ಅನುರಾಧಾ ಭಟ್ ಹಾಡಿದ ಹಾಡಿಗೆ ಶ್ರೇಯಾ ಘೋಷಲ್ ಹೆಸರು ಬಂದಿದ್ದೇಗೆ? ಆ ಘಟನೆ ಬಗ್ಗೆ ಏನಂತಾರೆ ಕನ್ನಡದ ಗಾಯಕಿ?

ಸುಮಧುರ ಕಂಠದ ಅಪ್ಪಟ ಕನ್ನಡದ ಗಾಯಕಿ ಅನುರಾಧಾ ಭಟ್. ಇವರು ಹಾಡಿರು ಹಾಡುಗಳು ಇಂದಿಗೂ ಸಂಗೀತ ಪ್ರಿಯ ಬಾಯಲ್ಲಿ ಗುನುಗುತ್ತಿವೆ. 'ಈ ಶತಮಾನದ ವೀರ ಮದಕರಿ' ಸಿನಿಮಾದ "ಜುಂ ಜುಂ ಮಾಯಾ..", ದುನಿಯಾ ವಿಜಯ್ ನಟನೆಯ 'ಜಂಗ್ಲಿ' ಸಿನಿಮಾದ " ಜಂಗ್ಲಿ ಶಿವಲಿಂಗು..", ವಿಕ್ಟರಿ ಸಿನಿಮಾ "ಕಣ್ಣಾ ಮುಚ್ಚೆ ಜಾಹೀರಾತು..", 'ಪರಾರಿ' ಸಿನಿಮಾದ "ಮುದ್ದುದ್ದಾಗಿ..", ನಿನ್ನಿಂದಲೇ ಸಿನಿಮಾದ "ನೀನು ಇರುವಾಗ.." , ಚೌಕ ಸಿನಿಮಾದ "ಅಪ್ಪ ಐ ಲವ್ ಯು.." ಇಂತಹ ಸೂಪರ್ ಹಿಟ್ ಹಾಡುಗಳನ್ನು ಹಾಡಿ ಸಂಗೀತ ಪ್ರಿಯರ ಮನ ಗೆದ್ದಿದ್ದಾರೆ.

ಕನ್ನಡದಲ್ಲಿ ಸೂಪರ್ ಹಿಟ್ ಹಾಡುಗಳನ್ನು ಹಾಡಿರುವ ಬಾಲಿವುಡ್ ನಟಿ ಶ್ರೇಯಾ ಘೋಷಾಲ್‌ಗೆ ಟ್ರ್ಯಾಕ್ ಹಾಡಿದವರು ಇವರೇ. ಮುಂಗಾರು ಮಳೆಯಿಂದ ಶ್ರೇಯಾ ಘೋಷಾಲ್ ಹಾಡಿರುವ ಶೇ.90ರಷ್ಟು ಹಾಡಿಗೆ ಟ್ರ್ಯಾಕ್ ಹಾಡಿರುವುದಾಗಿ ಅನುರಾಧಾ ಭಟ್ ಅವರೇ ಹೇಳಿಕೊಂಡಿದ್ದಾರೆ. ಶ್ರೇಯಾಗೆ ಕೆಲವು ಕನ್ನಡ ಹಾಡುಗಳನ್ನು ಹಾಡಿಸುವುದಕ್ಕೆ ಖುದ್ದಾಗಿ ಅನುರಾಧಾ ಅವರೇ ಹೋಗಿದ್ದೂ ಇದೆ.

