ನಮ್ಮಣ್ಣ ಡಾನ್ ಆಗಲಿದ್ದಾರೆ ಕಲಾವಿದ ಕಮಲ್ ಹಾಸನ್
ಪ್ರತಿಭಾನ್ವಿತ ನಟರಾದ ಕಮಲ್ ಹಾಸನ್ ಹಾಗೂ ರಮೇಶ್ ಅರವಿಂದ್ ಮತ್ತೆ ಕೈಕೈ ಜೋಡಿಸಿದ್ದಾರೆ. ಈಗಾಗಲೆ ಸಿದ್ಧವಾಗುತ್ತಿರುವ ರಮೇಶ್ ಅವರ ನಮ್ಮಣ್ಣ ಡಾನ್ ಚಿತ್ರವನ್ನು ತಮಿಳಿಗೆ ತರುವ ಬಗ್ಗೆ ಕಮಲ್ ಜೊತೆ ಮಾತನಾಡಿದ್ದಾರೆ. ನಮ್ಮಣ್ಣ ಡಾನ್ ಚಿತ್ರ ತಮಿಳಿಗೆ ರೀಮೇಕ್ ಮಾಡುವ ಬಗ್ಗೆ ಚಿಂತನೆ ನಡೆದಿದೆ.
ಇತ್ತೀಚೆಗೆ ರಮೇಶ್ ಚೆನ್ನೈಗೆ ಭೇಟಿ ನೀಡಿದ್ದರು. ಆಗ ಕಮಲ್ ಅವರನ್ನು ಭೇಟಿಯಾಗಿ ನಮ್ಮಣ್ಣ ಡಾನ್ ಬಗ್ಗೆ ಪ್ರಸ್ತಾಪಿಸಲಾಗಿದೆ. ಈ ಚಿತ್ರವನ್ನು ತಮಿಳಿಗೆ ರೀಮೇಕ್ ಮಾಡಿದರೆ ಹೇಗೆ ಎಂಬ ಪ್ರಶ್ನೆಯನ್ನು ಕಮಲ್ ಮುಂದೆ ರಮೇಶ್ ಇಟ್ಟಿದ್ದಾರೆ. ಇದಕ್ಕೆ ಕಮಲ್ ಹಾಸನ್ ಕಡೆಯಿಂದಲೂ ಸಿಗ್ನಲ್ ಸಿಕ್ಕಿದೆಯಂತೆ.
ನಮ್ಮಣ್ಣ ಡಾನ್ ಚಿತ್ರ ರಮೇಶ್ ಅರವಿಂದ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಐದನೇ ಕಾಣಿಕೆ. ರಾಮ ಶಾಮ ಭಾಮ, ಆಕ್ಸಿಡೆಂಟ್, ವೆಂಕಟ ಇನ್ ಸಂಕಟ, ಸತ್ಯವಾನ್ ಸಾವಿತ್ರಿ ಹಾಗೂ ಕ್ರೇಜಿ ಕುಟುಂಬ ಚಿತ್ರಗಳ ಬಳಿಕ ರಮೇಶ್ ಕೈಗೆತ್ತಿಕೊಂಡಿರುವ ಚಿತ್ರ ನಮ್ಮಣ್ಣ ಡಾನ್. (ಒನ್‌ಇಂಡಿಯಾ ಕನ್ನಡ)
More from Filmibeat
English summary
Kamal Hassan and Ramesh Aravind might collaborate again. Well, the Kannada actor is in talks with the Universal Star for the Tamil version of yet-to-be released Sandalwood flick Nammanna Don.


Click it and Unblock the Notifications











