ಬೇಸಿಗೆ ರಜೆ ಸವಿಯಲು ನಾಲ್ಕು ಚಿತ್ರಗಳು!

ಸವಾರಿ
ತೆಲುಗಿನ 'ಗಮ್ಯಂ' ಚಿತ್ರ ಕನ್ನಡಕ್ಕೆ 'ಸವಾರಿ'ಯಾಗಿ ಬರುತ್ತಿರುವುದು ಗೊತ್ತೆ ಇದೆ. ಈ ಚಿತ್ರವನ್ನು ಉಷಾ ಕಿರಣ್ ಮೂವೀಸ್ ನ ರಾಮೋಜಿ ರಾವ್ ನಿರ್ಮಿಸುತ್ತಿದ್ದಾರೆ.ವಿವಿಧ ಭಾಷೆಗಳಲ್ಲಿ ಅವರು ಇದುವರೆಗೂ 82 ಚಿತ್ರಗಳನ್ನು ನಿರ್ಮಿಸಿದ್ದಾರೆ. ಕನ್ನಡದಲ್ಲಿ ರಾಮೋಜಿ ರಾವ್ ನಿರ್ಮಿಸುತ್ತಿರುವ 10ನೆಯ ಚಿತ್ರ 'ಸವಾರಿ'.ಶ್ರೀನಗರ ಕಿಟ್ಟಿ, ರಘು ಮುಖರ್ಜಿ, ಕಮಲಿನಿ ಮುಖರ್ಜಿ, ಸಾಧು ಕೋಕಿಲಾ, ಪವಿತ್ರಾಲೋಕೇಶ್, ಸಿ.ಆರ್.ಸಿಂಹ, ಮಿಲೀನ್ ಗುನಾಂಜಿ, ಸುಮನ್‌ರಂಗನಾಥ್, ದತ್ತಣ್ಣ ಮುಂತಾದವರ ತಾರಾಬಳಗವನ್ನು ಒಳಗೊಂಡ ಸವಾರಿ ಚಿತ್ರ ಈ ವಾರ ತೆರೆಕಾಣಲಿದೆ.
ಜೋಶ್
ಆರಂಭದ ದಿನಂದಿಂದಲ್ಲೂ ಜೋಶ್ ಜನಪ್ರಿಯ. ಏಕೆಂದರೆ ತಮ್ಮ ಚಿತ್ರ ನೂತನಮಯವಾಗಿರಬೇಕೆಂದು ನಿರ್ಮಾಪರಿಗಿದ್ದ ಹಂಬಲ. ಚಿತ್ರ ಆರಂಭಕ್ಕೆ ಪೂರ್ವಭಾವಿಯಾಗಿ ಸಾಕಷ್ಟು ಸ್ಪರ್ಧೆಗಳನ್ನು ಏರ್ಪಡಿಸಿದ್ದ ಎಸ್.ವಿ.ಬಾಬು ಅವರು ಅದರಲ್ಲಿ ಸಿಕ್ಕ ಕಲಾವಿದ ಹಾಗೂ ತಂತ್ರಜ್ಞರನ್ನು ಚಿತ್ರದಲ್ಲಿ ಬಳಸಿಕೊಂಡಿದ್ದಾರೆ. ಕನ್ನಡದ ಮಟ್ಟಿಗೆ ಇದು ವಿನೂತನ ಪ್ರಯತ್ನವೆಂದರೆ ತಪ್ಪಾಗಲಾರದು. ತಾರಾಬಳಗದಲ್ಲಿ ರಾಕೇಶ್, ವಿಷ್ಣು, ಅಕ್ಷಯ್, ಅಲೋಕ್, ಅಮಿತ್, ಜಗನ್ನಾಥ್, ಪೂರ್ಣ, ಸ್ನೇಹ, ಚೇತನ್, ಕರಿಬಸವಯ್ಯ, ರೋಮ ಗಣೇಶ್, ಮಂಡ್ಯ ರಮೇಶ್, ತುಳಸಿ ಶಿವಮಣಿ, ಸುಧಾ ಬೆಳವಾಡಿ ಮುಂತಾದವರಿದ್ದಾರೆ.
