Don't Miss!
- Sports
ICC Men's Test Cricketer of 2022: ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿ ಗೆದ್ದ ಬೆನ್ ಸ್ಟೋಕ್ಸ್
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- News
ಪತ್ರಿಕಾ ಸ್ವಾತಂತ್ರವನ್ನು ಬೆಂಬಲಿಸಿ: ಬಿಬಿಸಿ ಬೆಂಬಲಕ್ಕೆ ನಿಂತ ಅಮೆರಿಕಾ
- Finance
ಅಕ್ಕಿ, ಗೋಧಿ, ಹಿಟ್ಟು ಬೆಲೆ ಏರಿಕೆ: ಎಚ್ಚರಿಕೆಯ ಕರೆಗಂಟೆಯೇ?
- Technology
Samsung Galaxy: ಕೇವಲ 44 ರೂ. ಗಳ ಇಎಮ್ಐನಲ್ಲಿ ಖರೀದಿಸಿ ಗ್ಯಾಲಕ್ಸಿ A14 5G ಫೋನ್!
- Lifestyle
ಬೀಟ್ರೂಟ್ ಹೀಗೆ ಬಳಸಿದರೆ ಮುಖದ ಅಂದ ಹೆಚ್ಚುವುದು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
2022ರ ಟಾಪ್ 10 ಹಾಡುಗಳ ಲಿಸ್ಟ್ ರಿಲೀಸ್ ಮಾಡಿದ ಯೂಟ್ಯೂಬ್: 'ಪುಷ್ಪ' ಸಿನಿಮಾದ್ದೇ ದರ್ಬಾರ್!
2022 ಮುಗಿದು ಇನ್ನೇನು 2023 ಆರಂಭ ಆಗೋಕೆ ಹೆಚ್ಚು ಸಮಯವೇನು ಇಲ್ಲ. ಇನ್ನು ಕೆಲವೇ ದಿನಗಳಲ್ಲಿ ಹೊಸ ವರ್ಷದ ಆಗಮನ ಆಗಲಿದೆ. ಈ ಬೆನ್ನಲ್ಲೇ ಯೂಟ್ಯೂಬ್ ಈ ವರ್ಷ ಅತಿ ಹೆಚ್ಚು ವೀವ್ಸ್ ಕಂಡ ಮ್ಯೂಸಿಕ್ ವಿಡಿಯೋಗಳ ಪಟ್ಟಿಯನ್ನು ರಿಲೀಸ್ ಮಾಡಿದೆ.
ಈ ಪಟ್ಟಿಯಲ್ಲೂ ದಕ್ಷಿಣ ಭಾರತದ ಸಿನಿಮಾಗಳೇ ಮೇಲುಗೈ ಸಾಧಿಸಿವೆ. 'ಪುಷ್ಪ','ಬೀಸ್ಟ್' ಹಾಡುಗಳಿ ಲಿಸ್ಟ್‌ನಲ್ಲಿವೆ. ಅದು ಬಿಟ್ಟರೆ ಬಾಲಿವುಡ್‌ನ ಒಂದೇ ಒಂದು ಹಾಡು ಕೂಡ ಯೂಟ್ಯೂಬ್ ರಿಲೀಸ್ ಮಾಡಿದ ಪಟ್ಟಿಯಲ್ಲಿ ಇಲ್ಲ.
40
ದಿನ
ಬ್ಯಾಂಕಾಕ್ನಲ್ಲಿ
'ಪುಷ್ಪ
2'
ಶೂಟಿಂಗ್:
ಡಿಸೆಂಬರ್ನಲ್ಲಿ
ಸರ್ಪ್ರೈಸ್!
ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಜೋಡಿಯ 'ಪುಷ್ಪ' ಸಿನಿಮಾಗೆ ಸಂಬಂಧಿಸಿದ 5 ಹಾಡುಗಳು ಈ ಪಟ್ಟಿಯಲ್ಲಿವೆ. ಉಳಿದಂತೆ ದಳಪತಿ ವಿಜಯ್ ನಟಿಸಿದ 'ಬೀಸ್ಟ್' ಸಿನಿಮಾದ ಹಾಡು ಸೇರಿದಂತೆ ಅಲ್ಬಮ್ ಹಾಡುಗಳು ಈ ಪಟ್ಟಿಯಲ್ಲಿವೆ. ಹಾಗಿದ್ರೆ, ಈ ಹಾಡುಗಳು ಯಾವ ಸ್ಥಾನದಲ್ಲಿದೆ? ವೀವ್ಸ್ ಎಷ್ಟು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಟಾಪ್ 10 - 'ನಾಥುನಿಯಾ'
ಬೋಜ್‌ಪುರಿ ಹಾಡುಗಳು ಯೂಟ್ಯೂಬ್‌ನಲ್ಲಿ ಸಿಕ್ಕಾ ಪಟ್ಟೆ ಸದ್ದು ಮಾಡುತ್ತವೆ. ಅದರಲ್ಲೂ ಈ ವರ್ಷ ಕೇಸರಿ ಲಾಲ್ ಹಾಗೂ ಪ್ರಿಯಾಂಕಾ ಸಿಂಗ್ ಕಾಂಬಿನೇಷನ್‌ನಲ್ಲಿ ಬಂದಿದ್ದ 'ನಾಥುನಿಯಾ' ಅನ್ನೋ ಹಾಡು ಸುಮಾರು 256 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. 2022ರಲ್ಲಿ ಅತೀ ವೀವ್ಸ್ ಪಡೆದ ಮ್ಯೂಸಿಕ್ ವಿಡಿಯೋದಲ್ಲಿ 10ನೇ ಸ್ಥಾನದಲ್ಲಿದೆ.

