ಮತ್ತೆ ಸಿಡಿದೆದ್ದ ಸೋನು ನಿಗಂ: ಟಿ-ಸೀರೀಸ್ ಕಂಪೆನಿ ಎಂ.ಡಿ.ಗೆ ಎಚ್ಚರಿಕೆ
ಬಾಲಿವುಡ್‌ನ ಸಂಗೀತ ಕ್ಷೇತ್ರ ಇಬ್ಬರು ದೈತ್ಯರ ಹಿಡಿತದಲ್ಲಿದೆ ಎಂದು ಕೆಲವು ದಿನಗಳ ಹಿಂದೆ ವಿಡಿಯೋದಲ್ಲಿ ಆರೋಪಿಸಿದ್ದ ಖ್ಯಾತ ಗಾಯಕ ಸೋನು ನಿಗಂ, ಮತ್ತೊಂದು ವಿಡಿಯೋದಲ್ಲಿ ಮ್ಯೂಸಿಕ್ ಮಾಫಿಯಾದ ಹೆಸರನ್ನು ಬಹಿರಂಗವಾಗಿ ಹೇಳಿದ್ದಾರೆ.
Recommended Video
ಮೊದಲ ವಿಡಿಯೋದಲ್ಲಿ ಪರೋಕ್ಷವಾಗಿ ನಟ ಹಾಗೂ ಸಂಗೀತ ಕಂಪೆನಿಗಳ ಮೇಲೆ ವಾಗ್ದಾಳಿ ನಡೆಸಿದ್ದ ಸೋನು, ಬಾಲಿವುಡ್‌ನ ಬೃಹತ್ ಸಂಗೀತ ಕಂಪೆನಿ ಟಿ-ಸೀರೀಸ್‌ನ ಅಧ್ಯಕ್ಷ ಮತ್ತು ಎಂಡಿ ಭೂಷಣ್ ಕುಮಾರ್ ವಿರುದ್ಧ ಕಿಡಿಕಾರಿದ್ದಾರೆ.
ಸೋಮವಾರ ಬೆಳಿಗ್ಗೆ ಇನ್‌ಸ್ಟಾಗ್ರಾಂನಲ್ಲಿ ಹೊಸ ವಿಡಿಯೋ ಶೇರ್ ಮಾಡಿರುವ ಸೋನು ನಿಗಂ, 'ಪದಗಳ ಮೂಲಕ ಈಗ ವಕ್ರ ಮಾಫಿಯಾಕ್ಕೆ ಕಾರಣಗಳನ್ನು ಹೇಳಲು ಸಾಧ್ಯವಿಲ್ಲ' ಎಂದು ಕ್ಯಾಪ್ಷನ್ ನೀಡಿದ್ದಾರೆ. ಮುಂದೆ ಓದಿ...

ಸುಮ್ಮನೆ ಕಿರಿಕ್ ಮಾಡಿಕೊಂಡಿದ್ದೀರಿ
'ಭೂಷಣ್ ಕುಮಾರ್, ನಾನು ಈಗ ನಿಮ್ಮ ಹೆಸರನ್ನು ಉಲ್ಲೇಖಿಸಲೇಬೇಕು. ಈಗ ನಿಮಗೆ ಗೌರವ ನೀಡದೆ ಮಾತನಾಡಬೇಕಿದೆ. ನೀವು ತಪ್ಪಾದ ವ್ಯಕ್ತಿ ಜತೆ ಕಿರಿಕ್ ಮಾಡಿಕೊಳ್ಳುತ್ತಿದ್ದೀರಿ' ಎಂದು ಟಿ ಸೀರೀಸ್ ಅಧ್ಯಕ್ಷನ ವಿರುದ್ಧ ಹರಿಹಾಯ್ದಿದ್ದಾರೆ.

