"ಬ್ಯಾಂಗಲ್ ಬಂಗಾರಿ.." ಹಾಡಿಗೆ 29ನೇ ಸ್ಥಾನ: 22 ದಿನಗಳಲ್ಲಿ ಈ ಸಾಂಗ್‌ಗೆ ಸಿಕ್ಕಿದ ವೀವ್ಸ್ ಎಷ್ಟು?
ಯುವ ರಾಜ್‌ಕುಮಾರ್ ಎರಡನೇ ಸಿನಿಮಾ 'ಎಕ್ಕ'ದ ಹಾಡುಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಅದರಲ್ಲೂ "ಬ್ಯಾಂಗಲ್ ಬಂಗಾರಿ.." ಸಾಂಗ್ ಯೂಟ್ಯೂಬ್ ಅಷ್ಟೇ ಅಲ್ಲ, ಸೋಶಿಯಲ್ ಮೀಡಿಯಾಗಳಲ್ಲಿಯೂ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಇತ್ತೀಚೆಗಿನ ದಿನಗಳಲ್ಲಿ ಕನ್ನಡ ಸಿನಿಮಾದ ಸಂಗೀತ ಲೋಕದಲ್ಲಿ ಇಂತಹದ್ದೊಂದು ದಾಖಲೆ ಬರೆಯುವ ಸಾಂಗ್ ಸಿಕ್ಕಿರಲಿಲ್ಲ. ಯಾರದ್ದೇ ಮೊಬೈಲ್ ನೋಡಿದರೂ 'ಎಕ್ಕ'ದ ಹಾಡುಗಳೇ ಸದ್ದು ಮಾಡುವುದಕ್ಕೆ ಶುರು ಮಾಡಿದೆ.
ಯುವ ರಾಜ್‌ಕುಮಾರ್ ಹಾಗೂ ಸಂಜನಾ ಆನಂದ್ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿರುವ ಈ ಹಾಡು ಈಗಾಗಲೇ ದಾಖಲೆ ಬರೆದಿದೆ. ಸಿನಿಮಾ ಬಿಡುಗಡೆಗೂ ಮುನ್ನವೇ 'ಎಕ್ಕ' ಹಾಡುಗಳ ಮೂಲಕವೇ ಕಿಕ್ ಕೊಟ್ಟಿದೆ. ಯುವ ರಾಜ್‌ಕುಮಾರ್ ಹಾಕಿದ ಸ್ಟೆಪ್ಟ್ ಅನ್ನು ಇಟ್ಟುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಲೆಕ್ಕವಿಲ್ಲದಷ್ಟು ರೀಲ್ಸ್ ಅನ್ನು ಮಾಡಲಾಗಿದೆ. ಹೀಗಾಗಿ ಈ ವರ್ಷ ಚಾರ್ಟ್ ಬಸ್ಟರ್ ಸಾಂಗ್‌ಗಳ ಸಾಲಿನಲ್ಲಿ "ಬ್ಯಾಂಗಲ್ ಬಂಗಾರಿ.." ಸಾಂಗ್ ಕೂಡ ಸೇರಿಕೊಂಡಿದೆ.

'ಎಕ್ಕ' ಸಿನಿಮಾದ "ಬ್ಯಾಂಗಲ್ ಬಂಗಾರಿ.." ಹಾಡಿಗೆ ಇಷ್ಟೊಂದು ರೆಸ್ಪಾನ್ಸ್ ಸಿಗುತ್ತೆ ಅನ್ನೋದು ಚಿತ್ರತಂಡಕ್ಕೆ ಗೊತ್ತಿರಲಿಕ್ಕಿಲ್ಲ. ಆ ಮಟ್ಟಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಈ ಹಾಡು ಈಗಾಗಲೇ ಎಲ್ಲೆಡೆ ವೈರಲ್ ಆಗಿದ್ದು, ಯುವ ರಾಜ್‌ಕುಮಾರ್ ಅಭಿಮಾನಿಗಳು, ಸೋಶಿಯಲ್ ಮೀಡಿಯಾ ಸ್ಟಾರ್‌ಗಳು, ಸೆಲೆಬ್ರಿಟಿಗಳು ಈ ಹಾಡಿಗೆ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಯುವರಾಜ್ ಕುಮಾರ್ ಹಾಗೂ ನಾಯಕಿ ಸಂಜನಾ ಆನಂದ್ "ಬ್ಯಾಂಗಲ್ ಬಂಗಾರಿ" ಸಾಂಗ್‌ಗೆ ಕುಣಿದು ಕುಪ್ಪಳಿಸಿದ್ದಾರೆ. ಇನ್ನು 22 ದಿನಗಳಲ್ಲಿ ಈ ಹಾಡು ಮಾಡಿದ ರೆಕಾರ್ಡ್ ಏನು?
