ಯುವ ರಾಜ್‌ಕುಮಾರ್‌ಗೆ ಸಿಕ್ಕೇಬಿಟ್ಲು 'ಬ್ಯಾಂಗಲ್ ಬಂಗಾರಿ'; 'ಎಕ್ಕ' ಹಾಡು ಕೇಳಿ ಪುನೀತ್ ರಾಜ್‌ಕುಮಾರ್ ನೆನೆದ ನೆಟ್ಟಿಗರು

ಯುವ‌ ರಾಜ್‌ಕುಮಾರ್ ನಟಿಸುತ್ತಿರುವ ಎರಡನೇ ಸಿನಿಮಾ 'ಎಕ್ಕ'. ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಾಕಿರುವ ಈ ಸಿನಿಮಾ ಇದೇ ತಿಂಗಳು ರಿಲೀಸ್ ಆಗಬೇಕಿತ್ತು. ಆದರೆ, ಒಂದು ತಿಂಗಳು ಮುಂದೂಡಲಾಗಿದೆ. ಎರಡನೇ ಸಾಂಗ್ "ಬ್ಯಾಂಗಲ್ ಬಂಗಾರಿ"ನೂ ಜೂನ್ 5ರಂದೇ ರಿಲೀಸ್ ಆಗಬೇಕಿತ್ತು. ಆದರೆ, ಅದನ್ನೂ ಮುಂದೂಡಿದ್ದರು. ಕೊನೆಗೂ ನಿರೀಕ್ಷೆಯಂತೆಯೇ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಾಂಗ್ ರಿಲೀಸ್ ಆಗಿದೆ. ಪ್ರೇಮಿಗಳಿಗೆ ಅಂತಾನೇ ಕಂಪೋಸ್ ಮಾಡಿರುವ ಹಾಡು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುವುದಕ್ಕೆ ಶುರು ಮಾಡಿದೆ.

ಯುವ ರಾಜ್‌ಕುಮಾರ್ ನಟಿಸುತ್ತಿರುವ ಎರಡನೇ ಸಿನಿಮಾ 'ಎಕ್ಕ'ದ ಟೀಸರ್ ಹಾಗೂ ಟ್ರೈಟಲ್ ಟ್ರ್ಯಾಕ್ ಈಗಾಗಲೇ ರಿಲೀಸ್ ಆಗಿದೆ. ಇಂದು (ಜೂನ್ 7) ಸಿನಿಮಾದ ಎರಡನೇ ಹಾಡೂ ಬಿಡುಗಡೆಯಾಗಿದೆ. ಕಳೆದ ನಾಲ್ಕೈದು ದಿನಗಳಿಂದ "ಬ್ಯಾಂಗಲ್ ಬಂಗಾರಿ" ಸಾಂಗ್ ಬಗ್ಗೆನೇ ಚಿತ್ರತಂಡ ಗುನುಗುತ್ತಿತ್ತು. ಮೊದಲೇ ಅನೌನ್ಸ್ ಮಾಡಿದಂತೆ ಈ ಹಾಡು ಹೊರಬಿದ್ದಿದ್ದು, ಯುವ ಅಭಿಮಾನಿಗಳು ಕುಣಿದು ಕುಪ್ಪಳಿಸುತ್ತಿದ್ದಾರೆ.

Yuvarajkumar Ekka movie second song Bangle Bangari lyrical song out here is twitter response

"ಬ್ಯಾಂಗಲ್ ಬಂಗಾರಿ" ಹಾಡು ಟ್ರೆಂಡ್ ಆಗುತ್ತಿದೆ. ಯುವ ಹೃದಯಗಳಿಗೆ ಲಗ್ಗೆ ಇಡುವುದಕ್ಕೆ ಶುರು ಮಾಡಿದೆ. ಯುವ ರಾಜ್‌ಕುಮಾರ್ ಹಾಗೂ ಸಂಜನಾ ಆನಂದ್ ಕಾಂಬಿನೇಷನ್‌ ಸಾಂಗ್‌ ಪಡ್ಡೆ ಹುಡುಗರ ಹೃದಯ ಕದಿಯುವುದು ಕನ್ಫರ್ಮ್ ಅಂತ ಕಮೆಂಟ್‌ಗಳು ಬರುತ್ತಿವೆ. ಈ ಹಾಡು ಪಕ್ಕಾ ಚರಣ್ ರಾಜ್ ಶೈಲಿಯ ಮೆಲೋಡಿ ಟ್ಯೂನ್ ಆಗಿದ್ದು, ಅದಕ್ಕೆ ನಾಗಾರ್ಜುನ್ ಶರ್ಮಾ ಅವರು ಸಾಹಿತ್ಯ ಸೇರಿ, ರೊಮ್ಯಾಂಟಿಕ್ ಸಾಂಗ್ ಎನಿಸಿಕೊಂಡಿದೆ.

