ಜರ್ನಿಯನ್ನು ಆರಂಭಿಸಿದ್ದಾರೆ. ಮೊದಲ ಹಾಡಿನಿಂದಲೇ ದಾಖಲೆಗಳನ್ನು ಅಳಿಸಿ ಹಾಕಲು ಆರಂಭಿಸಿದ್ದಾರೆ. ಹಾಗಿದ್ದರೆ, ಮಹೇಶ್ ಬಾಬು ಸಿನಿಮಾದ ಕಲಾವತಿ ಹಾಡು ಸೃಷ್ಟಿಸಿದ ಹೊಸ ದಾಖಲೆ ಏನು? ಯಾವ ಸಿನಿಮಾ ಹಾಡಿನ ದಾಖಲೆ ಉಡಾಯಿಸಿದೆ? ಅನ್ನುವುದನ್ನು ತಿಳಿಯಲು ಮುಂದೆ ಓದಿ.

 'ಊ ಅಂಟವಾ' ಹಾಡಿನ ದಾಖಲೆ ಉಡೀಸ್

'ಊ ಅಂಟವಾ' ಹಾಡಿನ ದಾಖಲೆ ಉಡೀಸ್

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ 'ಪುಷ್ಪ' ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದು ಗೊತ್ತೇ ಇದೆ. ಈ ಸಿನಿಮಾದಲ್ಲಿ ಸಮಂತಾ ಹೆಜ್ಜೆ ಹಾಕಿದ ಐಟಂ ಹಾಡು 'ಊ ಅಂಟವಾ ಮಾವ' ಹಾಡು ಹೊಸ ದಾಖಲೆಯನ್ನು ಸೃಷ್ಟಿಸಿತ್ತು. ಈ ಹಾಡು ಬರೆದಿದ್ದ ದಾಖಲೆಯನ್ನು ಮಹೇಶ್ ಬಾಬು ಅಭಿನಯದ 'ಸರ್ಕಾರು ವಾರಿ ಪಾಟ' ಚಿತ್ರದ ಮೊದಲ ಹಾಡು ಉಡೀಸ್ ಮಾಡಿದೆ. ಈ ಸಿನಿಮಾದ ಕಲಾವತಿ ಸಾಂಗ್ ಬಿಡುಗಡೆಯಾದ ಕೇವಲ 20 ಗಂಟೆಗಳಲ್ಲಿ ಮುರಿದು ಹಾಕಿದೆ.

ಕಲಾವತಿ ಸಾಂಗ್ ಬರೆದ ದಾಖಲೆಯೇನು?

ತಮನ್ ಮ್ಯೂಸಿಕ್, ಸಿದ್ಧ್ ಶ್ರೀರಾಮ್ ಧ್ವನಿ, ಸೂಪರ್ ಸ್ಟಾರ್ ಮಹೇಶ್ ಬಾಬು, ಕೀರ್ತಿ ಸುರೇಶ್ ಇಷ್ಟು ಮಂದಿ ಒಂದು ಹಾಡಿನ ಗೆಲುವಿನ ರೂವಾರಿಗಳು. ರಿಲೀಸ್ ಮಾಡಿದ್ದು 'ಸರ್ಕಾರು ವಾರಿ ಪಾಟ' ಚಿತ್ರದ ಒಂದು ಹಾಡು. ಅದೂ ಲಿರಿಕಲ್ ಸಾಂಗ್. ಈ ಹಾಡು ಕೇವಲ 20 ಗಂಟೆಗಳಲ್ಲಿ 14 ಮಿಲಿಯನ್ ವೀವ್ಸ್ ಪಡೆದು. ಆಲ್‌ ಟೈಮ್ ರೆಕಾರ್ಡ್ ಮಾಡಿದೆ. ಪುಷ್ಪ ಸಿನಿಮಾದಲ್ಲಿ ಸಮಂತಾ ನಟಿಸಿದ 'ಊ ಅಂಟವಾ ಮಾವ' ಸಾಂಗ್ ಇದೇ 20 ಗಂಟೆಗಳಲ್ಲಿ 12.39 ಮಿಲಿಯನ್ ವೀವ್ಸ್ ಪಡೆದುಕೊಂಡಿತ್ತು. ಚಿತ್ರತಂಡದ ಪ್ರಕಾರ, ಕಲಾವತಿ ಸಾಂಗ್ 24 ಗಂಟೆಗಳಲ್ಲಿ 16 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ.