ಮುಂದೆ ಓದಿ
ಕೇವಲ 22 ದಿನಗಳಲ್ಲಿ 'ಎಕ್ಕ'ದ "ಬ್ಯಾಂಗಲ್ ಬಂಗಾರಿ" ರೆಕಾರ್ಡ್
ಮತ್ತೆ ಮೋಡಿ ಮಾಡಿದ ಚರಣ್‌ರಾಜ್- ಆಂತೋನಿ ದಾಸ್ ಜೋಡಿ
ವಿಶೇಷ ಪಾತ್ರದಲ್ಲಿ ಡೆಡ್ಲಿ ಸೋಮ ಖ್ಯಾತಿಯ ನಟ ಆದಿತ್ಯ
"ಬ್ಯಾಂಗಲ್ ಬಂಗಾರಿ" ರಿಲೀಸ್ ಆದ ಕ್ಷಣದಿಂದಲೇ ಸಂಗೀತ ಪ್ರಿಯರಿಗೆ ಕಿಕ್ ಕೊಟ್ಟಿತ್ತು. 'ಎಕ್ಕ'ದ ಮಾಸ್ ಟೀಸರ್‌ಗೂ, "ಬ್ಯಾಂಗಲ್ ಬಂಗಾರಿ" ಮಸ್ತ್ ಸ್ಟೆಪ್‌ಗಳಿಗೂ ಸಖತ್ ಆಗಿಯೇ ಸಿಂಕ್ ಆಗಿತ್ತು. ಈ ಹಾಡಿನಲ್ಲಿ ಚರಣ್ ರಾಜ್ ಟ್ಯೂನ್ ಹಾಕಿದರೆ, ನಾಗಾರ್ಜುನ್ ಶರ್ಮಾ ಸಾಹಿತ್ಯ, ಆಂತೋನಿ ದಾಸ್ ಕಂಠ, ಯುವ-ಸಂಜನಾ ಭರ್ಜರಿ ಸ್ಟೆಪ್ಸ್ ಎಲ್ಲಾ ಸೇರಿ ಹಾಡಂತು ಕನ್ನಡಿಗೆ ಸಿಕ್ಕಾಪಟ್ಟೆ ಇಷ್ಟ ಆಗಿಬಿಟ್ಟಿದೆ. ಜೊತೆಗೆ ಹೊಸ ದಾಖಲೆಯನ್ನು ಬರೆದಿದೆ.