Why did Shreya Ghoshal s name come up in Anuradha Bhat s song Which movie What was the incidents

ಅನುರಾಧಾ ಭಟ್‌ ಸಾಕಷ್ಟು ಹಿಟ್ ಹಾಡುಗಳನ್ನು ಹಾಡಿದ್ದರೂ, ಅವರನ್ನು ಗುರುತಿಸಿದ್ದು, 2017ರಲ್ಲಿ ರಿಲೀಸ್ ಆಗಿದ್ದ 'ಚೌಕ' ಸಿನಿಮಾದ "ಅಪ್ಪ ಐ ಲವ್ ಯು.." ಹಾಡಿನಿಂದ. ಸುಮಾರು 10 ವರ್ಷ ಹಾಡಿದ್ದರೂ, ಗುರುತಿಸುವುದಕ್ಕೆ ದಶಕಗಳೇ ಬೇಕಾಗಿತ್ತು. ಈ ಜರ್ನಿಯಲ್ಲಿ ಒಂದು ಹಾಡನ್ನು ಇವರೇ ಹಾಡಿದ್ದರೂ, ಆಡಿಯೋ ಮೇಲೆ ಶ್ರೇಯಾ ಘೋಷಲ್ ಅಂತ ಹಾಕಲಾಗಿತ್ತು. ಇದು ಅನುರಾಧಾ ಭಟ್‌ ಅವರಿಗೆ ಸಿಕ್ಕಾಪಟ್ಟೆ ಬೇಸರ ತರಿಸಿತ್ತು. ಯಾವ ಸಿನಿಮಾ? ಏನದು ಘಟನೆ?

ಮುಂದೆ ಓದಿ

ಅನುರಾಧಾ ಭಟ್ ಹಾಡಿಗೆ ಶ್ರೇಯಾ ಘೋಷಲ್ ಹೆಸರು
ಅನುರಾಧಾ ಹಾಡಿದ ಹಾಡು ಸಿನಿಮಾದಲ್ಲಿ ಇರುತ್ತಿರಲಿಲ್ಲ
"ಅಪ್ಪ ಐ ಲವ್ ಯು" ಹಾಡಿನ ಮೂಲಕ ಜನಪ್ರಿಯತೆ

ಅನುರಾಧಾ ಭಟ್ ಕನ್ನಡ ಸಿನಿಮಾಗಳಲ್ಲಿ ಹಾಡುವುದಕ್ಕೆ ಅವಕಾಶಗಳನ್ನು ಹುಡುಕುತ್ತಿದ್ದ ಕಾಲವದು. ಬಹಳಷ್ಟು ಬಾರಿ ಅವರಿಗೆ ಸಿಂಗಿಂಗ್ ಸಾಕು ಅಂತ ಅನಿಸಿತ್ತು. ಏನೂ ವರ್ಕ್ ಆಗುತ್ತಿಲ್ಲ ಅಂತನೂ ಅನಿಸಿತ್ತು. ಯಾಕಂದ್ರೆ, ಅದಾಗಲೇ 'ಮೀರಾ ಮಾಧವ ರಾಘವ' ಸಿನಿಮಾದಲ್ಲಿ ಹಾಡಿದ್ದರು. ಇದನ್ನು ನೋಡಿ ಸಿನಿಮಾಗೆ ಅವಕಾಶ ಕೊಡುವಷ್ಟು ಸುಲಭವಾಗಿ ಆಗಿರಲಿಲ್ಲ. ಅವರು ಎಂಟ್ರಿ ಕೊಟ್ಟಾಗ ಬಾಲಿವುಡ್ ಸಿಂಗರ್‌ಗಳಿಗಷ್ಟೇ ಕ್ರೇಜ್ ಇತ್ತು. ಆ ವೇಳೆ ಸಿಕ್ಕಿದ್ದ ಒಂದೊಳ್ಳೆ ಹಾಡಿಗೆ ಆಡಿಯೋದಲ್ಲಿ ಶ್ರೇಯಾ ಘೋಷಾಲ್ ಅಂತ ಹಾಕಿದ್ದರು. ಈ ಘಟನೆಯನ್ನು ರೆಡಿಯೋ ಸಿಟಿ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

