'ಒಂದು ಸರಳ ಪ್ರೇಮಕಥೆ'ಯ ಈ ಹಾಡನ್ನು "ಗುನು ಗುನುಗು"ತ್ತಲೇ ಇರಬೇಕು!
ಸಿಂಪಲ್ ಸುನಿ ಸಿನಿಮಾ ಮೇಲೆ ಒಂದು ನಿರೀಕ್ಷೆ ಅಂತೂ ಇದ್ದೇ ಇರುತ್ತೆ. ಸಿನಿಮಾದಲ್ಲಿ ಹೇರಳವಾಗಿ ಕಾಮಿಡಿ ಇರುತ್ತೆ. ಇಲ್ಲ ಸಿಂಪಲ್ ಆಗಿ ಒಂದು ಲವ್ ಸ್ಟೋರಿ ಇರುತ್ತೆ. ಸಿನಿಪ್ರಿಯರು ಈ ಎರಡೂ ಶೈಲಿಯನ್ನು ಹೆಚ್ಚು ಇಷ್ಟ ಪಡುತ್ತಾರೆ. ಈಗ ಮತ್ತೊಂದು ಸಿಂಪಲ್ ಲವ್ ಸ್ಟೋರಿಯೊಂದಿಗೆ ಬರುತ್ತಿದ್ದಾರೆ. ಅದುವೇ 'ಒಂದು ಸರಳ ಪ್ರೇಮಕಥೆ'.
ಕಾಕತಾಳೀಯವೋ ಏನೋ ಸ್ಯಾಂಡಲ್‌ವುಡ್‌ನ ಅತ್ಯಂತ ಸರಳ ಸ್ವಭಾವದ ನಟ ವಿನಯ್ ರಾಜ್‌ಕುಮಾರ್ ಹೀರೊ. ಇವರಿಗೆ ಈ ಸಿನಿಮಾ ಇಬ್ಬರು ನಾಯಕಿಯರಿದ್ದಾರೆ. ಹೀಗಾಗಿ ಟೈಟಲ್‌ನಲ್ಲಿ ವಿರಳ ಅನ್ನೋದನ್ನು ಹೊಡೆದು ಹಾಕಿ ಸರಳ ಸ್ಟೋರಿ ಅಂತಿದ್ದಾರೆ ನಿರ್ದೇಶಕರು. ಹಾಗಾಗಿ ಇದೊಂದು ಕಾಂಪ್ಲಿಕೇಟೆಡ್ ಲವ್ ಸ್ಟೋರಿನೂ ಆಗಿರಬಹುದು ಅನ್ನೋ ಅನುಮಾನವಿದೆ.

ಸದ್ಯ ಈ ಸಿನಿಮಾದ "ಗುನು ಗುನುಗು.." ಅನ್ನೋ ರೊಮ್ಯಾಂಟಿಕ್ ಸಾಂಗ್ ಒಂದು ರಿಲೀಸ್ ಆಗಿದೆ. ವೀರ್ ಸಮರ್ಥ್ ಕಂಪೋಸ್ ಮಾಡಿರೋ ಹಾಡನ್ನು ಸ್ಯಾಂಡಲ್‌ವುಡ್‌ನ ಗೋಲ್ಡನ್ ಸ್ಟಾರ್ ಗಣೇಶ್ ಈ ಹಾಡನ್ನು ರಿಲೀಸ್ ಮಾಡಿದ್ದಾರೆ. ರೊಮ್ಯಾಂಟಿಕ್ ಸ್ಟಾರ್ ಕೈಯಲ್ಲಿ ರೊಮ್ಯಾಂಟಿಕ್ ಸಾಂಗ್ ರಿಲೀಸ್ ಆಗಿದ್ದು ವಿಶೇಷ. ಇದೇ ವೇಳೆ ವಿನಯ್ ರಾಜ್‌ಕುಮಾರ್, ಸಿಂಪಲ್ ಸುನಿ ಹಾಗೂ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ.
"ಸಿಂಪಲ್ ಅನ್ನೋ ಪದ ಸುನಿಗಿಂತ ಹೆಚ್ಚಾಗಿ ವಿನಯ್‌ಗೆ ಸೂಟ್ ಆಗುತ್ತೆ. ತುಂಬಾನೇ ಸಿಂಪಲ್. ಆರಾಮಾಗಿ ಇರುತ್ತಾರೆ. ತಲೆಯಲ್ಲಿ ಯಾವುದನ್ನೂ ಇಟ್ಕೊಂಡು ಓಡಾಡುವುದಿಲ್ಲ. ಈ ಸಿನಿಮಾ ದೊಡ್ಡ ಯಶಸ್ಸನ್ನು ಕೊಡಲಿ. ರೆಕಾರ್ಡ್ಸ್ ರೆಕಾರ್ಡ್ಸ್ ಅಂತ ಏನು ಅಂತೀವಿ. ಅದನ್ನೆಲ್ಲ ಮೀರಿ ಈ ಸಿನಿಮಾ ಆಗಲಿ." ಎಂದು ವಿನಯ್ ರಾಜ್‌ಕುಮಾರ್‌ಗೆ ಗೋಲ್ಡನ್ ಸ್ಟಾರ್ ಗಣೇಶ್ ಶುಭ ಹಾರೈಸಿದ್ದಾರೆ.