'ಎಕ್ಕ' ಸಿನಿಮಾದ "ಬ್ಯಾಂಗಲ್ ಬಂಗಾರಿ.." ಸಾಂಗ್ ಕೇವಲ 22 ದಿನಗಳಲ್ಲಿ ಬರೋಬ್ಬರಿ 10 ಮಿಲಿಯನ್ ವೀವ್ಸ್ ಆಗಿದೆ. ಇತ್ತೀಚೆಗಿನ ದಿನಗಳಲ್ಲಿ ಈ ಮಟ್ಟಿಗೆ ಕನ್ನಡದ ಹಾಡು ಸದ್ದು ಮಾಡಿರಲಿಲ್ಲ. 'ಕೃಷ್ಣಂ ಪ್ರಣಯ ಸಖಿ' ಬಳಿಕ ದಾಖಲೆ ವೀವ್ಸ್ ಕಂಡಿದ್ದು ಇದೇ ಸಾಂಗ್. ಈ ಹಾಡು ಟಾಪ್ ಮ್ಯೂಸಿಕ್ ವಿಡಿಯೋ ಕೆಟಗರಿಯಲ್ಲಿ 29ನೇ ಸ್ಥಾನ ಪಡೆದಿದ್ದು ಮತ್ತೊಂದು ಸಾಧನೆ. ಅತಿ ಕಡಿಮೆ ಸಮಯದಲ್ಲಿ "ಬ್ಯಾಂಗಲ್ ಬಂಗಾರಿ" ಇದೆಷ್ಟೆಲ್ಲ ದಾಖಲೆ ಬರೆದಿದ್ದಕ್ಕೆ ಇಡೀ ತಂಡ ಸಿನಿಮಾವೇ ಗೆದ್ದಷ್ಟು ಖುಷಿಯಲ್ಲಿ ಇದ್ದಾರೆ.

ಇನ್ನು ಹಾಡು ಕೇಳಿದರೆ ಹುಚ್ಚೆದ್ದು ಕುಣಿಯುವಂತೆ ಮಾಡುವ ಕ್ರೆಡಿಕ್ ಕೊರಿಯೋಗ್ರಾಫರ್ ಮುರಳಿ ಮಾಸ್ಟರ್‌ಗೂ ಸಲ್ಲುತ್ತೆ. ಸಿನಿಮಾದಲ್ಲಿ ಯುವ ರಾಜ್‌ಕುಮಾರ್ ಲೈಫ್‌ನಲ್ಲಿ ಬರುವ ಹುಡುಗಿಗೆ ಬ್ಯಾಂಗಲ್ ತೊಡಿಸಿದಾಗ ಶುರುವಾಗುವ ಹಾಡು ಇದಾಗಿದೆ. ಸದ್ಯ ಮೇಕಿಂಗ್ ಸಾಂಗ್ ಅನ್ನಷ್ಟೇ ರಿಲೀಸ್ ಮಾಡಲಾಗಿದೆ. ಆದರೆ, ಇನ್ನೂ ಒರಿಜಿನಲ್ ಸಾಂಗ್ ರಿಲೀಸ್ ಮಾಡಿಲ್ಲ. ಬಹುಶ: ಇದನ್ನು ಚಿತ್ರಮಂದಿರದಲ್ಲಿಯೇ ಪ್ರೇಕ್ಷಕರು ನೋಡಬೇಕಿದೆ.
'ರತ್ನನ್ ಪ್ರಪಂಚ' ಖ್ಯಾತಿಯ ರೋಹಿತ್ ಪದಕಿ 'ಎಕ್ಕ' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಯುವ ರಾಜ್‌ಕುಮಾರ್‌ಗೆ ಸಂಜನಾ ಆನಂದ್ ಹಾಗೂ ಸಂಪದಾ ಇಬ್ಬರು ನಾಯಕಿಯರು. ಇವರೊಂದಿಗೆ ಡೆಡ್ಲಿ ಸೋಮ ಖ್ಯಾತಿಯ ನಟ ಆದಿತ್ಯ ಹಾಗೂ ಬಾಲಿವುಡ್ ನಟ ಅತುಲ್ ಕುಲಕರ್ಣಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅಶ್ವಿನಿ ಪುನೀತ್ ರಾಜ್‌ಕುಮಾರ್, ಜಯಣ್ಣ, ಕಾರ್ತಿಕ್ ಗೌಡ ಜಂಟಿಯಾಗಿ ಈ ಸಿನಿಮಾವನ್ನ ನಿರ್ಮಿಸಿದ್ದಾರೆ. ಜುಲೈ-18 ರಂದು 'ಎಕ್ಕ' ಸಿನಿಮಾ ಅದ್ಧೂರಿಯಾಗಿ ಬಿಡುಗಡೆಗೆ ಸಜ್ಜಾಗಿದೆ.


Click it and Unblock the Notifications











