ರಾಜೇಂದ್ರಸಿಂಗ್ ಬಾಬು ಪ್ರಾಣಾಪಾಯದಿಂದ ಪಾರು

ಸಣ್ಣಪುಟ್ಟ ಗಾಯಗಳಾಗಿ ಈಗ ಚೇತರಿಸಿಕೊಂಡಿರುವ ಸಿಂಗ್ ಬಾಬು ಅವರು ಚಿತ್ರತಂಡದೊಂದಿಗೆ ಸಿಂಗಾಪುರಕ್ಕೆ ಪಯಣ ಬೆಳೆಸಿದ್ದಾರೆ. ಅವರು ಪ್ರಾಣಾಪಾಯದಿಂದ ಬಚಾವಾಗಿರುವುದಾಗಿ ಮೂಲಗಳು ತಿಳಿಸಿವೆ. ರೆಬೆಲ್ ಚಿತ್ರದ ಶೂಟಿಂಗ್‌ಗಾಗಿ ಅವರು ಸಿಂಗಪುರಕ್ಕೆ ಹೊರಟಿದ್ದಾರೆ.
ಮೈಸೂರು ಡ್ರೀಮ್ ಮರ್ಚೆಂಟ್ಸ್ ಸಂಸ್ಥೆ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ರೆಬಲ್' ಚಿತ್ರದ ಚಿತ್ರೀಕರಣ ನವೆಂಬರ್ 10ರಿಂದ ಸಿಂಗಾಪುರದಲ್ಲಿ ಆರಂಭವಾಗಲಿದೆ. ನಲವತ್ತೆರಡು ಸದಸ್ಯರ ಚಿತ್ರತಂಡ ಸಿಂಗಾಪುರದತ್ತ ಪ್ರಯಾಣ ಬೆಳೆಸಿದೆ. ಅಲ್ಲಿ ಮಾತಿನ ಭಾಗದ ಚಿತ್ರೀಕರಣ ಹಾಗೂ ಎರಡು ಹಾಡುಗಳ ಚಿತ್ರೀಕರಣ ನಡೆಯಲಿದೆ. ನಾಯಕ ಆದಿತ್ಯ ಹಾಗೂ ನಾಯಕಿ ಪ್ರೀತಿ(ಬಾಂಬೆ) ಮುಂತಾದ ಕಲಾವಿದರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸುತ್ತಾರೆ.
ನಿರ್ದೇಶಕರೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಸೆಲ್ವರಾಜ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಜೆಸ್ಸಿಗಿಫ್ಟ್ ಸಂಗೀತ ನೀಡಿದ್ದಾರೆ. ರವಿವರ್ಮ ಹಾಗೂ ಡಿಫರೆಂಟ್ ಡ್ಯಾನಿ ಅವರ ಸಾಹಸ ನಿರ್ದೇಶನವಿರುವ ರೆಬಲ್ಗೆ ಎಂ.ಎಸ್.ರಮೇಶ್ ಸಂಭಾಷಣೆ ಬರೆದಿದ್ದಾರೆ. (ಒನ್‌ಇಂಡಿಯಾ ಕನ್ನಡ)


Click it and Unblock the Notifications











