'ಸೋನು ನಿಗಂ ವಿರುದ್ಧ ಯುದ್ಧ ಶುರು' ಎಂದ ಭೂಷಣ್ ಕುಮಾರ್ ಪತ್ನಿ ದಿವ್ಯಾ ಖೋಸ್ಲಾ

ಟಿ-ಸೀರೀಸ್ ಮ್ಯೂಸಿಕ್ ಕಂಪೆನಿ ಹಾಗೂ ಅದರ ಅಧ್ಯಕ್ಷ ಭೂಷಣ್ ಕುಮಾರ್ ವಿರುದ್ಧ ಹಿರಿಯ ಗಾಯಕ ಸೋನು ನಿಗಮ್ ಗಂಭೀರ ಆರೋಪ ಮಾಡಿದ ಬೆನ್ನಲ್ಲೇ ಭೂಷಣ್ ಕುಮಾರ್ ಪತ್ನಿ, ನಟಿ ದಿವ್ಯಾ ಖೋಸ್ಲಾ ಕುಮಾರ್, ಸೋನು ವಿರುದ್ಧ ಹರಿಹಾಯ್ದಿದ್ದಾರೆ.

Recommended Video

ಸೋನುನಿಗಮ್ ವಿರುದ್ಧ ಕಿಡಿಕಾರಿದ ದಿವ್ಯ ಖೊಸ್ಲೇ. | T Series | Sonu Nigam | Divya Khosla Kumar

'ಕಹಿ ಸತ್ಯ ಸೋನು ನಿಗಂ' ಎಂಬ ಕ್ಯಾಪ್ಷನ್ ಜತೆ ಸುಮಾರು 11 ನಿಮಿಷಗಳ ವಿಡಿಯೋದಲ್ಲಿ ಅವರು ಸೋನು ನಿಗಂ ಮಾಡಿರುವ ಆರೋಪಗಳಿಗೆ ಉತ್ತರ ನೀಡಿದ್ದಾರೆ. ಅಲ್ಲದೆ, ಸೋನು ನಿಗಂ ಅವರಿಗೆ ಅನೇಕ ಪ್ರಶ್ನೆಗಳನ್ನೂ ನೀಡಿದ್ದಾರೆ.

ಸಂಗೀತ ಕ್ಷೇತ್ರವು ಎರಡು ದೈತ್ಯ ಕಂಪೆನಿಗಳ ಹಿಡಿತದಲ್ಲಿ ನಲುಗುತ್ತಿದೆ. ಇಲ್ಲಿ ಹೊಸಬರಿಗೆ ಬೆಳೆಯಲು ಸಾಧ್ಯವಾಗುತ್ತಿಲ್ಲ ಎಂದು ಸೋನು ನಿಗಂ ವಿಡಿಯೋವೊಂದರಲ್ಲಿ ಆರೋಪ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ದಿವ್ಯಾ, ಸೋನು ನಿಗಂ ಅವರಿಗೆ ಕೃತಜ್ಞತೆ ಇಲ್ಲ. ಅವರು ಸುಳ್ಳುಗಳನ್ನು ಮಾರುತ್ತಿದ್ದಾರೆ ಮತ್ತು ಸಂಚು ರೂಪಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ನಂತರ ಮತ್ತೊಂದು ವಿಡಿಯೋ ಮಾಡಿದ್ದ ಸೋನು, ನೇರವಾಗಿ ಟಿ ಸೀರೀಸ್ ಹಾಗೂ ಭೂಷಣ್ ಕುಮಾರ್ ವಿರುದ್ಧ ಕಿಡಿಕಾರಿದ್ದರು. ಮುಂದೆ ಓದಿ...

ಹೊರಗಿನವರೇ ಇರುವುದು...

ಹೊರಗಿನವರೇ ಇರುವುದು...

ಟಿ ಸೀರೀಸ್ ಅನೇಕ ಹೊಸಬರಿಗೆ ಬ್ರೇಕ್ ನೀಡಿದೆ. ಆದರೆ ಅಂತಹ ಲೆಜೆಂಡ್. ಅದರೆ ಎಷ್ಟು ಜನರಿಗೆ ನೀವು ಬ್ರೇಕ್ ನೀಡಿದ್ದೀರಿ? ಯಾರಿಗೂ ಇಲ್ಲ. ಟಿ ಸೀರೀಸ್‌ನಲ್ಲಿ ಕೆಲಸ ಮಾಡುತ್ತಿರುವವರಲ್ಲಿ ಶೇ 97ರಷ್ಟು ಮಂದಿ ಹೊರಗಿನವರೇ. ಇವರು ಯಾರೂ ಚಿತ್ರರಂಗದವರ ಮಕ್ಕಳಲ್ಲ ಎಂದು ದಿವ್ಯಾ ಖೋಸ್ಲಾ ಕುಮಾರ್ ಕೋಪದಿಂದ ಹೇಳಿದ್ದಾರೆ.

