ಮನಾಲಿ ಮಂಜಲ್ಲಿ ' ನೀನಗಾಗೇ ಮಿಡಿದ' 'ಮ್ಯಾಟ್ನಿ' ಸಾಂಗ್; ರೊಮ್ಯಾಂಟಿಕ್ ಮೂಡ್ನಲ್ಲಿ ಸತೀಶ್ –ಅದಿತಿ
ಸ್ಯಾಂಡಲ್‌ವುಡ್‌ನ ಹಿಟ್ ಜೋಡಿಗಳಲ್ಲಿ ನೀನಾಸಂ ಸತೀಶ್ ಹಾಗೂ ಅದಿತಿ ಪ್ರಭುದೇವ ಫೇರ್ ಕೂಡ ಒಂದು. ಇದಕ್ಕೆ 'ಅಯೋಗ್ಯ' ಸಿನಿಮಾವೇ ಸಾಕ್ಷಿ. ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಅದುವೇ 'ಮ್ಯಾಟ್ನಿ'.
'ಅಯೋಗ್ಯ' ಸಿನಿಮಾ ಬಳಿಕ ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ಹೇಗೆ ಮತ್ತೆ ಜೋಡಿಯಾಗಿದ್ದಾರೋ.. ಹಾಗೇ ನೀನಾಸಂ ಸತೀಶ್ ಹಾಗೂ ಅದಿತಿ ಪ್ರಭುದೇವ ಕೂಡ ಮತ್ತೆ ಒಟ್ಟಿಗೆ ನಟಿಸಿದ್ದಾರೆ. ಆ ಸಿನಿಮಾ ಕೂಡ 'ಮ್ಯಾಟ್ನಿ'ನೇ. ಅಂದರೆ, 'ಮಾಟ್ನಿ' ಸಿನಿಮಾದಲ್ಲಿ ನೀನಾಸಂ ಸತೀಶ್, ರಚಿತಾ ರಾಮ್ ಹಾಗೂ ಅದಿತಿ ಪ್ರಭುದೇವ ಮೂವರು ಒಟ್ಟಿಗೆ ನಟಿಸಿದ್ದಾರೆ.

'ಮ್ಯಾಟ್ನಿ' ಸಿನಿಮಾದ ಹಾಡುಗಳು ಈಗಾಗಲೇ ಸಿಕ್ಕಾಪಟ್ಟೆ ಸದ್ದು ಮಾಡಿವೆ. ಈಗ ಚಿತ್ರತಂಡ ಮತ್ತೊಂದು ರೊಮ್ಯಾಂಟಿಕ್ ಸಾಂಗ್ ರಿಲೀಸ್ ಮಾಡಿದೆ. "ನಿನಾಗಾಗಿ ಮಿಡಿಯುವುದು.." ಅನ್ನುವ ಈ ಹಾಡಿನಲ್ಲಿ ಸತೀಶ್ ನೀನಾಸಂ ಹಾಗೂ ಅದಿತಿ ಪ್ರಭುದೇವ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಮನಾಲಿಯ ಚುಮು ಚುಮು ಚಳಿಯಲ್ಲಿ ಶೂಟ್ ಮಾಡಿರುವ ಈ ರೊಮ್ಯಾಂಟಿಕ್ ಹಾಡು ಪ್ರೇಮಿಗಳಿಗೆ ಸಖತ್ ಕಿಕ್ ಕೊಡುತ್ತಿದೆ.
ಅಂದಹಾಗೆ ನೀನಾಸಂ ಸತೀಶ್, ಅದಿತಿ ಪ್ರಭುದೇವ ಜೋಡಿಯ ಈ ಹಾಡನ್ನು ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ರಿಲೀಸ್ ಮಾಡಿದ್ದಾರೆ. ಹಾಗೇ 'ಮ್ಯಾಟ್ನಿ' ತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿದ್ದಾರೆ. "ನಿನಗಾಗಿ ಮಿಡಿಯುವುದು.." ಹಾಡಿನ ಜೊತೆಗೆ ನೀನಾಸಂ ಸತೀಶ್ ಮೇಕಿಂಗ್ ವಿಡಿಯೋವನ್ನು ರಿಲೀಸ್ ಮಾಡಿದ್ದಾರೆ. ಅಂದಹಾಗೆ ಈ ಹಾಡನ್ನು ಸುಮಾರು ಮೂರು ದಿನಗಳ ಕಾಲ ಮನಾಲಿಯಲ್ಲಿಯೇ ಶೂಟಿಂಗ್ ಮಾಡಲಾಗಿದೆ.

'ಮ್ಯಾಟ್ನಿ' ಸಿನಿಮಾವನ್ನು ಮನೋಹರ್ ಕಾಂಪಲ್ಲಿ ನಿರ್ದೇಶನ ಮಾಡಿದ್ದಾರೆ. ಪಾರ್ವತಿ ಎಸ್ ಗೌಡ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈ ಹಾಡಿಗೆ ಕೀರ್ತನ್ ಪೂಜಾರಿ ಕ್ಯಾಮೆರಾ ವರ್ಕ್ ಮಾಡಿದ್ರೆ, ಸಂತು ಮಾಸ್ಟರ್ ನೃತ್ಯ ನಿರ್ದೇಶನವಿದೆ. ಹಾಗೇ ಪೂರ್ಣಚಂದ್ರ ತೇಜಸ್ವಿ ಸಂಗೀತವಿದೆ. 'ಮ್ಯಾಟ್ನಿ' ಸಿನಿಮಾದ ಈ ರೊಮ್ಯಾಂಟಿಕ್ ಹಾಡಿಗೆ ಹೇಮಂತ್ ಕುಮಾರ್ ಗಂಜಂ ಸಾಹಿತ್ಯ ರಚಿಸಿದ್ದು, ಸಾದ್ವಿನಿ ಕೊಪ್ಪ ಹಾಡಿದ್ದಾರೆ..
ಮ್ಯಾಟ್ನಿ ಸಿನಿಮಾದಲ್ಲಿ ಸತೀಶ್ ನಿನಾಸಂ , ರಚಿತಾ ರಾಮ್, ಅದಿತಿ ಪ್ರಭುದೇವಾ ಸೇರಿದಂತೆ ದೊಡ್ಡ ತಾರಾ ಬಳಗವೇ ಇದೆ. ಶಿವರಾಜ್ ಕೆ ಆರ್ ಪೇಟೆ, ನಾಗಭೂಷನ್ , ಪೂರ್ಣ ಮೈಸೂರು, ದಿಗಂತ್ ಸೇರಿದಂತೆ ತಬಲ ನಾಣಿ, ಪ್ರಕಾಶ್ ತುಂಬಿನಾಡು,ಗೋಪಿ ಮಿಮಿಕ್ರಿ,ತುಳಸಿ ಶಿವಮಣಿ ಇನ್ನು ಅನೇಕರು ಅಭಿನಯಿಸಿದ್ದಾರೆ ಏರ್ಪಿಲ್ 5 ರಂದು ಮ್ಯಾಟ್ನಿ ಸಿನಿಮಾ ರಾಜ್ಯಾಧ್ಯಂತ ತೆರೆಗೆ ಬರ್ತಿದೆ.


Click it and Unblock the Notifications











