ಮುತ್ತತ್ತಿಯಲ್ಲಿ ನಟಿ ಪ್ರಿಯಾಮಣಿ ಕಾರು ಅಪಘಾತ

By Rajendra

ಕನ್ನಡ ಚಿತ್ರರಂಗದ ಸಿನಿಮಾ ತಾರೆ ಪ್ರಿಯಾಮಣಿಗ ಕಾರು ಅಪಘಾತಕ್ಕೀಡಾಗಿದ್ದು ಅವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಗಳೂರಿನಿಂದ 90 ಕಿ.ಮೀ ದೂರದಲ್ಲಿರುವ ಮುತ್ತತ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.

'ಅಣ್ಣಾ ಬಾಂಡ್' ಚಿತ್ರೀಕರಣಕ್ಕಾಗಿ ಪ್ರಿಯಾಮಣಿ ಹಾಗೂ ಚಿತ್ರತಂಡ ಕಾರಿನಲ್ಲಿ ಪ್ರಯಾಣಿಸುತ್ತಿರಬೇಕಾದರೆ ಈ ಅಪಘಾತ ಸಂಭವಿಸಿದೆ. ಆದರೆ ಕಾರಿನಲ್ಲಿ ಪ್ರಯಾಣಿಸುತ್ತ್ತಿದ್ದ ಯಾರೊಬ್ಬರಿಗೂ ಅಪಾಯವಾಗಿಲ್ಲ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

'ಅಣ್ಣಾ ಬಾಂಡ್' ಚಿತ್ರೀಕರಣಕ್ಕಾಗಿ ಮುತ್ತತ್ತಿಯ ದುರ್ಗಮ ಕಾಡನ್ನು ಆಯ್ಕೆ ಮಾಡಲಾಗಿತ್ತು. ಚಿತ್ರೀಕರಣ ಪ್ರದೇಶಕ್ಕೆ ಚಿತ್ರತಂಡದೊಂದಿಗೆ ಅವರು ಹೋಗುತ್ತಿರಬೇಕಾದರೆ ಈ ಅಪಘಾತ ಸಂಭವಿಸಿದೆ. ಈ ಅಪಘಾತ ಶನಿವಾರ (ಡಿ.3) ಬೆಳಗ್ಗೆ ಸಂಭವಿಸಿದ್ದರೂ ತಡವಾಗಿ ಬೆಳಕಿಗೆ ಬಂದಿದೆ.

ಪ್ರಿಯಾಮಣಿ ಅವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ಅಭಿನಯಿಸುತ್ತಿರುವುದು ಗೊತ್ತೇ ಇದೆ. ಈ ಚಿತ್ರದ ಮತ್ತೊಬ್ಬ ನಾಯಕಿಯಾಗಿ ನಿಧಿ ಸುಬ್ಬಯ್ಯ ಕೂಡ ಅಭಿನಯಿಸಿದ್ದಾರೆ. ಪ್ರಿಯಾಮಣಿ ಅಭಿನಯದ ಮತ್ತೊಂದು ಕನ್ನಡ ಚಿತ್ರ 'ವಿಷ್ಣುವರ್ಧನ' ಈ ವಾರ ತೆರೆಕಾಣುತ್ತಿದೆ. (ಏಜೆನ್ಸೀಸ್)

More from Filmibeat

English summary
Anna Bond actress Priyamani escaped a major car accident while driving to the shooting sets in a Muthati jungle which is nearly 90 kms away from Bangalore city. Luckily everybody in the car was safe but the car got damaged a little in the sides.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X