ಬಾಂಬೆಗೆ ಕರೆಸಿದ್ದು ಗುಲ್ಷನ್ ಕುಮಾರ್

ಬಾಂಬೆಗೆ ಕರೆಸಿದ್ದು ಗುಲ್ಷನ್ ಕುಮಾರ್

ಸೋನು ದೆಹಲಿಯ ರಾಮಲೀಲಾದಲ್ಲಿ ಐದು ರೂಪಾಯಿಗೆ ಹಾಡುತ್ತಿದ್ದರು. ಅವರನ್ನು ಗುಲ್ಷನ್ ಕುಮಾರ್ (ಭೂಷಣ್ ಕುಮಾರ್ ತಂದೆ) ಗುರುತಿಸಿದರು. ಆ ಪ್ರತಿಭೆಗೆ ಅವಕಾಶ ನೀಡಬೇಕೆಂದು ಬಾಂಬೆಗೆ ಅವರೇ ವಿಮಾನ ಬುಕ್ ಮಾಡಿ ಕರೆಯಿಸಿದ್ದರು. ಮಗನೇ ನಿನ್ನನ್ನು ದೊಡ್ಡ ಕಲಾವಿದನನ್ನಾಗಿ ನಾನು ರೂಪಿಸುತ್ತೇನೆ ಎಂದಿದ್ದರು, ಎಂದು ಸೋನು ಅವರಿಗೆ ಅವಕಾಶ ನೀಡಿದ್ದೇ ಟಿ-ಸೀರೀಸ್ ಎಂದಿದ್ದಾರೆ.

ತಮ್ಮ ಮನೆಯಲ್ಲಿ 1988ರಿಂದಲೂ ಅಡುಗೆ ಕೆಲಸ ಮಾಡುತ್ತಿರುವ ಶೇರು ಎಂಬುವವರನ್ನೂ ವಿಡಿಯೋದಲ್ಲಿ ಮಾತನಾಡಿಸಿರುವ ದಿವ್ಯಾ, ಸೋನು ನಿಗಂ ಅವರಿಗೆ ಮೊದಲ ಬಾರಿ ಅವಕಾಶ ನೀಡಿ ಬೆಳೆಸಿದ್ದು ಗುಲ್ಷನ್ ಕುಮಾರ್ ಎಂದು ಹೇಳಿಸಿದ್ದಾರೆ.

ಬೇರೆ ಕಂಪೆನಿ ಸೇರಿಕೊಂಡರು

ಬೇರೆ ಕಂಪೆನಿ ಸೇರಿಕೊಂಡರು

ಗುಲ್ಷನ್ ಕುಮಾರ್ ಹತ್ಯೆಯ ಬಳಿಕ (41ನೇ ವಯಸ್ಸಿನಲ್ಲಿ ಮುಂಬೈ ಭೂಗತ ಲೋಕದಿಂದ ಕೊಲೆಯಾಗಿದ್ದರು) ಸೋನು ನಿಗಂ ಟಿ ಸೀರೀಸ್ ತೊರೆದು ಬೇರೆ ಮ್ಯೂಸಿಕ್ ಕಂಪೆನಿ ಸೇರಿಕೊಂಡರು. ಟಿ ಸೀರೀಸ್‌ನ ಸಂಕಷ್ಟದ ಸಮಯದಲ್ಲಿ ಅವರು ಭೂಷಣ್ ಕುಮಾರ್‌ಗೆ ಸಹಾಯ ಮಾಡಲಿಲ್ಲ ಎಂದು ದಿವ್ಯಾ ಹೇಳಿದ್ದಾರೆ.

ಅಬು ಸಲೇಂ ಜತೆ ನಂಟೇನು?

ಅಬು ಸಲೇಂ ಜತೆ ನಂಟೇನು?

'ಭೂಗತ ಲೋಕದ ಪಾತಕಿ ಅಬು ಸಲೇಂನಿಂದ ತನ್ನನ್ನು ರಕ್ಷಿಸುವಂತೆ ಭೂಷಣ್ ಕುಮಾರ್ ಏಕೆ ಸೋನು ಬಳಿ ಹೋಗಿ ಕೇಳಿಕೊಳ್ಳುತ್ತಾರೆ? ಹಾಗಾದರೆ ಸೋನು ನಿಗಂ ಅವರು ಅಬು ಸಲೇಂ ಜತೆ ಸಂಪರ್ಕ ಹೊಂದಿದ್ದರೇ? ಎಂದು ಪ್ರಶ್ನಿಸಿರುವ ದಿವ್ಯಾ, ಈ ವಿಚಾರದ ತನಿಖೆಯಾಗಬೇಕು ಎಂದಿದ್ದಾರೆ.

