'ಲವ್ 360' ಸಾಂಗ್ ಕೇಳಿ ರಿಯಲ್ ಸ್ಟಾರ್ ಉಪೇಂದ್ರ ಹೇಳಿದ್ದೇನು: ನಿರ್ದೇಶಕ ಶಶಾಂಕ್ ಬಿಚ್ಚಿಟ್ಟ ಗುಟ್ಟೇನು?

ಕನ್ನಡ ಚಿತ್ರರಂಗಕ್ಕೆ 'ಕೃಷ್ಣನ್ ಲವ್ ಸ್ಟೋರಿ', 'ಕೃಷ್ಣ ಲೀಲಾ' ಅಂತಹ ಸಿನಿಮಾಗಳನ್ನ ನೀಡಿದ್ದ ನಿರ್ದೇಶಕ ಶಶಾಂಕ್. ಇವರ ನಿರ್ದೇಶಕ ಹೊಸ ಸಿನಿಮಾವೊಂದು ಥಿಯೇಟರ್‌ಗೆ ಲಗ್ಗೆ ಇಡಲು ಪ್ರಚಾರ ಆರಂಭಿಸಿದೆ. ಆ ಸಿನಿಮಾವೇ 'ಲವ್ 360'. ಬಹುತೇಕ ಹೊಸಬರೇ ಇರುವ ಈ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಈ ಚಿತ್ರದ ಮೊದಲ ಹಾಡು ಇದೇ ಶನಿವಾರ (ಫೆ 26) ಕ್ಕೆ ರಿಲೀಸ್ ಆಗುತ್ತಿದೆ. ಆದರೆ, ಆ ಹಾಡು ಬಿಡುಗಡೆಗೂ ಮುನ್ನ ರಿಯಲ್ ಸ್ಟಾರ್ ಉಪೇಂದ್ರಗೆ ಈ ಹಾಡನ್ನು ತೋರಿಸಲಾಗಿದೆ.

ಅರ್ಜುನ್ ಜನ್ಯ ಹಾಗೂ ಶಶಾಂಕ್ ಇಬ್ಬರು ಸೇರಿಕೊಂಡು ಉಪೇಂದ್ರ ಬಳಿ ಹಾಡಿನ ಬಗ್ಗೆ ಅಭಿಪ್ರಾಯ ಕೇಳಿದ ವಿಡಿಯೋವನ್ನು ರಿಲೀಸ್ ಮಾಡಿದ್ದರು. ಹೊಸಬರ ಸಿನಿಮಾವಾಗಿದ್ದರಿಂದ ಉಪ್ಪಿ ವಿಭಿನ್ನವಾಗಿ ಪ್ರಚಾರಕ್ಕೆ ಇಳಿದಿದ್ದಾರೆ. ಸಿನಿಮಾದ ಹೀರೊ ಪ್ರವೀಣ್, ಹಾಗೂ ಲವ್ ಮಾಕ್ಟೇಲ್ ಖ್ಯಾತಿಯ ಹೆಂಗೆ ನಾವು? ಖ್ಯಾತಿಯ ರಚನಾ ಇಂದರ್ ನಟಿಸಿದ್ದಾರೆ. ಹೊಸಬರೊಂದಿಗೆ ಸಿನಿಮಾ ಹಾಗೂ ಪ್ರಚಾರದ ಬಗ್ಗೆ ಶಶಾಂಕ್ ಫಿಲ್ಮಿ ಬೀಟ್ ಜೊತೆ ಮಾಹಿತಿಯನ್ನು ಶೇರ್ ಮಾಡಿಕೊಂಡಿದ್ದಾರೆ.

