ಗರ್ಭಿಣಿಯಾಗಿರುವುದನ್ನು ಹಾಡಿನ ಮೂಲಕವೇ ತಿಳಿಸಿದ ಗಾಯಕಿ
ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಗಾಯಕಿ ಕ್ಯಾಟಿ ಪೆರ್ರಿ, ತಾವು ಗರ್ಭಿಣಿಯಾಗಿರುವುದರನ್ನು ಹಾಡಿನ ಮೂಲಕವೇ ವಿಶೇಷವಾಗಿ ಬಹಿರಂಗಪಡಿಸಿದ್ದಾರೆ. ನಟ, ಸಂಗಾತಿ ಒರ್ಲ್ಯಾಂಡೋ ಬ್ಲೂಮ್ ಹಾಗೂ ತಾವು ಪೋಷಕರಾಗುತ್ತಿರುವ ಮಾಹಿತಿಯನ್ನು ಪೆರ್ರಿ ತಮ್ಮ ಹೊಸ 'ನೆವರ್ ವಾರ್ನ್ ವೈಟ್' ಹಾಡಿನ ವಿಡಿಯೋ ಮೂಲಕ ಗುರುವಾರ ಹೊರಗಡೆವಿದ್ದಾರೆ.
ವಿಡಿಯೋ ಸೆಟ್‌ನಲ್ಲಿ ತೆಗೆದ ತಮ್ಮ ಉಬ್ಬಿದ ಹೊಟ್ಟೆಯ ಚಿತ್ರವನ್ನು ಪೆರ್ರಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ತಾವು ತಾಯಿಯಾಗುತ್ತಿರುವ ಸಂಗತಿಯನ್ನು ಪೆರ್ರಿ (35), ಯೂಟ್ಯೂಬ್‌ನಲ್ಲಿ ಮ್ಯೂಸಿಕ್ ವಿಡಿಯೋ ಪ್ರಸಾರವಾದ ಬಳಿಕನ ಇನ್‌ಸ್ಟಾಗ್ರಾಂ ಲೈವ್‌ನಲ್ಲಿ ಖಾತರಿಪಡಿಸಿದ್ದಾರೆ. ಇದು ತಮ್ಮ ಬದುಕಿನಲ್ಲಿ ಅತಿ ಹೆಚ್ಚು ಸಮಯ ಕಾಪಾಡಿಕೊಂಡಿರಬಹುದಾದ ಗುಟ್ಟು ಎಂದು ತಿಳಿಸಿದ್ದಾರೆ.

ಖಾತರಿಪಡಿಸಿದ ಪೆರ್ರಿ
'ನಾನು ಸಾಕಷ್ಟು ತಡಮಾಡಿದೆ. ಆದರೆ ನಿಮಗೆ ಈಗಾಗಲೇ ಅದು ಗೊತ್ತಾಗಿದೆ' ಎಂದು 'ಫೈರ್ ವರ್ಕ್' ಖ್ಯಾತಿಯ ಪೆರ್ರಿ, ಹಾಡಿನ ವಿಡಿಯೋ ವೈರಲ್ ಆದ ಬಳಿಕ ಶೀಘ್ರದಲ್ಲಿಯೇ ಲೈವ್ ಬರುವುದಾಗಿ ತಿಳಿಸಿದ್ದರು. ಅದರಂತೆ ಇನ್‌ಸ್ಟಾಗ್ರಾಂನಲ್ಲಿ ಲೈವ್ ವೇಳೆ ಈ ಸಂಗತಿಯನ್ನು ಖಚಿತಪಡಿಸಿದ್ದಾರೆ.

ತಾಯ್ತನದ ಖುಷಿಗಾಗಿ ಕಾತರ
ಸಾಮಾನ್ಯವಾಗಿ ಹಾಲಿವುಡ್ ಕಲಾವಿದರು ತಮ್ಮ ಮಗುವಿನ ಲಿಂಗವನ್ನು ಬಹಿರಂಗಪಡಿಸುತ್ತಾರೆ. ಆದರೆ ಪೆರ್ರಿ ಅದನ್ನು ತಿಳಿಸಿಲ್ಲ. ಈ ಬೇಸಿಗೆಯಲ್ಲಿ ಮಗುವಿಗೆ ಜನ್ಮ ನೀಡುವುದಾಗಿ ಹೇಳಿದ್ದಾರೆ. ಇದು ಪರ್ರಿ ಅವರ ಚೊಚ್ಚಲ ಮಗುವಾಗಿದೆ. ಹಾಗಾಗಿ ತಾಯ್ತನದ ಸುಖ ಅನುಭವಿಸಲು ಕಾತರರಾಗಿರುವುದಾಗಿ ತಿಳಿಸಿದ್ದಾರೆ.

ಬೇಸಿಗೆಯಲ್ಲಿ ಎರಡು ಖುಷಿ
'ಈ ಬೇಸಿಗೆಯಲ್ಲಿ ಸಾಕಷ್ಟು ಸಂಗತಿಗಳು ಸಂಭವಿಸುವುದಿದೆ. ನಾನು ಮಗುವಿಗೆ ಜನ್ಮ ನೀಡುತ್ತಿರುವುದು ಮಾತ್ರವಲ್ಲ, ನೀವು ಯಾವುದಕ್ಕೆ ಕಾದಿದ್ದೀರೋ ಆ ಹೊಸ ಆಲ್ಬಮ್ ಕೂಡ ಬರಲಿದೆ' ಎಂದಿದ್ದಾರೆ. ತಾವು ಹಾಗೂ ತಮ್ಮ ಸಂಗಾತಿ ಇಬ್ಬರೂ ಈ ಗಳಿಗೆಗೆ ಸಂತೋಷ ಮತ್ತು ಹುಮ್ಮಸ್ಸಿನಿಂದ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.

ಇನ್ನೂ ಮದುವೆಯಾಗಿಲ್ಲ
ಪೆರ್ರಿ ಅವರ ಗೆಳೆಯ ಬ್ಲೂಮ್ (43) ಈ ಮೊದಲು ಸೂಪರ್ ಮಾಡೆಲ್ ಮಿರಾಂಡಾ ಕೆರ್ರ್ ಅವರನ್ನು ಮದುವೆಯಾಗಿದ್ದರು. ಅವರಿಗೆ 9 ವರ್ಷದ ಮಗನಿದ್ದಾನೆ. ಹಾಗೆಯೇ ಪೆರ್ರಿ ಬ್ರಿಟಿಷ್ ಹಾಸ್ಯ ಕಲಾವಿದ ರಸೆಲ್ ಬ್ರ್ಯಾಂಡ್ ಜತೆ ಎರಡು ವರ್ಷ ಸಂಸಾರ ನಡೆಸಿದ್ದರು. ಈಗ ಮಗುವಿನ ನಿರೀಕ್ಷೆಯಲ್ಲಿ ಪೆರ್ರಿ-ಬ್ಲೂಮ್ ಜೋಡಿ, ಮದುವೆಯಾಗಲು ಚಿಂತನೆ ನಡೆಸಿದ್ದಾರೆ.


Click it and Unblock the Notifications











