'ಕೂಲ್' ಆಗಿ ವಿದೇಶಕ್ಕೆ ಹಾರಿದ ಗೋಲ್ಡನ್ ಸ್ಟಾರ್

By Rajendra

ಗೋಲ್ಡನ್ ಸ್ಟಾರ್ ಗಣೇಶ್ ಕೂಲ್ ಆಗಿ ವಿದೇಶಕ್ಕೆ ಹಾರಿದ್ದಾರೆ. ಅವರ ಜೊತೆಗೆ 60 ಮಂದಿ ಸಹಕಲಾವಿದರು ಹೊರಟಿದ್ದಾರೆ. ಕೂಲ್ ಚಿತ್ರದ ಮೂರು ಹಾಡುಗಳ ಚಿತ್ರೀಕರಣಕ್ಕಾಗಿ ಇವರೆಲ್ಲಾ ವಿದೇಶಕ್ಕೆ ಹಾರಿದ್ದಾರೆ . ಗೋಲ್ಡನ್ ಮೂವೀಸ್ ಲಾಂಛನದಲ್ಲಿ ಶಿಲ್ಪಾ ಗಣೇಶ್ ನಿರ್ಮಿಸುತ್ತಿರುವ 'ಕೂಲ್''

ಡಿಸೆಂಬರ್ ಮೊದಲ ವಾರದಲ್ಲಿ ಆರಂಭವಾಗುವ ಹಾಡುಗಳ ಚಿತ್ರೀಕರಣ ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ, ಬ್ಯಾಂಕಾಕ್, ಕ್ರಾಬಿಐಲ್ಯಾಂಡ್ ಮುಂತಾದ ಕಡೆಗಳಲ್ಲಿ 12ದಿನಗಳ ಕಾಲ ನಡೆಯಲಿದೆ. ನಟ ಗಣೇಶ್ ನಿರ್ದೇಶನದ ಚೊಚ್ಚಲ ಚಿತ್ರ 'ಕೂಲ್'ಗೆ ಖ್ಯಾತ ಛಾಯಾಗ್ರಾಹಕ ರತ್ನವೇಲು ಕೆಲಸ ಮಾಡಿದ್ದಾರೆ.

'ಘಜನಿ' ಖ್ಯಾತಿಯ ಸಂಕಲನಕಾರ ಆಂಟನಿಯವರ ಸಂಕಲನವಿದೆ. ರಮೇಶ್‌ದೇಸಾಯಿ ಕಲಾ ನಿರ್ದೆಶನ, ವಿ.ಹರಿಕೃಷ್ಣರ ಸಂಗೀತ, ರವಿಶಂಕರ್ ನಿರ್ಮಾಣ ನಿರ್ವಹಣೆ, ದತ್ತಣ್ಣ, ಯತೀಶ್‌ಕುಮಾರ್ ಮೇಲ್ವಿಚಾರಣೆ ಈ ಚಿತ್ರಕ್ಕಿದೆ. ಗಣೇಶ್, ಸನಾಖಾನ್, ಸಾಧುಕೋಕಿಲಾ, ದೀಪಾ ಶೆಟ್ಟಿ, ಶರಣ್, ಸಂಗೀತಾ ಶೆಟ್ಟಿ, ದತ್ತಣ್ಣ ಮುಂತಾದವರು ಚಿತ್ರದ ತಾರಾಗಣದಲ್ಲಿದ್ದಾರೆ.

More from Filmibeat

English summary
Golden Star Ganesh"s debut directional movie "Kool, Sakkath Hot Maga" is now moving New Zealand, Australia, Bangkok, and other foreign locations to shot 3 songs in 12 days schedule from first week of December. Sana Khan is opposite Ganesh as heroine.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X