ಉಪ್ಪಿ ಜೊತೆ ಲವ್ 360 ಪ್ರಚಾರ ಆರಂಭ

ಉಪ್ಪಿ ಜೊತೆ ಲವ್ 360 ಪ್ರಚಾರ ಆರಂಭ

ಶಶಾಂಕ್ 'ಲವ್ 360' ಸಿನಿಮಾದ ಪ್ರಚಾರ ಆರಂಭಿಸಿದ್ದಾರೆ. ಈ ಸಿನಿಮಾದ ಮೊದಲ ಹಾಡನ್ನು ಉಪೇಂದ್ರ ಅವರಿಎಗೆ ಕೇಳಿಸಿದ್ದು, ಅದನ್ನು ಪ್ರೋಮೊ ಮಾಡಿ ಬಿಟ್ಟಿದ್ದಾರೆ. ಈ ಪ್ರೋಮೊ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಪ್ರಚಾರ ತಂತ್ರದ ಬಗ್ಗೆ, ಹಾಡಿನ ಬಗ್ಗೆ ಶಶಾಂಕ್ ಹೀಗೆನ್ನುತ್ತಾರೆ. "ಲವ್ 360 ಅನ್ನುವಂತಹ ಒಂದು ಸಿನಿಮಾವಿದೆ ಅನ್ನುವುದು ಈಗಲೇ ಗೊತ್ತಾಗುತ್ತಿರೋದು. ಫಸ್ಟ್ ಲುಕ್ ಬಿಟ್ಟಿದ್ದೆವು. ಬಳಿಕ ನಾವು ಶೂಟಿಂಗ್‌ಗೆ ಹೊರಟು ಹೋದೆವು. ನಾನು ಕೆಲಸ ಮುಗಿಯುವ ವರೆಗೂ ಪ್ರಮೋಷನ್ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ಸಿನಿಮಾ ಮೊದಲು ರೆಡಿಯಾಗಬೇಕು ಅಂತಿತ್ತು. ಪೋಸ್ಟ್‌ ಪ್ರೊಡಕ್ಷನ್ ನಡೀತಿದೆ. ಈಗ ಸಿನಿಮಾ ಪ್ರಚಾರ ಶುರುಮಾಡಿದ್ದೇನೆ. ಈ ಸಿನಿಮಾದಲ್ಲಿ ಎಲ್ಲಾ ಹೊಸಬರು. ಸ್ಟಾರ್‌ಗಳಿಲ್ಲ ಕಂಟೆಂಟ್ ಇರುವ ಸಿನಿಮಾ.

ಮ್ಯೂಸಿಕ್ ಈ ಸಿನಿಮಾದಲ್ಲಿ ಹೈಲೈಟ್. ಆ ಸಾಂಗ್ ಅನ್ನುಸ್ಪೆಷಲ್ ಆಗಿ ರಿಲೀಸ್ ಮಾಡಿಸೋಣ ಅಂತ ಅನಿಸಿತ್ತು. ಉಪ್ಪಿ ಸರ್ ಬಳಿ ಹೋಗಿ ಒಂದು ಸಾಂಗ್ ರಿಲೀಸ್ ಮಾಡಿಸೋಣ ಅಂತ ಮೊದಲು ಅನಿಸಿತ್ತು. ಆಮೇಲೆ ಸಿಂಪಲ್ ಆಗಿ ರಿಲೀಸ್ ಮಾಡಿದರೆ ಮಾಮೂಲಿ ಅನಿಸುತ್ತೆ. ಉಪ್ಪಿ ಸರ್ ಅಂದರೆ, ನೇರವಾಗಿ ಮಾತಾಡ್ತಾರೆ, ಫಿಲ್ಟರ್ ಇಲ್ಲದೆ ಮಾತಾಡುತ್ತಾರೆ ಅನ್ನುವುದು ಗೊತ್ತಿದೆ. ಅದೇ ಪರ್ಸನಾಲಟಿ ಇಟ್ಕೊಂಡು, ಅವರನ್ನೇ ಇಟ್ಕೊಂಡು ಒಂದು ಪ್ರೋಮೊ ಮಾಡೋಣ ಅಂತ ಅನಿಸಿತ್ತು. ಅದನ್ನು ಅವರೊಂದಿಗೆ ಶೇರ್ ಮಾಡಿದೆ. ಅವರು ಚೆನ್ನಾಗಿದೆ ಮಾಡಿ ಗುರುವೇ ಅಂದರು. " ಎಂದು ಫಿಲ್ಮಿ ಬೀಟ್‌ಗೆ ತಿಳಿಸಿದ್ದಾರೆ.

ವಿಭಿನ್ನ ಪ್ರಚಾರದ ಹಿಂದಿದೆ 'ಕೃಷ್ಣಲೀಲಾ'

ವಿಭಿನ್ನ ಪ್ರಚಾರದ ಹಿಂದಿದೆ 'ಕೃಷ್ಣಲೀಲಾ'

"ಇವತ್ತು ಸುಮ್ಮನೆ ಒಂದು ಸಾಂಗ್ ಬಿಟ್ಟೆ, ಒಂದು ಪ್ರೋಮೊ ಬಿಟ್ಟೆ ಅಂದರೆ ಆಗಲ್ಲ. ಪ್ರತಿಯೊಂದು ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡಬೇಕು ನಾವು. ಇಂಟರ್‌ನೆಟ್‌ನಲ್ಲಿ ಸಾವಿರಾರು ವಿಡಿಯೋಗಳು ಹರಿದಾಡುತ್ತಿರುತ್ತೆ. ಅದರ ಮಧ್ಯೆ ನಮ್ಮದೊಂದು ಕಂಟೆಂಟ್ ಗುರುತಿಸಿಕೊಳ್ಳಬೇಕು ಅಂದರೆ, ಇಂತಹದ್ದೊಂದು ಏನಾದರೂ ಮಾಡಬೇಕು. ಇಂತಹದ್ದೊಂದು ಪ್ರೋಮೊವನ್ನು ನಾನು ಐದಾರು ವರ್ಷಗಳ ಹಿಂದೆನೇ ಮಾಡಿದ್ದೆ. ಕೃಷ್ಣ ಲೀಲಾ ಸಿನಿಮಾಗೆ ಇಂತಹದ್ದೊಂದು ಪ್ರೋಮೊ ಮಾಡಿದ್ದೆ. ಇವತ್ತು ಸೋಶಿಯಲ್ ಮೀಡಿಯಾ ರೀಚ್ ಆಗಿದೆ." ಎನ್ನುತ್ತಾರೆ ನಿರ್ದೇಶಕ ಶಶಾಂಕ್.

