For Quick Alerts
  ALLOW NOTIFICATIONS  
  For Daily Alerts

  'ಪೊಗರು' ಚಿತ್ರದ 'ಖರಾಬು' ಹಾಡಿಗೆ ತೆಲುಗಿನಲ್ಲಿಯೂ ಭರ್ಜರಿ ರೆಸ್ಪಾನ್ಸ್

  |

  ಧ್ರುವ ಸರ್ಜಾ ಅಭಿನಯದ 'ಪೊಗರು' ಚಿತ್ರದ ಸೂಪರ್ ಹಿಟ್ ಹಾಡು 'ಖರಾಬು' ಗೀತೆಯ ತೆಲುಗು ಆವೃತ್ತಿ ಗುರುವಾರ ಬಿಡುಗಡೆಯಾಗಿದೆ. ನಂದಕಿಶೋರ್ ನಿರ್ದೇಶನದ ಈ ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತ ನೀಡಿದ್ದಾರೆ. ಅವರೇ ಬರೆದು ಹಾಡಿರುವ 'ಖರಾಬು ಬಾಸು ಖರಾಬು' ಹಾಡು ಯೂಟ್ಯೂಬ್‌ನಲ್ಲಿ ಚಿಂದಿ ಎಬ್ಬಿಸಿದೆ.

  ಇನ್ನೂ ರಾಕಿ ಭಾಯ್ Poster ನೋಡಿದ್ರೆ ಕಳೆದು ಹೋಗುತ್ತೀರ | Garuda Ram | Part 2 | Filmibeat Kannada

  ಏಪ್ರಿಲ್‌ನಲ್ಲಿ ಈ ಹಾಡು ಬಿಡುಗಡೆಯಾಗಿತ್ತು. ಈ ನಾಲ್ಕು ತಿಂಗಳ ಅವಧಿಯಲ್ಲಿಯೇ 'ಖರಾಬು' ಹಾಡು 100 ಮಿಲಿಯನ್ ವೀಕ್ಷಣೆ ಪಡೆದು ಕನ್ನಡ ಚಿತ್ರರಂಗದಲ್ಲಿ ದಾಖಲೆ ನಿರ್ಮಿಸಿದೆ. ಧ್ರುವ ಸರ್ಜಾ ಮತ್ತು ರಶ್ಮಿಕಾ ಮಂದಣ್ಣ ಮುಖ್ಯ ಪಾತ್ರಗಳಲ್ಲಿ ನಟಿಸಿರುವ 'ಪೊಗರು' ಚಿತ್ರದ ಹಾಡಿನ ಕ್ರೇಜ್ ಬೇರೆ ರಾಜ್ಯಗಳಿಗೂ ತಲುಪಿದೆ. ನಟಿ ರಶ್ಮಿಕಾ ಮಂದಣ್ಣ ಈಗಾಗಲೇ ತೆಲುಗಿನಲ್ಲಿ ಸಾಕಷ್ಟು ಜನಪ್ರಿಯತೆ ಹೊಂದಿದ್ದಾರೆ. ಜತೆಗೆ ತೆಲುಗಿನ ಅನೇಕರು ಈ ಹಾಡನ್ನು ಮೆಚ್ಚಿಕೊಂಡು ಕಾಮೆಂಟ್ ಹಾಕುತ್ತಿದ್ದರು. ಇದನ್ನು ಗಮನಿಸಿದ ಚಿತ್ರತಂಡ 'ಖರಾಬು' ಹಾಡಿನ ತೆಲುಗು ಅವತರಣಿಕೆಯನ್ನು ಸಿದ್ಧಪಡಿಸಿ ಬಿಡುಗಡೆ ಮಾಡಿದೆ.

  ಧ್ರುವ ಸರ್ಜಾ 'ಖರಾಬು' ಹಾಡನ್ನು ತೆಲುಗಿನಲ್ಲಿಯೂ ಕೇಳಲು ರೆಡಿಯಾಗಿ

  ಕನ್ನಡದಲ್ಲಿ ಇದರ ಸಾಹಿತ್ಯವನ್ನು ಚಂದನ್ ಶೆಟ್ಟಿ ಬರೆದಿದ್ದರು. ತೆಲುಗಿನಲ್ಲಿ ಭಾಸ್ಕರಬಟ್ಲಾ ರವಿ ಬರೆದಿದ್ದಾರೆ. ಕನ್ನಡ ಹಾಡನ್ನೇ ತೆಲುಗಿಗೆ ಅನುವಾದಿಸಲಾಗಿದೆ. ಇಲ್ಲಿ ಅನುರಾಗ್ ಕುಲಕರ್ಣಿ ಹಾಡಿದ್ದಾರೆ. ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸುಮಾರು ಎರಡು ಮಿಲಿಯನ್ ವೀಕ್ಷಣೆ ಪಡೆದಿರುವುದು ಅದರ ಜನಪ್ರಿಯತೆಯನ್ನು ತೋರಿಸುತ್ತದೆ.

  ಯಾವ ಕಾರಣಕ್ಕೂ 'ಪೊಗರು' ಚಿತ್ರವನ್ನು ಒಟಿಟಿಯಲ್ಲಿ ರಿಲೀಸ್ ಮಾಡೊಲ್ಲ: ನಿರ್ದೇಶಕ ನಂದಕಿಶೋರ್

  'ಪೊಗರು' ಚಿತ್ರ ಧ್ರುವ ಸರ್ಜಾ ಅವರ ಬಹುನಿರೀಕ್ಷಿತ ಸಿನಿಮಾ. ಎಲ್ಲವೂ ಸರಿಯಾಗಿದ್ದರೆ ಈ ವೇಳೆಗೆ ಅದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರಬೇಕಿತ್ತು. ಆದರೆ ಚಿತ್ರದ ಸ್ವಲ್ಪ ಭಾಗದ ಚಿತ್ರೀಕರಣ ಇನ್ನೂ ಬಾಕಿ ಉಳಿದಿದೆ.

  English summary
  Pogaru film team has released the Telugu version of Karabuu song, sung by Anurag Kulkarni.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X