"ಸವಾರಿ ಸಿನಿಮಾದ ಮರಳಿ ಮರೆಯಾಗಿ ಹಾಡಿಗೆ ಟ್ರ್ಯಾಕ್ ಹಾಡಿದ್ದೆ. ಮಣಿಕಾಂತ್ ಕದ್ರಿಯವರು ಮ್ಯೂಸಿಕ್ ಡೈರೆಕ್ಟರ್. ಸಾಧನಾ ಸರ್ಗಂ ಹಾಡುತ್ತಾರೆ ಅಂತಲೇ ತೀರ್ಮಾನ ಆಗಿತ್ತು. ಅವರೂ ಹಾಡಿದರು, ಆ ಹಾಡಿನ ಮೇಲೆನೇ ಪಿಕ್ಚರೈಸ್ ಆಗಿದೆ. ಆದರೆ, ನಾನು ಹಾಡಿದ ಹಾಡಿನ ವರ್ಷನ್ ಕೂಡ ಇಷ್ಟ ಆಗಿತ್ತು. ಆಡಿಯೋದಲ್ಲಿ ನಾನು ಹಾಡಿದ ವರ್ಷನ್ ಇತ್ತು. ಆದರೆ, ನನ್ನ ಹೆಸರು ಬದಲು ಬೇರೆ ಗಾಯಕರ ಹೆಸರು ಹಾಕಿದ್ದರು. ಶ್ರೇಯಾ ಘೋಷಾಲ್ ಅಂತ ಹಾಕಿದ್ದರು. ಆಡಿಯೋ ರಿಲೀಸ್ ಟೈಮ್‌ನಲ್ಲಿ ಫೋನ್ ಮಾಡಿದ್ರು. ಸಾರಿ ಅನುರಾಧಾ ಈತರ ಒಂದು ಕನ್ಪ್ಯೂಷನ್ ಆಯ್ತು. ಅದನ್ನು ಸರಿ ಮಾಡುತ್ತೇನೆ ಎಂದು ಹೇಳಿದ್ದರು. ಅದು ಸರಿ ಮಾಡುವುದರೊಳಗೆ ಆ ಹಾಡು ಎಲ್ಲರಿಗೂ ರೀಚ್ ಆಗಿತ್ತು. ಸಾಧನಾ ಸರ್ಗಂ ಅವರ ಹಾಡು ಸಿನಿಮಾದಲ್ಲಿದೆ. ನನ್ನದು ಬರೀ ಆಡಿಯೋ ಹೇಗೆ ಕೇಳುಗರಿಗೆ ರೀಚ್ ಆಗುತ್ತೆ. ಬೇಜಾರಾಗಿ ಹೋಯ್ತು." ಎಂದು ಅನುರಾಧಾ ಭಟ್ ಹೇಳಿದ್ದಾರೆ.

ಬರೀ ಆಡಿಯೋದಲ್ಲಷ್ಟೇ ಹಿಟ್ ಸಾಂಗ್

"ಸಿದ್ಲಿಂಗು ಸಿನಿಮಾದ ಎಲ್ಲೆಲ್ಲೂ ಓಡುವ ಮನಸೆ ಹಾಡನ್ನು ಮೊದಲು ಡ್ಯೂಯೆಟ್ ಅಂತ ಮಾಡಿದ್ದರು. ನನ್ನದು ಹಾಗೂ ಅವಿನಾಶ್ ಇಬ್ಬರ ವರ್ಷನ್ ರೆಕಾರ್ಡ್ ಮಾಡಿದ್ದರು. ಅದೇ ಕಾರಣಕ್ಕೆ ಸಿನಿಮಾದಲ್ಲಿ ಬರೀ ಮೇಲ್ ವರ್ಷನ್ ಇಟ್ಟುಕೊಳ್ಳೋಣ ಅಂತಾಯ್ತು. ಹಾಗಾಗಿ ಆಡಿಯೋದಲ್ಲಿ ಫೀಮೇಲ್ ವರ್ಷನ್ ಇಟ್ಟುಕೊಳ್ಳೋಣ ಅಂತಾಯ್ತು. ಅಲ್ಲೂ ಸಿನಿಮಾದಲ್ಲಿ ಬರೀ ಮೇಲ್ ವರ್ಷನ್ ಇತ್ತು. ನನಗೆ ಮತ್ತೆ ಅಯ್ಯೋ ನಂದು ಇಷ್ಟೇ ಆಯ್ತು ಅನಿಸಿತು." ಎನ್ನುತ್ತಾರೆ ಗಾಯಕಿ ಅನುರಾಧಾ ಭಟ್.

