Don't Miss!
- Lifestyle
ಪುರುಷರಿಗಿಂತ ಮಹಿಳೆಯರಿಗೆ ತೂಕ ಇಳಿಕೆ ತುಂಬಾ ಕಷ್ಟ, ಏಕೆ?
- Automobiles
2030 ರ ವೇಳೆಗೆ EV ವಾಹನ ಮಾರಾಟ 1 ಕೋಟಿ ಯೂನಿಟ್ಗಳನ್ನು ಮುಟ್ಟಲಿದೆ: ಆರ್ಥಿಕ ಸಮೀಕ್ಷೆ
- News
ಚಿಮ್ಮನಹಳ್ಳಿ ದುರ್ಗಾಂಬಿಕೆ ರಥೋತ್ಸವ: ಜನರ ಮನಸ್ಸು ಬದಲಾಗಲಿ, ರೈತರಿಗೆ ಕನ್ಯೆ ಕೊಡಲಿ, ವೈರಲ್
- Sports
ಆತನಿಗೆ ನೀಡಿದ ಜವಾಬ್ಧಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ: ತ್ರಿಪಾಠಿ ಪ್ರದರ್ಶನಕ್ಕೆ ಬಂಗಾರ್ ಹರ್ಷ
- Finance
ಉದ್ಯೋಗಿಗಳಿಗೆ ಟೊಯೋಟಾ ಗ್ಲಾನ್ಜಾ ಗಿಫ್ಟ್ ನೀಡಿದ ರಮೇಶ್ ಮರಂದ್ ಯಾರು?
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Toofan KGF2 Song Records: 'ಕೆಜಿಎಫ್ 2' ಮೊದಲ ಹಾಡು 'ತೂಫಾನ್' 5 ಗಂಟೆಗಳಲ್ಲಿ ಬರೆದ ದಾಖಲೆಗಳು ಏನೇನು?
'ತೂಫಾನ್' ಈ ಹೆಸರು ಕೇಳಿದರೆ ಸಾಕು. ಆ ಸಾಂಗ್ ಎಷ್ಟು ಪವರ್‌ಫುಲ್ ಅನ್ನುವುದನ್ನು ಊಹಿಸಿಕೊಳ್ಳಬಹುದು. 'ಕೆಜಿಎಫ್ 2' ತಂಡ ಇಂತಹದ್ದೇ ಒಂದು ಪವರ್‌ಫುಲ್ ಸಾಂಗ್ ಅನ್ನು ರಿಲೀಸ್ ಮಾಡಿದೆ. ಇದು ಲಿರಿಕಲ್ ಸಾಂಗ್ ಆಗಿದ್ದರೂ, ಜನರು ಹಾಡು ಕೇಳುವುದಕ್ಕಂತಲೇ ಕಾದು ಕೂತಿದ್ದರು. ಹೆಸರಲ್ಲೇ ತೂಫಾನ್ ಇದ್ದಿದ್ದರಿಂದ ಸಾಂಗ್ ಬಗ್ಗೆ ನಿರೀಕ್ಷೆನೂ ದುಪ್ಪಟ್ಟಾಗಿತ್ತು.
'ಕೆಜಿಎಫ್ 2' ಈ ವರ್ಷ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ. ಈ ಕಾರಣಕ್ಕೆ 'ಕೆಜಿಎಫ್ 2' ಸಿನಿಮಾ ಬಗ್ಗೆ ಕೌತಕ ಹೆಚ್ಚಾಗಿದೆ. ಸಾಂಗ್, ಟೀಸರ್, ಟ್ರೈಲರ್ ನೋಡುವುದಕ್ಕೆ ಜನರು ಕಾದು ಕೂತಿದ್ದಾರೆ. ಸಿನಿಮಾ ರಿಲೀಸ್‌ಗೆ ಇನ್ನು ಕೆಲವೇ ದಿನಗಳು ಬಾಕಿ ಇದೆ ಅನ್ನುವಾಗಲೇ 'ತೂಫಾನ್' ಲಿರಿಕಲ್ ಸಾಂಗ್ ರಿಲೀಸ್ ಮಾಡಲಾಗಿದೆ.
