ಗಾಯಕಿ ಶ್ರೇಯಾ ಘೋಷಾಲ್ ಗಂಡ 1406 ಕೋಟಿ ಕಂಪನಿಗೆ ಗ್ಲೋಬಲ್ ಹೆಡ್; 'ಮುಂಗಾರು ಮಳೆ' ಸಿಂಗರ್ ಆಸ್ತಿ ಎಷ್ಟು?
ಶ್ರೇಯಾ ಘೋಷಾಲ್ ಕಂಠಕ್ಕೆ ಮರುಳಾಗದವರು ಯಾರಿದ್ದಾರೆ ಹೇಳಿ. ಈಕೆ ಯಾವುದೇ ಭಾಷೆಯಲ್ಲಿ ಹಾಡಿದರೂ ಮತ್ತೊಮ್ಮೆ, ಮಗದೊಮ್ಮೆ ಕೇಳಬೇಕು ಅಂತ ಅನಿಸುತ್ತೆ. ನೋಡೋಕೂ ಸುಂದರ. ಧ್ವನಿಯೂ ಅಷ್ಟೇ ಮಧುರ. ಶ್ರೇಯಾ ಕನ್ನಡದಲ್ಲಿಯೇ ಸುಮಾರು 300ಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. ಇವುಗಳಲ್ಲಿ ಬಹುತೇಕ ಹಾಡುಗಳು ಸೂಪರ್ ಹಿಟ್ ಲಿಸ್ಟ್ ಸೇರಿವೆ.
ಬಹುಭಾಷಾ ಗಾಯಕಿ ಶ್ರೇಯಾ ಘೋಷಾಲ್ ಸುಮಾರು 14 ಭಾಷೆಯಲ್ಲಿ ಹಾಡುಗಳನ್ನು ಹಾಡಿದ್ದಾರೆ. ಅವರ ವೃತ್ತಿ ಬದುಕಿನಲ್ಲಿ ಇದೂವರೆಗೂ ಸಾವಿರಾರು ಹಾಡುಗಳಿಗೆ ಧ್ವನಿ ನೀಡಿದ್ದಾರೆ. 2003ರಲ್ಲಿಯೇ ಶ್ರೇಯಾ ಘೋಷಾಲ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಹಿಂದಿ ಹಾಡುಗಳನ್ನು ಬಿಟ್ಟರೆ, ಅತೀ ಹೆಚ್ಚು ಹಾಡುಗಳನ್ನು ಹಾಡಿದ್ದು ಕನ್ನಡದಲ್ಲಿಯೇ.

ಈಕೆ ಭಾರತದಲ್ಲಿಯೇ ಅತೀ ಹೆಚ್ಚು ಸಂಭಾವನೆ ಪಡೆಯುವ ಗಾಯಕಿ. ಭಾರತದ ಶ್ರೀಮಂತ ಗಾಯಕಿಯರಲ್ಲಿ ಇವರು ಕೂಡ ಒಬ್ಬರು. ಶ್ರೇಯಾ ಘೋಷಾಲ್ ಅವರಷ್ಟೇ ಅವರ ಪತಿ ಕುರಿತ ಮಾಹಿತಿ ಕೂಡ ಅಷ್ಟೇ ಇಂಟ್ರೆಸ್ಟಿಂಗ್. ಸಾವಿರಾರು ಕೋಟಿ ಲಾಭ ಮಾಡುವ ಕಂಪನಿಗೆ ಗ್ಲೋಬಲ್ ಹೆಡ್. ಅಷ್ಟಕ್ಕೂ ಶ್ರೇಯಾ ಘೋಷಾಲ್ ಪತಿ ಯಾರು? ಅವರ ಹಿನ್ನೆಲೆಯೇನು? ಈ ಗಾಯಕಿಯ ಒಟ್ಟು ಆಸ್ತಿ ಎಷ್ಟು ತಿಳಿಯಲು ಮುಂದೆ ಓದಿ.
ಭಾರತದ ದುಬಾರಿ ಗಾಯಕಿ ಶ್ರೇಯಾ ಘೋಷಾಲ್ ಪತಿ ಶಿಲಾಧಿತ್ಯ ಮುಖ್ಯೋಪಾಧ್ಯಾಯ. ಇಬ್ಬರೂ ಕೋಲ್ಕತ್ತಾ ಮೂಲದವರು. ಶ್ರೇಯಾ ಗಾಯನದ ಕ್ಷೇತ್ರದಲ್ಲಿ ಬ್ಯುಸಿಯಾಗಿದ್ದರೆ, ಅವರ ಪತಿ ಕಾರ್ಪೋರೆಟ್ ಕ್ಷೇತ್ರದಲ್ಲಿ ಬ್ಯುಸಿ. ಇಬ್ಬರೂ ವೃತ್ತಿ ಜೀವನದ ಬೇರೆಯಾಗಿದ್ದರೂ ಬರೊಬ್ಬರಿ 9 ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದಾರೆ. ಇಬ್ಬರಿಗೂ ನಾಲ್ಕು ವರ್ಷದ ಮುದ್ದಾದ ಮಗನಿದ್ದಾನೆ.

