For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಗೆ ಸಂಭಾವನೆ ಬಾಕಿ ಇಟ್ಟ ನಿರ್ಮಾಪಕರಾರು?

  |

  ಸಾರಥಿ ಚಿತ್ರದ ಮೂಲಕ ಅತಿರಥ ಮಹಾರಥಿಯಾಗಿ ಹೊರಹೊಮ್ಮಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಗೆ ನಿರ್ಮಾಪಕರಿಂದ ಬಹಳಷ್ಟು ಸಂಭಾವನೆ ಬರಬೇಕಿದೆ ಎನ್ನುವ ಸುದ್ದಿ ಗಾಂಧಿನಗರದಿಂದ ಹೊರಬಿದ್ದಿದೆ. ಸಾರಥಿ ಚಿತ್ರ ಶತದಿನ ಪೂರೈಸಿದ ಸಂದರ್ಭದಲ್ಲಿ , ದರ್ಶನ್ ಕೂಡಾ ಸಂಭಾವನೆ ಬಾಕಿ ಬರಬೇಕಾಗಿರುವುದು ಹೌದು ಎಂದು ತಲೆಯಾಡಿಸಿದ್ದಾರೆ.

  ಸಾರಥಿ ಚಿತ್ರದ ಯಶಸ್ಸಿನ ನಂತರ ಚಿತ್ರವೊಂದಕ್ಕೆ ನನ್ನ ಸಂಭಾವನೆ ಮೂರು ಕೋಟಿ ಹೆಚ್ಚಿಸಿದ್ದೇನೆ ಎನ್ನುವುದು ಬರೀ ಗಾಳಿಸುದ್ದಿ. ಇದರಲ್ಲಿ ಸತ್ಯಾಂಶವೇನೂ ಇಲ್ಲ, ನಿರ್ಮಾಪಕರು ಮೂರು ಕೋಟಿ ಕೊಡುವವರಿದ್ದರೆ ಹೇಳಿ ಅಂಥವರಿಗೆ ಮೊದಲು ಕಾಲ್ ಶೀಟ್ ನೀಡುತ್ತೇನೆ ಎಂದು ದರ್ಶನ್ ಹೇಳಿಕೆ ನೀಡಿದ್ದಾರೆ.

  ಕಾಲ್ ಶೀಟ್ ಸಹಿ ಮಾಡುವ ಸಮಯದಲ್ಲಿ ನಾನು ಏನು ರೇಟ್ ಒಪ್ಪಿಕೊಂಡಿರುತ್ತೇನೋ ಅದನ್ನೇ ಉಳಿಸಿಕೊಳ್ಳುತ್ತೇನೆ. ಇದರಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ದರ್ಶನ್ ಸ್ಪಷ್ಟ ಪಡಿಸಿದ್ದಾರೆ.

  ನನಗೆ ಬಹಳಷ್ಟು ನಿರ್ಮಾಪಕರಿಂದ ದುಡ್ಡು ಬರುವುದು ಬಾಕಿಯಿದೆ. ಸಾರಥಿ ಚಿತ್ರದ ನಿರ್ಮಾಪಕರಾದ ಕೆ ವಿ ಸತ್ಯಪ್ರಕಾಶ್ ಅವರಿಂದಲೂ ನನಗೆ ಸಂಭಾವನೆ ಬರುವುದು ಬಾಕಿಯಿದೆ ಎಂದು ದರ್ಶನ್ ಬಾಂಬ್ ಎಸೆದಿದ್ದಾರೆ.

  ಕಾಲ್ ಶೀಟ್ ಸಮಯದಲ್ಲಿ ಒಪ್ಪಿಕೊಂಡ ಹಣವನ್ನು ನಿರ್ಮಾಪಕರು ನೀಡಿದರೆ ನನಗೆ ಸಂತೋಷವಾಗುತ್ತದೆ ಎಂದು ದರ್ಶನ್ ಚಾಟಿ ಬೀಸಿದ್ದಾರೆ. (ಒನ್ ಇಂಡಿಯಾ ಕನ್ನಡ)

  English summary
  Gandhi Nagar talking about hike in the remuneration of challenging star Darshan off late. Darshan says, I have dues from many of the producers and 'Sarathi' producer KV Sathyaprakash is also in the balance list.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X