ಎಚ್ಚರಿಕೆ ನೀಡುತ್ತಿದ್ದೇನೆ?
ನನಗೆ ಮನವಿ ಮಾಡುತ್ತಾ ನನ್ನ ಮನೆಗೆ ಬಂದಿದ್ದ ಸಮಯವನ್ನು ನೀವು ನೆನಪಿಸಿಕೊಳ್ಳುತ್ತೀರಾ? 'ಅಣ್ಣ ನನಗೆ ಒಂದು ಆಲ್ಬಂ ಮಾಡಿಕೊಡಿ. ಅಣ್ಣ ನನಗೆ ದೀವಾನಾ ರೆಕಾರ್ಡ್ ಮಾಡಿ ಕೊಡಿ. ಅಣ್ಣ, ಸ್ಮಿತಾ ಠಾಕ್ರೆ ಮತ್ತು ಬಾಳ ಠಾಕ್ರೆ ಅವರಿಗೆ ನನ್ನ ಪರಿಚಯ ಮಾಡಿಕೊಡಿ. ಅಬು ಸಲೇಂನಿಂದ ನನ್ನನ್ನು ರಕ್ಷಿಸಿ. ಅಬು ಸಲೇಂ ನನ್ನನ್ನು ನಿಂದಿಸುತ್ತಿದ್ದಾನೆ. ನಿಮಗೆ ನೆನಪಿದೆಯೇ? ನನ್ನ ಜತೆ ಇದನ್ನೆಲ್ಲ ಇಟ್ಟುಕೊಳ್ಳಬೇಡಿ, ನಿಮಗೆ ಎಚ್ಚರಿಕೆ ನೀಡುತ್ತಿದ್ದೇನೆ.

ಮರೀನಾ ಕನ್ವರ್ ವಿಡಿಯೋ ಇದೆ
ಮರೀನಾ ಕನ್ವರ್ ನಿಮಗೆ ನೆನಪಿದ್ದಾರೆಯೇ? ಅವರನ್ನು ಏಕೆ ಹೊರಹಾಕಲಾಯಿತು ನನಗೆ ತಿಳಿದಿಲ್ಲ. ಆದರೆ ಮಾಫಿಯಾ ಹೇಗೆ ಕೆಲಸ ಮಾಡುತ್ತದೆ ಎಂದು ಮಾಧ್ಯಮಕ್ಕೆ ಗೊತ್ತು. ಆ ವಿಡಿಯೋ ನನ್ನ ಬಳಿ ಈಗಲೂ ಇದೆ. ನೀವು ನನ್ನ ಜತೆ ಕಿರಿಕ್ ಮಾಡಿದರೆ ಆ ವಿಡಿಯೋವನ್ನು ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ಲೋಡ್ ಮಾಡುತ್ತೇನೆ. ಹೀಗಾಗಿ ನನ್ನ ಜತೆ ಕಿರಿಕ್ ಮಾಡಬೇಡಿ ಎಂದು ಸೋನು ಹೇಳಿದ್ದಾರೆ.

ಆತ್ಮಹತ್ಯೆ ಸುದ್ದಿ ಕೇಳಬಹುದು
ಶುಕ್ರವಾರ ವಿಡಿಯೋವೊಂದನ್ನು ಶೇರ್ ಮಾಡಿದ್ದ ಸೋನು ನಿಗಂ, ಬಾಲಿವುಡ್‌ನ ಸಂಗೀತ ಕ್ಷೇತ್ರ ಎರಡು ಬಲಿಷ್ಠ ಕಂಪೆನಿಗಳ ಹಿಡಿತದಲ್ಲಿದೆ. ಇಲ್ಲಿ ಹೊಸಬರಿಗೆ ಸರಿಯಾದ ಅವಕಾಶಗಳು ಸಿಗುತ್ತಿಲ್ಲ. ಹೀಗೆಯೇ ಇದ್ದರೆ ಸಂಗೀತ ಕ್ಷೇತ್ರದಲ್ಲಿಯೂ ಆತ್ಮಹತ್ಯೆಯ ಸುದ್ದಿ ಕೇಳಬಹುದು ಎಂದಿದ್ದರು.


Click it and Unblock the Notifications










