Don't Miss!
- Technology
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
- Lifestyle
ಬಿಪಿ ಸಮಸ್ಯೆಯೇ? ಪಿಜ್ಜಾ, ಮಜ್ಜಿಗೆ ಈ ಬಗೆಯ ಅಧಿಕ ಸೋಡಿಯಂ ಆಹಾರ ಸೇವಿಸಲೇಬೇಡಿ
- News
Breaking: ಭವಾನಿ ರೇವಣ್ಣಗೆ ಹಾಸನದಿಂದ ಟಿಕೆಟ್ ನೀಡುವಂತೆ ಪ್ರತಿಭಟನೆ
- Sports
Women's Premier League : ಫೆಬ್ರವರಿ 2ನೇ ವಾರ ಆಟಗಾರರ ಹರಾಜು: ದೆಹಲಿಯಲ್ಲಿ ಹರಾಜು ಪ್ರಕ್ರಿಯೆ
- Automobiles
ಬಾಕ್ಸ್ ಆಫೀಸ್ನಲ್ಲಿ 'ಪಠಾಣ್' ಅಬ್ಬರ: ಈ ಚಿತ್ರದಲ್ಲಿ ಕಾಣಿಸಿಕೊಂಡ ಆಕರ್ಷಕ ಕಾರುಗಳಿವು...
- Finance
ವಿಶ್ವದ ಶ್ರೀಮಂತ ವ್ಯಕ್ತಿ: 3ರಿಂದ 7ನೇ ಸ್ಥಾನಕ್ಕೆ ಇಳಿದ ಅದಾನಿ, ಹೂಡಿಕೆದಾರರ ನಂಬಿಕೆ ಗಳಿಸುವಲ್ಲಿ ಸೋತರೇ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಪುಷ್ಪ' ಚಿತ್ರದ ಶ್ರೀವಲ್ಲಿ ಹಾಡಿಗೆ ಕುಣಿದ ಯಕ್ಷಗಾನ ಕಲಾವಿದನ ವಿಡಿಯೋ ವೈರಲ್: ನೆಟ್ಟಿಗರು ಗರಂ
ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಜೋಡಿಯ 'ಪುಷ್ಪ' ಚಿತ್ರದ ಹಾಡುಗಳು ಈಗಲೂ ಟ್ರೆಂಡಿಂಗ್‌ನಲ್ಲಿವೆ. ಶ್ರೀವಲ್ಲಿ ಆಗಿರಲಿ, ಸಾಮಿ ಸಾಮಿ ಹಾಡೇ ಆಗಿರಲಿ ಜನರೇ ಸ್ವಯಂ ಪ್ರೇರಿತರಾಗಿ ಹೆಜ್ಜೆ ಹಾಕಿ ಸೋಶಿಯಲ್ ಮೀಡಿಯಾಗೆ ಹಾಕುತ್ತಿದ್ದಾರೆ. ಹೀಗಾಗಿ 'ಪುಷ್ಪ' ಚಿತ್ರದ ಹಾಡುಗಳು ವೈರಲ್ ಆಗುತ್ತಿವೆ. ಕೆಲವು ದಿನಗಳ ಹಿಂದೆ ವಿದೇಶಿ ಮಹಿಳೆ ಹಾಗೂ ಬಾಲಿವುಡ್ ಐಟಂ ಡ್ಯಾನ್ಸರ್ ರಾಖಿ ಸಾವಂತ್ ಸಾಮಿ ಸಾಮಿ ಹಾಡಿಗೆ ಹೆಜ್ಜೆ ಹಾಕಿದ್ದರು. ಆ ವಿಡಿಯೋಗಳು ವೈರಲ್ ಆಗಿದ್ದವು.
