»   » ಬಳ್ಳಾರಿಯಲ್ಲಿ 'ಈಗ' ಕಿಚ್ಚ ಸುದೀಪ್ ಭಾರೀ ಭಜನೆ

ಬಳ್ಳಾರಿಯಲ್ಲಿ 'ಈಗ' ಕಿಚ್ಚ ಸುದೀಪ್ ಭಾರೀ ಭಜನೆ

Posted By:
Subscribe to Filmibeat Kannada
<ul id="pagination-digg"><li class="next"><a href="/news/02-kannada-actor-kichcha-sudeep-eega-telugu-movie-aid0172.html">Next »</a></li></ul>
ಕರ್ನಾಟಕದ ಬಳ್ಳಾರಿಯಲ್ಲಿ ತೆಲುಗಿನ 'ಈಗ' ಚಿತ್ರದ ಆಡಿಯೋ ಬಿಡುಗಡೆ ನಿನ್ನೆ (ಏಪ್ರಿಲ್ 01, 2012) ರಂದು ನೆರವೇರಿದೆ. ಬಳ್ಳಾರಿಯಲ್ಲಿ ತೆಲುಗು ಭಾಷೆ ಹಾಗೂ ಭಾಷೆಯ ಸಿನಿಮಾ ಪ್ರಭಾವ ಹೆಚ್ಚಾಗಿರುವುದು ಎಲ್ಲರಿಗೂ ತಿಳಿದ ವಿಷಯವೇ. ಹೀಗಿರುವಾಗ ಸಹಜವಾಗಿ ಈಗ ಚಿತ್ರತಂಡ ಬಳ್ಳಾರಿಯತ್ತ ಬಲೆ ಬೀಸಿದೆ. ರಾಜಮೌಳಿ ನಿರ್ದೇಶನದ ಈ ಚಿತ್ರದಲ್ಲಿ ಕನ್ನಡದ ಕಿಚ್ಚ ಸುದೀಪ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಸುದೀಪ್ ನಟಿಸಿರುವ ಕಾರಣಕ್ಕೆ ಕರ್ನಾಟಕದಲ್ಲಿ ಇನ್ನೂ ಹೆಚ್ಚಿನ ನಿರೀಕ್ಷೆಗೆ ಕಾರಣವಾಗಿರುವ ಈಗ ಚಿತ್ರ, ಆಂಧ್ರದಲ್ಲಿ ನಿರ್ದೇಶಕ ರಾಜಮೌಳಿ ಹೆಸರಿಗಿರುವ ತಾಕತ್ತಿನಿಂದ ಬಹುನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ಬಳ್ಳಾರಿಯಲ್ಲಿ ಖ್ಯಾತ ತೆಲುಗು ಚಿತ್ರತಾರೆಗಳೆಲ್ಲಾ ಭಾಗವಹಿಸಿದ್ದ ಈ ಸಮಾರಂಭದಲ್ಲಿ ಸುದೀಪ್ ಸಖತ್ ಮಿಂಚಿದರು.

ಪ್ರಭಾಸ್, ಜೂನಿಯರ್ ಎನ್ ಟಿಆರ್, ನಾಗಾರ್ಜುನ, ಸುನೀಲ್, ರವಿತೇಜ, ರಾಣಾ ದಗ್ಗುಬಾಟಿ, ವೆಂಕಟೇಶ್ ಮುಂತಾದ ತೆಲುಗು ಘಟಾನುಘಟಿ ಸ್ಟಾರ್ ಗಳು ಸುದೀಪ್ ಪ್ರತಿಭೆಗೆ ಬೆರಗುಗೊಂಡರು. ನೆರೆದಿದ್ದ ಜನಸ್ತೋಮದ ಒಕ್ಕೊರಲಿನ ಕೂಗು 'ಕನ್ನಡದಲ್ಲಿ ಮಾತಾಡಿ...' ಎಂಬುದನ್ನು ಬೆಂಬಲಿಸಿದ ಸುದೀಪ್ ಕನ್ನಡದಲ್ಲಿ ಮಾತಾಡಿ ಕನ್ನಡಿಗರ ಪ್ರೀತಿಗೆ ಪಾತ್ರರಾದರು. ಮುಂದಿನ ಪುಟ ನೋಡಿ...

<ul id="pagination-digg"><li class="next"><a href="/news/02-kannada-actor-kichcha-sudeep-eega-telugu-movie-aid0172.html">Next »</a></li></ul>

English summary
Kannada Actor Kichcha Sudeep starer Telugu movie Eega's Audio Released yesterday (April 01, 2012) | in Bellary. &#13; &#13;

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X