ಸಂಗೀತ ಪ್ರಿಯರನ್ನು 'ಚೇಸ್' ಮಾಡಿ ಗೆದ್ದ ಮಸ್ತ್ ಹಾಡುಗಳು

ಕನ್ನಡದಲ್ಲಿ ಹಾಡುಗಳ ಮೂಲಕವೇ ಸದ್ದು ಮಾಡುತ್ತಿರುವ ಸಿನಿಮಾ 'ಚೇಸ್'. ಸಿನಿಮಾ ಒಂದೊಂದು ಹಾಡು ಕೂಡ ಸಂಗೀತ ಪ್ರಿಯರನ್ನು ಸೇಳೆಯುತ್ತಿದೆ. ವಿಲೋಕ್ ಶೆಟ್ಟಿ ನಿರ್ದೇಶನದ ಇದೇ 'ಚೇಸ್' ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. 'ಚೇಸ್' ಸಿನಿಮಾ ಇದೂವರೆಗೂ ಒಂದಲ್ಲ ಒಂದು ಕಾರಣಕ್ಕೆಸೋಶಿಯಲ್‌ ಮೀಡಿಯಾಗಳಲ್ಲಿ ಚರ್ಚೆಯಲ್ಲಿದ್ದು, ಮೆಚ್ಚುಗೆ ಪಡೆದುಕೊಂಡಿದೆ. ಈಗಾಗಲೇ ಸಿನಿಮಾದ ಬಗ್ಗೆ ಕುತೂಹಲವನ್ನು ಕೆರಳಿಸಿದೆ.

'ಚೇಸ್' ಚಿತ್ರತಂಡ ಸದ್ಯ ಶೂಟಿಂಗ್ ಮುಗಿಸಿದ್ದು, ಬಿಡುಗಡೆಯ ಬಗ್ಗೆ ಅತೀ ಶೀಘ್ರದಲ್ಲಿ ಮಾಹಿತಿಯನ್ನು ಹಂಚಿಕೊಳ್ಳಲಿದೆ. ಸದ್ಯ ಸಿನಿಮಾ ಸೆನ್ಸಾರ್ ಕೆಲಸದಲ್ಲಿ ಬ್ಯುಸಿಯಾಗಿದ್ದು, ಫುಲ್ ಸ್ವಿಂಗ್‌ನಲ್ಲಿ ಪ್ರಚಾರ ಮಾಡುತ್ತಿದೆ. ಇದರ ಮೊದಲ ಹಂತವಾಗಿ 'ಚೇಸ್' ಸಿನಿಮಾ ತಂಡ ಆಡಿಯೋ ಜುಕ್ ಬಾಕ್ಸ್ ಅನ್ನು ಬಿಡುಗಡೆ ಮಾಡಿದೆ.

Sheetal Shetty, Radhika Narayan Movie Chase Audio Juke Box Got Good Response

'ಚೇಸ್' ಸಿನಿಮಾದಲ್ಲಿ ಕಲರ್ ಫುಲ್ ಸಾಂಗ್‌ಗಳಿದ್ದು, ಈಗಾಗಲೇ ಲಿರಿಕಲ್ ವೀಡಿಯೋ ಮೂಲಕ ಎಲ್ಲರ ಮನೆ ಮನ ತಲುಪಿವೆ. ಇದೀಗ ಅಷ್ಟು ಹಾಡುಗಳ ಜುಕ್ ಬಾಕ್ಸ್ ಬಿಡುಗಡೆ ಮಾಡಿ ಕೇಳುಗರ ಮನಗೆದ್ದಿದೆ. ಚೇಸ್ ಸಿನಿಮಾದಲ್ಲಿ ಒಟ್ಟು ಆರು ಹಾಡುಗಳಿವೆ. ಅದರಲ್ಲಿ ನಾಲ್ಕು ಡ್ಯುಯೆಟ್ ಸಾಂಗ್‌ಗಳಿವೆ. ಈ ಸಿನಿಮಾದ ವಿಶೇಷ ಅಂದ್ರೆ, ಸಿನಿಮಾದಲ್ಲಿ ಥ್ರಿಲ್ಲರ್ ಟ್ರ್ಯಾಕ್ ಕೂಡ ಇದೆ.

