Zee Music–Spotify: ಬಾಲಿವುಡ್‌ ಹಾಡುಗಳನ್ನು ತೆಗೆದು ಹಾಕಿದ ಸ್ಪಾಟಿಫೈ ಮ್ಯೂಸಿಕ್ ಆಫ್.. ಕೇಳುಗರು ಶಾಕ್!

ಸ್ಮಾರ್ಟ್‌ಫೋನ್ ಬಳಸುವವರಿಗೆ, ಸಂಗೀತ ಪ್ರಿಯರಿಗೆ, ಟ್ರಾವೆಲ್ ಮಾಡುವವರಿಗೆ ಸ್ಪಾಟಿಫೈ ಮ್ಯೂಸಿಕ್ ಆಪ್‌ ಬಗ್ಗೆ ಚೆನ್ನಾಗಿಯೇ ಗೊತ್ತಿರುತ್ತೆ. ಈ ಆಪ್‌ನಿಂದ ಅದೆಷ್ಟೋ ಹಾಡುಗಳನ್ನು ದಿನನಿತ್ಯವೂ ಕೇಳಿ ಆನಂದ ಪಡುತ್ತಿರುತ್ತಾರೆ. ಆದ್ರೀಗ ಸ್ಪಾಟಿಫೈ ತನ್ನ ಕೇಳುಗರಿಗೆ ಶಾಕ್ ಕೊಟ್ಟಿದೆ. ಜೀ ಮ್ಯೂಸಿಕ್‌ಗೆ ಸಂಬಂಧಿಸಿದ ಬಾಲಿವುಡ್ ಹಾಡುಗಳನ್ನು ತನ್ನ ಆಪ್‌ನಿಂದ ತೆಗೆದು ಹಾಕಿದೆ.

ಹೌದು, ಸ್ಪಾಟಿಫೈ ಮ್ಯೂಸಿಕ್ ಆಪ್ ಹಾಗೂ ಜೀ ಮ್ಯೂಸಿಕ್ ನಡುವಿನ ಲೈಸೆನ್ಸ್ ಅಗ್ರಿಮೆಂಟ್ ಮುರಿದು ಬಿದ್ದಿದೆ. ಕಳೆದ ವಾರವೇ ಈ ಒಪ್ಪಂದ ಮುರಿದುಬಿದ್ದಿದ್ದು, ಈ ಸಂಬಂಧ ಜೀ ಮ್ಯೂಸಿಕ್‌ಗೆ ಸೇರಿದ ಎಲ್ಲಾ ಬಾಲಿವುಡ್ ಹಾಡುಗಳನ್ನು ತನ್ನ ಆಪ್‌ನಿಂದ ತೆಗೆದು ಹಾಕಿದೆ.

2022ರಲ್ಲೂ ಜೀ ಮ್ಯೂಸಿಕ್ ಸಂಸ್ಥೆ ಮತ್ತೊಂದು ಮ್ಯೂಸಿಕ್ ಆಪ್ ಸಂಸ್ಥೆ ಗಾನಾ ಜೊತೆನೂ ಲೈಸೆನ್ಸ್ ಅಗ್ರಿಮೆಂಟ್ ಅನ್ನು ಮುರಿದುಕೊಂಡಿತ್ತು. ಇದಾದ ಕೆಲವು ತಿಂಗಳಲ್ಲಿಯೇ ಗಾನ ಮ್ಯೂಸಿಕ್ ಸಬ್‌ಸ್ಟ್ಕ್ರೈಬ್ ಮಾಡಿದವರಿಗೆ ಮಾತ್ರ ಸೇವೆಯನ್ನು ಒದಗಿಸಿತ್ತು. ಈಗ ಸ್ಪಾಟಿಫೈ ಮ್ಯೂಸಿಕ್ ಆಪ್‌ ಜೊತೆನೂ ಲೈಸೆನ್ಸ್ ಅಗ್ರಿಮೆಂಟ್ ಅನ್ನು ಮುರಿದುಕೊಂಡಿದೆ.