ನಾನೂ ಮೀಟೂ ಆರೋಪ ಮಾಡುತ್ತೇನೆ

ನಾನೂ ಮೀಟೂ ಆರೋಪ ಮಾಡುತ್ತೇನೆ

ಭೂಷಣ್ ಕುಮಾರ್ ವಿರುದ್ಧದ ಮೀಟೂ ಆರೋಪಕ್ಕೂ ಪ್ರತಿಕ್ರಿಯಿಸಿರುವ ಅವರು, ಇದು ಸುಳ್ಳು ಆರೋಪವಾಗಿತ್ತು. ಭೂಷಣ್ ವಿರುದ್ಧ ಆರೋಪ ಮಾಡಿದ್ದಾಕೆ ವಿರುದ್ಧ ದೂರು ದಾಖಲಿಸದೆ ಇರಲು ನಿರ್ಧರಿಸಿದ್ದೆವು. ಮೀ ಟೂ ಎಂದರೆ ಏನು ಸೋನು ಜಿ? ನಾನೂ ನಿಮ್ಮ ಮೇಲೆ ಮೀ ಟೂ ಆರೋಪ ಮಾಡಬಹುದೇ? ನೀವು ಮೀ ಟೂ ಅತ್ಯಾಚಾರಿ ಎಂದು ಹೇಳಬೇಕೇ? ಹಾಗೆ ಹೇಳಿದರೆ ನೀವು ಮೀ ಟೂ ಅತ್ಯಾಚಾರಿ ಆಗುತ್ತೀರಾ? ಎಂದು ಪ್ರಶ್ನಿಸಿದ್ದಾರೆ.

ಬೆದರಿಕೆ ಕರೆ ಬರುತ್ತಿವೆ- ಯುದ್ಧ ಶುರು

ಬೆದರಿಕೆ ಕರೆ ಬರುತ್ತಿವೆ- ಯುದ್ಧ ಶುರು

ಸೋನು ನಿಗಂ ಅವರ ವಿಡಿಯೋ ಹೊರಬಂದಾಗಿನಿಂದ ಗಂಡನಿಗೆ ಬೆದರಿಕೆ ಕರೆಗಳು ಬರುತ್ತಿವೆ. ನನ್ನ ಮೇಲೆ ಅತ್ಯಾಚಾರದ ಬೆದರಿಕೆಗಳು ಬರುತ್ತಿವೆ. ಮಗಳಿಗೂ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಬರುತ್ತಿವೆ. ಈ ವಿಡಿಯೋ ಮಾಡಲು ಬಯಸಿರಲಿಲ್ಲ. ಆದರೆ ಭಗವದ್ಗೀತೆಯಿಂದ ಪ್ರಭಾವಿತಳಾಗಿ ಸತ್ಯದ ಪರ ನಿಲ್ಲಲು ನಿರ್ಧರಿಸಿದೆ ಎಂದಿರುವ ದಿವ್ಯಾ, ಯುದ್ಧ ಶುರುವಾಗಿದೆ ಎಂದು ಕೊನೆಯಲ್ಲಿ ಘೋಷಿಸಿದ್ದಾರೆ.

ಮತ್ತೆ ಅಣಕಿಸಿದ ಸೋನು ನಿಗಂ!

ಮತ್ತೆ ಅಣಕಿಸಿದ ಸೋನು ನಿಗಂ!

ಆದರೆ ದಿವ್ಯಾ ಖೋಸ್ಲಾ ಕುಮಾರ್ ವಿಡಿಯೋಗೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಭೂಷಣ್ ವಿರುದ್ಧದ ಆರೋಪಗಳಿಗೆ ದಿವ್ಯಾ ಮಾಡಿರುವ ವಿಡಿಯೋವೇ ಅವರ ಅಹಂಕಾರಕ್ಕೆ ಸಾಕ್ಷಿ ಎಂದು ಅನೇಕರು ಹೇಳಿದ್ದಾರೆ. ಸ್ವತಃ ಸೋನು ನಿಗಂ ಕೂಡ ದಿವ್ಯಾ ಮಾಡಿರುವ ವಿಡಿಯೋವನ್ನು ಶೇರ್ ಮಾಡಿ ಅಣಕಿಸಿದ್ದಾರೆ. 'ಪ್ರಸ್ತುತ ಪಡಿಸುತ್ತಿದ್ದೇವೆ... ದಿವ್ಯಾ ಖೋಸ್ಲಾ ಕುಮಾರ್...' ಎಂದು ರಾಗವಾಗಿ ಹೇಳುವಂತೆ ಬರೆದಿರುವ ಸೋನು, 'ಕಾಮೆಂಟ್ ಬಾಕ್ಸ್ ಓಪನ್ ಮಾಡಲು ಅವರು ಮರೆತಿದ್ದಾರೆ. ಅವರಿಗೆ ಸಹಾಯ ಮಾಡೋಣ' ಎಂದು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಯಾರೂ ಕಾಮೆಂಟ್ ಮಾಡದಂತೆ ನಿರ್ಬಂಧಿಸಿರುವ ದಿವ್ಯಾ ಅವರನ್ನು ವ್ಯಂಗ್ಯವಾಡಿದ್ದಾರೆ.

More from Filmibeat

English summary
T Series chairman Bhushan Kumar's wife Divya Khosla Kumar in a video against Sonu Nigam said, the war is on.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X