ಹೃದಯಗಳ ವಿಷಯ
ಏಪ್ರಿಲ್ 10ರಂದು ಬಿಡುಗಡೆಯಾಗುತ್ತಿರುವ ಮತ್ತೊಂದು ಚಿತ್ರಪ್ರೆಂಡ್ಸ್ ಸಿನಿ ಕಂಬೈನ್ಸ್ ಲಾಂಛನದಲ್ಲಿ ಅಗಳಗುಂಟೆ ಹನುಮಂತರಾಯಪ್ಪ, ಟಿ.ದಾಸರಹಳ್ಳಿ ಕಣ್ಣನ್ ನಿರ್ಮಿಸುತ್ತಿರುವ ವಸಂತ್ ನಿರ್ದೇಶನದ ಹೃದಯಗಳ ವಿಷಯ. ಚಿತ್ರದ ಛಾಯಾಗ್ರಹಣ ಹೆಚ್.ಬಿ.ಎಸ್.ಗೌಡ, ಸಂಗೀತ ಡ್ರಮ್ಸ್ ದೇವ್. ಸಂಕಲನ ಕೆ.ನರಸಯ್ಯ; ಕಲೆ ಬಾಬುಖಾನ್ ; ಸಾಹಸ ಕೌರವ ವೆಂಕಟೇಶ್, ನೃತ್ಯ ಪ್ರಸಾದ್; ಸಾಹಿತ್ಯವಿ .ಮನೋಹರ್, ಭಂಗೀರಂಗ; ನಿರ್ವಹಣೆ ವೈಟ್ ಅಂಡ್ ವೈಟ್ ರಾಮಣ್ಣ, ಪ್ರಶಾಂತ್. ಚಿತ್ರದಲ್ಲಿ ಮಧುಪ್ರಿಯಾ, ಸತ್ಯಜಿತ್, ವಿಶ್ವ ಮುಂತಾದವರು ಅಭಿನಯಿಸಿದ್ದಾರೆ.
ನಿಷೇಧಾಜ್ಞೆ
ಭರತ್‌ಬಾಬು ಪ್ರೊಡಕ್ಷನ್ಸ್ ಅರ್ಪಿಸುವ ಶ್ರೀ ಅಂಜನಾಚಲ ಸೂಪರ್‌ಹಿಟ್ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗಿರುವ 'ನಿಷೇಧಾಜ್ಞೆ ಚಿತ್ರವನ್ನು ವೀರಯೋಧರ ಅಡಿದಾವರೆಗಳಿಗೆ ಅರ್ಪಿಸಿರುವುದಾಗಿ ನಿರ್ಮಾಪಕರಾದ ಎಸ್.ವಿ.ನಾರಾಯಣಸ್ವಾಮಿ ಹಾಗೂ ಸೂರ್ಯಕಾಂತ್ ಜಾದವ್ ತಿಳಿಸಿದ್ದಾರೆ. ರಮೇಶ್ ಛಾಯಾಗ್ರಹಣ, ಗಿರಿಧರ್ ಸಂಗೀತ, ಯತೀಶ್‌ಕುಮಾರ್ ಸಂಕಲನ, ಅರವಿಂದ್ ನೃತ್ಯ, ಕೃಷ್ಣಾಚಾರ್ ಕಲೆ, ಲಕ್ಷ್ಮೀಕುಮಾರ್, ಮೂರ್ತಿ ಸಹನಿರ್ದೇಶನವಿರುವ ಚಿತ್ರದ ತಾರಾಬಳಗದಲ್ಲಿ ಆದಿಲೋಕೇಶ್, ಭರತ್‌ಬಾಬು, ಪ್ರಿಯಾಂಕ, ಪದ್ಮಜಾರಾವ್, ಶಂಕರ್‌ಅಶ್ವತ್, ನೀನಾಸಂ ಅಶ್ವತ್, ಸುರೇಶ್‌ಮಂಗಳೂರು, ಸ್ನೇಹಜಗದೀಶ್, ಹಾಗೂ ಧಮ್‌ಕುಮಾರ್ ಇದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