ಟಾಪ್ 9ನಲ್ಲಿ 'ಊ ಅಂಟಾವಾ ಮಾವ' ಸಾಂಗ್
ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ಪುಷ್ಪ' ಸಿನಿಮಾದ 'ಊ ಅಂಟಾವಾ ಮಾವ' ಸಾಂಗ್ ಟಾಪ್ 9ರಲ್ಲಿ ಇದೆ. ಸಮಂತಾ ಹೆಜ್ಜೆ ಹಾಕಿದ್ದ ಈ ಹಾಡಿಗೆ ಥಿಯೇಟರ್‌ನಲ್ಲೂ ಶಿಳ್ಳೆಗಳು ಬಿದ್ದಿದ್ದವು. ಈ ಸಾಂಗ್ ಯೂಟ್ಯೂಬ್ 263 ಮಿಲಿಯನ್ ವೀವ್ಸ್ ಗಿಟ್ಟಿಸಿಕೊಂಡು, 9ನೇ ಸ್ಥಾನದಲ್ಲಿದೆ.

ಟಾಪ್ 8ನಲ್ಲಿ 'ಲೇ ಲೆ ಆಯಿ ಕೋಕಾ ಕೋಲಾ'
ಬೋಜ್‌ಪುರಿ ಗಾಯಕ ಕೇಸರಿ ಲಾಲ್ ಯಾದವ್ ಹಾಗೂ ಶಿಲ್ಪಿ ರಾಜ್ ಕಾಂಬಿನೇಷನ್‌ನಲ್ಲಿ ಬಂದಿರೋ 'ಲೇ ಲೇ ಆಯಿ ಕೋಕಾ ಕೋಲಾ' ಹಾಡು ಯೂಟ್ಯೂಬ್‌ನಲ್ಲಿ ಬೇಜಾನ್ ವೀವ್ಸ್ ಪಡೆದುಕೊಂಡಿದೆ. ಹಾಡು ಇದೂವರೆಗೂ 313 ಮಿಲಿಯನ್ ವೀವ್ಸ್ ಪಡೆಉದಕೊಂಡಿದೆ.

ಟಾಪ್ 7ನಲ್ಲಿ- ಅರಾಬಿಕ್ ಕುತ್ತು
ದಳಪತಿ ವಿಜಯ್ಸ ಅಭಿನಯದ 'ಬೀಸ್ಟ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಅಷ್ಟಾಗಿ ಸದ್ದು ಮಾಡಿಲ್ಲ. ಆದರೆ, ಅನಿರುದ್ಧ್ ರವಿಚಂದ್ರನ್ ಕಂಪೋಸ್ ಮಾಡಿದ ಹಾಡು ಬೇಜಾನ್ ಸೌಂಡ್ ಮಾಡಿತ್ತು. ಅದುವೇ 'ಅರಾಬಿಕ್ ಕುತ್ತು'. ಈ ಹಾಡು ಯೂಟ್ಯೂನ್‌ನಲ್ಲಿ 342 ಮಿಲಿಯನ್ ವೀವ್ಸ್ ಪಡೆದು 7ನೇ ಸ್ಥಾನದಲ್ಲಿದೆ.

ಟಾಪ್ 6ರಲ್ಲಿ 'ಕಚ್ಚಾ ಬಾದಾಮ್'
ಕಳೆದ ವರ್ಷ ಸೋಶಿಯಲ್ ಮೀಡಿಯಾದಲ್ಲಿ ಕಡಲೆ ಕಾಯಿ ಮಾರುವವ ಕಚ್ಚಾ ಬಾದಾಮ್ ಸಾಂಗ್ ಸೆನ್ಸೇಷನ್ ಸೃಷ್ಟಿಸಿತ್ತು. ಭುವನ್ ಬದ್ಯಕರ್ ಹಾಡಿದ ಈ ಹಾಡು ವೈರಲ್ ಆಗುತ್ತಿದ್ದಂತೆ ಹಲವು ವಿಡಿಯೋ ಅಲ್ಬಮ್‌ಗಳನ್ನು ಮಾಡಲಾಗಿತ್ತು. ಇದೇ ಹಾಡನ್ನು 2022ರಲ್ಲೂ ರಿಮಿಕ್ಸ್ ಮಾಡಿ ರಿಲೀಸ್ ಮಾಡಲಾಗಿತ್ತು. ಅದು ಕೂಡ ಸಿಕ್ಕಾಪಟ್ಟೆ ವೈರಲ್ ಆಗಿದ್ದು, 383 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ.