ಈಗ ಮತ್ತೆ ಶ್ರೀವಲ್ಲಿ ಹಾಡೊಂದು ವೈರಲ್ ಆಗಿದೆ. ಯಕ್ಷಗಾನ ಕಲಾವಿದನೊಬ್ಬರು ವೇದಿಕೆ ಮೇಲೆ ಶ್ರೀವಲ್ಲಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗುತ್ತಿದೆ. 'ಪುಷ್ಪ' ಚಿತ್ರದ ಶ್ರೀವಲ್ಲಿ ಹಾಡಿಗೆ ಕ್ರಿಕೆಟ್ ತಾರೆಯರಿಂದ ಹಿಡಿದು ಬೇರೆ ಬೇರೆ ಚಿತ್ರರಂಗದ ನಟ-ನಟಿಯರೂ ಹೆಜ್ಜೆ ಹಾಕಿದ್ದರು. ಹೀಗಾಗಿ ಶ್ರೀವಲ್ಲಿ ಹಾಡು ಟ್ರೆಂಡಿಂಗ್‌ನಲ್ಲಿತ್ತು. ಈಗ ಸೋಶಿಯಲ್ ಮೀಡಿಯಾದಲ್ಲಿ ಯಕ್ಷಗಾನ ಕಲಾವಿದ ಹಾಕಿದ ವಿಡಿಯೋ ಕೂಡ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
Pushpa
First
Review:
ತೆಲುಗು
ಚಿತ್ರರಂಗದ
ಅತ್ಯುತ್ತಮ
ಸಿನಿಮಾ
ಅಲ್ಲು
ಅರ್ಜುನ್
'ಪುಷ್ಪ'!
|
ಯಕ್ಷಗಾನದಲ್ಲಿ ಶ್ರೀವಲ್ಲಿ ಹಾಡಿಗೆ ಹೆಜ್ಜೆ
ದಕ್ಷಿಣ ಕನ್ನಡದ ಬಪ್ಪನಾಡು ಶ್ರೀದುರ್ಗಾಪರಮೇಶ್ವರೀ ಕೃಪಾಪೋಷಿತಾ ದಶಾವತಾರ ಯಕ್ಷಗಾನ ಮಂಡಳಿಯಿಂದ 'ಯಕ್ಷಗಾನ' ಪ್ರಸಂಗವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಭಾಗವತರು 'ಪುಷ್ಪ' ಶ್ರೀವಲ್ಲಿ ಹಾಡನ್ನು ಹಾಡಿದ್ದರು. ಇದಕ್ಕೆ ಯಕ್ಷಗಾನ ಕಲಾವಿದರೊಬ್ಬರು ಅಲ್ಲು ಅರ್ಜುನ್ ಹಾಕಿದ ಹೆಜ್ಜೆಯನ್ನೇ ಹಾಕಿದ್ದರು. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಯಕ್ಷಗಾನ ನೋಡಲು ನೆರೆದಿದ್ದ ಜನರು ಕೂಡ ಶ್ರೀವಲ್ಲಿ ಡ್ಯಾನ್ಸ್ ನೋಡಿ ನಕ್ಕು, ನಲಿದು ಎಂಜಾಯ್ ಮಾಡಿದ್ದಾರೆ.

ಯಕ್ಷಗಾನದಲ್ಲಿ ಶ್ರೀವಲ್ಲಿ ಹಾಡಿಗೆ ವಿರೋಧ
ಯಕ್ಷಗಾನ ಮಾಡುವಾಗ ಕಲಾವಿದರು ಕೆಲವು ಪ್ರಸ್ತುತ ಸನ್ನಿವೇಶಗಳನ್ನು ತಂದು ಅದನ್ನು ಹಾಸ್ಯ ರೂಪಕ್ಕೆ ಇಳಿಸುತ್ತಾರೆ. ಅದು ಸನ್ನಿವೇಶವೇ ಆಗಿರಬಹುದು. ಇಲ್ಲವೇ ಡೈಲಾಗ್ ಆಗಿರಬಹುದು. ಇಲ್ಲೂ ಕೂಡ ಯಕ್ಷಗಾನದ ಪ್ರಸಂಗದಲ್ಲಿ ಜನರನ್ನು ರಂಜಿಸಲಿ ಶ್ರೀವಲ್ಲಿ ಹಾಡನ್ನು ತರಲಾಗಿತ್ತು. ಆದರೆ, ಈ ವಿಡಿಯೋ ವೈರಲ್ ಆದಲ್ಲಿಂದ ಯಕ್ಷಗಾನದ ಅಭಿಮಾನಿಗಳ ಕೆಂಗಣ್ಣಿಗೂ ಗುರಿಯಾಗಿದೆ. ಯಕ್ಷಗಾನಕ್ಕೆ ಅದರದ್ದೇ ಆದ ಇತಿಹಾಸ ಹಾಗೂ ಚೌಕಟ್ಟು ಇದೆ. ಭಾಗವತಿಕೆಯಲ್ಲಿ ಸಾಂಪ್ರದಾಯಿಕ ಶೈಲಿಯ ಪದ್ಯಗಳಿದ್ದರೆ, ಮುಮ್ಮೇಳಕ್ಕೆ ಯಕ್ಷಗಾನದ್ದೇ ಆದ ನೃತ್ಯಗಳಿವೆ. ಮನೋರಂಜನೆಗಾಗಿ ಯಕ್ಷಗಾನಕ್ಕೆ ಅಪಚಾರವೆನಿಸುವ ಹಾಡು, ನೃತ್ಯಗಳ ತರುವುದು ಸರಿಯಲ್ಲವೆಂಬ ಆಕ್ರೋಶ ವ್ಯಕ್ತವಾಗುತ್ತಿದೆ.

