ಆಯ್ಕೆ ಸಮಿತಿಯಲ್ಲಿ ಭಾರತಿ ವಿಷ್ಣುವರ್ಧನ್ ಇದ್ದಿದ್ದಕ್ಕೆ ಬಚಾವ್

Producer Soorappa Babu & Puneeth Rajkumar
ಅವಾರ್ಡ್ ಸಿಗಲೆಂದೇ ಚಿತ್ರ ನಿರ್ಮಾಣ ಮಾಡುವವರಿಗೆ ಪ್ರತಿ ವರ್ಷ ಪ್ರಶಸ್ತಿಯ ಸುರಿಮಳೆಯನ್ನೇ ಸುರಿಸಿ ಆದರಿಸಲಾಗುತ್ತದೆ. ಈ ಬಾರಿಯೂ ಹಾಗೆ. ಆಯ್ಕೆ ಸಮಿತಿಯಲ್ಲಿ ಭಾರತಿ ವಿಷ್ಣುವರ್ಧನ್ ಇದ್ದಿದಕ್ಕೆ ಬಚಾವ್. ಕೊನೆ ಪಕ್ಷ ಸೂಪರ್, ಮೈಲಾರಿ, ಪೃಥ್ವಿ ಅಂತ ಚಿತ್ರಗಳಿಗಾದರೂ ಬೇರೆ ಬೇರೆ ವಿಭಾಗದಲ್ಲಿ ಅವಾರ್ಡ್ ಘೋಷಣೆಯಾಗಿದೆ. ಇಲ್ಲದೆ ಹೋಗಿದ್ದರೆ ಕಮರ್ಷಿಯಲ್ ಸಿನಿಮಾಗಳನ್ನು ದೇವರೇ ಕಾಪಾಡಬೇಕಿತ್ತು ಎಂದು ತಮ್ಮ ನೇರ, ನಿಷ್ಠುರ ಮಾತುಗಳಿಗೆ ಹೆಸರಾಗಿರುವ ಸೂರಪ್ಪ ಬಾಬು ಖಡಕ್ಕಾಗಿ ಅಭಿಪ್ರಾಯಪಟ್ಟಿದ್ದಾರೆ.

ಕೆಲವೇ ಲಕ್ಷ ರೂಪಾಯಿಗಳಲ್ಲಿ ಸಿನಿಮಾ ಮಾಡಿ ಮುಗಿಸಿ ಅದಕ್ಕೆ ಕಲಾತ್ಮಕ ಸಿನಿಮಾ ಎಂದು ಸ್ಥಾನ ಗಿಟ್ಟಿಸಿ ಅದಕ್ಕೊಂದು ಪ್ರಶಸ್ತಿಯನ್ನು ಗಳಿಸಿ ಕಾಲರ್ ಎಗರಿಸುವ ನಿರ್ಮಾಪಕರು ನಮ್ಮಲ್ಲಿ ಬಹಳಷ್ಟು ಜನರಿದ್ದಾರೆ. ಆ ಚಿತ್ರವನ್ನು ಅವರ ಕುಟುಂಬದವರು ಬಿಟ್ಟರೆ ಮತ್ತಿನ್ಯಾರೂ ನೋಡುವುದಿಲ್ಲ ಎಂದು ನಿರ್ಮಾಪಕ ಸೂರಪ್ಪ ಬಾಬು ಗಂಭೀರ ಆರೋಪ ಮಾಡಿದ್ದಾರೆ.

ನನ್ನ ನಿರ್ಮಾಣದ ಪೃಥ್ವಿ ಚಿತ್ರದ ನಟನೆಗೆ ಪುನೀತ್ ರಾಜಕುಮಾರ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ ಅದು ಸಂತೋಷ ತಂದಿದೆ. ಆದರೆ ಪ್ರಶಸ್ತಿ ಆಯ್ಕೆ, ಮಾನದಂಡದ ಬಗ್ಗೆ ನನಗೆ ಬಹಳಷ್ಟು ಅಸಮಾಧಾನಗಳಿವೆ. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಅದನ್ನು ಜನರಿಗೆ ತಲುಪಿಸಬೇಕೆಂದು ಮತ್ತಷ್ಟು ಲಕ್ಷ ಆದರೆ ಮೇಲೆ ಸುರಿದು ವರ್ಷಪೂರ್ತಿ ಒದ್ದಾಡುವ ನಿರ್ಮಾಪಕರು ನಾವು ಎಂದು ಸೂರಪ್ಪ ಬಾಬು ಬೇಸರ ವ್ಯಕ್ತ ಪಡಿಸಿದ್ದಾರೆ.

ಚಿತ್ರವೊಂದನ್ನು ಜನರಿಗೆ ತೋರಿಸದೆ ಅದು ಸಾಮಾಜಿಕ ಪರಿಣಾಮ ಬೀರುವುದು ಹೇಗೆ? ಸಾಕಷ್ಟು ಜನ ನೋಡಿ ಮೆಚ್ಚಿರುವ ಕಾರಣಕ್ಕೆ ಚಿತ್ರಗಳು ಜನಪ್ರಿಯ ಅನಿಸಿಕೊಂಡಿರುತ್ತದೆ. ಅಂಥವುಗಳಲ್ಲಿ ಸಂದೇಶವಿದ್ದರೆ ಒಂದಷ್ಟು ಜನ ಸೀರಿಯಸ್ಸಾಗಿ ಸ್ವೀಕರಿಸುವ ಸಾಧ್ಯತೆಗಳೂ ಇರುತ್ತವೆ. ಆದರೆ ಅವುಗಳನ್ನು ಕಮರ್ಷಿಯಲ್ ಚಿತ್ರವೆಂದು ಹಣೆಪಟ್ಟಿ ಕಟ್ಟಿ ಪ್ರಶಸ್ತಿಯಿಂದ ವಂಚಿಸಲಾಗುತ್ತದೆ ಎಂದು ಬಾಬು ಗರಂ ಆಗಿದ್ದಾರೆ.

More from Filmibeat

English summary
Producer Soorappa Babu said, I am unhappy with the certain parameter setting for selecting the state awards. Soorappa Babu produced the movie Prithvi, Puneeth Rajkumar has got the best actor for this film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X