KGF
2
Toofan
Song:
'ತೂಫಾನ್'
ಹಾಡಿಗೆ
ಕನ್ನಡಿಗರ
ಕಿಡಿ,
ಹಾಡಿನಲ್ಲೂ
ಹಿಂದಿ
ಹೇರಿಕೆ
ಬೇಕೆ?
Recommended Video

ಈ ಹಾಡಿನಲ್ಲಿ ಯಶ್‌ರನ್ನು ತೂಫಾನ್‌ಗೆ ಹೋಲಿಸಲಾಗಿದೆ. ಸಾಂಗ್ ರಿಲೀಸ್ ಆಗುತ್ತಿದ್ದಂತೆ ಇದೂ ಕೂಡ ದಾಖಲೆಗಳನ್ನು ಬರೆಯುತ್ತೆ ಅಂತ ನಿರೀಕ್ಷೆ ಮಾಡಲಾಗಿತ್ತು. ಅದರಂತೆ ಯಶ್ ಅಭಿಮಾನಿಗಳು ಹಾಡು ರಿಲೀಸ್ ಆದ 5 ಗಂಟೆಗಳಲ್ಲಿ ಏನೆಲ್ಲಾ ದಾಖಲೆಗಳನ್ನು ಬರೆದಿದೆ ಅನ್ನುವುದನ್ನು ಪಟ್ಟಿ ಮಾಡಿದ್ದಾರೆ.
KGF
2
Toofan
Song:
ತೂಫಾನ್
ರೂಪದಲ್ಲಿ
ಬಂದ
ರಾಕಿ
ಭಾಯ್
ಯಶ್!

'ತೂಫಾನ್' ಸಾಂಗಿಗೆ 10 ಲಕ್ಷ ವೀವ್ಸ್
'ಕೆಜಿಎಫ್ 2' ಟೀಮ್ ಟೀಸರ್ ರಿಲೀಸ್ ಮಾಡಿದ್ದು ಬಿಟ್ಟರೆ, ಸಿನಿಪ್ರಿಯರಿಗೆ ಒಂದೇ ಒಂದು ತುಣುಕು ಕೂಡ ತೋರಿಸಿರಲಿಲ್ಲ. ಕಾದು ಕಾದು ಸುಸ್ತಾಗಿದ್ದವರಿಗೆ 'ಕೆಜಿಎಫ್ 2' ಹಾಡು ತೂಫಾನ್‌ನಂತೆ ಬಂದು ಅವರ ಮಡಿಲು ಸೇರಿದೆ. ವರ್ಷಗಳಿಂದ ಕಾದು ಕೂತಿದ್ದವರು ಬೆಂಬಿಡದೆ ಹಾಡುಗಳನ್ನು ಕೇಳುತ್ತಿದ್ದಾರೆ. 'ತೂಫಾನ್' ಬರುತ್ತಿದ್ದಂತೆ ಒಂದೊಂದಾಗೇ ದಾಖಲೆಗಳು ಸೃಷ್ಟಿಯಾಗುತ್ತಿವೆ. ಯುಟ್ಯೂಬ್‌ನಲ್ಲಿ ಬಿಡುಗಡೆಯಾದ ಕೇವಲ 2 ಗಂಟೆಯಲ್ಲಿ 10 ಲಕ್ಷ ವೀವ್ಸ್ ಪಡೆದುಕೊಂಡಿದೆ. ಇನ್ನು ಐದು ಗಂಟೆಯೊಳಗೆ 20 ಲಕ್ಷ ವೀವ್ಸ್ ಪಡೆದುಕೊಂಡಿದೆ. ಇಷ್ಟೆ ಅಲ್ಲ 5 ಗಂಟೆಯೊಳಗೆ ಹಲವು ದಾಖಲೆಗಳು ಬರೆದಿದೆ ಅಂತ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ಹೆಚ್ಚು ಲೈಕ್ಸ್ ಪಡೆದ ಲಿರಿಕಲ್ ಸಾಂಗ್