ಕರಾವಳಿ, ಮಲೆನಾಡಿನಲ್ಲಿ ಯಕ್ಷಗಾನ
ಯಕ್ಷಗಾನ ಎಂಬುದು ನೃತ್ಯ ಜೊತೆ ಹಾಡುಗಾರಿಕೆ ಅದರ ಜೊತೆ ಮಾತುಗಾರಿಕೆ ಬೆರೆತ ವಿಶಿಷ್ಟ ಕಲೆ. ಕಲಾವಿದರು ವಿಶೇಷವಾದ ವೇಷ-ಭೂಷಣಗಳನ್ನೊಳನ್ನು ತೊಟ್ಟು ಜನರನ್ನು ರಂಜಿಸುತ್ತಾರೆ. ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಯಕ್ಷಗಾನ ಅತೀ ಜನಪ್ರಿಯತೆಯನ್ನು ಪಡೆದ ಪ್ರಕಾರ. ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನ ಭಾಗಗಳಲ್ಲಿ ಇದು ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಯಕ್ಷಗಾನದಲ್ಲಿ ತೆಂಕು ಮತ್ತು ಬಡಗು ಎಂಬ ಪ್ರಕಾರಗಳಿವೆ. ಸದ್ಯ ಈ ಯಕ್ಷಗಾನ ಪ್ರಕಾರಗಳು ರೂಪಾಂತರಗೊಳ್ಳುತ್ತಿವೆ ಎಂಬ ಆರೋಪ ಕೇಳಿ ಬರುತ್ತಿದೆ.

ರಾಖಿ ಸಾವಂತ್ ಸಾಮಿ ವಿಡಿಯೋ ವೈರಲ್
ಶ್ರೀವಲ್ಲಿ ಜೊತೆಗೆ ರಶ್ಮಿಕಾ ಮಂದಣ್ಣ ಸಾಂಗ್ ಸಾಮಿ ಸಾಮಿ ಕೂಡ ಟ್ರೆಂಡಿಂಗ್‌ನಲ್ಲಿದೆ. ಈ ಸಾಮಿ ಸಾಮಿ ಟ್ರೆಂಡಿಗೆ ತಡವಾಗಿ ಎಂಟ್ರಿ ಕೊಟ್ಟಿರೋ ರಾಖಿ ಸಾವಂತ್ ಸಖತ್ತಾಗೇ ಹೆಜ್ಜೆ ಹಾಕಿದ್ದರು. ಈ ವಿಡಿಯೋ ನೋಡಿ ನೆಟ್ಟಿಗರು ಫುಲ್ ಖುಷಿಯಾಗಿದ್ದರು. ರಾಖಿ ಸಾವಂತ್, ಗೆಳೆಯ ರಾಜೀವ್ ಖಿಂಚಿ ಜೊತೆ ಸೇರಿ ಸಾಮಿ ಸಾಮಿ ಹಾಡಿಗೆ ಹೆಜ್ಜೆ ಹಾಕಿದ್ದರು. ಈ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿ ನೆಟ್ಟಿಗಳು ಹೊಗಳಿ ಕೊಂಡಾಡುತ್ತಿದ್ದಾರೆ.