ಲವ್ 360ಯಲ್ಲಿದೆ ಮೂರು ಸಾಂಗ್

ಲವ್ 360ಯಲ್ಲಿದೆ ಮೂರು ಸಾಂಗ್

"ಈ ಸಿನಿಮಾದಲ್ಲಿ ಮೂರು ಸಾಂಗ್ ಇರುತ್ತೆ ಅಷ್ಟೆ. ಇದು ಮ್ಯೂಸಿಕಲ್ ಸಿನಿಮಾ ಅಲ್ಲ. ಆದರೆ, ಇರುವ ಮೂರು ಸಾಂಗೂ ಕಥೆಗೆ ಎಷ್ಟು ಬೇಕೋ ಅಷ್ಟು ಅನ್ನುವ ಹಾಗಿದೆ. ಈ ಮೂರು ಹಾಡುಗಳೂ ಕೂಡ ತುಂಬಾನೇ ಚೆನ್ನಾಗಿವೆ. ಅರ್ಜುನ್ ಜನ್ಯ ಈ ಹಾಡುಗಳನ್ನು ಕಂಪೋಸ್ ಮಾಡಿದ್ದಾರೆ. ಈ ಕಥೆ ಹೊಸಬರನ್ನೇ ಕೇಳುತ್ತಿತ್ತು. ಪ್ರತಿ ಸಿನಿಮಾ ಮಾಡುವಾಗಲೂ, ಆ ಕಥೆ ಏನು ಕೇಳುತ್ತದೆಯೋ ಅದನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ನಟ-ನಟಿಯರು, ಪ್ರೊಡಕ್ಷನ್ ಡಿಸೈನ್ ಎಲ್ಲವೂ ನನಗೆ ಅನಿಸಿದ್ದೇನೆ ಮಾಡಿದ್ದೇನೆ. " ಹಾಡುಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

'ಲವ್ 360' ತೆಲುಗಿನಲ್ಲೂ ರಿಲೀಸ್

'ಲವ್ 360' ತೆಲುಗಿನಲ್ಲೂ ರಿಲೀಸ್

"ನಮ್ಮ ಪ್ರೈಮರಿ ಲ್ಯಾಂಗ್ವೇಜ್ ಕನ್ನಡವೇ ಇದೆ. ನಮ್ಮ ಜನರಿಗೆ ಏನು ಬೇಕೋ ಅದನ್ನು ಕೊಟ್ಟಿದ್ದೇವೆ. ತೆಲುಗು ಭಾಷೆಗೆ ಅಂತ ನಾನು ಏನು ಮಾಡಿಲ್ಲ. ತೆಲುಗಿಗೆ ಡಬ್ ಮಾಡುತ್ತಿದ್ದೇವೆ ಅಷ್ಟೆ. ನಮ್ಮ ನೆಟಿವಿಟಿ ಸಿನಿಮಾವನ್ನೂ ಅವರೂ ನೋಡಲಿ ಅಂತ. ಇನ್ನು ಒಟ್ಟಿಗೆ ರಿಲೀಸ್ ಮಾಡಬೇಕಾ? ಅನ್ನುವುದನ್ನು ಚಿಂತಿಸುತ್ತಿದ್ದೇವೆ. ಸಿನಿಮಾ ಬಿಡುಗಡೆ ಸಮಯದಲ್ಲಿ ಅದರ ಬಗ್ಗೆ ಆಲೋಚನೆ ಮಾಡುತ್ತೇವೆ. ಸಿನಿಮಾ ಇನ್ನೂ ರೆಡಿಯಾಗುವುದಕ್ಕೆ ಎರಡು ತಿಂಗಳು ಬೇಕು. ಏಪ್ರಿಲ್‌ನಲ್ಲಿ ದೊಡ್ಡ ದೊಡ್ಡ ಸಿನಿಮಾವಿದೆ. ಹೀಗಾಗಿ ಮೇ ಬಳಿಕ ರಿಲೀಸ್ ಮಾಡುವ ಪ್ಲ್ಯಾನ್ ಮಾಡುತ್ತೇವೆ." ಎಂದು ಸಿನಿಮಾ ಬಿಡುಗಡೆ ಬಗ್ಗೆ ಮಾಹಿತಿ ನೀಡಿದ್ದಾರೆ.

More from Filmibeat

English summary
Shashank directed Love 360 movie promotion started with Upendra and Arjuna Janya. Shashank says he will be promoting this new comer movie songs differently.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X