ಓವರ್ ಆಕ್ಟಿಂಗ್ ಅನಿಲ 'ಅವತಾರ ಪುರುಷ'ನ ಬಾಯಿಗೆ ಬಿತ್ತು ಲಡ್ಡು

ಶರಣ್ 'ಅವತಾರ ಪುರುಷ'ನ ಅವತಾರವೆತ್ತಿರೋದು ಗೊತ್ತೇ ಇದೆ. ಈ ಸಿನಿಮಾ ಇದೇ ಡಿಸೆಂಬರ್ 10ಕ್ಕೆ ಬಿಡುಗಡೆಯಾಗುತ್ತಿದೆ. ಹೀಗಾಗಿ ಈಗಿನಿಂದಲೇ ಸಿನಿಮಾ ಪ್ರಚಾರ ಮಾಡುವುದಕ್ಕೆ ಚಿತ್ರತಂಡ ಶುರುವಿಟ್ಟುಕೊಂಡಿದೆ. ಆಶಿಕಾ ರಂಗನಾಥ್ ನಿರ್ದೇಶಕ ಸಿಂಪಲ್ ಸುನಿ, ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಸೇರಿದಂತೆ ಇಡೀ ಚಿತ್ರತಂಡ ಅವತಾರ ಪುರುಷನ ಹಿಂದೆನೇ ಬಿದ್ದು ಬಿಟ್ಟಿದೆ. ಆದರೆ ಶರಣ್ ಮಾತ್ರ ಆರಾಮಾಗಿ ಕಾರಲ್ಲಿ ಹಾಡು ಹೇಳಿಕೊಂಡು ಎಂಜಾಯ್ ಮಾಡುತ್ತಿದ್ದಾರೆ.

'ಅವತಾರ ಪುರುಷ' ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಸಿನಿಮಾ. ಕಾಮಿಡಿ ಕಿಂಗ್ ಶರಣ್ ಹಾಗೂ ನಿರ್ದೇಶಕ ಸಿಂಪಲ್ ಸುನಿ ಕಾಂಬಿನೇಷನ್‌ ಈಗಾಗಲೇ ಸಾಕಷ್ಟು ಕುತೂಹಲ ಕೆರಳಿಸಿದೆ. ಅಲ್ಲದೆ ಈ ಸಿನಿಮಾದಲ್ಲಿ ಮನರಂಜನೆಯ ಮಹಾಪೂರವೇ ಹರಿದು ಬರಲಿದೆ ಅಂತ ಚಿತ್ರತಂಡನೂ ಭರವಸೆಗಳನ್ನು ನೀಡಿದೆ. ಹೀಗಾಗಿ 'ಅವತಾರ ಪುರುಷ' ಸ್ಯಾಂಡಲ್‌ವುಡ್ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆ ಸೃಷ್ಟಿಸುವ ಲಕ್ಷಣಗಳು ಎದ್ದು ಕಾಣುತ್ತಿವೆ. ಅದಕ್ಕೆ ತಕ್ಕಂತೆ ಭರ್ಜರಿ ಪ್ರಚಾರಕ್ಕೂ ಮುಂದಾಗಿದೆ.

'ಅವತಾರ ಪುರುಷ'ನಿಗೆ ಲಡ್ಡು ಜಪ

'ಅವತಾರ ಪುರುಷ'ನಿಗೆ ಲಡ್ಡು ಜಪ

'ಅವತಾರ ಪುರುಷ' ಕಾರಲ್ಲಿ ಹಾಡು ಹೇಳಿಕೊಂಡು ಎಂಜಾಯ್ ಮಾಡಿಕೊಂಡು ಆರಾಮಾಗಿದ್ದಾರೆ. ಇತ್ತ ಚಿತ್ರತಂಡ ಮಾತ್ರ ಸಿನಿಮಾ ಪ್ರಚಾರ ಮಾಡೋಕೆ ತಲೆಕೆಡಿಸಿಕೊಂಡಿದೆ. ಸೋಶಿಯಲ್ ಮೀಡಿಯಾದಲ್ಲಿ ಇಂತಹದ್ದೊಂದು ವಿಡಿಯೋ ವೈರಲ್ ಆಗುತ್ತಿದೆ. ಶರಣ್ ಲಡ್ಡು ಬಂದು ಬಾಯಿಗ್ ಬಿತ್ತಾ ಹಾಡುತ್ತಿರುವ ವಿಡಿಯೋ ಇದು. ಅಷ್ಟಕ್ಕೂ ಇದು ಅವತಾರ ಪುರುಷ ಸಿನಿಮಾದ ಹಾಡು. ಈ ಹಾಡನ್ನು ಪ್ರೇಕ್ಷಕರ ಬಳಿ ತಲುಪಿಸುವುದಕ್ಕೆ ಚಿತ್ರತಂಡ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಲಡ್ಡು ಬಂದ್ ಬಾಯಿಗ್ ಬಿತ್ತಾ ಈ ಸ್ಪೆಷಲ್ ನವೆಂಬರ್ 28ಕ್ಕೆ ರಿಲೀಸ್ ಆಗುತ್ತಿದೆ.