 ಲೈಕ್ಸ್‌ನಲ್ಲೂ ಕಲಾವತಿ ಸಾಂಗ್ ದಾಖಲೆ

ಲೈಕ್ಸ್‌ನಲ್ಲೂ ಕಲಾವತಿ ಸಾಂಗ್ ದಾಖಲೆ

ಕಲಾವತಿ ಲಿರಿಕಲ್ ಸಾಂಗ್ ದಾಖಲೆ ಕೇವಲ ವೀವ್ಸ್‌ನಲ್ಲಿ ಅಷ್ಟೇ ಅಲ್ಲ. ಲೈಕ್ಸ್ ವಿಚಾರದಲ್ಲೂ ದಾಖಲೆಗಳನ್ನು ಉಡೀಸ್ ಮಾಡಿದೆ. ಸಿದ್ದ್ ಶ್ರೀರಾಮ್ ಹಾಗೂ ತಮನ್ ಇಬ್ಬರ ಕಾಂಬೋಗೆ 8.06 ಲಕ್ಷ ಲೈಕ್ಸ್ ಸಿಕ್ಕಿದೆ. ಟಾಲಿವುಡ್ ಪವರ್‌ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಭೀಮ್ಲಾ ನಾಯಕ ಸಿನಿಮಾಗೆ ಇದೂವರೆಗೂ ಅತೀ ಹೆಚ್ಚು 7.28 ಲಕ್ಷ ಲೈಕ್ಸ್ ಪಡೆದುಕೊಂಡಿತ್ತು. ಒಂದೇ ಹಾಡಲ್ಲಿ ಎರಡು ದಾಖಲೆಗಳನ್ನು ಮಹೇಶ್ ಬಾಬು ಸಿನಿಮಾ ಮುರಿದು ಹಾಕಿದೆ.

 24 ಗಂಟೆಗಳಲ್ಲಿ ದಾಖಲೆ ಬರೆದ ಟಾಪ್ 5 ಸಾಂಗ್ಸ್

24 ಗಂಟೆಗಳಲ್ಲಿ ದಾಖಲೆ ಬರೆದ ಟಾಪ್ 5 ಸಾಂಗ್ಸ್

ತೆಲುಗು ಸಿನಿಮಾ ಸೂಪರ್‌ಸ್ಟಾರ್ ಹಾಡುಗಳು ಬಿಡುಗಡೆಯಾದ 24 ಗಂಟೆಯೊಳಗೆ ದಾಖಲೆ ಬರೆದಿತ್ತು. ಮಹೇಶ್ ಬಾಬು ಸಿನಿಮಾ 'ಸರ್ಕಾರು ವಾರಿ ಪಾಟ' ಚಿತ್ರದ ಕಲಾವತಿ ಸಾಂಗ್ 14 ಮಿಲಿಯನ್ ವೀವ್ಸ್ ಪಡೆದರೆ, 'ಪುಷ್ಪ' ಚಿತ್ರದ 'ಊ ಅಂಟವಾ ಸಾಂಗ್' 12.39 ಮಿಲಿಯನ್ ವೀವ್ಸ್ ಪಡೆದಿತ್ತು. ಭೀಮ್ಲಾ ನಾಯಕ್ ಚಿತ್ರ 'ಲಾ ಲಾ ಭೀಮ್ಸಾ' ಸಾಂಗ್ 10.20 ವೀವ್ಸ್ ಸಿಕ್ಕಿದೆ. ಚಿರಂಜೀವಿ ಅಭಿನಯದ 'ಆಚಾರ್ಯ' ದ ಸಾನಾ ಕ್ಷಣಂ ಹಾಡಿಗೆ 10.16 ಮಿಲಿಯನ್ ವೀವ್ಸ್ ಸಿಕ್ಕಿದೆ. 'ಪುಷ್ಪ' ಸಾಮಿ ಸಾಮಿ ಹಾಡು 9.06 ಮಿಲಿಯನ್ ವೀವ್ಸ್ ಗಿಟ್ಟಿಸಿಕೊಂಡಿದೆ.

More from Filmibeat

English summary
Mahesh Babu Starrer Sarkaru Vaari Paata song Kalaavathi released on Valentine’s Day set all time record. Kalaavathi song got 14 Million views in just 20 hours, to break the previous best of Oo Antava song from Allu Arjun’s Pushpa.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X