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಟಿಸಿದ್ದ 'ಜಾಕಿ' ಸಿನಿಮಾವನ್ನು ನೆನಪಿಸೋ 'ಎಕ್ಕ'ಗೆ ಇನ್ನು ಏನೇನು ಸರ್ಪ್ರೈಸ್ ಇಟ್ಟಿದೆಯೋ ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ. ಆದ್ರೀಗ ದೊಡ್ಮೆನೆ ಅಭಿಮಾನಿಗಳು ಪ್ರೀತಿಸಿದ ಹುಡುಗಿಯನ್ನು "ಬ್ಯಾಂಗಲ್‌ ಬಂಗಾರಿ" ಅಂತಾ ಕರೆಯುತ್ತಾ ಕುಣಿದು ಕುಪ್ಪಳಿಸುವ ಮೂಡ್‌ನಲ್ಲಿದ್ದಾರೆ. ಮುರಳಿ ಮಾಸ್ಟರ್ ಕೊರಿಯೋಗ್ರಫಿ, ಚರಣ್ ರಾಜ್ ಮ್ಯೂಸಿಕ್, ಅಂತೋನಿ ದಾಸನ್ ಧ್ವನಿಯಿಂದ ಬಂದ ಈ ಹಾಡು ಈ ವರ್ಷ ಬ್ಲಾಕ್‌ ಬಸ್ಟರ್ ಅಂತಲೇ ಹೇಳಬಹುದು.

ಇನ್ನು ಹಾಡು ರಿಲೀಸ್ ಆಗುತ್ತಿದ್ದಂತೆ ಟ್ವಿಟರ್‌ಗಳಲ್ಲಿ ಹಾಡುಗಳನ್ನು ಶೇರ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಅಭಿಮಾನಿಗಳು ಹಾಡನ್ನು ಕೇಳಿ ಥ್ರಿಲ್ ಆಗಿದ್ದಾರೆ. "ಬ್ಯಾಂಗಲ್ ಬಂಗಾರಿ, ಇನ್ಮೇಲೆ ಸೋಶಿಯಲ್ ಮೀಡಿಯಾದಲ್ಲಿ ನಡೆಯಲಿ ನಿನ್ನ ಸವಾರಿ.. ಸೂಪರ್ ಸಾಂಗ್" ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.

"ಡೌಟೇ ಇಲ್ಲ. ಬ್ಯಾಂಗಲ್ ಬಂಗಾರಿ ಹಾಡು 2025ರ ಕಲಾತ್ಮಕ ಹಿಟ್ ಆಗುತ್ತೆ. ಅಷ್ಟೇ ಅಲ್ಲ ಥಿಯೇಟರ್‌ನಲ್ಲಿಯೂ ಬ್ಯಾಂಗ್ ಮಾಡುತ್ತೆ" ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಯುವ ರಾಜ್‌ಕುಮಾರ್ ಅಭಿಮಾನಿಗಳಿಗೆ ಅಷ್ಟೇ ಅಲ್ಲ. ಕನ್ನಡ ಸಿನಿಮಾ ಪ್ರಿಯರಿಗೂ ಈ ಹಾಡು ಸಿಕ್ಕಾಪಟ್ಟೆ ಇಷ್ಟ ಆಗಿದೆ. ರೊಮ್ಯಾಂಟಿಕ್ ಮೂಡ್‌ನಲ್ಲಿ ಭರ್ಜರಿ ಸ್ಟೆಪ್ಟ್ ಹಾಕುವ ಹಾಡು ಈ ವರ್ಷ ಸೂಪರ್ ಹಿಟ್ ಆಗುವುದರಲ್ಲಿ ಎರಡು ಮಾತಿಲ್ಲ.

