ಬಂಗಾರದ ಮನುಷ್ಯ ಚಿತ್ರವನ್ನು 60 ಬಾರಿ ನೋಡಿದ ಎಚ್ಡಿಕೆ

ಟಿ ಕೆ ರಾಮರಾವ್ ಕಾದಂಬರಿ ಆಧಾರಿತ ಬಂಗಾರದ ಮನುಷ್ಯ ಮಾರ್ಚ್ 1972ರಲ್ಲಿ ತೆರೆ ಕಂಡಿತ್ತು. ನನ್ನ 13ನೇ ವಯಸ್ಸಿನಲ್ಲೇ ಈ ಚಿತ್ರವನ್ನು ನೋಡಿದ್ದೆ. ಮನಸಿಗೆ ಸ್ಫೂರ್ತಿ ನೀಡುವ ಚಿತ್ರವಿದು. ನಾನು ಅಣ್ಣಾವ್ರ ಅಭಿಮಾನಿ. ಚಿತ್ರ ಮರು ಬಿಡುಗಡೆ ಆದಾಗಲೆಲ್ಲಾ ಮತ್ತೆ ಮತ್ತೆ ಈ ಚಿತ್ರವನ್ನು ನೋಡುತ್ತಿದ್ದೆ. ನಾನು ಈ ಚಿತ್ರವನ್ನು ಅರವತ್ತು ಬಾರಿ ನೋಡಿದ್ದೇನೆ ಎಂದು ತನ್ನ ಫ್ಲ್ಯಾಶ್ ಬ್ಯಾಕ್ ಅನ್ನು ಮೆಲುಕು ಹಾಕಿದ್ದಾರೆ.
ಡಾ. ರಾಜಕುಮಾರ್, ಭಾರತಿ, ವಜ್ರಮುನಿ, ಬಾಲಕೃಷ್ಣ ಪ್ರಮುಖ ತಾರಾಗಣದಲ್ಲಿರುವ ಬಂಗಾರದ ಮನುಷ್ಯ ಚಿತ್ರವನ್ನು ಬಹುಷಃ ಕನ್ನಡಿಗರೆಂದೂ ಮರೆಯಲಾರರು. ದಾಖಲೆಗಳ ಮೇಲೆ ದಾಖಲೆ ಬರೆದ ಈ ಚಿತ್ರ ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮವನ್ನೇ ನೀಡಿತ್ತು.
ಡಾ. ರಾಜಕುಮಾರ್ ರಾಜೀವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಾಮಾಜಿಕ ಹಿತಾಶಕ್ತಿಯುಳ್ಳ ಈ ಚಿತ್ರ ವೀಕ್ಷಿಸಿದ ಹಲವು ಯುವಕರು ಮನಪರಿವರ್ತನೆ ಗೊಂಡು ಕೃಷಿಗೆ ಆದ್ಯತೆ ನೀಡಿದ ಉದಾಹರಣೆ ಬಹಳಷ್ಟಿವೆ.
(ಕೃಪೆ:ಸಿನಿಗಂಧ)
More from Filmibeat
English summary
Former CM H D Kumaraswamy watched Kannada movie Bangarada Manushya 60 times. Dr. Rajkumar, Bharati in the lead role.
ಡಾರಾಜ್ ಕುಮಾರ್ ಬಂಗಾರದ ಮನುಷ್ಯ ಕನ್ನ್ನಡ ಸಿನಿಮಾ ಭಾರತಿ ವಿಷ್ಣುವರ್ಧನ್ bharathi vishnuvardhan drrajkumar kannada movies hd kumaraswamy


Click it and Unblock the Notifications