'ಕೆಜಿಎಫ್ 2' ಲಿರಿಕಲ್ ಸಾಂಗ್ ಅತೀ ಹೆಚ್ಚು ಲೈಕ್ ಪಡೆದು ದಾಖಲೆ ಬರೆದಿದೆ ಅಂತ ಸಿನಿಪ್ರೇಮಿಗಳು ಹೇಳುತ್ತಿದ್ದಾರೆ. ಇವರ ಪ್ರಕಾರ, ತೂಫಾನ್ ಸ್ಯಾಂಡಲ್‌ವುಡ್‌ನಲ್ಲಿ ಅತೀ ಹೆಚ್ಚು ಲೈಕ್ಸ್ ಪಡೆದ ಲಿರಿಕಲ್ ಸಾಂಗ್ ಎನ್ನುತ್ತಿದ್ದಾರೆ. 'ತೂಫಾನ್' ಸಾಂಗ್ 15 ನಿಮಿಷಗಳಲ್ಲಿ 50 ಸಾವಿರ ಲೈಕ್ಸ್ ಸಿಕ್ಕಿದೆ. 34 ನಿಮಿಷಗಳಲ್ಲಿ 1 ಲಕ್ಷ ಲೈಕ್ಸ್ ಪಡೆದುಕೊಂಡಿದೆ. 33 ನಿಮಿಷದಲ್ಲಿ 2 ಲಕ್ಷ, 3 ಗಂಟೆ 30 ನಿಮಿಷದಲ್ಲಿ 3 ಲಕ್ಷ ಲೈಕ್ಸ್ ಸಿಕ್ಕಿದೆ ಎಂದು ಹೇಳುತ್ತಿದ್ದಾರೆ.

ಉಳಿದ 4 ಭಾಷೆಯಲ್ಲಿ ಎಷ್ಟೆಷ್ಟು ವೀವ್ಸ್?
ಟೀಸರ್ ಬಿಡುಗಡೆಯಾದ ಐದು ಗಂಟೆಗಳಲ್ಲಿ 'ತೂಫಾನ್' ಹಾಡಿನ ತೆಲುಗು ವರ್ಷನ್ ಟ್ರೆಂಡಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿದೆ. 'ತೂಫಾನ್' ತೆಲುಗು ವರ್ಷನ್ 1.5 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. ಇನ್ನು ತಮಿಳು ವರ್ಷನ್ ಸಾಂಗ್ 4.67 ಲಕ್ಷ ವೀವ್ಸ್ ಪಡೆದುಕೊಂಡಿದೆ. ಹಾಗೇ ಮಲಯಾಲಂ ವರ್ಷನ್ ಸಾಂಗ್ 2.31 ಲಕ್ಷ ವೀವ್ಸ್ ಪಡೆದು ಟ್ರೆಂಡಿಂಗ್‌ನಲ್ಲಿ 12ನೇ ಸ್ಥಾನದಲ್ಲಿದೆ.

ಹಿಂದಿ ವರ್ಷನ್‌ಗೆ ರೆಸ್ಪಾನ್ಸ್ ಹೇಗಿದೆ?
'ಕೆಜಿಎಫ್ 2' ಹಿಂದಿ ವರ್ಷನ್‌ಗೆ ರೆಸ್ಪಾನ್ಸ್ ಚೆನ್ನಾಗಿದೆ. 'ತೂಫಾನ್' ಸಾಂಗ್ ರಿಲೀಸ್ ಆದ ಐದು ಗಂಟೆಗಳಲ್ಲಿ ಕನ್ನಡಕ್ಕಿಂತಲೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ. ಹಿಂದಿ ಹಾಡು ಎರಡು ಮಿಲಿಯನ್ ವೀವ್ಸ್ ಸಿಕ್ಕಿದ್ದು, ಟ್ರೆಂಡಿಂಗ್‌ನಲ್ಲಿದೆ. ಇನ್ನೂ 24 ಗಂಟೆಗಳಲ್ಲಿ ಇನ್ನೆಷ್ಟು ಹೊಸ ದಾಖಲೆಗಳನ್ನು ಬರೆಯಬಹುದೆಂಬ ನಿರೀಕ್ಷೆ ಇದೆ. ಆದರೆ, ಕನ್ನಡದ ಹಾಡಿನಲ್ಲಿ ಹಿಂದಿ ಪದಗಳನ್ನು ಸೇರಿಸಿದ್ದಕ್ಕೆ ಕನ್ನಡಿಗರು ಗರಂ ಆಗಿದ್ದಾರೆ.