ಟಾಪ್ 5ರಲ್ಲಿ ಊ ಬೋಲೆಗಾ ಯಾ..
'ಪುಷ್ಪ' ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದರಿಂದ ಹಿಂದಿಯಲ್ಲೂ ಹಾಡನ್ನು ಬಿಡುಗಡೆ ಮಾಡಲಾಗಿತ್ತು. ಹಿಂದಿಯಲ್ಲೂ ಸಮಂತಾ ಹಾಡು ಸೂಪರ್ ಹಿಟ್ ಆಗಿತ್ತು. ಕನಿಕಾ ಕಪೂರ್ ಹಾಡಿದ್ದ 'ಊ ಬೋಲೆಗಾ ಯಾ.. ಊಹುಂ ಬೋಲೆಗಾ ಸಾಲ'.. ಸಾಂಗ್ ಯೂಟ್ಯೂಬ್‌ನಲ್ಲಿ 430 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ.

ಟಾಪ್ 4ರಲ್ಲಿ 'ಪಾಸೂರಿ'
ಕೋಕ್ ಸ್ಟುಡಿಯೋ ಸೀಸನ್ 14ರಲ್ಲಿ ಪಾಕಿಸ್ತಾನಿ ಗಾಯಕರು ಹಾಡಿದ 'ಪಾಸೂರಿ' ಸಾಂಗ್ ಭಾರತದಲ್ಲಿ ಟಾಪ್ 6ನೇ ಸ್ಥಾನದಲ್ಲಿದೆ. ಅಲಿ ಸೇಥಿ ಹಾಗೂ ಶಾಹಿ ಗಿಲ್ ಈ ಹಾಡನ್ನು ಹಾಡಿದ್ದರು. ಈ ಹಾಡು ಭಾರತದಲ್ಲಿ ಟ್ರೆಂಡಿಂಗ್‌ನಲ್ಲಿತ್ತು. ಇದೂವರೆಗೂ ಈ ವಿಡಿಯೋಗೆ 455 ಮಿಲಿಯನ್ ವೀವ್ಸ್ ಸಿಕ್ಕಿದೆ.

ಟಾಪ್ 3ಯಲ್ಲಿ ಅರಾಬಿಕ್ ಕುತ್ತು ಲಿರಿಕಲ್ ಸಾಂಗ್
ದಳಪತಿ ವಿಜಯ್ ಹಾಗೂ ಪೂಜಾ ಹೆಗ್ಡೆ ನಟಿಸಿದ್ದ 'ಬೀಸ್ಟ್' ಸಿನಿಮಾ 'ಅರಾಬಿಕ್ ಕುತ್ತು' ಲಿರಿಕಲ್ ಸಾಂಗ್ ಕೂಡ ಭರ್ಜರಿ ಹಿಟ್ ಆಗಿತ್ತು. ಈ ಹಾಡು ಸುಮಾರು 493 ಮಿಲಿಯನ್ ವೀವ್ಸ್ ಪಡೆದುಕೊಂಡಿತ್ತು.

ಟಾಪ್ 2ಯಲ್ಲಿ ಸಾಮಿ ಸಾಮಿ
'ಪುಷ್ಪ' ಹಿಂದಿ ಅವತರಣಿಕೆಯ 'ಸಾಮಿ ಸಾಮಿ ಸಾಂಗ್' ಟಾಪ್ 3ಯಲ್ಲಿದೆ. ಇದೂವರೆಗೂ ಈ ಹಾಡಿಗೆ ಸುಮಾರು 595 ಮಿಲಿಯನ್ ವೀವ್ಸ್ ಸಿಕ್ಕಿದೆ.

ಟಾಪ್ 1ರಲ್ಲಿ ಶ್ರೀವಲ್ಲಿ
ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ 'ಪುಷ್ಪ' ಸಿನಿಮಾದ ಶ್ರೀವಲ್ಲಿ ಹಾಡು ಟಾಪ್ 1ರಲ್ಲಿದೆ. ಶ್ರೀವಲ್ಲಿ ಹಿಂದಿ ವರ್ಷನ್‌ಗೆ ಬೇರೆ ಬೇರೆ ಕಡೆಗಳಲ್ಲಿ ಯೂಟ್ಯೂನ್‌ನಲ್ಲಿ ಸುಮಾರು 600 ಮಿಲಿಯನ್ ವೀವ್ಸ್ ಗಿಟ್ಟಿಸಿಕೊಂಡಿದೆ.