Sheetal Shetty, Radhika Narayan Movie Chase Audio Juke Box Got Good Response

ಕಾರ್ತಿಕ್ ಆಚಾರ್ಯ ಕಂಪೋಸ್ ಮಾಡಿರುವ ಪ್ರತಿ ಹಾಡೂ ಕಥೆಯೊಂದಿಗೆ ಸಾಗುತ್ತವೆ. ಸಿನಿಮಾದಲ್ಲಿ ಯಾವ ಹಾಡನ್ನೂ ಬೇಕೆಂದು ತೂರಿಸಿಲ್ಲ ಎನ್ನುತ್ತಿದ್ದಾರೆ ನಿರ್ದೇಶಕ ವಿಲೋಕ್ ಶೆಟ್ಟಿ. ಅಂದ್ಹಾಗೆ, ವಿಜಯ್ ಪ್ರಕಾಶ್, ಸಂಚಿತ್ ಹೆಗ್ಡೆ, ಬಿನ್ನಿ ದಯಾಳ್, ಅನುರಾಧ ಭಟ್, ಹರೀಶ್ ವೆಂಕಟ್, ಮಕ್ಬೂಲ್ ಮನ್ಸೂರ್ ಮಹಮ್ಮದ್ ಹಾಡುಗಳಿಗೆ ಧ್ವನಿ ನೀಡಿರುವುದು ವಿಶೇಷ.

Sheetal Shetty, Radhika Narayan Movie Chase Audio Juke Box Got Good Response

ಡಾ. ಉಮೇಶ್ ಪಿಲಿಕುಡೇಲು ಈ ಚೇಸ್ ಸಿನಿಮಾಗೆ ಸಾಹಿತ್ಯ ರಚಿಸಿದ್ದಾರೆ. ರಾಧಿಕಾ ನಾರಾಯಣ್, ಸುಶಾಂತ್ ಪೂಜಾರಿ, ಅವಿನಾಶ್, ಶೀತಲ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಸ್ಪೆನ್ಸ್ ಆಕ್ಷನ್ ಥ್ರಿಲ್ಲರ್ ಕಥೆ ಹೊಂದಿದ್ದು, ಇದೊಂದು ಪಕ್ಕಾ ಕೌಟುಂಬಿಕ ಸಿನಿಮಾ ಎನ್ನುತ್ತಿದೆ ಚಿತ್ರತಂಡ. ಸ್ಟೋರಿ ಜೊತೆನೇ ಕಮರ್ಶಿಯಲ್ ಎಳೆಯೊಂದಿಗೆ ಈ ಸಿನಿಮಾ ಮೂಡಿ ಬಂದಿದೆ.

Sheetal Shetty, Radhika Narayan Movie Chase Audio Juke Box Got Good Response

ಸಿಂಪ್ಲಿಫನ್ ಮೀಡಿಯಾದ ಮನೋಹರ್ ಸುವರ್ಣ, ಪ್ರದೀಪ್ ಶೆಟ್ಟಿ, ಪ್ರಶಾಂತ್ ಶೆಟ್ಟಿ ಈ ಸಿನಿಮಾಗೆ ಬಂಡವಾಳ ಹೂಡಿದ್ದು, ಶಿವ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ಶ್ರೀ ಕ್ರೇಜಿ ಮೈಂಡ್ಸ್ ಎಡಿಟಿಂಗ್, ಅನಂತ ರಾಜ್ ಅರಸ್ ಕ್ಯಾಮೆರಾ ಕೈಚಳಕ ಚಿತ್ರಕ್ಕಿದೆ. ಪ್ರಮೋದ್ ಶೆಟ್ಟಿ, ಅರ್ಜುನ್ ಯೋಗೇಶ್ ರಾಜ್, ಸುಶಾಂತ್ ಪೂಜಾರಿ, ಸುಧಾ ಬೆಳವಾಡಿ, ರಾಜೇಶ್ ನಟರಂಗ, ಅರವಿಂದ್ ಬೋಳಾರ್, ರೆಹಮಾನ್ ಹಾಸನ್ ಒಳಗೊಂಡ ದೊಡ್ಡ ಕಲಾವಿದರ ದಂಡೇ ಈ ಸಿನಿಮಾದಲ್ಲಿದೆ.

More from Filmibeat

English summary
Sheetal Shetty, Radhika Narayan Movie Chase Audio Juke Box Got Good Response,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X