ಜಗ್ಗೇಶ್ ಮಾನವೀಯತೆ ಎಲ್ಲರಿಗೂ ಮಾದರಿಯಾಗಲಿ

Jaggesh
ಕನ್ನಡ ಚಿತ್ರರಂಗದಲ್ಲಿ ಕಷ್ಟ ಪಟ್ಟು ಮೇಲೆ ಬಂದವರಲ್ಲಿ ನವರಸನಾಯಕ ಜಗ್ಗೇಶ್ ಕೂಡ ಒಬ್ಬರು. ಚಿತ್ರರಂಗಕ್ಕೆ ಹೊಸದಾಗಿ ಕಾಲಿಡುವವರು ಹೇಗೆ ಕಷ್ಟ ಪಡುತ್ತಾರೆನ್ನುವುದು ಜಗ್ಗೇಶ್ ಅವರಿಗೆ ಚೆನ್ನಾಗಿಯೇ ಗೊತ್ತು. ಜಗ್ಗೇಶ್ ಒಮ್ಮೆ ತಮ್ಮ ಚಿತ್ರದಲ್ಲಿ ಹೊಸಬರಿಗೆ ಅವಕಾಶ ನೀಡಿದರೆ ಅದೇ ತಂಡವನ್ನು ಮುಂದಿನ ಚಿತ್ರಗಳವರೆಗೆ ಮುಂದುವರಿಸಿಕೊಂಡು ಹೋಗುತ್ತಾರೆ.

ಇದಕ್ಕೆ ಜಗ್ಗೇಶ್ ನೀಡುವ ವಿವರಣೆ ತೀರ ಸರಳವಾದದ್ದು. ಒಮ್ಮೆ ಅವಕಾಶ ನೀಡಿ ಕೈ ಬಿಟ್ಟರೆ ಅವರು ಪುನಃ ಅವಕಾಶಕ್ಕಾಗಿ ಪರದಾಡಬೇಕು. ಅದಕ್ಕಿಂತ ತಮ್ಮದೇ ಮುಂದಿನ ಚಿತ್ರಗಳಲ್ಲಿ ಅವಕಾಶ ನೀಡಿ ಅವರಲ್ಲಿರುವ ಎಲ್ಲಾ ಪ್ರತಿಭೆಯನ್ನು ಹೊರತೆಗೆಯಬಹುದು. ನಂತರ ಒಂದು ಹಂತಕ್ಕೆ ಹೊಸಬರು ಬೆಳೆದ ಮೇಲೆ ಅವರಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತವೆ ಎನ್ನುವುದು ಜಗ್ಗೇಶ್ ಅವರ ಒಳ್ಳೆಯ ಗುಣ.

ನಾವು ಪಟ್ಟ ಕಷ್ಟವನ್ನು ಬೇರೆಯವರು ಪಡಬಾರದು ಎಂಬುದು ಇದರಲ್ಲಿ ಅಡಗಿರುವ ಚಿಕ್ಕ ಮಾನವೀಯತೆ ಎನ್ನುತ್ತಾರೆ ಜಗ್ಗೇಶ್. ಇನ್ನೊಬ್ಬರ ಏಳಿಗೆಯನ್ನು ಸಹಿಸದೆ ಕಾಲೆಳೆಯುವ ಇಂತಹ ಕಾಲದಲ್ಲಿ ಜಗ್ಗೇಶ್ ರಂತಹ ಹಿರಿಯ ನಟರ ಮಾನವೀಯತೆ ಉಳಿದವರಿಗೂ ಮಾದರಿಯಾಗಲಿ.

More from Filmibeat

English summary
Senior actor of Kannada industry Jaggesg prefer to give more opportunity to new comers. So that we can take out best of their talents.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X