ಅರ್ಜುನ್ ಜನ್ಯ ಟ್ಯೂನ್ ಹಾಕಿದ ಪೆಪ್ಪಿ ಸಾಂಗ್

ಅರ್ಜುನ್ ಜನ್ಯ ಟ್ಯೂನ್ ಹಾಕಿದ ಪೆಪ್ಪಿ ಸಾಂಗ್

'ಅವತಾರ ಪುರುಷ' ಚಿತ್ರಕ್ಕೆ ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ವಿಭಿನ್ನ ಟ್ಯೂನ್‌ಗಳನ್ನು ಕೊಟ್ಟಿದ್ದಾರೆ. ಕಾಮಿಡಿ ಜೊತೆ ಜೊತೆಗೆ ಸಸ್ಪೆನ್ಸ್ ಥ್ರಿಲ್ಲರ್ ಕಥೆಯಿರುವುದರಿಂದ ಹಾಡುಗಳು ಕಥೆಗೆ ಹೊಂದಿಕೊಂಡಂತೆ ಇರಲಿವೆ. ಅದರಲ್ಲೂ ನಾಳೆ (ನವೆಂಬರ್ 28) ರಂದು ಬಿಡುಗಡೆಯಾಗಲಿರುವ ಈ ಹಾಡು ಸಂಗೀತ ಪ್ರಿಯರಿಗೆ ಒಂದು ಕಿಕ್ ಕೊಡುತ್ತೆ ಅನ್ನುವ ಭರವಸೆ ಕೊಡುತ್ತಿದೆ ಚಿತ್ರತಂಡ. ಹೀಗಾಗಿ ಶರಣ್ ಹಾಗೂ ಆಶಿಕಾ ರಂಗನಾಥ್ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಈ ಪೆಪ್ಪಿ ಹಾಡು ಮಸ್ತ್ ಮಜಾ ಕೊಡುವುದು ಪಕ್ಕಾ.

ಶರಣ್, ಆಶಿಕಾ, ಅರ್ಜುನ್ ಸೇರಿದ್ರೆ ಹಾಡು ಹಿಟ್

ಶರಣ್, ಆಶಿಕಾ, ಅರ್ಜುನ್ ಸೇರಿದ್ರೆ ಹಾಡು ಹಿಟ್

ಶರಣ್, ಆಶಿಕಾ ರಂಗನಾಥ್, ಅರ್ಜುನ್ ಜನ್ಯ ಈ ಮೂವರು ಕಾಂಬಿನೇಷನ್‌ನಲ್ಲಿ ಬಂದ ಹಾಡುಗಳು ಸೂಪರ್ ಹಿಟ್ ಆಗಿವೆ. ಚುಟು ಚುಟು ಅಂತೈತೆ, ಯವ್ವಾ ಯವ್ವಾ ಅಂತಹ ಹಾಡುಗಳೇ ಇದಕ್ಕೆ ಸಾಕ್ಷಿ. ಈ ಬಾರಿ ಈ ಮೂವರೊಂದಿಗೆ ಸಿಂಪಲ್ ಸುನಿ ಟಚ್ ಕೂಡ ಇರಲಿದೆ. ಹೀಗಾಗಿ 'ಅವತಾರ ಪುರುಷ' ಸಿನಿಮಾದ ಹಾಡುಗಳು ಮತ್ತಷ್ಟು ಸಂಗೀತ ಪ್ರಿಯರಿಗೆ ರಸದೌತಣ ನೀಡಬಹುದು ಎಂದು ಊಹಿಸಲಾಗಿದೆ.

ಓವರ ಆಕ್ಟಿಂಗ್ ಅನಿಲನ ದಶವತಾರ

ಓವರ ಆಕ್ಟಿಂಗ್ ಅನಿಲನ ದಶವತಾರ

'ಅವತಾರ ಪುರುಷ' ಸಿನಿಮಾದಲ್ಲಿ ಶರಣ್ ಓವರ್ ಆಕ್ಟಿಂಗ್ ಅನಿಲ ಅವತಾರವೆತ್ತಿದ್ದು, ಜೂನಿಯರ್ ಆರ್ಟಿಸ್ಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂದರ್ಭಗಳಿಗೆ ಅನುಗುಣವಾಗಿ 10 ಅವತಾರಗಳಲ್ಲಿ ಶರಣ್ ರಂಜಿಸಲಿದ್ದಾರೆ. ಇದರೊಂದಿಗೆ ಮಾಟ ಮಂತ್ರ, ವಾಮಾಚಾರದಂತಹ ಎಳೆ ಕೂಡ ಇದೆ. ಈ ಸಂದರ್ಭದಲ್ಲಿ ಶ್ರೀನಗರ ಕಿಟ್ಟಿ ವಿಭಿನ್ನ ಲುಕ್ ಕೊಟ್ಟು ಮತ್ತೆ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ಹೀಗಾಗಿ 'ಅವತಾರ ಪುರುಷ' ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದರೂ ಅಚ್ಚರಿಯಿಲ್ಲ ಅನ್ನುತ್ತೆ ಚಿತ್ರತಂಡ.

More from Filmibeat

English summary
Sharan starrer movie Avatara Purusha new laddu song will be releasing on november 28th. Simple Suni director, Ashika Ranganath will be the lead actress.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X