ಪ್ರಾಬ್ಲಂ ಇಲ್ಲದೇನೆ ಗೆಲುವಿನತ್ತ ಲೈಫು ಇಷ್ಟೇನೆ!!
ದಿಗಂತ್ ಮುಖ್ಯ ಭೂಮಿಕೆಯಲ್ಲಿರುವ 'ಲೈಫು ಇಷ್ಟೇನೆ' ಚಿತ್ರ ಸದ್ದಿಲ್ಲದೇ 2011ರ ಹಿಟ್ ಚಿತ್ರಗಳ ಪಟ್ಟಿಗೆ ಸೇರುವತ್ತ ದಾಪುಗಾಲು ಹಾಕುತ್ತಿದೆ. ದಿನದಿಂದ ದಿನಕ್ಕೆ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿರುವ ಈ ಚಿತ್ರ ಮೊದಲ ವಾರದಲ್ಲೇ 1.6 ಕೋಟಿ ರೂಪಾಯಿ ಗಳಿಕೆ ಕಂಡಿದೆ.
ಬೆಂಗಳೂರು ನಗರದ ಮಲ್ಟಿಪ್ಲೆಕ್ಸ್‌ನಲ್ಲಿ ದಿನವೊಂದಕ್ಕೆ 7 ಪ್ರದರ್ಶನ ಕಾಣುತ್ತಿರುವ ಈ ಚಿತ್ರ ಇತರ ಮಲ್ಟಿಪ್ಲೆಕ್ಸ್‌ಗಳಲ್ಲಿ ಕೂಡಾ ಸತತ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಚೊಚ್ಚಿಲ ಚಿತ್ರ ನಿರ್ದೇಶಿಸಿದ ಪವನ್ ಕುಮಾರ್ ಬಾಕ್ಸ್ ಆಫೀಸ್ ಗಳಿಕೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ತೆಲುಗಿನ ಹೆಸರಾಂತ ಚೌಧುರಿ ಬ್ಯಾನರ್‌ನವರು ಈ ಚಿತ್ರವನ್ನು ತಮಿಳು ಮತ್ತು ತೆಲುಗು ಭಾಷೆಗೆ ರಿಮೇಕ್ ಮಾಡಲು ಮಾತುಕತೆ ನಡೆಸುತ್ತಿದ್ದಾರೆ. ಮನೋಮೂರ್ತಿ ಸಂಗೀತ ನೀಡಿದ 25ನೇ ಚಿತ್ರವಿದು. ಚಿತ್ರ ಬಿಡುಗಡೆಗೊಂಡ ಎಲ್ಲಾ ಸೆಂಟರ್‌ಗಳಲ್ಲಿ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ. ಚಿತ್ರ ಗೆಲ್ಲಿಸಿದ ಕನ್ನಡಿಗರಿಗೆ ನನ್ನ ಧನ್ಯವಾದಗಳು. ಈ ಯಶಸ್ಸು ಇನ್ನೂ ಉತ್ತಮ ಚಿತ್ರ ನೀಡಲು ನನಗೆ ಸ್ಫೂರ್ತಿ ನೀಡುತ್ತದೆ ಎಂದು ನಿರ್ದೇಶಕರು ಖುಷಿ ವ್ಯಕ್ತಪಡಿಸಿದ್ದಾರೆ. (ಒನ್‌ಇಂಡಿಯಾ ಕನ್ನಡ ಸಿನಿವಾರ್ತೆ)


Click it and Unblock the Notifications











