ನಟ ದೀಪಕ್ ಸತ್ತಿಲ್ಲ, ಪವಾಡ ಸದೃಶ ಪಾರು
ಬ್ಯಾಂಕಾಂಕ್ ನ ಪಟ್ಟಾಯದಲ್ಲಿ 'ಮಾಗಡಿ' ಚಿತ್ರದ ಚಿತ್ರೀಕರಣ ವೇಳೆಯಲ್ಲಿ ನಟ ದೀಪಕ್ ಸತ್ತಿದ್ದಾರೆಂದು ಆರಂಭಿಕ ಸುದ್ದಿ ಸುಳ್ಳಾಗಿದ್ದು, ದೀಪಕ್ ಪವಾಡಸದೃಶ ಪಾರಾಗಿದ್ದು, ಈಜಿ ದಡಸೇರಿ ಮರಳಿ ಬಂದಿದ್ದಾರೆ.
ಬೋಟ್ ರೈಡಿಂಗ್ ದೃಶ್ಯವೊಂದರಲ್ಲಿ ಅಭಿನಯಿಸುತ್ತಿದ್ದಾಗ ದೀಪಕ್ ಬಹುದೂರ ಸಾಗಿದ್ದರು ಮತ್ತು ತಿರುವು ತೆಗೆದುಕೊಳ್ಳುವಾಗ ಮುಗುಚಿ ಬಿದ್ದಿದ್ದರಿಂದ ಬೋಟ್ ಸಮೇತ ದೀಪಕ್ ಮುಳುಗಿದರು. ಆ ಸಮಯದಲ್ಲಿ ದೀಪಕ್ ಸತ್ತಿದ್ದಾರೆಂದೇ ಚಿತ್ರತಂಡ ಕೂಡ ಅಂದುಕೊಂಡಿತ್ತು.
ಆದರೆ, ಎಲ್ಲರಿಗೆ ಅಚ್ಚರಿ ಮೂಡುವಂತೆ, ಯಾವುದೇ ಗಾಯಕೂಡ ಆಗದೆ ದೀಪಕ್ ಈಜಿ ದಡಸೇರಿದ್ದಾರೆ. ದಡ ಸೇರಿದ ನಂತರ ದೀಪಕ್ ಅವರೇ, ತಾವು ಸುರಕ್ಷಿತವಾಗಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಭಾ.ಮಾ ಹರೀಶ್ ಹಾಗೂ ಅವರ ಸಹೋದರ ದಿವಾಕರ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಬೋಟ್ ಓಡಿಸುವ ಮುನ್ನ ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಂಡಿರಲಿಲ್ಲ ಎಂಬ ಮಾಹಿತಿಯೂ ದೊರಕಿದೆ. ಅದೃಷ್ಟವಶಾತ್, ಜ್ಯೂ. ಶಂಕರ್ ನಾಗ್ ಎಂದೇ ಜನಜನಿತವಾಗಿರುವ ದೀಪಕ್ ಮರಳಿ ಬಂದಿದ್ದಾರೆ. (ದೀಪಕ್ ಅಸುನೀಗಿದ್ದಾರೆಂದು ಸುದ್ದಿ ಪ್ರಕಟಿಸಿದ್ದಕ್ಕೆ ವಿಷಾದಿಸುತ್ತೇವೆ.)
More from Filmibeat
English summary
Kannada actor Deepak swims back safely in Bangkok. Initially it was reported that he was dead. But, to every bodies surprise Deepak escaped miraculously and returns to the shooting spot. This happened in shooting of Kananda movie Magadi in Pattaya.


Click it and Unblock the Notifications