Why did Shreya Ghoshal s name come up in Anuradha Bhat s song Which movie What was the incidents

ಕೃಷ್ಣನ್ ಲವ್ ಸ್ಟೋರಿ ಸಿನಿಮಾದಲ್ಲೂ ಹಾಗೇ ಆಗಿತ್ತು. "ನೀನಾಡದ ಮಾತು ನನ್ನಲ್ಲಿದೆ.." ಎನ್ನುವ ಹಾಡನ್ನು ರಾಜೇಶ್ ಕೃಷ್ಣನ್ ಹಾಡಿದ್ದರು. ಅಲ್ಲೂ ಅಷ್ಟೇ ಮೇಲ್ ವರ್ಷನ್ ಸಿನಿಮಾದಲ್ಲಿತ್ತು. ಫೀಲ್ ವರ್ಷನ್ ಆಡಿಯೋದಲ್ಲಿತ್ತು. ಹೀಗಾಗಿ ಸಿಂಗಿಂಗ್ ಯಾಕೋ ವರ್ಕ್‌ಔಟ್ ಆಗುತ್ತಿಲ್ಲ ಅನಿಸುವುದಕ್ಕೆ ಶುರುವಾಗಿತ್ತು. ಎಂಬಿಎ ಶಿಕ್ಷಣ ಮುಗಿಸಿದ್ದ ಅನುರಾಧಾ ಭಟ್ ಅವರು ಎಚ್‌ಆರ್ ಆಗಿ ಕೆಲಸ ಸೇರಿಸಿಕೊಳ್ಳುವುದಕ್ಕೆ ರೆಡಿಯಾಗಿದ್ದಾಗಿ ಹೇಳಿಕೊಂಡಿದ್ದಾರೆ.

ಹೀಗಂದು ಕೊಳ್ಳುವಾಗಲೇ "ಜುಂ ಜುಂ ಮಾಯಾ.." ಹಾಗೂ "ಜಂಗ್ಲಿ ಶಿವಲಿಂಗು.." ಹಾಡುಗಳನ್ನು ಹಾಡಿದ್ದರು. ಇವರು ದೊಡ್ಡ ಸಕ್ಸಸ್ ಕೊಟ್ಟಿತ್ತು. ಇಲ್ಲಿಂದ ಇನ್ನೂ ಒಂದು ಸ್ವಲ್ಪ ವರ್ಕ್ ಮಾಡೋಣ ಅಂತ ಅನಿಸಿತ್ತು. ಅಲ್ಲಿಂದ ಅವರಿಗೆ ಯಶಸ್ಸು ಸಿಗುತ್ತಾ ಹೋಗಿತ್ತು. ಇಲ್ಲಿವರೆಗೆ ಅನುರಾಧಾ ಭಟ್ ಸುಮಾರು 5 ಸಾವಿರ ಹಾಡುಗಳನ್ನು ಹಾಡಿದ್ದಾರೆ. ಸಾಕಷ್ಟು ಲೈವ್ ಕಾನ್ಸರ್ಟ್ ಅನ್ನು ಕೊಟ್ಟಿದ್ದಾರೆ.

More from Filmibeat

English summary
Why did Shreya Ghoshal's name come up in Anuradha Bhat's song? Which movie? What was the incidents.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X