ತೆಲುಗು ಸ್ಟಾರ್ ದಿಗ್ಗಜರ ನಡುವೆ 'ಸುದೀಪೋತ್ಸವ'

ತೆಲುಗು ಸ್ಟಾರ್ ನಟರಾದ ರವಿತೇಜ ಮತ್ತು ಜೂನಿಯರ್ ಎನ್ ಟಿಆರ್ ತಮಗೆ ಮೊದಲಿನಿಂದಲೂ ಸ್ನೇಹವಿದೆ ಎಂದು ಹೇಳಿದ ಸುದೀಪ್, ತೆಲುಗು ಚಿತ್ರದಲ್ಲಿ ನಟಿಸುವ ಮೂಲಕ ತಮಗೆ ಅಲ್ಲೂ ಒಂದು ಸ್ಥಾನ ಕಲ್ಪಿಸಿಕೊಟ್ಟ ರಾಜಮೌಳಿಯವರನ್ನು ಮನಸಾರೆ ಹೊಗಳಿದರು. ಬಳ್ಳಾರಿಯ ವೇದಿಕೆಯಲ್ಲಿ ತೆಲುಗು ನಟರೆಲ್ಲ ಸುದೀಪ್ ಬಗ್ಗೆ ಸಾಕಷ್ಟು ಒಳ್ಳೆಯ ಮಾತುಗಳನ್ನು ಹೇಳಿದರು.
ಮಗಧೀರ, ವಿಕ್ರಮಾರ್ಕುಡು, ಮರ್ಯಾದಾ ರಾಮನ್ನ, ಛತ್ರಪತಿ, ಸೈ ಹಾಗೂ ಯಮದೊಂಗ ಮುಂತಾದ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ರಾಜಮೌಳಿ, ಈಗ ಚಿತ್ರದ ಮೂಲಕ ಹೊಸ ದಾಖಲೆ ಮೆರೆಯಲಿದ್ದಾರೆಂದು ಇಡೀ ದಕ್ಷಿಣ ಭಾರತ ನಂಬಿದೆ. ಇದೇ ತಿಂಗಳು, ಏಪ್ರಿಲ್ 27ಕ್ಕೆ ಬಿಡುಗಡೆಯಾಗಲಿರುವ ಈ ಚಿತ್ರದ ನಂತರ ಸುದೀಪ್ ಗ್ರಾಫ್ ಬಹಳಷ್ಟು ಮೇಲೇರಲಿದೆ ಎನ್ನಲಾಗಿದೆ. (ಒನ್ ಇಂಡಿಯಾ ಕನ್ನಡ)
English summary
Kannada Actor Kichcha Sudeep starer Telugu movie Eega's Audio Released yesterday (April 01, 2012) | in Bellary.


Click it and Unblock the Notifications