Zee Music–Spotify licensing agreement failed the music app forced to remove bollywood songs

ಈ ಬೆಳವಣಿಗೆಯಿಂದ ಸ್ಪಾಟಿಫೈ ಸಬ್‌ಸ್ಕ್ರೈಬರ್ ಆಗಿರುವ ಬಾಲಿವುಡ್ ಸಾಂಗ್ಸ್ ಪ್ರಿಯರಿಗೆ ನಿರಾಸೆಯಾಗಿದೆ. ಜೀ ಒಡೆತನದಲ್ಲಿರುವ ಬಾಲಿವುಡ್‌ನ ಸೂಪರ್‌ ಹಿಟ್ ಸಾಂಗ್‌ಗಳು ಈ ಮ್ಯೂಸಿಕ್ ಆಪ್‌ನಿಂದ ತೆಗೆದು ಹಾಕಲಾಗಿದೆ. ಈ ಬಗ್ಗೆ ಜೀ ಮ್ಯೂಸಿಕ್ ಹಾಗೂ ಸ್ಪಾಟಿಫೈ ಇಬ್ಬರೂ ಪ್ರತ್ಯೇಕ ಹೇಳಿಕೆಗಳನ್ನು ನೀಡಿದ್ದು, ಎಲ್ಲಾ ಸರಿ ಹೋಗುವ ಭರವಸೆಯನ್ನು ನೀಡಿದ್ದಾರೆ.

ಸ್ಪಾಟಿಫೈ ಮ್ಯೂಸಿಕ್ ಆಪ್ ನೀಡಿರುವ ಹೇಳಿಕೆ ಪ್ರಕಾರ," ಸ್ಪಾಟಿಫೈ ಮತ್ತು ಜೀ ಮ್ಯೂಸಿಕ್ ಸಂಸ್ಥೆಗಳಿಗೆ ಲೈಸೆನ್ಸ್ ಅಗ್ರಿಮೆಂಟ್ ಅನ್ನು ಮುಂದುವರೆಸಲು ಸಾಧ್ಯವಾಗುತ್ತಿಲ್ಲ. ಸಾಕಷ್ಟು ಮಾತುಕತೆಗಳನ್ನು ನಡೆಸಿದ ಬಳಿಕ, ಜೀ ಮ್ಯೂಸಿಕ್ ಜೊತೆ ಡೀಲ್ ಕುದುರಿಸಲು ಸ್ಪಾಟಿಫೈ ಕೆಲವು ಕ್ರಿಯಾತ್ಮಕ ದಾರಿಗಳನ್ನು ಕಂಡುಕೊಂಡಿದೆ. ಹಾಗೆಯೇ ಪರಸ್ಪರ ಒಪ್ಪಂದ ಮೂಲಕ ಪರಿಹಾರವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ." ಎಂದು ಸ್ಪಾಟಿಫೈ ಹೇಳಿಕೆ ನೀಡಿದೆ.

ಸ್ಪಾಟಿಫೈ ಮ್ಯೂಸಿಕ್ ಆಪ್‌ನಿಂದ ಬ್ಲಾಕ್‌ ಬಸ್ಟರ್ ಸಿನಿಮಾಗಳ ಹಾಡುಗಳು ಕಾಣೆಯಾಗಿವೆ. ಕಳಂಕ್, ಜೆರ್ಸಿ, ಬೇಡಿಯಾ, ಎಬಿಸಿಡಿ2, ಬಾರ್ ಬಾರ್ ದೇಕೋ, ಬದಾಯಿ ಹೋ, ಬ್ಯಾಂಗ್ ಬ್ಯಾಂಗ್,ಸೀಕ್ರೆಟ್ ಸೂಪರ್‌ಸ್ಟಾರ್, ದಂಗಲ್, ಮಿಷನ್ ಮಂಗಲ್,ಪ್ಯಾಡ್ ಮ್ಯಾನ್, 3 ಇಡಿಯಟ್ಸ್, ಕೇದಾರನಾಥ್, ರಾಜಿ ಅಂತ ಸಿನಿಮಾಗಳ ಹಾಡುಗಳನ್ನು ತೆಗೆದು ಹಾಕಿದೆ.