ಇಷ್ಟೇ ಅಲ್ಲ ಇನ್ನೂ ಅದ್ಭುತ ಕಮೆಂಟ್‌ಗಳು ಬಂದಿವೆ. "ಈ ಸಾಂಗ್ ಅಪ್ಪು ಬಾಸ್ ಹಾಡಿದ್ರೆ ಸೂಪರ್ ಆಗಿ ಇರ್ತಿತ್ತು. ಮಿಸ್ ಯು ಅಪ್ಪು ಬಾಸ್" ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ಯಾರ್ ಏನೇ ಹೇಳಿದರೂ ಅಪ್ಪು ಬಾಸ್‌ನ ಇವರಲ್ಲೇ ನೋಡ್ತೀವಿ. ಸಾಂಗ್ ಚೆನ್ನಾಗಿದೆ" ಎಂದಿದ್ದಾರೆ. ಮತ್ತೊಬ್ಬರು "ಯುವ ಏನ್ರೀ ನಿಮ್ ಹವಾ. ಎಕ್ಕ ಫಸ್ಟ್ ಡೇ ಫಸ್ಟ್ ಶೋ ಪಕ್ಕ. ಬ್ಯಾಂಗಲ್ ಬಂಗಾರಿ ನೀನೆ ನನ್ನ ವೈಯಾರಿ" ಎನ್ನುತ್ತಿದ್ದಾರೆ. ಇನ್ನೊಬ್ಬರು "ಒಂದು ಕಾಲದಲ್ಲಿ ಸೂರಿ ಸಿನಿಮಾಗಳಲ್ಲಿ ಭಟ್ಟರ ಬರವಣಿಗೆಯಲ್ಲಿ ಪುನೀತ್ ಸರ್‌ಗೆ ಬರುತ್ತಿದ್ದ ಟೈಟಲ್ ಸಾಂಗ್ ನಾ ಈ ಹಾಡು ನೆನಪಿಗೆ ತಂದಿತು. ಭಟ್ಟರೆ ಮರಳಿ ಟೈಟಲ್ ಸಾಂಗ್ ಬರೆಯಿರಿ" ಎನ್ನುತ್ತಿದ್ದಾರೆ.

ಇನ್ನು 'ಎಕ್ಕ' ಸಿನಿಮಾವನ್ನು ಪಿಆರ್‌ಕೆ ಬ್ಯಾನರ್‌ನಲ್ಲಿ ಅಶ್ವಿನಿ ಪುನೀತ್‌ರಾಜ್‌ಕುಮಾರ್, ಜಯಣ್ಣ ಹಾಗೂ ಕೆಆರ್‌ಜಿ ಸ್ಟುಡಿಯೋ ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದೆ. ಈ ಸಿನಿಮಾದಲ್ಲಿ ಯುವ ರಾಜ್‌ಕುಮಾರ್ ಖಡಕ್ ಮಾಸ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ರಕ್ತ ಸಿಕ್ತ ಜಗತ್ತಿನ ಹೊಸ ಅಧ್ಯಾಯ ಅನ್ನೋ ಮಾತು ಕೇಳಿಬರುತ್ತಿದೆ. ಯುವರಾಜ್‌ ಕುಮಾರ್‌ಗೆ ಸಂಜನಾ ಆನಂದ್ ಹಾಗೂ ಸಂಪದಾ ನಾಯಕಿಯರಾಗಿದ್ದಾರೆ. ಅತುಲ್ ಕುಲಕರ್ಣಿ, ಡೆಡ್ಲಿ ಆದಿತ್ಯಾ ಸೇರಿದಂತೆ ದೊಡ್ಡ ತಾರಾಗಣವೇ ಈ ಸಿನಿಮಾದಲ್ಲಿದ್ದು, ಜುಲೈ 18ಕ್ಕೆ ರಿಲೀಸ್‌ ಆಗುತ್ತಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X