ಭಾರತದಲ್ಲಿ ಸ್ಮಾರ್ಟ್ ಫೋನ್ ಬಳಸುವ ಬಹುತೇಕ ಮಂದಿಗೆ 'ಟ್ರುಕಾಲರ್' ಬಗ್ಗೆ ಗೊತ್ತೇ ಇರುತ್ತೆ. ಕರೆ ಮಾಡುವ ಐಡಿಗಳನ್ನು ಗುರುತಿಸುವ ಈ ಆಪ್ ಅನ್ನು ವಿಶ್ವದಾದ್ಯಂತ ಸುಮಾರು 374 ಮಿಲಿಯನ್ ಮಂದಿ ಬಳಕೆ ಮಾಡುತ್ತಾರೆ. ಗಾಯಕಿ ಶ್ರೇಯಾ ಘೋಷಾಲ್ ಪತಿ ಶಿಲಾಧಿತ್ಯ ಮುಖ್ಯೋಪಾಧ್ಯಾಯ ಅದೇ ಕಂಪನಿಯ ಗ್ಲೋಬಲ್ ಹೆಡ್ ಆಗಿದ್ದಾರೆ. ಈ ಕಂಪನಿ 2023ರಲ್ಲಿ ಬರೋಬ್ಬರಿ 1406 ಕೋಟಿ ರೂಪಾಯಿ ಲಾಭ ಮಾಡಿತ್ತು. ಇದು ದೊಡ್ಡ ಕಂಪನಿಯ ಗ್ಲೋಬಲ್ ಹೆಡ್ ಆಗಿ ಕೆಲಸ ಮಾಡುತ್ತಿದ್ದಾರೆ. 2022ರಿಂದಲೂ ಕೆಲಸ ಮಾಡುತ್ತಿರುವ ಶಿಲಾಧಿತ್ಯ ಮುಖ್ಯೋಪಾಧ್ಯಾಯ ಕೂಡ ನೂರಾರು ಕೋಟಿ ಸಂಪಾಧನೆ ಮಾಡುತ್ತಾರೆ. ನಿಖರವಾದ ಆಸ್ತಿ ಎಷ್ಟು ಅನ್ನುವ ಬಗ್ಗೆ ಮಾಹಿತಿಯಿಲ್ಲ.
ಇತ್ತ ಗಾಯಕಿ ಶ್ರೇಯಾ ಘೋಷಾಲ್ ಏನೂ ಕಮ್ಮಿಯಿಲ್ಲ. ಸಿನಿಮಾಗಳು ಅಷ್ಟೇ ಅಲ್ಲದೆ ವಿಶ್ವದಾದ್ಯಂತ ಸಂಗೀತ ಸಂಜೆಗಳನ್ನು ನೀಡುವ ಶ್ರೇಯಾ ಕೋಟಿ ಲೆಕ್ಕದಲ್ಲಿ ಚಾರ್ಜ್ ಮಾಡುತ್ತಾರೆ. ಇದರೊಂದಿಗೆ ಸಿನಿಮಾಗಳಲ್ಲಿ ಹಾಡುವುದಕ್ಕೂ ಲಕ್ಷದಲ್ಲಿ ಹಣ ಕೇಳುತ್ತಾರೆ. ಒಂದು ಹಿಂದಿ ಹಾಡಿಗೆ ಶ್ರೇಯಾ ಘೋಷಾಲ್ ಸುಮಾರು 25 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆಂದು ವರದಿಯಾಗಿದೆ. ಹಾಗೇ ಇವರ ಆಸ್ತಿ ಸುಮಾರು 210 ಕೋಟಿ ರೂ. ಎಂದು ಹೇಳಲಾಗುತ್ತಿದೆ.
ಉದ್ಯಮಿ ಶಿಲಾಧಿತ್ಯ ಮುಖ್ಯೋಪಾಧ್ಯಾಯ ಈಗಾಗಲೇ ಎರಡು ಸ್ಟಾರ್ಟ್‌ಅಪ್‌ಗಳನ್ನು ಶುರು ಮಾಡಿದ್ದಾರೆ. 'ಹಿಪ್‌ಕಾಸ್ಕ್' ಹಾಗೂ 'ಪಾಯಿಂಟ್ ಶೆಲ್ಫ್' ಸ್ಟಾರ್ಟ್‌ಅಪ್‌ಗಳ ಮಾಲೀಕ ಕೂಡ ಹೌದು. ಶ್ರೇಯಾ ಹಾಗೂ ಶಿಲಾಧಿತ್ಯ ಮುಖ್ಯೋಪಾಧ್ಯಾಯ ಇಬ್ಬರೂ ಬಾಲ್ಯ ಸ್ನೇಹಿತರು. ಇಬ್ಬರು ಸುಮಾರು 9 ವರ್ಷಗಳ ಕಾಲ ಡೇಟಿಂಗ್ ಮಾಡಿದ್ದರು. 2015ರಲ್ಲಿ ಎರಡೂ ಕುಟುಂಬಗಳ ಸಮ್ಮುಖದಲ್ಲಿ ಬೆಂಗಾಲಿ ಸಂಪ್ರದಾಯದಂತೆ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.


Click it and Unblock the Notifications