ಇದೇ ವೇಳೆ ನಿರ್ದೇಶಕ ಸಿಂಪಲ್ ಸುನಿ ಬಗ್ಗೆನೂ ಇಂಟ್ರೆಸ್ಟಿಂಗ್ ವಿಷಯಗಳನ್ನು ರಿವೀಲ್ ಮಾಡಿದ್ದಾರೆ. ಗಣೇಶ್ ಪ್ರಕಾರ, ಸುನಿ ಸಿಂಪಲ್ ಆಗಿ ಕಥೆ ಹೇಳ್ತಾರೆ. ಆದರೆ ಮೇಕಿಂಗ್ ಕಾಂಪ್ಲಿಕೆಟೆಡ್ ಆಗಿರುತ್ತೆ ಅನ್ನೋದು ಗಣೇಶ್ ವಾದ. ಅದಕ್ಕೆ ಕಾಂಪ್ಲಿಕೆಟೆಡ್ ಸುನಿ ಅಂತ ಕರೀತಿನಿ ಅಂತ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಇದೇ ವೇಳೆ ಇಬ್ಬರೂ ಸೇರಿ ಮಾಡಬೇಕಿರೋ ಸಿನಿಮಾ ಬಗ್ಗೆನೂ ಮಾತಾಡಿದ್ದಾರೆ.
"ಸುನಿ ಅಂದರೆ ನನಗೆ ಪ್ರೀತಿನೂ ಇದೆ. ಆಮೇಲೆ ಆತನ ಬರವಣಿಗೆಯ ಅಭಿಮಾನಿ ಅಂತ. ನಮ್ಮೊಂದು ಸಿನಿಮಾ ಅನೌನ್ಸ್ ಮಾಡಿದ್ದೀವಿ. ಯಾರೋ ಪ್ರಡ್ಯೂಸರ್ ಬಂದ್ರು ಹೋಗ್ಬಿಟ್ರು. ಮಧ್ಯದಲ್ಲಿ ಯಾರನ್ನೋ ಕರ್ಕೊಂಡು ಬಂದಿದ್ದ ಸುನಿ. ಚಕ್ ಬೌನ್ಸ್ ಆಯ್ತು." ಎಂದು ಗೋಲ್ಡನ್ ಸ್ಟಾರ್ ಗಣೇಶ್ ಹಾಸ್ಯ ಚಟಾಕಿ ಹಾರಿಸಿದ್ದಾರೆ.
ಇನ್ನು 'ಒಂದು ಸರಳ ಪ್ರೇಮಕಥೆ' ಟೈಟಲ್ ಹೇಳುವಂತೆ ಇದು ಪಕ್ಕಾ ಲವ್ ಸ್ಟೋರಿ ಸಿನಿಮಾ. ವಿನಯ್ ರಾಜ್‌ಕುಮಾರ್ ಜೊತೆ ಕಮಲ್ ಹಾಸನ್ ಅಭಿನಯದ 'ವಿಕ್ರಮ್' ಸಿನಿಮಾದಲ್ಲಿ ನಟಿಸಿದ್ದ ಸ್ವಾತಿಷ್ಠ ಕೃಷ್ಣನ್ ನಾಯಕಿ. ಅಂದ್ಹಾಗೆ ಸ್ವಾತಿಷ್ಠ ಕೃಷ್ಣನ್ ಕನ್ನಡದ ನಟಿಯೇ ಅನ್ನೋದು ಮತ್ತೊಂದು ವಿಶೇಷ. ಹಾಗೇ 'ರಾಧಾ ಕೃಷ್ಣ' ಧಾರಾವಾಹಿಯ ಮಲ್ಲಿಕಾ ಸಿಂಗ್ .
ವಿನಯ್ ರಾಜ್‌ಕುಮಾರ್, ಮಲ್ಲಿಕಾ ಸಿಂಗ್,ಸ್ವಾತಿಷ್ಠ ಕೃಷ್ಣನ್ ಜೊತೆ ಸಾಧುಕೋಕಿಲ, ರಾಜೇಶ್ ನಟರಂಗ, ಅರುಣ ಬಾಲರಾಜ್ 'ಒಂದು ಸರಳ ಪ್ರೇಮಕಥೆ' ಸಿನಿಮಾದಲ್ಲಿ ನಟಿಸಿದ್ದಾರೆ. ವೀರ್ ಸಮರ್ಥ್ ಸಂಗೀತ ನಿರ್ದೇಶನ ಮಾಡಿದ್ದಾರೆ.


Click it and Unblock the Notifications