ಸ್ಪಾಟಿಫೈ ತನ್ನ ಆಪ್‌ನಿಂದ ಹಾಡುಗಳನ್ನು ತೆಗೆದು ಹಾಕುತ್ತಿದ್ದಂತೆ, ಕೇಳುಗರು ಆಕ್ರೋಶಗೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ಮಾಡುತ್ತಿದ್ದಾರೆ. ಗಂಟೆಗಟ್ಟಲೆ ಕೂತು ತಮ್ಮ ಪ್ಲೇ ಲಿಸ್ಟ್ ಅನ್ನು ರೆಡಿ ಮಾಡಿದ್ದ ಕೇಳುಗರು ಬೇಸರ ವ್ಯಕ್ತಪಡಿಸಿದ್ದಾರೆ. ಈಗ ಅವರ ಪ್ಲೇ ಲಿಸ್ಟ್‌ನಲ್ಲಿ ಕೆಲವು ಹಾಡುಗಳೇ ಇಲ್ಲ. ಹೀಗಾಗಿ ಸಂಗೀತ ಪ್ರಿಯರು ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ನೆಟ್ಟಿಗರೊಬ್ಬರು "ಕೇದಾರನಾಥ್, ಭೇಡಿಯಾ ಹಾಗೂ ಕಳಂಕ್ ಜೀ ಮ್ಯೂಸಿಕ್ ಒಡೆತನದಲ್ಲಿರುವ ಈ ಸಿನಿಮಾದ ಹಾಡುಗಳನ್ನು ಸ್ಪಾಟಿಫೈ ಮ್ಯೂಸಿಕ್ ಆಪ್ ತೆಗೆದು ಹಾಕಿದೆ. ನನಗೆ ಬೇಜಾರಾಗುತ್ತಿದೆ." ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಸ್ಪಾಟಿಫೈ ದಿಢೀರನೇ ಕೆಲವು ಮ್ಯೂಸಿಕ್ ಅಲ್ಬಮ್‌ಗಳನ್ನು ತೆಗೆದು ಹಾಕಿದೆ. ಇದರ ಹಿಂದಿರುವ ಕಾರಣವಾದರೂ ಏನು?" ಎಂದು ಆಶ್ವರ್ಯ ವ್ಯಕ್ತಪಡಿಸಿದ್ದಾರೆ.

Zee Music–Spotify licensing agreement failed the music app forced to remove bollywood songs

ಇದೇ ವೇಳೆ ಸ್ಪಾಟಿಫೈ ತನ್ನ ವೆಬ್‌ಸೈಟ್‌ನಲ್ಲಿ ಸೂಚನೆಯನ್ನೂ ನೀಡಿದೆ. ವಿಶ್ವದಲ್ಲಿರುವ ಎಲ್ಲಾ ಸಂಗೀತಗಾರರಿಗೂ ಹಾಗೂ ಪಾಡ್‌ಕಾಸ್ಟ್‌ಗಳಿಗೆ ಅನುಮತಿಯನ್ನು ನೀಡುವುದಿಲ್ಲ. ನೆಟ್‌ಫ್ಲಿಕ್ಸ್ ಹಾಗೇ ಲೈಸೆನ್ಸ್ ಇರುವ ಪಬ್ಲಿಷರ್ ಹಾಗೂ ಮಾಲೀಕರೊಂದಿಗೆ ಮಾತುಕತೆ ನಡೆಸುತ್ತದೆ. ಅನ್‌ಲೈನ್‌ನಲ್ಲಿ ಪ್ಲೇ ಮಾಡಬಹುದೇ ಎಂಬುದನ್ನು ಚರ್ಚಿಸುತ್ತೆ ಎಂದು ಹೇಳಿಕೊಂಡಿದೆ. ಒಟ್ನಲ್ಲಿ ಸಂಗೀತ ಪ್ರಿಯರಿಗೆ ಮಾತ್ರ ನಿರಾಸೆಯಾಗಿದೆ.

More from Filmibeat

English summary
Zee Music–Spotify licensing agreement failed the music app forced to remove bollywood songs. Some listeners threatened to cancel their subscription, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X