ಕರಿಬಸವಯ್ಯ ಕಾರು ಆಕ್ಸಿಡೆಂಟ್; ಡಿಂಗ್ರಿ ಹೇಳಿದ ಸತ್ಯ
ಡಿಕ್ಕಿ ಹೊಡೆದ ರಭಸಕ್ಕೆ ಕಾರು ಆಕ್ಷನ್ ಫಿಲಂನಲ್ಲಿ ತೋರಿಸುವಂತೆ ಉರುಳಿಕೊಂಡು ಹೋಗಿ ಕೆಳಗೆ ಬಿದ್ದಿದೆ. ಬಳಿಕ 5 ಗಂಟೆ ಸಮಯದಲ್ಲಿ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ವ್ಯಾಪಾರಿ ಹುಡುಗರು ಕೆಳಗೆ ಬಿದ್ದಿದ್ದ ಕಾರಿನ ಇಂಡಿಕೇಟರ್ ಮಿಣಮಿಣ ಎನ್ನುತ್ತಿರುವುದನ್ನು ನೋಡಿದ್ದಾರೆ. ಯಾವುದೋ ಕಾರು ಕೆಳಗೆ ಬಿದ್ದಿದೆ ಬನ್ರೋ ಎಂದು ಹೋಗಿ ನೋಡಿದ್ದಾರೆ.
ಕರಿಬಸವಯ್ಯನದೇ ಮೊಬೈಲನ್ನು ತೆಗೆದುಕೊಂಡು ಅವರು ಕೊನೆಯದಾಗಿ ಮಾಡಿದ್ದ ಕರೆಗೆ ಫೋನು ಮಾಡಿದ್ದಾರೆ (ಕೆಬಿ ಕೊನೆಯದಾಗಿ ಅವರ ಪತ್ನಿಗೆ ಫೋನು ಮಾಡಿದ್ದರು). ಇಂತಹ ಕಡೆ ಕಾರು ಅಪಘಾತವಾಗಿದೆ. ಕಾರಿನಲ್ಲಿರುವ ವ್ಯಕ್ತಿ ಏನಾಗಿದ್ದಾನೋ ಗೊತ್ತಿಲ್ಲ. ದಯವಿಟ್ಟು ಬನ್ನಿ ಎಂದು ಎಲ್ಲ ವಿವರಗಳನ್ನೂ ಹೇಳಿದ್ದಾನೆ. ಕಾರು ಉರುಳಿಬಿದ್ದ ರಭಸಕ್ಕೆ ಕೆಬಿ ತಲೆ ಎರಡು ಸೀಟುಗಳ ನಡುವೆ ಸಿಕ್ಕಿಹಾಕಿಕೊಂಡಿತ್ತಂತೆ.
ಬಳಿಕ ಕರೆ ಮಾಡಿದ ಹುಡುಗ ಮೊಬೈಲ್ ಫೋನ್‌ನಿಂದ ಸಿಮ್ ತೆಗೆದು ಬಿಸಾಕಿ. ಮೊಬೈಲ್ ಸಮೇತ ಪರಾರಿಯಾಗಿದ್ದಾನೆ. ಬಳಿಕ ಅದೇ ರಸ್ತೆಯಲ್ಲಿ 6 ಗಂಟೆ ಸುಮಾರಿಗೆ ಬೆಳಗ್ಗೆ ಅವರನ್ನು 5 ಗಂಟೆಗೆ ಹೋಗಿ ಎಂದು ತಡೆದಿದ್ದ ವ್ಯಕ್ತಿ ಬಂದಿದ್ದಾರೆ. ಕಾರನ್ನು ನೋಡಿದವರೆ ಅಯ್ಯೋ ನಮ್ಮ ಕರಿಬಸವಣ್ಣನದಲ್ವೇ ಎಂದು ಹೋಗಿ ನೋಡಿದ್ದಾನೆ. ಪರಿಸ್ಥಿತಿ ಗೊತ್ತಾಗಿದೆ. ಅಲ್ಲೇ ಯಾವುದೋ ಸ್ಕಾರ್ಫಿಯೋ ಕಾರು ಹಿಡಿದು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ. ಮುಂದಿನದೆಲ್ಲಾ ನಿಮಗೆ ಗೊತ್ತೇ ಇದೆ. ಐದಾರು ತಿಂಗಳಲ್ಲಿ ಅವನು ಚೇತರಿಸಿಕೊಳ್ಳುತ್ತಾನೆ ಎಂದುಕೊಂಡಿದ್ದೆವು. ಆದರೆ ಹೀಗಾಗುತ್ತದೆ ಎಂದು ಊಹಿಸಿರಲಿಲ್ಲ ಎಂದು ಡಿಂಗ್ರಿ ಮೌನಕ್ಕೆ ಶರಣಾದರು.


Click it and Unblock the Notifications












